ವಾಷಿಂಗ್ಟನ (ಅಮೇರಿಕ) – ಅಮೇರಿಕಾದ ಸೆನೆಟ್ ಸಲಿಂಗ ವಿವಾಹ ಮಸೂದೆಯನ್ನು ಅಂಗೀಕರಿಸಿದೆ. ಇದೀಗ ಅದನ್ನು ಅಂತಿಮ ಅನುಮೋದನೆಗಾಗಿ ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್‌ಗೆ ಕಳುಹಿಸಲಾಗುವುದು. ನಂತರ ಅಧ್ಯಕ್ಷ ಜೋ ಬೈಡೆನ್ ಅದಕ್ಕೆ ಸಹಿ ಹಾಕುತ್ತಾರೆ ಮತ್ತು ಕಾನೂನು ಜಾರಿಗೆ ಬರುವುದು. ಈ ಎಲ್ಲ ಪ್ರಕ್ರಿಯೆಯು ಜನವರಿಯೊಳಗೆ ಪೂರ್ಣಗೊಳ್ಳಲಿದೆ. ಈ ಮಸೂದೆಯ ಕಾನೂನಾಗಿ ರೂಪುಗೊಂಡ ಕೂಡಲೇ ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡಲಾಗುವುದು. 2015 ರಲ್ಲಿ, ಸರ್ವೋಚ್ಚ ನ್ಯಾಯಾಲಯವು ಅಮೇರಿಕಾದಲ್ಲಿ ಇದನ್ನು ನಿಷೇಧಿಸಿತ್ತು.
US Senate passes bill protecting same-sex marriage https://t.co/aLMT6PtKEg
— Guardian US (@GuardianUS) November 29, 2022
ಮಸೂದೆ ಅಂಗೀಕಾರಗೊಂಡ ನಂತರ ಹರ್ಷ ವ್ಯಕ್ತಪಡಿಸಿದ ಅಧ್ಯಕ್ಷ ಜೋ ಬೈಡೆನ್, ‘ಪ್ರೀತಿ ಎಂದರೆ ಪ್ರೀತಿ’ ಮತ್ತು ಅಮೇರಿಕಾದಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಗೂ ತಾನು ಪ್ರೀತಿಸುವ ವ್ಯಕ್ತಿಯನ್ನು ಮದುವೆಯಾಗುವ ಹಕ್ಕಿದೆ ಎಂದು ಹೇಳಿದರು.