ಎಲ್ಲರಿಗೂ ಸಹಜವಾಗಿ ಅರಿವಾಗುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಲೌಕಿಕತೆ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ೫೨ ನೇ ಹುಟ್ಟುಹಬ್ಬದ (ಮಾರ್ಗಶಿರ ಹುಣ್ಣಿಮೆ, ಡಿಸೆಂಬರ್ ೮) ನಿಮಿತ್ತ ಅವರ ಚರಣಗಳಿಗೆ ಕೋಟಿ ಕೋಟಿ ನಮಸ್ಕಾರಗಳು !

ಸೀತಾಮಾತೆಯ ದೇವಸ್ಥಾನದ ಬೀಗದ ಕೈಯಿಂದ ಬಾಗಿಲನ್ನು ತೆರೆಯುತ್ತಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

 

ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಕಾಕೂರವರ ಜೊತೆ ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಿರುವ ಹುಡುಗಿಯರು

 

ತಮ್ಮ ವಹಿಯಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಹಸ್ತಾಕ್ಷರವನ್ನು ಪಡೆಯುತ್ತಿರುವ ಶಾಲಾ ಮಕ್ಕಳು

೧. ಶ್ರೀಲಂಕಾದಲ್ಲಿ ಅಧ್ಯಯನಕ್ಕಾಗಿ ಪ್ರವಾಸ ಮಾಡುವಾಗ ಅಲ್ಲಿನ ಓರ್ವ ದೊಡ್ಡ ಸರಕಾರಿ ಅಧಿಕಾರಿಗಳು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಗೆ ‘ದೈವೀ ಸ್ತ್ರೀ’ ಎಂದು ಸಂಬೋಧಿಸಿ ಎಲ್ಲ ರೀತಿಯ ಸಹಾಯ ಮಾಡುವುದು

೧ ಅ. ಶ್ರೀಲಂಕಾದಲ್ಲಿನ ಓರ್ವ ದೊಡ್ಡ ಸರಕಾರಿ ಅಧಿಕಾರಿಗಳು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರನ್ನು ನೋಡಿ ಅವರೊಂದಿಗೆ ಗೌರವದಿಂದ ಮಾತನಾಡುವುದು : ‘ಜನವರಿ ೨೦೧೮ ರಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಶ್ರೀಲಂಕಾದ ಪ್ರವಾಸದಲ್ಲಿರುವಾಗ ಅವರು ದೇವರದರ್ಶನಕ್ಕಾಗಿ ಶ್ರೀಲಂಕಾದ ಪ್ರಸಿದ್ಧ ಶಿವಮಂದಿರ ‘ನಗುಲೇಶ್ವರಮ್’ಕ್ಕೆ ಹೋಗಿದ್ದರು. ಈ ಪ್ರಾಚೀನ ಶಿವಮಂದಿರವು ೫ ಸಾವಿರ ವರ್ಷಗಳ ಹಿಂದಿನದ್ದಾಗಿದೆ. ಪ್ರತ್ಯಕ್ಷ ಪ್ರಭು ಶ್ರೀರಾಮನು ಈ ದೇವಸ್ಥಾನದಲ್ಲಿ ಪೂಜೆಯನ್ನು ಮಾಡಿದ್ದನು ಎಂದು ಹೇಳಲಾಗುತ್ತದೆ. ಈ ದೇವಸ್ಥಾನಕ್ಕೆ ಹೋದಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ದೇವಸ್ಥಾನದ ಪೂಜಾರಿಗಳ ಸಂದರ್ಶನವನ್ನು ತೆಗೆದುಕೊಂಡರು. ಆ ಸಮಯದಲ್ಲಿ ಶ್ರೀಲಂಕಾದ ಕೆಲವು ದೊಡ್ಡ ಸರಕಾರಿ ಅಧಿಕಾರಿಗಳು ಅಲ್ಲಿ ಬಂದಿದ್ದರು. ಅವರಲ್ಲಿನ ಓರ್ವ ಅಧಿಕಾರಿಗಳು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ, “ನೀವು ಯಾರು ?” ಎಂದು ಕೇಳಿದರು. ಅದಕ್ಕೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು, ನಾವು ಭಾರತದಿಂದ ಬಂದಿದ್ದೇವೆ. ನಾವು ಶ್ರೀರಾಮನ ಸೇವಕರಾಗಿದ್ದೇವೆ ಮತ್ತು ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡಲು ಬಂದಿದ್ದೇವೆ. ಭಾರತದಲ್ಲಿ ನಮ್ಮ ಒಂದು ಚಿಕ್ಕ ಆಶ್ರಮವಿದೆ. ನಾವು ಆ ಆಶ್ರಮದಲ್ಲಿನ ಸೇವಕರಾಗಿದ್ದೇವೆ ಎಂದು ಹೇಳಿದರು.

೧ ಆ. ಅಧಿಕಾರಿಗಳು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರನ್ನು ‘ದೈವೀ ಸ್ತ್ರೀ’ ಎಂದು ಸಂಬೋಧಿಸಿ ಆಶೀರ್ವಾದ ಪಡೆಯಲು ತಮ್ಮ ಕಚೇರಿಗೆ ಕರೆಯುವುದು : ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಕಾಕೂರೊಂದಿಗೆ ಮಾತನಾಡುವಾಗ ಆ ಅಧಿಕಾರಿಗಳು, ನಾನು ಇಲ್ಲಿನ ಸರಕಾರಿ ಅಧಿಕಾರಿಯಾಗಿದ್ದೇನೆ. ನಾನು ಬೌದ್ಧನಾಗಿದ್ದೇನೆ; ಆದರೆ ನನಗೆ ಹಿಂದೂ ಧರ್ಮದ ಬಗ್ಗೆ ಆತ್ಮೀಯತೆ ಇದೆ. ನಿಮ್ಮನ್ನು ನೋಡಿ ನನಗೆ ನೀವು ಓರ್ವ ದೈವೀ ಸ್ತ್ರೀ ಆಗಿದ್ದೀರಿ ಎಂದು ಅನಿಸಿತು. ನಾನು ನಿಮ್ಮ ಕಡೆಗೆ ತನ್ನಷ್ಟಕ್ಕೆ ತಾನೇ ಆಕರ್ಷಿತನಾದೆ ಎಂದು ಹೇಳಿದರು. ಆ ಸಮಯದಲ್ಲಿ ನಾವು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ‘ಸಂತ’ರಾಗಿದ್ದಾರೆ ಎಂದು ಅವರಿಗೆ ಹೇಳಿದೆವು. ಅಧಿಕಾರಿಗಳು ಮಾತಾಜಿ ನೀವು ನಾಳೆ ನಮ್ಮ ಕಚೇರಿಗೆ ಬನ್ನಿರಿ. ನಮಗೆ ಆಶೀರ್ವಾದ ಸಿಗುವುದು ಎಂದು ಹೇಳಿದರು.

೧ ಇ. ಅಧಿಕಾರಿಗಳು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಕಾಕೂರವರಿಂದ ಸಾಧನೆಯನ್ನು ತಿಳಿದುಕೊಂಡು ಅವರಿಗೆ ಯೋಗ್ಯ ರೀತಿಯಿಂದ ಸನ್ಮಾನ ಮಾಡುವುದು : ಅಧಿಕಾರಿಗಳು ಹೇಳಿದಂತೆ ಮರುದಿನ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಅವರನ್ನು ಭೇಟಿಯಾಗಲು ಅವರ ಕಚೇರಿಗೆ ಹೋದರು. ಅಧಿಕಾರಿಗಳು ಅವರೊಂದಿಗೆ ೨ ಗಂಟೆಗಳ ಕಾಲ ‘ಅಧ್ಯಾತ್ಮ ಮತ್ತು ಸಾಧನೆ’ಯ ಬಗ್ಗೆ ಚರ್ಚೆಯನ್ನು ಮಾಡಿದರು. ಆ ಸಮಯದಲ್ಲಿ ಅಲ್ಲಿ ಇತರ ಅಧಿಕಾರಿಗಳೂ ಉಪಸ್ಥಿತರಿದ್ದರು. ಅಧಿಕಾರಿಗಳು, ಮಾತಾಜಿ, ನಿಮಗೆ ಯಾವಾಗಬೇಕಾದರೂ ಮತ್ತು ಯಾವ ಸಹಾಯ ಬೇಕಿದ್ದರೂ ನನ್ನನ್ನು ಸಂಪರ್ಕಿಸಿ. ಶ್ರೀಲಂಕಾದಲ್ಲಿ ನಿಮಗೆ ಯಾವ ಸ್ಥಳಗಳಿಗೆ ಹೋಗಲಿಕ್ಕಿದೆಯೋ, ಅಲ್ಲಿ ನಾವು ನಿಮಗೆ ಬೇಕಾದ ಎಲ್ಲ ಸಹಾಯವನ್ನು ಮಾಡುವೆವು ಎಂದು ಹೇಳಿದರು. ನಾವು ಅಲ್ಲಿಂದ ಹೊರಡುವಾಗ ಅಧಿಕಾರಿಗಳು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಒಂದು ‘ಸ್ಮರಣ ಪದಕ’ವನ್ನು ನೀಡಿದರು.

೨. ಸೀತಾಮಾತೆಯು ಅಗ್ನಿಪರೀಕ್ಷೆಯನ್ನು ನೀಡಿದ ಸ್ಥಳದಲ್ಲಿರುವ ವಯೋವೃದ್ಧ ವ್ಯವಸ್ಥಾಪಕರು ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸೀತಾಮಾತೆಯ ಹಾಗೆ ಕಾಣಿಸುತ್ತಾರೆ’ ಎಂದು ಹೇಳುವುದು

೨ ಅ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರನ್ನು ನೋಡಿ ವೃದ್ಧ ವ್ಯವಸ್ಥಾಪಕರು ‘ದೈವೀ ಸ್ತ್ರೀ’ ಎಂದು ಸಂಬೋಧಿಸಿ ಅವರಿಂದ ಪ್ರವೇಶ ಟಿಕೇಟಿನ ಹಣವನ್ನು ತೆಗೆದುಕೊಳ್ಳದಿರುವುದು :

‘ಶ್ರೀಲಂಕಾದಲ್ಲಿ ‘ಸೀತಾಮಾತೆಯು ಅಗ್ನಿಪರೀಕ್ಷೆಯನ್ನು ನೀಡಿದ ಒಂದು ಸ್ಥಾನವಿದೆ’ ಈ ಸ್ಥಾನವು ಯಾವ ಊರಲ್ಲಿ ಇದೆಯೋ ಆ ಊರಿನ ಹೆಸರು ‘ದಿವಿರುಂಪೊಲಾ’ ಎಂದಾಗಿದೆ. ಶ್ರೀಲಂಕಾದ ಮಧ್ಯಪ್ರಾಂತದಲ್ಲಿ ಅತ್ಯಂತ ಎತ್ತರದ ಪರ್ವತಗಳ ಸ್ಥಳದಲ್ಲಿರುವ ‘ನುವಾರಾ ಎಲಿಯಾ’ ಈ ನಗರದಿಂದ ಈ ಊರು ೧೮ ಕಿ.ಮೀ. ದೂರದಲ್ಲಿದೆ. ಶ್ರೀಲಂಕಾದ ಅನೇಕ ಹಿಂದೂಗಳಿಗೂ ಈ ಸ್ಥಳದ ಬಗ್ಗೆ ಮಾಹಿತಿ ಇಲ್ಲ. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಕಾಕೂ ಇವರೊಂದಿಗೆ ಆ ಸ್ಥಳವನ್ನು ಹುಡುಕುತ್ತಾ-ಹುಡುಕುತ್ತಾ ಗುರುಕೃಪೆಯಿಂದ ನಾವು ಆ ಸ್ಥಳವನ್ನು ತಲುಪಿದೆವು. ಹೊರಗೆ ಓರ್ವ ಬೌದ್ಧ ಭಿಕ್ಷು (ಅಧ್ಯಾತ್ಮ ಸಾಧನೆಗಾಗಿ ಎಲ್ಲವನ್ನೂ ತ್ಯಾಗ ಮಾಡಿ ಭಿಕ್ಷಾಟನೆಯಿಂದ ಬದುಕುವವರು) ಮತ್ತು ಆ ದೇವಸ್ಥಾನದ ವಯೋವೃದ್ಧ ಬೌದ್ಧ ವ್ಯವಸ್ಥಾಪಕರು ನಮಗೆ ಭೇಟಿಯಾದರು. ನಾವು ಅವರಿಗೆ ಸೀತಾಮಾತೆಯು ಅಗ್ನಿಪರೀಕ್ಷೆ ನೀಡಿದ ಸ್ಥಳದ ಬಗ್ಗೆ ಕೇಳಿದಾಗ ಆ ಬೌದ್ಧ ಭಿಕ್ಷು ವ್ಯವಸ್ಥಾಪಕ ಅಜ್ಜನವರಿಗೆ, ನೀವು ಅವರಿಗೆ ಆ ಸ್ಥಳವನ್ನು ತೋರಿಸಿ ಎಂದರು. ಅಜ್ಜನವರು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಕಾಕೂರ ಕಡೆಗೆ ನೋಡಿ, ‘ನೀವು ಯಾರಾದರು ದೈವೀ ಸ್ತ್ರೀ ಆಗಿರುವಿರಿ’ ಎಂದು ನನಗೆ ಅನಿಸುತ್ತದೆ. ನಾನು ಇಲ್ಲಿ ಕಳೆದ ೫೦ ವರ್ಷಗಳಿಂದ ಕೆಲಸವನ್ನು ಮಾಡುತ್ತಿದ್ದೇನೆ. ಇಲ್ಲಿಯವರೆಗೆ ನಮ್ಮ ಬಳಿ ನಿಮ್ಮಂತಹವರು ಯಾರೂ ಬಂದಿಲ್ಲ. ನಿಮ್ಮಿಂದ ನಾನು ಪ್ರವೇಶ ಟಿಕೇಟಿನ ಹಣವನ್ನು ತೆಗೆದುಕೊಳ್ಳುವುದಿಲ್ಲ. ನಿಮ್ಮ ಜೊತೆಗಿರುವವರ (ಸಾಧಕರ) ಹಣವನಷ್ಟೇ ತೆಗೆದುಕೊಳ್ಳುತ್ತೇನೆ’, ಎಂದು ಹೇಳಿದರು. ಆಗ ನಮಗೆ ಆಶ್ಚರ್ಯವಾಯಿತು.

೨ ಆ. ವೃದ್ಧ ವ್ಯವಸ್ಥಾಪಕರು ದೇವಸ್ಥಾನದ ಪ್ರವೇಶದ್ವಾರದ ಬೀಗವನ್ನು ತೆಗೆಯಲು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಕೈಯಲ್ಲಿ ಬೀಗದ ಕೈಯನ್ನು ಕೊಡುವುದು : ಆ ಅಜ್ಜನವರು ನಮ್ಮನ್ನು ಸೀತಾಮಾತೆ ಅಗ್ನಿಪರೀಕ್ಷೆ ನೀಡಿದ ಅಶ್ವತ್ಥ ವೃಕ್ಷದ ಬಳಿಗೆ ಕರೆದುಕೊಂಡು ಹೋದರು. ಆ ವೃಕ್ಷದ ಬಳಿ ಒಂದು ದೇವಸ್ಥಾನವಿತ್ತು. ಅದರ ಪ್ರವೇಶದ್ವಾರವು ಮುಚ್ಚಿತ್ತು. ಅಜ್ಜನವರು ‘ಮಾತಾಜಿ, ನೀವು ನನಗೆ ಸಾಕ್ಷಾತ್ ಸೀತಾಮಾತೆಯಂತೆ ಕಾಣಿಸುತ್ತೀರಿ. ಇಲ್ಲಿಯವರೆಗೆ ನಾನು ಯಾರಿಗೂ ಈ ದೇವಸ್ಥಾನದ ಬೀಗದ ಕೀಲಿಕೈ ಕೊಟ್ಟಿಲ್ಲ. ಇಂದು ಈ ಸೀತಾಮಾತೆಯ ದೇವಸ್ಥಾನದ ಬೀಗದ ಕೈಯನ್ನು ನಾನು ನಿಮಗೆ ಕೊಡುತ್ತೇನೆ. ನೀವೇ ಬೀಗವನ್ನು ತೆಗೆಯಿರಿ’, ಎಂದು ಹೇಳಿದರು. ಅಜ್ಜನವರು ಹೀಗೆ ಹೇಳಿದಾಗ ನಮ್ಮೆಲ್ಲಿಗೆ ಭಾವಜಾಗೃತಿಯಾಯಿತು. ಅಜ್ಜನವರು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಕಾಕೂರವರಿಗೆ ಆ ಬೀಗದ ಕೈಯನ್ನು ಕೊಟ್ಟರು. ಆ ಬೀಗವು ಎರಡೂ ಕೈಗಳಲ್ಲಿ ಹಿಡಿಯಬೇಕಾದಷ್ಟು ದೊಡ್ಡದಾಗಿತ್ತು. ಬೀಗವನ್ನು ಕೈಯಲ್ಲಿ ತೆಗೆದುಕೊಂಡಾಗ ಶ್ರೀಚಿತ್‌ಶಕ್ತಿ ಗಾಡಗೀಳ ಕಾಕೂರವರ ಕಣ್ಣುಗಳಲ್ಲಿ ಭಾವಾಶ್ರುಗಳು ಬಂದವು.

೩. ಇಂಡೋನೆಶಿಯಾದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ತೇಜಸ್ವಿ ಮುಖದ ಕಡೆಗೆ ಆಕರ್ಷಿತರಾಗಿ ಸ್ಥಳೀಯರು ಅವರೊಂದಿಗೆ ಛಾಯಾಚಿತ್ರಗಳನ್ನು ತೆಗೆಸಿಕೊಳ್ಳುವುದು : ನಾವು ೯ ಮಾರ್ಚ್ ೨೦೧೮ ರಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರೊಂದಿಗೆ ಇಂಡೋನೆಶಿಯಾದ ಜಕಾರ್ತಾದಲ್ಲಿನ ರಾಷ್ಟ್ರೀಯ ಸ್ಮಾರಕ ‘ಮೊನಾಸ್’ ಎಂಬಲ್ಲಿಗೆ ಹೋಗಿದ್ದೆವು. ಈ ಸ್ಥಳಕ್ಕೆ ಪ್ರತಿದಿನ ಸಾವಿರಾರು ಜನರು ಬರುತ್ತಾರೆ. ನಾವು ಟಿಕೇಟು ಪಡೆಯಲು ಪ್ರವೇಶದ್ವಾರದ ಬಳಿ ನಿಂತಿರುವಾಗ ಅಲ್ಲಿನ ಕೆಲವು ಹುಡುಗಿಯರು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಕಾಕೂರವರ ಬಳಿಗೆ ಬಂದು, ‘ನಮಗೆ ನಿಮ್ಮೊಂದಿಗೆ ಛಾಯಾಚಿತ್ರವನ್ನು ತೆಗೆದುಕೊಳ್ಳುವುದಿದೆ ! ತೆಗೆದುಕೊಳ್ಳಬಹುದಾ ?’ ಎಂದು ಕೇಳಿದರು. ಸದ್ಗುರು ಕಾಕೂರವರು ‘ಆಗಬಹುದು’ ಎಂದಾಗ ಅವರು ಛಾಯಾಚಿತ್ರಗಳನ್ನು ತೆಗೆದುಕೊಂಡರು. ಸ್ವಲ್ಪ ಸಮಯದ ನಂತರ ಹುಡುಗಿಯರ ಇನ್ನೊಂದು ಗುಂಪು ಬಂದಿತು. ಆ ದಿನದ ನಂತರ ನಾವು ಇಂಡೋನೇಶಿಯಾದಲ್ಲಿ ಎಲ್ಲೆಲ್ಲಿ ಹೋದೆವೋ ಅಲ್ಲಲ್ಲಿ ಅನೇಕ ಜನರು ಬಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರೊಂದಿಗೆ ನಿಂತುಕೊಂಡು ತಮ್ಮ ಛಾಯಾಚಿತ್ರವನ್ನು ತೆಗೆದುಕೊಂಡರು. ‘ಯೋಗ್ಯಕರ್ತಾ’ ಈ ನಗರದಲ್ಲಿ ಸುಲ್ತಾನನ ಅರಮನೆಗೆ ಹೋದಾಗ ಅಲ್ಲಿನ ಮಹಿಳಾ ಗೈಡ್ ಶ್ರೀಚಿತ್‌ಶಕ್ತಿ ಕಾಕೂರವರ ಕಡೆಗೆ ನೋಡಿ ‘ನೀವು ‘ರಾಣಿ’ಯಂತೆ ಕಾಣಿಸುತ್ತೀರಿ’ ಎಂದು ಹೇಳಿದರು. ಅಲ್ಲಿ ಒಂದು ಶಾಲೆಯ ವಿದ್ಯಾರ್ಥಿಗಳು ಬಂದಿದ್ದರು. ಆ ಸಮಯದಲ್ಲಿ ವಿದ್ಯಾರ್ಥಿಗಳು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಕಾಕುರೊಂದಿಗೆ ತಮ್ಮ ಛಾಯಾಚಿತ್ರಗಳನ್ನು ತೆಗೆಸಿಕೊಂಡರು. ಹಾಗೆಯೇ ತಮ್ಮ ವಹಿಯಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಹಸ್ತಾಕ್ಷರವನ್ನು ತೆಗೆದುಕೊಂಡರು.

೪. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರನ್ನು ನೋಡಿ ದೇವಸ್ಥಾನದ ಓರ್ವ ವಿಶ್ವಸ್ಥರಿಗೆ ‘ಅವರ ರೂಪದಲ್ಲಿ ಸಾಕ್ಷಾತ್ ಕೊಲ್ಹಾಪುರದ ಶ್ರೀ ಮಹಾಲಕ್ಷ್ಮಿಯೇ ಈ ದೇವಸ್ಥಾನಕ್ಕೆ ಬಂದಿದ್ದಾಳೆ’ ಎಂದು ಅನಿಸುವುದು ಮತ್ತು ಅವರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಕೈಯಿಂದ ದೇವಸ್ಥಾನದ ರಾಜಗೋಪುರಕ್ಕಾಗಿ ಅರ್ಪಣೆ ನೀಡುವುದು : ೨೩.೭.೨೦೨೨ ಈ ದಿನದಂದು ಕರ್ನಾಟಕದ ಅರೆಯೂರಿನಲ್ಲಿನ ಶ್ರೀ ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಭೇಟಿ ನೀಡಿದರು. ಆ ಸಮಯದಲ್ಲಿ ದೇವರ ಪೂಜೆಯಾದ ನಂತರ ದೇವಸ್ಥಾನದ ಓರ್ವ ವಿಶ್ವಸ್ಥರು ನಮಗೆ, ‘ಇಂದು ನಾನು ಮತ್ತು ನನ್ನ ಪತ್ನಿ ದೇವಸ್ಥಾನದ ಹೊಸ ರಾಜಗೋಪುರಕ್ಕಾಗಿ (ದೇವಸ್ಥಾನದ ಪೂರ್ವಕ್ಕಿರುವ ಮುಖ್ಯ ಪ್ರವೇಶದ್ವಾರಕ್ಕಾಗಿ) ಒಂದು ಕಲಶವನ್ನು ಅರ್ಪಣೆ ಮಾಡಬೇಕು ಎಂದು ನಿಶ್ಚಯಿಸಿದ್ದೇವೆ. ನಾವು ದೇವಸ್ಥಾನಕ್ಕೆ ಬಂದು ಇವರ ಕಡೆಗೆ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರನ್ನು) ನೋಡಿದಾಗ, ‘ಸಾಕ್ಷಾತ್ ಕೊಲ್ಹಾಪುರದ ಶ್ರೀ ಮಹಾಲಕ್ಷ್ಮಿದೇವಿಯೇ ಇಂದು ನಮ್ಮ ದೇವಸ್ಥಾನಕ್ಕೆ ಬಂದಿದ್ದಾಳೆ ಮತ್ತು ದೇವಸ್ಥಾನದ ರಾಜಗೋಪುರಕ್ಕಾಗಿ ಮಾಡಲಾಗುವ ಅರ್ಪಣೆಯನ್ನು ಅವರ ಹಸ್ತಗಳಿಂದ ಮಾಡುವುದು ಪುಣ್ಯದಾಯಕವಾಗಿದೆ ಎಂದು ನನಗ ಅನಿಸಿತು’ ಎಂದು ಹೇಳಿದರು. ಆ ವಿಶ್ವಸ್ಥರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಹಸ್ತಗಳಿಂದ ದೇವಸ್ಥಾನಕ್ಕೆ ಅರ್ಪಣೆಯನ್ನು ನೀಡಿದರು.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸಂತತ್ವದ ಯಾವುದೇ ರೀತಿಯ ಪ್ರತ್ಯೇಕತೆಯನ್ನು ಇಟ್ಟುಕೊಳ್ಳದೇ ಸಾಮಾನ್ಯ ಸಾಧಕರಂತೆಯೇ ಇರುತ್ತಾರೆ. ನಾವು ಗಣ್ಯವ್ಯಕ್ತಿಗಳನ್ನು ಭೇಟಿಯಾದಾಗ ಅವರು ನಾನು ಸನಾತನ ಆಶ್ರಮದ ಸೇವಕಿಯಾಗಿದ್ದೇನೆ ಎಂದು ತಮ್ಮ ಪರಿಚಯವನ್ನು ಮಾಡಿಕೊಡುತ್ತಾರೆ. ಹೀಗಿದ್ದರೂ ಅವರ ಮುಖದ ಮೇಲೆ ಪ್ರಕಾಶಿಸುವ ದೈವೀ ತೇಜ ಅವರ ಅಧ್ಯಾತ್ಮದಲ್ಲಿನ ಅಧಿಕಾರವನ್ನು ದರ್ಶಿಸುತ್ತದೆ. ಸೂರ್ಯನು ಉದಯಿಸಿದಾಗ ಹೂವುಗಳಿಗೆ ‘ಅರಳಿರಿ’ ಎಂದು ಹೇಳುವ ಅವಶ್ಯಕತೆ ಇರುವುದಿಲ್ಲ. ಅದರಂತೆ ನಿಜವಾದ ಸಂತರಿಗೆ ‘ನಾನು ಸಂತ’ ಎಂದು ಹೇಳುವ ಆವಶ್ಯಕತೆ ಇರುವುದಿಲ್ಲ. ಅವರ ಸಂತತ್ವದ ಕಡೆಗೆ ಸಮಾಜವು ತಾನಾಗಿಯೇ ಆಕರ್ಷಿತವಾಗುತ್ತದೆ, ಇದರ ಅನುಭೂತಿಯನ್ನು ನಾವು ಎಲ್ಲೆಡೆ  ತೆಗೆದುಕೊಳ್ಳುತ್ತಿರುತ್ತೇವೆ. ಇಲ್ಲಿ ವಿಷಯ ಹೆಚ್ಚಾಗಬಾರದೆಂದು ಕೇವಲ ಕೆಲವೇ ಪ್ರಸಂಗಗಳನ್ನು ನೀಡಿದ್ದೇವೆ. ಇಂತಹ ತೇಜಸ್ವಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಮತ್ತು ಅವರನ್ನು ತಯಾರಿಸಿದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !

– ಶ್ರೀ. ವಿನಾಯಕ ಶಾನಭಾಗ, ಸನಾತನ ಆಶ್ರಮ, ರಾಮನಾಥಿ, ಗೋವಾ. (೯.೧೧.೨೦೨೨)