‘ಕೆಲವೊಮ್ಮೆ ಯಾವುದಾದರೊಂದು ಪ್ರಸಂಗದಿಂದ ಸಾಧಕರ ವಿಚಾರಗಳು ಹೆಚ್ಚಾಗುತ್ತವೆ ಮತ್ತು ಹೆಚ್ಚಿನ ಸಲ ಅವು ಅನಾವಶ್ಯಕವಾಗಿರುತ್ತವೆ. ಹೀಗಾದರೆ ಮುಂದಿನಂತೆ ವಿಚಾರ ಮಾಡಬೇಕು ಅಥವಾ ಪ್ರಯತ್ನಿಸಬೇಕು.
೧. ‘ಯಾವ ಪ್ರಸಂಗ ಘಟಿಸಿದೆಯೋ, ನನ್ನ ಜೀವನದಲ್ಲಿ ಆ ಪ್ರಸಂಗಕ್ಕೆ ಎಷ್ಟು ಬೆಲೆಯಿದೆ ? ಆ ಪ್ರಸಂಗದಿಂದ ನನ್ನ ಜೀವನದ ಮೇಲೆ ಎಷ್ಟು ಪರಿಣಾಮವಾಗಲಿದೆ ? ತಾತ್ಕಾಲಿಕವೋ ಅಥವಾ ದೀರ್ಘಕಾಲೀನ ಪರಿಣಾಮ ಬೀರಲಿದೆಯೋ ?’, ಎಂಬುದನ್ನು ನಾವು ನಮ್ಮ ಮನಸ್ಸಿಗೆ ಕೇಳಬೇಕು. ಹೆಚ್ಚಿನ ಸಲ ಇಂತಹ ಪ್ರಸಂಗಗಳ (ಉದಾ. ಯಾರಾದರೊಬ್ಬರು ನಮ್ಮೊಂದಿಗೆ ಸರಿಯಾಗಿ ಮಾತನಾಡಲಿಲ್ಲ) ನಮ್ಮ ಜೀವನದಲ್ಲಿ ಅದಕ್ಕೆ ವಿಶೇಷ ಬೆಲೆ ಇರುವುದಿಲ್ಲ ಅಥವಾ ಅದರಿಂದ ನಮ್ಮ ಜೀವನದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಮತ್ತು ಯಾವುದು ಆಗುವುದಿದೆಯೋ, ಅದು ಬಹಳ ತಾತ್ಕಾಲಿಕವಾಗಿರುತ್ತದೆ. ಹೀಗಿದ್ದರೂ ನಾವು ಆ ವಿಚಾರದ ಮೇಲೆ ಮನಸ್ಸಿನ ಊರ್ಜೆಯನ್ನು (ಶಕ್ತಿಯನ್ನು) ಅನಾವಶ್ಯಕವಾಗಿ ಖರ್ಚು ಮಾಡುತ್ತೇವೆ. ಯಾವ ಪ್ರಸಂಗಕ್ಕೆ ನಮ್ಮ ಜೀವನದಲ್ಲಿ ಬೆಲೆಯಿದೆಯೋ, ಅದಕ್ಕೆ ಬೆಲೆ ಇದೆ ಅಥವಾ ಅದರಿಂದ ನಮ್ಮ ಜೀವನದಲ್ಲಿ ವಿಶೇಷ ಪರಿಣಾಮವಾಗುವುದಿದ್ದರೆ (ಉದಾ. ನಮ್ಮ ಸಾಧನೆಯ ಜವಾಬ್ದಾರಿ ಇರುವ ಸಾಧಕನು ನಮ್ಮ ಸ್ವಭಾವದೋಷಗಳನ್ನು ಗಮನಕ್ಕೆ ತಂದು ಕೊಟ್ಟರೆ), ಅದರ ಮೇಲೆ ಮಾತ್ರ ವಿಚಾರ ಮಾಡುವುದು ಅತ್ಯಾವಶ್ಯಕವಾಗಿದೆ.
೨. ‘ಯಾವುದಾದರೊಂದು ಪ್ರಸಂಗ ಘಟಿಸಿದರೂ, ಅದರಿಂದ ನಮಗೆ ದೇವರು ಅಥವಾ ಗುರುಗಳು ತುಂಬಾ ಕಲಿಸಿದರು’, ಎಂಬ ವಿಚಾರ ಮಾಡಿದರೆ, ಘಟಿಸಿದ ಪ್ರಸಂಗದ ಬಗ್ಗೆ ಏನೂ ಅನಿಸುವುದಿಲ್ಲ.
೩. ಪ್ರಸಂಗದಿಂದ ಹೆಚ್ಚಾಗಿರುವ ವಿಚಾರಗಳನ್ನು ತಕ್ಷಣ ಗುರುಚರಣಗಳಲ್ಲಿ ಅರ್ಪಿಸಿ ಮನಸ್ಸಿಗೆ ಸ್ಥಿರತೆ ಬರಲು ಗುರುಗಳಿಗೆ ಪ್ರಾರ್ಥನೆಯನ್ನು ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಬೇಕು.
೪. ಮನಸ್ಸಿನಲ್ಲಿ ಹೆಚ್ಚಾಗಿರುವ ವಿಚಾರಗಳನ್ನು ಕಾಗದದ ಮೇಲೆ ಬರೆದು ಆ ಬರವಣಿಗೆಯ ಸುತ್ತಲೂ ನಾಲ್ಕೂ ಬದಿಯಲ್ಲಿ ನಾಮಜಪವನ್ನು ಬರೆಯಬೇಕು (ನಾಮಜಪದ ಮಂಡಲವನ್ನು ಹಾಕಬೇಕು), ಅನಂತರ ಆ ಕಾಗದವನ್ನು ಕರ್ಪೂರದೊಂದಿಗೆ ಸುಡಬೇಕು. ಹೀಗೆ ಮಾಡುವುದರಿಂದ ವಿಚಾರಗಳ ಪ್ರಮಾಣವು ತುಂಬಾ ಕಡಿಮೆಯಾಗುತ್ತದೆ.
೫. ನಮ್ಮ ಮನಸ್ಸು ಒಂದು ಸಮಯದಲ್ಲಿ ಒಂದೇ ವಿಚಾರವನ್ನು ಮಾಡಬಹುದು. ಆದುದರಿಂದ ಮನಸ್ಸಿಗೆ ಬೇರೆ ಸಕಾರಾತ್ಮಕ ವಿಚಾರದಲ್ಲಿ, ಅಂದರೆ ‘ಯಾವ ಸೇವೆಯಲ್ಲಿ ನಮ್ಮ ಮನಸ್ಸು ಏಕಾಗ್ರವಾಗಬಹುದೋ (ರಮಿಸಬಹುದೋ), ಆ ಸೇವೆಯಲ್ಲಿ’ ಅಥವಾ ‘ನಾಮಜಪ, ಭಾವಪ್ರಯೋಗ ಇಂತಹ ಯಾವ ವಿಷಯದಲ್ಲಿ ಮನಸ್ಸು ಸಹಜವಾಗಿ ಏಕಾಗ್ರವಾಗಬಹುದೋ’, ಅಂತಹ ವಿಷಯದಲ್ಲಿ ಮನಸ್ಸನ್ನು ಏಕಾಗ್ರಗೊಳಿಸಬೇಕು. ಇದರಿಂದ ಮೊದಲನೇ ವಿಚಾರದಲ್ಲಿ ಸಿಲುಕಿರುವ ಮನಸ್ಸು ಆ ವಿಚಾರದಿಂದ ಹೊರಗೆ ಬರುವುದು.
೬. ಪ್ರಸಂಗದಿಂದ ಹೆಚ್ಚಾಗಿರುವ ವಿಚಾರಗಳ ತೀವ್ರತೆ ಕಡಿಮೆಯಾದ ನಂತರ ವಿಚಾರಗಳ ಹಿಂದಿನ ಸ್ವಭಾವದೋಷವನ್ನು ಹುಡುಕಿ ಅದರ ಮೇಲೆ ಪರಿಣಾಮಕಾರಿ ಸ್ವಯಂಸೂಚನೆಗಳನ್ನು ಕೊಡಬೇಕು.
೭. ಕೆಲವೊಮ್ಮೆ ಆಧ್ಯಾತ್ಮಿಕ ತೊಂದರೆಯಿಂದಾಲೂ ವಿಚಾರಗಳು ಹೆಚ್ಚಾಗುತ್ತವೆ. ಇಂತಹ ಸಮಯದಲ್ಲಿ ಆ ವಿಚಾರಗಳು ಹೆಚ್ಚು ಸಮಯ ಉಳಿಯಬಹುದು. ಇದಕ್ಕೆ ಉಪಾಯವೆಂದು ಸ್ವಯಂಸೂಚನೆಗಳೊಂದಿಗೆ ‘ಪ್ರಾಣಶಕ್ತಿವಹನ’ ಉಪಾಯಪದ್ಧತಿಯಿಂದ ಉಪಾಯವನ್ನು ಹುಡುಕಿ ಅಥವಾ ತಿಳಿದವರಿಗೆ ಕೇಳಿ ಅದನ್ನು ಭಾವಪೂರ್ಣವಾಗಿ ಮಾಡಬೇಕು.’
– (ಪೂ.) ಸಂದೀಪ ಆಳಶಿ (೨೬.೧೦.೨೦೨೨)