ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಭಾವಸತ್ಸಂಗದಲ್ಲಿನ ಮಾರ್ಗದರ್ಶನಪರ ಅಂಶಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೧. ವ್ಯಷ್ಟಿ ಸಾಧನೆ ಚೆನ್ನಾಗಿದ್ದರೆ ಸೇವೆಯು ಚೆನ್ನಾಗಿ ಆಗುತ್ತದೆ !

ಓರ್ವ ಸಾಧಕ : ಇದು ವರೆಗೆ ನಾನು ಯಾವಾಗ ಸಾಧನೆಯಿಂದ ದೂರ ಓಡುವ ಪ್ರಯತ್ನವನ್ನು ಮಾಡಿದೆನೋ, ಆಗ ನನಗೆ, ‘ಪ.ಪೂ. ಡಾಕ್ಟರರು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು) ನನ್ನನ್ನು ಹಿಡಿದಿಟಿದ್ದಾರೆ’, ಎಂದರಿವಾಗುತ್ತಿತ್ತು. ಆದುದರಿಂದ ನಾನು ಓಡಿಹೋಗಲು ಸಾಧ್ಯವಿಲ್ಲ’. ನನಗೆ ಸೇವೆ ಮಾಡಲು ಬಹಳ ಇಷ್ಟವಾಗುತ್ತದೆ; ಆದರೆ ನನ್ನ ಅಂತರ್ಗತ (ವ್ಯಷ್ಟಿ) ಸಾಧನೆಯಾಗುವುದಿಲ್ಲ. ಅದರಿಂದ ನನಗೆ ಕೆಡುಕೆನಿಸುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು : ವ್ಯಷ್ಟಿ ಸಾಧನೆಯು ಚೆನ್ನಾಗಿ ಆಗದಿದ್ದರೆ, ಸೇವೆಯೂ ಚೆನ್ನಾಗಿ ಆಗುವುದಿಲ್ಲ. ಅದಕ್ಕಾಗಿ ಸ್ವಭಾವದೋಷಗಳು ಮತ್ತು ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆಯನ್ನು ನಿಯಮಿತವಾಗಿ ಮಾಡುವುದು ಅವಶ್ಯಕವಾಗಿದೆ.

೨. ನಮಗೆ ಸಮಷ್ಟಿಯ ಬಗ್ಗೆ ಪ್ರೀತಿ ಎನಿಸಬೇಕು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಈಶ್ವರನು ಸಮಷ್ಟಿಯ ಕಾಳಜಿಯನ್ನು ತೆಗೆದುಕೊಳ್ಳುತ್ತಾನೆ, ಆದುದರಿಂದ ನಮಗೂ ಸಮಷ್ಟಿಯ ಬಗ್ಗೆ ಪ್ರೀತಿ ಎನಿಸಬೇಕು. ಸಮಷ್ಟಿಯ ಜೊತೆಗೆ ಪ್ರೀತಿಯಿಂದಿರಲು ಬರಬೇಕು. ಇದಕ್ಕಾಗಿ ಸ್ವಯಂಸೂಚನೆಗಳನ್ನು ಕೊಡಬೇಕು ಮತ್ತು ಅದರ ವರದಿಯನ್ನು ಕೊಡಬೇಕು. ಓರ್ವ ರೋಗಿಯು ಚಿಕಿತ್ಸೆಗಾಗಿ ಡಾಕ್ಟರ ಹತ್ತಿರ ಹೋಗದಿದ್ದರೆ ಅವನು ಹೇಗೆ ಗುಣಮುಖನಾಗುವನು ? ಇದು ಹಾಗೆಯೇ ಇದೆ.

೩. ನಿಖರವಾಗಿ ಮಾತನಾಡಬೇಕು !

ಕು. ವೈದೇಹಿ ಖಡಸೆ : ಕೌರವರು ಪಾಂಡವರ ಮೇಲೆ ನಾರಾಯಣಾಸ್ತ್ರವನ್ನು ಬಿಟ್ಟಿದ್ದರು. ಈ ಅಸ್ತ್ರವನ್ನು ಬಿಟ್ಟಾಗ, ಯಾರಾದರೂ ಈ ಅಸ್ತ್ರವನ್ನು ವಿರೋಧಿಸಿದರೆ ಅದರ ಶಕ್ತಿಯು ಇನ್ನೂ ಹೆಚ್ಚಾಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಇಲ್ಲಿ ಈ ವಾಕ್ಯದ ೨ ಅರ್ಥಗಳಾಗುತ್ತವೆ. ‘ಅದರ ಶಕ್ತಿಯು ಇನ್ನೂ ಹೆಚ್ಚಾಗುತ್ತದೆ’, ಎಂದರೆ ಯಾರ ಶಕ್ತಿಯು ಹೆಚ್ಚಾಗುತ್ತದೆ ?

ಅಸ್ತ್ರದ ಶಕ್ತಿಯೋ ಅಥವಾ ಅಸ್ತ್ರಕ್ಕೆ ವಿರೋಧವನ್ನು ಮಾಡುವವನ ಶಕ್ತಿಯೋ ?’ ನಾವು ಮಾತನಾಡುವಾ ವಾಕ್ಯದ ೨ ಅರ್ಥಗಳು ಬರುತ್ತಿದ್ದರೆ ಸರಿಯಾದ ರೀತಿಯಲ್ಲಿ ಅರ್ಥವಾಗುವುದಕ್ಕಾಗಿ ವಾಕ್ಯವನ್ನು ನಿಖರವಾಗಿ ಮಾತನಾಡಬೇಕು. ಉದಾ. ನಾರಾಯಣಾಸ್ತ್ರವನ್ನು ಬಿಟ್ಟಾಗ, ಈ ಅಸ್ತ್ರವನ್ನು ಯಾರಾದರೂ ವಿರೋಧಿಸಿದರೆ ಆ ಅಸ್ತ್ರದ ಶಕ್ತಿಯು ಇನ್ನಷ್ಟು ಹೆಚ್ಚಾಗುತ್ತದೆ.