ಭಾರತದಲ್ಲಿ ಮನೆ, ಕುಟುಂಬ, ಸಂಸ್ಕೃತಿ ಎಲ್ಲವೂ ಸಿಗುತ್ತದೆಯೆಂದು ನಾನು ಭಾರತಕ್ಕೆ ಬರುತ್ತೇನೆ !

ಬ್ರಿಟನಿನ ಪ್ರಧಾನ ಮಂತ್ರಿ ಋಷಿ ಸುನಾಕ ಇವರ 9 ವರ್ಷದ ಬಾಲಕಿಯ ಹೇಳಿಕೆ

ಋಷಿ ಸುನಾಕ ಇವರ 9 ವರ್ಷದ ಬಾಲಕಿ ಅನುಷ್ಕಾ

ಲಂಡನ (ಬ್ರಿಟನ) – `ಭಾರತದಲ್ಲಿ ಮನೆ, ಕುಟುಂಬ, ಸಂಸ್ಕೃತಿ ಎಲ್ಲವೂ ಸಿಗುತ್ತದೆ; ಆದ್ದರಿಂದ ನಾನು ಭಾರತಕ್ಕೆ ಬರಲು ಇಷ್ಟ ಪಡುತ್ತೇನೆ’, ಎಂದು ಅವಳು ಹೇಳುತ್ತಾಳೆ. ಬ್ರಿಟನಿನ ಪ್ರಧಾನಮಂತ್ರಿ ಋಷಿ ಸುನಾಕ ಇವರ 9 ವರ್ಷದ ಬಾಲಕಿ ಅನುಷ್ಕಾಳ ಇಲ್ಲಿ ಆಯೋಜಿಸಲಾಗಿದ್ದ `ಕುಚಿಪುಡಿ ಡಾನ್ಸ ಫೆಸ್ಟಿವಲ್ – ರಂಗ 2022’ ನಲ್ಲಿ ಭಾಗವಹಿಸಲು ಅವಳು ಅಲ್ಲಿಗೆ ಬಂದಿದ್ದಳು. ಆ ಸಮಯದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವಾಗ ಅವಳು ಮೇಲಿನಂತೆ ಹೇಳಿದಳು. ಈ ಕಾರ್ಯಕ್ರಮದಲ್ಲಿ ಜಗತ್ತಿನ 4 ರಿಂದ 85 ವರ್ಷ ವಯಸ್ಸಿನ 100 ಕಲಾವಿದರು ಭಾಗವಹಿಸಿದ್ದರು.

ನೃತ್ಯದಿಂದ ಎಲ್ಲ ಚಿಂತೆ ಮತ್ತು ಒತ್ತಡ ದೂರವಾಗುತ್ತದೆ !

ಅನುಷ್ಕಾ ಮಾತನಾಡುತ್ತಾ, ನನಗೆ ಕೂಚಿಪುಡಿ ಮತ್ತು ಇತರೆ ನೃತ್ಯಗಳು ಇಷ್ಟವಾಗುತ್ತವೆ; ಕಾರಣ, ಯಾವಾಗ ನೀವು ನೃತ್ಯವನ್ನು ಮಾಡುತ್ತೀರಿ, ಆಗ ನಿಮ್ಮ ಎಲ್ಲ ಚಿಂತೆ ಮತ್ತು ಒತ್ತಡ ದೂರವಾಗಿ ನೀವು ನಿಮ್ಮ ಸ್ನೇಹಿತರೊಂದಿಗೆ ಸಂಪೂರ್ಣ ಶಕ್ತಿಯೊಂದಿಗೆ ನರ್ತಿಸುತ್ತಾರೆ ಎಂದು ಹೇಳಿದಳು.