ಸಂಚಾರ ನಿಷೇಧದ ವಿರುದ್ಧ ಬೀದಿಗಿಳಿದ ಚೀನಾ ನಾಗರಿಕರು !

ಜಿನ್‌ಪಿಂಗ್ ನ ರಾಜೀನಾಮೆಗೆ ಆಗ್ರಹ

ಆಂದೋಲನ ಮಾಡುತ್ತಿರುವ ಚೀನಾ ನಾಗರಿಕರು

ಶಾಂಘೈ – ಕೊರೋನಾ ಕಾರಣವನ್ನು ಮುಂದೊಡ್ಡೀ ಚೀನಾದ ಜಿನ್‌ಪಿಂಗ್ ಸರಕಾರವು ಚೀನಾದಲ್ಲಿ ಹೇರಿದ ಸಂಚಾರ ನಿಷೇಧದ ವಿರುದ್ಧ ಚೀನಾದ ನಾಗರಿಕರು ನವೆಂಬರ್ 26 ರಂದು ಬೀದಿಗಿಳಿದರು. ಅವರು ‘ನಮಗೆ ಕೊರೋನಾ ಪರೀಕ್ಷೆ ಬೇಡ, ನಮಗೆ ಸ್ವಾತಂತ್ರ್ಯ ಬೇಕು’, ‘ಸಂಚಾರ ನಿಷೇಧ ಹಿಂಪಡೆಯಿರಿ’ ಎಂಬ ಘೋಷಣೆಗಳನ್ನು ಕೂಗುತ್ತಾ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇವರ ರಾಜೀನಾಮೆಗೆ ಒತ್ತಾಯಿಸಿದರು. ಸಂಚಾರ ನಿಷೇಧವನ್ನು ತಿರಸ್ಕರಿಸಿ ನಾಗರಿಕರು ಪ್ರತಿಭಟಿಸುವುದಕ್ಕಾಗಿ ಬೀದಿಗಿಳಿದರು. ಇದರಿಂದಾಗಿ ಹಲವೆಡೆ ಪೊಲೀಸರು ಮತ್ತು ನಾಗರಿಕರ ನಡುವೆ ಚಕಮಕಿ ನಡೆಯಿತು. ಈ ಪ್ರಕರಣದಲ್ಲಿ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಈ ಪ್ರತಿಭಟನೆಯ ವೀಡಿಯೋವನ್ನು ಅಮೆರಿಕಾದ ಪತ್ರಕರ್ತ ಜಾಯ್ಸ್ ಕರಮ್ ಅವರು ಪ್ರಸಾರ ಮಾಡಿದ್ದಾರೆ. ಸಂಚಾರ ನಿಷೇಧದ ಕಾಲದಲ್ಲಿ ಒಂದು ಕಟ್ಟಡಕ್ಕೆ ಹೊತ್ತಿಕೊಂಡ ಬೆಂಕಿಯಲ್ಲಿ 10 ಜನರು ಸಾವನ್ನಪ್ಪಿದ ನಂತರ ಜನರು ತಾಳ್ಮೆ ಕಳೆದುಕೊಂಡರು ಮತ್ತು ಬೀದಿಗಿಳಿದು ಪ್ರತಿಭಟಿಸಿದರು ಎಂದು ಹೇಳಲಾಗುತ್ತಿದೆ.