ಭಾರತೀಯ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಪ್ರಗತಿಪರತೆ ಮತ್ತು ನರಬಲಿ !

‘ಕೇರಳದ ಪಥಾನಾಮಥಿಟ್ಟಾದಲ್ಲಿ ರೋಸಲೀನ ಮತ್ತು ಪದ್ಮಾ ಎಂಬ ಇಬ್ಬರು ಮಹಿಳೆಯರನ್ನು ಇತ್ತೀಚೆಗೆ ಅತ್ಯಂತ ಬರ್ಬರವಾಗಿ ಹತ್ಯೆ ಮಾಡಲಾಯಿತು. ಆರ್ಥಿಕ ಸಂಪನ್ನತೆಗಾಗಿ (ಲಾಭಕ್ಕಾಗಿ) ಇವರಿಬ್ಬರ ನರಬಲಿಯನ್ನು ಕೊಡಲಾಯಿತು. ಮಹಮ್ಮದ ಶಫೀ, ಭಗವಲ ಸಿಂಹ ಮತ್ತು ಅವನ ಪತ್ನಿ ಲೈಲಾ ಇವರು ಈ ಭಯಂಕರ ಹತ್ಯಾಕಾಂಡದ ಸೂತ್ರದಾರರಾಗಿದ್ದಾರೆ. ಭಗವಲ ಮತ್ತು ಲೈಲಾ ಇವರಿಬ್ಬರೂ ಭಾರತೀಯ ಮಾರ್ಕ್ಸ್‌ವಾದಿ (ಸಾಮ್ಯವಾದಿ) ಕಮ್ಯುನಿಸ್ಟ್ ಪಕ್ಷದ ಕಟ್ಟರ್ ಕಾರ್ಯಕರ್ತರಾಗಿದ್ದಾರೆ. ಈ ಘಟನೆಯ ಭಯಾನಕತೆಯನ್ನು ನೋಡಿದರೆ ಅಂಧಶ್ರದ್ಧೆ, ಕೇರಳ ಮತ್ತು ಭಾಕಪದ ವಿಷಯದಲ್ಲಿ ಕೆಲವು ಪ್ರಶ್ನೆಗಳು ಏಳುತ್ತವೆ. ಅದರ ಬಗ್ಗೆ ಈ ಲೇಖನದಲ್ಲಿ ವಿಚಾರವಿಮರ್ಶೆಯನ್ನು ಮಾಡಲಾಗಿದೆ…

ಯೋಗೀತಾ ಸಾಳವಿ

೧. ಕೇರಳದಲ್ಲಿ ಓರ್ವ ಮತಾಂಧನ ಹೇಳಿಕೆಯಿಂದ ಇಬ್ಬರು ಮಹಿಳೆಯರ ಅತ್ಯಂತ ಅಮಾನುಷವಾಗಿ ಹತ್ಯೆ !

‘ಕೇರಳದ ಪಥಾನಾಮಥಿಟ್ಟಾದಲ್ಲಿ ರೋಸಲೀನ ಮತ್ತು ಪದ್ಮಾ ಎಂಬ ಇಬ್ಬರು ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡ ಲಾಯಿತು. ಆರ್ಥಿಕ ಸಂಪನ್ನತೆ ಬರಬೇಕೆಂದು (ಹಣದ ಆಸೆಗಾಗಿ) ಇವರಿಬ್ಬರನ್ನು ದೇವರಿಗೆ ಬಲಿ ಕೊಡಲಾಯಿತು. ರೋಸಲೀನ ಇವಳ ಕತ್ತನ್ನು ಕೊಯ್ಯಲಾಯಿತು ಮತ್ತು ಅವಳ ಗುಪ್ತಾಂಗದಲ್ಲಿ ಶಸ್ತ್ರವನ್ನು ತುರುಕಲಾಯಿತು, ಇಷ್ಟು ಮಾತ್ರವಲ್ಲ, ಮರಣದ ನಂತರ ಅವಳ ಸ್ತನಗಳನ್ನೂ ಕತ್ತರಿಸಲಾಯಿತು. ಪದ್ಮಾಳ ಕೈಕಾಲುಗಳನ್ನು ಕಟ್ಟಿ ಅವಳು ಅರೆಮೂರ್ಛಿತಾವಸ್ಥೆಯಲ್ಲಿರುವಾಗಲೇ ಅವಳ ಶರೀರವನ್ನು ೫೬ ತುಂಡುಗಳನ್ನಾಗಿ ಕತ್ತರಿಸಲಾಯಿತು. ಇಬ್ಬರಿಗೂ ಭಯಂಕರ ಯಾತನೆಗಳನ್ನು ನೀಡಲಾಯಿತು. ಮಹಮ್ಮದ ಶಫೀ ಎಂಬ ಮತಾಂಧನು ಈ ಅತ್ಯಂತ ಹೀನ ಮತ್ತು ಭಯಂಕರ ಹತ್ಯಾಕಾಂಡದ ಸೂತ್ರಧಾರನಾಗಿದ್ದಾನೆ. ಅವನು ಹೇಳಿದಂತೆ ಭಗವಲ ಸಿಂಹ (೬೮ ವರ್ಷ) ಮತ್ತು ಅವನ ಪತ್ನಿ ಲೈಲಾ (೫೯ ವರ್ಷ) ಇವರಿಬ್ಬರೂ ಸೇರಿ ಈ ಮಹಿಳೆಯರನ್ನು ವಿಕೃತವಾಗಿ ಹತ್ಯೆಯನ್ನು ಮಾಡಿದರು. ಈ ಘಟನೆಯಿಂದ ಕೇವಲ ಕೇರಳ ಮಾತ್ರವಲ್ಲ, ಸಂಪೂರ್ಣ ದೇಶವೇ ಭಯಭೀತವಾಯಿತು ಮತ್ತು ಇದರಿಂದ ಭಾರತೀಯ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ಅಂತರಂಗವೂ ಬಹಿರಂಗವಾಯಿತು.

೨. ಅತ್ಯಂತ ಕ್ರೂರವಾಗಿ ಇಬ್ಬರು ಮಹಿಳೆಯರ ಹತ್ಯೆಯಾದರೂ ಎಲ್ಲ ಪ್ರಗತಿಪರರು, ಜಾತ್ಯತೀತರು ಮತ್ತು ಶಾಹೀನಭಾಗದಲ್ಲಿನ ಆಂದೋಲನಕಾರರು ಬಾಯಿಗೆ ಬೀಗ ಜಡಿದುಕೊಂಡಿದ್ದಾರೆ

ಭಗವಲ ಸಿಂಹ ಈತನು ಭಾರತೀಯ ಕಮ್ಯುನಿಸ್ಟ್ (ಮಾರ್ಕ್ಸವಾದಿ) ಪಕ್ಷದ ಸ್ಥಳೀಯ ಕಟ್ಟರ್ ಮುಖಂಡನಾಗಿದ್ದಾನೆ. ಅವನು ಭಾರತೀಯ ಕಮ್ಯುನಿಸ್ಟ್ ಪಕ್ಷದ ಸ್ಥಳಿಯ ಶಾಖಾ ಸಚಿವನೆಂದು ಕಾರ್ಯನಿರತನಾಗಿದ್ದನು. ಸದ್ಯ ಅವನು ಕೇರಳ ರಾಜ್ಯ ‘ಕಾರ್ಶಕಾ ಥೊಝಿಲಾಲಿ ಸಂಘ ಪಂಚಾಯತ ಸಮಿತಿ’ಯ ಅಧ್ಯಕ್ಷನಾಗಿದ್ದಾನೆ. ಪ್ರತಿಯೊಂದು ಚುನಾವಣೆಯಲ್ಲಿಯೂ ಅವನು ಅಲ್ಲಿನ ಬೂತ್ ಕ್ರ. ೧೪೨ ರಲ್ಲಿ ‘ಎಲ್.ಡಿ.ಎಫ್’ನ (ಲೆಫ್ಟ್ ಡೆಮೋಕ್ರಟಿಕ್ ಫ್ರಂಟ್- ಎಡ ಲೋಕಶಾಹೀ ಆಘಾಡಿಯ) ದಲಾಲನಾಗಿ (ಎಜಂಟನಾಗಿ) ಕಾರ್ಯವನ್ನು ಮಾಡಿದ್ದಾನೆ. ಅವನ ಪತ್ನಿ ಲೈಲಾ ಕೂಡ ಭಾರತೀಯ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತೆಯಾಗಿದ್ದಾಳೆ. ಕೇರಳದಲ್ಲಿ ಸದ್ಯ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಇವರ ನೇತೃತ್ವದಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷದ ಆಡಳಿತವಿದೆ. ಈ ಪಕ್ಷವು ತನ್ನನ್ನು ಅತ್ಯಂತ ಪ್ರಗತಿಪರ ಮತ್ತು ಪ್ರಗತಿಶೀಲ ದೃಷ್ಟಿಕೋನದ್ದು ಮಾನವತಾವಾದಿ ಆಗಿದೆ ಎಂದು ತಿಳಿಯುತ್ತದೆ.

ಮಹಾರಾಷ್ಟ್ರದಲ್ಲಿ ಈ ಪಕ್ಷಕ್ಕೆ ಮರೆಯಲ್ಲಿದ್ದು ಸಮರ್ಥನೆ ನೀಡುವ ‘ಡಫಲೀ ಗ್ಯಾಂಗ್’ ಕೂಡ ತನ್ನನ್ನು ಮಾನವತಾವಾದಿ ಪ್ರಗತಿಪರ ಎಂದು ತಿಳಿಯುತ್ತದೆ. ಭಾಜಪ ಆಡಳಿತದ ರಾಜ್ಯದಲ್ಲಿ ಸ್ವಲ್ಪ ಏನಾದರೂ ಆದರೂ ಇವರು ಮತ್ತು ಭಾಕಪದ ರಾಷ್ಟ್ರೀಯ ಮಟ್ಟದ ತಥಾಕಥಿತ ನೇತಾರರು ತಕ್ಷಣ ‘ಭಾಜಪದ ರಾಜ್ಯದಲ್ಲಿ ಹೇಗೆ ಅಸಹಿಷ್ಣುತ್ವ ಇದೆ, ಜಂಗಲ್ ರಾಜ್ಯವಿದೆ, ಅಲ್ಲಿ ಮಾನವರು ವಾಸಿಸುವಂತಹ ವಾತಾವರಣವಿಲ್ಲ’ ಎಂದು ಹೇಳಲು ಪ್ರಾರಂಭಿಸುತ್ತಾರೆ. ಯಾವಾಗ ಉತ್ತರಪ್ರದೇಶದ ಹಾಥರಸದಲ್ಲಿ ನಿರಪರಾಧಿ ಹುಡುಗಿಯ ನಿಧನವಾಯಿತೋ, ಆಗ ನಿಃಷ್ಪಕ್ಷ ವಾರ್ತೆ ಮತ್ತು ಜನಜಾಗೃತಿಗಾಗಿ ‘ಪಿ.ಎಫ್.ಐ.’ಯ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ) ಗುಪ್ತಚರನೆಂದು ಸಂಶಯಿತ ಕಪ್ಪನ್ ಸಿದ್ದಿಕಿಯು ಕೇರಳದಿಂದ ಹಾಥರಸಕ್ಕೆ ಹೋಗಿದ್ದನು. ಇಂದು ಅದೇ ಭಾಕಪ ಆಡಳಿತದ ಕೇರಳದಲ್ಲಿ ಮಾನವತೆಗೆ ಮಸಿ ಬಳಿಯುವಂತಹ ಹತ್ಯಾಕಾಂಡ ನಡೆಯಿತು; ಆದರೆ ಅದರ ಬಗ್ಗೆ ಎಲ್ಲ ಪ್ರಗತಿಪರರು, ಜಾತ್ಯತೀತರು ಮತ್ತು ಅನ್ಯಾಯ-ಅತ್ಯಾಚಾರ ವಿರುದ್ಧದ ಹೋರಾಟದ ಗುತ್ತಿಗೆದಾರರಾಗಿರುವ ಅಥವಾ ಹಾಗೆ ವರ್ತಿಸುವ ಎಲ್ಲ ಶಾಹೀನಬಾಗ್ ಆಂದೋಲನಕಾರಿಗಳು ಬಾಯಿಗೆ ಬೀಗ ಜಡಿದು ಕೊಂಡಿದ್ದಾರೆ ! ರೋಸಲೀನ ಮತ್ತು ಪದ್ಮಾ ಇವರು ಮನುಷ್ಯರಾಗಿರಲಿಲ್ಲವೇನು ? ಅಥವಾ ಅವರನ್ನು ವಿಕೃತವಾಗಿ ಹತ್ಯೆ ಮಾಡಿದ ಭಗವಲ ಸಿಂಹ ಮತ್ತು ಲೈಲಾ ಇವರು ಭಾಕಪದ ಕಾರ್ಯಕರ್ತರಾಗಿದ್ದಾರೆಂದು ಎಲ್ಲರೂ ಬಾಯಿ ಮುಚ್ಚಿಕೊಂಡಿದ್ದಾರೇನು ? ಅಥವಾ ಇವರಿಬ್ಬರಿಗೂ ಇಂತಹ ರಾಕ್ಷಸೀ ಕೃತ್ಯವೆಸಗಲು ಉತ್ತೇಜಿಸಿದವನ ಹೆಸರು ಮಹಮ್ಮದ ಶಫೀ ಎಂದಾಗಿರುವುದರಿಂದ ಈ ಜಾತ್ಯತೀತರು ಮೌನ ತಾಳಿದ್ದಾರೇನು ? ಏನಿದೆಯೋ ಅದೆಲ್ಲ ಸಂತಾಪಜನಕವಾಗಿದೆ, ಇಷ್ಟು ಮಾತ್ರ ನಿಜ !

೩. ಆರೋಪಿ ಮಹಮ್ಮದ ಶಫೀ ಇವನು ಫೇಸ್‌ಬುಕ್‌ನ ನಕಲಿ ಖಾತೆಯ ಮೂಲಕ ಸಹ ಆರೋಪಿಗಳನ್ನು ಮತ್ತು ಮೃತರಾದವರನ್ನು ಜಾಲದಲ್ಲಿ ಸಿಲುಕಿಸುವುದು

ಅ. ವಿಷಯ ಹೀಗಿದೆ, ಯಾವ ರೀತಿಯಲ್ಲಿ ಇವರಿಬ್ಬರ ಹತ್ಯೆಯಾಗಿದೆಯೊ, ಅದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಘಟನೆಯ ಕಾರಣಮೀಮಾಂಸೆಯನ್ನು ಮಾಡುವಾಗ ಏನೆಲ್ಲ ಕಣ್ಣ ಮುಂದೆ ಬರುತ್ತದೆಯೊ, ಅದಕ್ಕೂ ಅನೇಕ ಮಜಲುಗಳಿದ್ದು ಅವು ಅಷ್ಟೇ ಭಯಂಕರವಾಗಿವೆ. ಭಗವಲ ಸಿಂಹ ಮತ್ತು ಲೈಲಾ ಇವರು ಭಾರತೀಯ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು. ಭಗವಲ ಇವನು ಆಯುರ್ವೇದ ಚಿಕಿತ್ಸಕ ಮತ್ತು ಡಾಕ್ಟರ್ ಎಂಬ ಉಪಾಧಿಯನ್ನೂ ಹಚ್ಚುತ್ತಿದ್ದನು. ಭಗವಲ ಮತ್ತು ಲೈಲಾ ಇವರ ಆರ್ಥಿಕ ಸ್ಥಿತಿಯು ಅಷ್ಟೇನೂ ಹಾಳಾಗಿರಲಿಲ್ಲ; ಆದರೂ ಅವರಿಗೆ ಇನ್ನೂ ಹಣ ಬೇಕಾಗಿತ್ತು. ಈ ಕ್ರೂರ ಅಪರಾಧದ ಸೂತ್ರಧಾರ ಮಹಮ್ಮದ ಶಫಿಗೆ ಫೇಸ್ ಬುಕ್‌ನ ಮೂಲಕ ಭಗವಲ ಸಿಂಹನೊಂದಿಗೆ ಗೆಳೆತನವಾಗಿತ್ತು. ಅದರ ಹಿಂದೆಯೂ ಒಂದು ಆಘಾತಕಾರಿ ಘಟನೆಯಿದೆ. ಈ ಘಟನೆಯಿಂದ ಫೇಸ್‌ಬುಕ್ ಮತ್ತು ಇತರ ಸಮಾಜಮಾಧ್ಯಮಗಳ ಮೂಲಕ ಗೆಳೆತನ ಮತ್ತು ಮುಂದಿನ ಎಲ್ಲ ಕರ್ಮಗಳನ್ನು ಮಾಡುವವರು ಏನಾದರೂ ಕಲಿಯಬೇಕು.

ಆ. ಮಹಮ್ಮದ ಶಫೀ ಇವನು ಫೇಸ್‌ಬುಕ್‌ನಲ್ಲಿ ಶ್ರೀದೇವಿ ಎಂಬ ಹೆಸರಿನಲ್ಲಿ ತನ್ನ ಖಾತೆಯನ್ನು ತೆರೆದನು. ೩ ವರ್ಷಗಳ ಹಿಂದೆ ಈ ಖಾತೆಯ ಮೂಲಕ ಭಗವಲ ಸಿಂಹನ ಗೆಳೆತನವಾಯಿತು. ಭಗವಲ ಸಿಂಹ ಮಹಮ್ಮದ ಶಫೀಯನ್ನು ಶ್ರೀದೇವಿ ಎಂದು ತಿಳಿದು ತನ್ನ ಸುಖ-ದುಃಖಗಳನ್ನು ಹೇಳಲು ಆರಂಭಿಸಿದನು. ಶ್ರೀದೇವಿ ಯಾನೆ ಮಹಮ್ಮದ ಶಫೀ ಇವನು, “ಅವನಿಗೆ ನನಗೆ ಒಬ್ಬ ವ್ಯಕ್ತಿಯ ಪರಿಚಯವಿದೆ, ಆ ವ್ಯಕ್ತಿ ಮಾಟ-ಮಂತ್ರಗಳ  ಮೂಲಕ ಭಗವಲನ ಆರ್ಥಿಕ ಅಡಚಣೆಯನ್ನು ದೂರಗೊಳಿಸಬಹುದು.” ಶ್ರೀದೇವಿ ಮಹಮ್ಮದ ಶಫೀಯೊಂದಿಗೆ ಅಂದರೆ ತನ್ನೊಂದಿಗೆ ಭಗವಲ ಸಿಂಹನ ಸಂಪರ್ಕ ಮಾಡಿಸಿಕೊಟ್ಟನು. ಮಹಮ್ಮದ ಶಫೀ ಭಗವಲ ಮತ್ತು ಲೈಲಾ ಇವರಿಗೆ, “ನರಬಲಿ ಕೊಟ್ಟರೆ, ದೇವರು ಪ್ರಸನ್ನನಾಗುವರು ಮತ್ತು ಭಗವಲನ ಮನೆಗೆ ಸಂಪತ್ತು ಬರುವುದು” ಎಂದು ಹೇಳಿದನು. ನರಬಲಿಯನ್ನು ಹುಡುಕಿಕೊಡಲು ಸ್ವತಃ ಶಫೀಯೆ ಮುಂದಾಳತ್ವ ವಹಿಸಿದನು.

೪. ಮಹಮ್ಮದ ಶಫೀ ಇವನು ಹಣದ ಆಮಿಷ ತೋರಿಸಿ ರೋಸಲೀನ ಮತ್ತು ಪದ್ಮಾ ಎಂಬ ಇಬ್ಬರು ಮಹಿಳೆಯರನ್ನು ತನ್ನ ಜಾಲದಲ್ಲಿ ಸಿಲುಕಿಸುವುದು

ಆರೋಪಿ ಮಹಮ್ಮದ ಶಫೀ ಇವನು ರೋಸಲೀನ ಮತ್ತು ಪದ್ಮಾ ಇವರಿಬ್ಬರನ್ನು ಹೇಗೆ ಸಂಪರ್ಕಿಸಿದನು, ಎನ್ನುವ ಬಗ್ಗೆ ಪ್ರಸಾರ ಮಾಧ್ಯಮಗಳಲ್ಲಿ ಬೆಳಕಿಗೆ ಬಂದಿರುವ ವಿಷಯಕ್ಕನುಸಾರ ಒಬ್ಬಳಿಗೆ ಅಶ್ಲೀಲ ಚಲನಚಿತ್ರಗಳಲ್ಲಿ ಕೆಲಸ ಕೊಡಿಸುವುದಾಗಿ, ಇನ್ನೊಬ್ಬಳಿಗೆ ದೇಹಮಾರಾಟದಿಂದ ೧೫ ಸಾವಿರ ರೂಪಾಯಿಗಳನ್ನು ನೀಡುವ ಪ್ರಲೋಭನೆಯನ್ನು ತೋರಿಸಿದನು. ಹೀಗೆ ಪ್ರಲೋಭನೆಯೊಡ್ಡಿ ಮಹಮ್ಮದ ಶಫೀ ರೋಸಲೀನ ಮತ್ತು ಪದ್ಮಾ ಇವರನ್ನು ತನ್ನ ಜಾಲದಲ್ಲಿ ಸಿಲುಕಿಸಿದ್ದನು. ಮಹಮ್ಮದ ಶಫೀ ಫೇಸ್‌ಬುಕ್‌ನ ಮಾಧ್ಯಮದಿಂದಲೆ ರೋಸಲೀನ ಮತ್ತು ಪದ್ಮಾ ಇವರನ್ನು ಸಂಪರ್ಕಿಸಿದ್ದನು. ಮೊದಲು ಇವರಿಬ್ಬರೂ ರಸ್ತೆಯ ಬದಿಯಲ್ಲಿ ಲಾಟರಿ ಟಿಕೇಟ್‌ಗಳನ್ನು ಮಾರುತ್ತಿದ್ದರು. ಇಬ್ಬರಿಗೂ ೫೦ ಕ್ಕಿಂತ ಜಾಸ್ತಿ ವಯಸ್ಸು ಆಗಿತ್ತು. ಅವರಿಗೆ ಫೇಸ್‌ಬುಕ್‌ನಿಂದ ಮಹಮ್ಮದ ಶಫಿಯ ಸಂಪರ್ಕವಾಯಿತು. ಪ್ರಲೋಭನೆಯಿಂದಾಗಿ ರೋಸಲೀನ ಜೂನ್‌ನಲ್ಲಿ ಮತ್ತು ಪದ್ಮಾ ಸಪ್ಟೆಂಬರನಲ್ಲಿ ಶಫಿಯ ಜಾಲಕ್ಕೆ ಸಿಲುಕಿದರು.

೫. ರೋಸಲೀನ ಮತ್ತು ಪದ್ಮಾ ಇವರ ಜೀವಕ್ಕೆ ಮುಳುವಾದ ಅಪರಿಚಿತ ಶಫೀಯೊಂದಿಗಿನ ಫೇಸ್‌ಬುಕ್ ಗೆಳೆತನ

ಶಫೀ ಮೊದಲೆ ಒಬ್ಬ ವಿಕೃತ ಅಪರಾಧಿಯಾಗಿದ್ದನು. ೨೦೨೦ರಲ್ಲಿ ೭೫ ವರ್ಷ ವಯಸ್ಸಿನ ವೃದ್ಧೆಯನ್ನು ಬಲಾತ್ಕರಿಸಲು ಪ್ರಯತ್ನಿಸಿ ಅವಳ ಗುಪ್ತಾಂಗದ ಮೇಲೆ ಶಸ್ತ್ರದಿಂದ ಆಕ್ರಮಣ ಮಾಡಿದ ಪ್ರಕರಣದಲ್ಲಿ ಅವನಿಗೆ ಸೆರೆಮನೆವಾಸವಾಗಿತ್ತು. ಪ್ರಸಾರ ಮಾಧ್ಯಮಗಳಲ್ಲಿನ ಒಂದು ವಾರ್ತೆಗನುಸಾರ ಈ ಶಫೀ ಶೀಘ್ರ ಹಣ ಪಡೆಯಲು ಭಗವಲನ ಮುಂದೆಯೆ ಅವನ ಪತ್ನಿ, ಅಂದರೆ ಲೈಲಾಳೊಂದಿಗೆ ಲೈಂಗಿಕ ಸಂಬಂಧವನ್ನಿಡುತ್ತಿದ್ದನು. ‘ನರಬಲಿ ಕೊಡುವಾಗ ರೋಸಲೀನಳಿಗೆ ಹೆಚ್ಚು ಯಾತನೆಯನ್ನು ನೀಡದ ಕಾರಣ ದೇವರು ಪ್ರಸನ್ನರಾಗಲಿಲ್ಲ’, ಎಂದು ಶಫೀ ಭಗವಲನಿಗೆ ಹೇಳಿದ್ದನು. ಅದರ ಮೇಲೆಯೂ ಅವನಿಗೆ ವಿಶ್ವಾಸ ಮೂಡಿತು. ಆದ್ದರಿಂದ ಪದ್ಮಾಳಿಗೆ ಅತ್ಯಂತ ಭಯಾನಕ ಯಾತನೆ ನೀಡಿ ಹತ್ಯೆ ಮಾಡಲಾಯಿತು. ಅವಳ ಶರೀರವನ್ನು ತುಂಡು ತುಂಡು ಮಾಡಲಾಗಿತ್ತು; ನರಾಧಾಮರು ಅವಳ ಅವಯವಗಳನ್ನು ತಿಂದರು ! ಒಂದು ವೇಳೆ ರೋಸಲೀನ ಮತ್ತು ಪದ್ಮಾ ಇವರು ಈ ಸುಳ್ಳು ತಂತ್ರ ಜ್ಞಾನದ ಮೂಲಕ ಅಪರಿಚಿತ ಶಫೀಯ ಮೇಲೆ ವಿಶ್ವಾಸವನ್ನಿಡದಿದ್ದರೆ ಅವರು ಜೀವಂತವಾಗಿರುತ್ತಿದ್ದರು. ಸದ್ಯ ಬಹಳಷ್ಟು ಜನರು ತಮ್ಮ ಕಣ್ಣೆದುರಿನಲ್ಲಿರುವ ಸಂಬಂಧಿಕರಿಗಿಂತ ಈ ಆಭಾಸವನ್ನು ನಿರ್ಮಾಣ ಮಾಡುವ ಪ್ರಸಾರ ಮಾಧ್ಯಮಗಳಲ್ಲಿನ ಅಪರಿಚಿತ ಜನರೊಂದಿಗೆ ಸಂವಾದ ಸಾಧಿಸುವುದರಲ್ಲಿ ಮಗ್ನರಾಗಿರುತ್ತಾರೆ. ಯಾವ ವ್ಯಕ್ತಿಯ ವಿಷಯದಲ್ಲಿ ಮಾಹಿತಿ ಇಲ್ಲವೊ, ಆ ವ್ಯಕ್ತಿಯ ಮುಂದೆ ತಮ್ಮ ಭಾವವಿಶ್ವವನ್ನು ತೆರೆದಿಡುತ್ತಾರೆ. ರೋಸಲೀನ ಮತ್ತು ಪದ್ಮಾ ಇವರ ಭಯಾನಕ ಮೃತ್ಯುವಿನಿಂದಾದರೂ ಸಮಾಜವು ಪಾಠ ಕಲಿಯಬೇಕು .

೬. ಇನ್ನೊಂದು ಘಟನೆಯಲ್ಲಿ ಓರ್ವ ಮಹಿಳೆಯು ಒಬ್ಬ ಬಾಲಕನ ನರಬಲಿ ನೀಡಲು ಪ್ರಯತ್ನಿಸುವುದು

ಈ ಘಟನೆಯಿಂದ ದೇಶ ಬೆಚ್ಚಿಬಿದ್ದಿರುವಾಗಲೇ ಈ ಘಟನೆಯಾದ ೨-೩ ದಿನಗಳ ನಂತರ ಪುನಃ ಕೇರಳದ ಈ ಪಥಾನಾ ಮಥಿಟ್ಟಾದಲ್ಲಿಯೇ ಇನ್ನೊಂದು ಘಟನೆಯಾಯಿತು. ಅಪರಾಧಿ ಶೋಭನಾ ಅಂದರೆ ವಸಂತಾ ಇವಳ ಮೇಲೆ ಕ್ರಮ ತೆಗೆದುಕೊಳ್ಳಲು ಪೊಲೀಸರೂ ಹಿಂಜರಿಯುತ್ತಿದ್ದರು. ಪೊಲೀಸರು ಅವಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಏಕೆ ಹೆದರುತ್ತಿದ್ದರೆಂದರೆ, ಶೋಭನಾ ಇವಳು ಅಂಧಶ್ರದ್ಧೆಯಿಂದ ಒಬ್ಬ ಬಾಲಕನನ್ನು ನರಬಲಿ ಕೊಡಲು ಪ್ರಯತ್ನಿಸಿದ್ದಳು. ಅವನನ್ನು ಬಲಿಕೊಡುವ ಮೊದಲು ಅವಳು ವಿಚಿತ್ರವಾಗಿ ಸನ್ನೆಗಳನ್ನು ಮಾಡುತ್ತಿದ್ದುದರಿಂದ ಆ ಹುಡುಗ ಹೆದರಿ ಕೂಗಾಡತೊಡಗಿದನು. ಹುಡುಗ ಕೂಗಾಡುವುದನ್ನು ಕೇಳಿ ಸುತ್ತ ಮುತ್ತಲಿನ ಜನರು ಅಲ್ಲಿ ಸೇರಿದರು. ಈ ಹಿಂದೆ ಯಾರೂ ಅವಳ ವಿರುದ್ಧ ಹೋಗಲು ಪ್ರಯತ್ನಿಸಿರಲಿಲ್ಲ; ಏಕೆಂದರೆ ಯಾರು ಅವಳ ವಿರುದ್ಧ ಹೋಗುತ್ತಾರೆಯೋ, ಅವರಿಗೆ ಅವಳು ಶಾಪ ಕೊಡುತ್ತಾಳೆ, ಎಂದು ಎಲ್ಲರಿಗೂ ಭಯವಿತ್ತು. ಆದ್ದರಿಂದ ಈ ಹಿಂದೆ ಯಾರೂ ಅವಳ ವಿರುದ್ಧ ಹೋಗಿರಲಿಲ್ಲ. ಈಗ ಮಾತ್ರ ಅವಳು ಒಬ್ಬ ಚಿಕ್ಕ ಹುಡುಗನ ಜೀವವನ್ನು ತೆಗೆದುಕೊಳ್ಳಲು ಪ್ರಯತ್ನಿಸಿರುವುದರಿಂದ ಜನರು ಸಂತಾಪಗೊಂಡರು ಮತ್ತು ಅವರು ಪೊಲೀಸರನ್ನು ಕರೆದರು. ಪೊಲೀಸರೂ ಅವಳ ವಿರುದ್ಧ ಕ್ರಮತೆಗೆದುಕೊಳ್ಳಲು ಧೈರ್ಯ ಮಾಡುತ್ತಿರಲಿಲ್ಲ; ಏಕೆಂದರೆ ಅವರು ಕ್ರಮತೆಗೆದುಕೊಂಡರೆ ಶೋಭನಾ ಶಾಪ ಕೊಡಬಹುದು ಎಂದು ಅವರಿಗೂ ಭಯವೆನಿಸುತ್ತಿತ್ತು, ಕೊನೆಗೆ ಜನರ ಆಂದೋಲನದಿಂದಾಗಿ ಪೊಲೀಸರಿಗೆ ಅವಳನ್ನು ಬಂಧಿಸಬೇಕಾಯಿತು.

೭. ಕೇರಳದಲ್ಲಿ ಇಂತಹ ದುಷ್ಟ ನರಸಂಹಾರ ಆಗುತ್ತಿರುವಾಗ ಕಾಂಗ್ರೆಸ್ಸಿನ ವಾಯನಾಡ್‌ನ ಸಂಸದರಾದ ರಾಹುಲ ಗಾಂಧಿ ಇವರಿಗೆ ಅದರ ಗಂಧಗಾಳಿಯೂ ಗೊತ್ತಿಲ್ಲ

ಇಲ್ಲಿ ಇನ್ನೊಂದು ಹೇಳಬೇಕೆನಿಸುತ್ತದೆ, ಕೇರಳದಲ್ಲಿ ಯಾವಾಗ ಈ ಘಟನೆಗಳು ನಡೆಯುತ್ತಿದ್ದವೊ, ಆಗ ಕಾಂಗ್ರೆಸ್ಸಿನ ಮುಖಂಡ ಮತ್ತು ಕೇರಳದ ವಾಯನಾಡ್ ಜಿಲ್ಲೆಯ ಸಂಸದ ರಾಹುಲ ಗಾಂಧಿ ಇವರು ‘ಭಾರತ ಜೋಡೋ’ ಯಾತ್ರೆಯನ್ನು ಮಾಡುತ್ತಿದ್ದರು. ಕೇರಳದಲ್ಲಿನ ಅನೇಕ ಅಬಾಲವೃದ್ಧ ಸ್ತ್ರೀಯರು ಅವರನ್ನು ಭೇಟಿಯಾಗುತ್ತಿದ್ದರು. ರಾಹುಲ ಗಾಂಧಿ ಅಥವಾ ಅವರ ಯಾತ್ರೆಯಲ್ಲಿ ಭಾಗವಹಿಸಿದವರಿಗೆ ಕೇರಳದಲ್ಲಿನ ಈ ಮಾಟ-ಮಂತ್ರದ ಗಂಭೀರ ಸಮಸ್ಯೆಯ ಬಗ್ಗೆ ಅವರಿಗೆ ಯಾರೂ ಹೇಳಿರಲಿಕ್ಕಿಲ್ಲವೇ ? ಏಕೆಂದರೆ ಈ ಯಾತ್ರೆಯ ಸಮಯದಲ್ಲಿಯೇ ಕೇರಳದಲ್ಲಿ ಈ ಕ್ರೂರ ಹತ್ಯಾಕಾಂಡಗಳು ನಡೆದಿದ್ದವು. ರಾಹುಲರಿಗೆ ಮಾತ್ರವಲ್ಲ, ಕೇರಳದ ಭಾರತೀಯ ಕಮ್ಯುನಿಸ್ಟ್ ಪಕ್ಷದ ಮುಖ್ಯಮಂತ್ರಿ ಪಿನರಾಯಿ ವಿಜಯನ್, ಅವರ ಪಕ್ಷದ ಮುಖಂಡರು ಅಥವಾ ಸ್ಥಳೀಯ ಕಾರ್ಯಕರ್ತರಲ್ಲಿ ಯಾರಿಗೂ ಕೇರಳದಲ್ಲಿನ ಈ ಅಂಧಶ್ರದ್ಧೆಯ  ಮಾಹಿತಿ ಸಿಗಲೇ ಇಲ್ಲವೇ ? ಎಂಬ ಪ್ರಶ್ನೆ ಉದ್ಭವಿಸುತ್ತದೆ.

೮. ಧಾರ್ಮಿಕತೆಯ ಪ್ರಭಾವದಿಂದ ಆರೋಪಿಗಳು ಹತ್ಯೆ ಮಾಡಿದ್ದಾರೆಂದು ಮಾರ್ಕ್ಸ್‌ವಾದಿ ಭಾರತೀಯ ಕಮ್ಯುನಿಸ್ಟ್ ಪಕ್ಷದ ವಕ್ತಾರರು ಹೇಳುವುದು

ಮಾರ್ಕ್ಸ್‌ವಾದಿ ಭಾರತೀಯ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಧರ್ಮ ಮತ್ತು ಅಧರ್ಮದ ಮೇರೆಯನ್ನು ಯಾವತ್ತೋ ಮೀರಿದ್ದಾರೆ. ಕೇರಳದಲ್ಲಿ ಪ್ರತಿವರ್ಷ ರಾ.ಸ್ವ.ಸಂಘದ ಸ್ವಯಂ ಸೇವಕರ ಈ ರೀತಿಯ ಕ್ರೂರ ಹತ್ಯೆಯ ಸರಣೀ ಈಗಲೂ ನಡೆದಿದೆ. ಅದರಲ್ಲಿ ಭಾಕಪದ ಕಾರ್ಯಕರ್ತರು-ಪದಾಧಿಕಾರಿಗಳೇ ಅಪರಾಧಿಗಳಾಗಿರುವುದೂ ನಿಷ್ಪನ್ನವಾಗುತ್ತದೆ; ಆದರೆ ಅದರ ದುಃಖ ಅಥವಾ ನಾಚಿಕೆಯನ್ನು ಈ ಮಾರ್ಕ್ಸ್‌ವಾದಿ ಪಕ್ಷವು ಯಾವತ್ತೂ ವ್ಯಕ್ತಪಡಿಸಿಲ್ಲ ಮತ್ತು ಅವರ ವಂಶಜರೂ ಕೂಡ ಮೌನವನ್ನು ಧರಿಸುತ್ತಾ ಬಂದಿದ್ದಾರೆ. ಈ ಕೇರಳದಲ್ಲಿನ ವಿಕೃತ ಹತ್ಯಾಕಾಂಡದ ಬಗ್ಗೆಯೂ ಅದೇ ಆಗುತ್ತಿರುವುದು ಕಾಣಿಸುತ್ತದೆ. ವಿಕೃತ ಭಯಾನಕ ಹತ್ಯಾಕಾಂಡದ ವಿಷಯದಲ್ಲಿ ಮಾರ್ಕ್ಸ್‌ವಾದಿ ಭಾರತೀಯ ಕಮ್ಯುನಿಸ್ಟ್ ಪಕ್ಷದ ವಕ್ತಾರ ಪಿ.ಆರ್.ಪ್ರದೀಪರು ಏನು ಪ್ರತಿಕ್ರಿಯೆ ನೀಡಬೇಕು ? ಈ ವಕ್ತಾರರು ಏನು ಹೇಳುತ್ತಾರೆಂದರೆ, “ಭಗವಲ ಸಿಂಹ ಇವನು ಪಕ್ಷದ ಕಾರ್ಯಕರ್ತನಾಗಿದ್ದನು ಮತ್ತು ಅವನ ಜೊತೆಗೆ ನಾವು ಪಕ್ಷದ ಕಾರ್ಯಕ್ರಮಗಳನ್ನೂ ಮಾಡಿದ್ದೆವು; ಆದರೆ ಅವನು ಮೊದಲು ಪ್ರಗತಿಪರನಾಗಿದ್ದನು (ಧರ್ಮದ ಮೇಲೆ ವಿಶ್ವಾಸ ಇಲ್ಲದವನು) ಮತ್ತು ಎರಡನೆಯ ವಿವಾಹ ಮಾಡಿಕೊಂಡ ನಂತರ ಅವನು ಧಾರ್ಮಿಕನಾದನು. ಇದು ಅವನ ಪತ್ನಿಯ ಪ್ರಭಾವ ಇರಬಹುದು.” ಎಂದರು. ಇಂತಹವರಿಗೆ ಈಗ ಏನು ಹೇಳಬೇಕು ? ಅಂದರೆ ಪಿ.ಆರ್. ಪ್ರದೀಪ ಎಂಬ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ವಕ್ತಾರನ, ಅಂದರೆ ಪರ್ಯಾಯದಿಂದ ಆ ಪಕ್ಷದ ಹೇಳಿಕೆ ಏನಿದೆ ಎಂದರೆ, ಭಗವಲ ಸಿಂಹನು ರೋಸಲೀನ ಮತ್ತು ಪದ್ಮಾ ಇವರನ್ನು ಕ್ರೂರ ಯಾತನೆ ನೀಡಿ ನರಬಲಿ ಕೊಟ್ಟನು; ಏಕೆಂದರೆ ಭಗವಲ ಸಿಂಹ ಧಾರ್ಮಿಕನಾಗಿ ಬದಲಾಗಿದ್ದನು, ಹಾಗಾದರೆ ಭಗವಲನ ಎರಡನೆಯ ಪತ್ನಿ ಲೈಲಾ ಕೂಡ ಈ ಪಕ್ಷದ ಸಕ್ರಿಯ ಕಾರ್ಯಕರ್ತಳೇ ಆಗಿದ್ದಳು. ಧಾರ್ಮಿಕ ಮತ್ತು ಅಧಾರ್ಮಿಕತೆಯ ಅರ್ಥವಾದರೂ ಈ ಪಕ್ಷದ ವಕ್ತಾರನಿಗೆ ಮತ್ತು ಆ ಪಕ್ಷಕ್ಕೆ ಗೊತ್ತಿದೆಯೇ ? ಕೇರಳದಲ್ಲಿನ ಈ ಹತ್ಯಾಕಾಂಡ, ಕೋಟಿಗಟ್ಟಲೆ ಧಾರ್ಮಿಕ ಜನರ ಶ್ರದ್ಧೆ ಮತ್ತು ಧರ್ಮಸಂವೇದನೆಗಳ ವಿಚಾರಗಳನ್ನು ಅವಮಾನಿಸುವ ವಕ್ತಾರ ಮತ್ತು ಅವನ ಪಕ್ಷವನ್ನು ನಿಷೇಧ ಮಾಡಿದಷ್ಟೂ ಕಡಿಮೆಯೆ !

೯. ಶೇ. ೧೦೦ ರಷ್ಟು ಸಾಕ್ಷರತೆ ಇರುವ ಕೇರಳದಲ್ಲಿ ಅಂಧ ಶ್ರದ್ಧೆಯ ಅಟ್ಟಹಾಸ ನೋಡಲು ಸಿಗುವುದು ದುರದೃಷ್ಟಕರ !

ಕೇರಳದಲ್ಲಿ ೨೦೧೮ ರಲ್ಲಿ ಇಂತಹ ಇನ್ನೊಂದು ಭಯಂಕರ ಪ್ರಸಂಗ ಘಟಿಸಿತ್ತು. ಕೇರಳದ ಇಡುಕ್ಕಿಯಲ್ಲಿ ಕೃಷ್ಣನ್ ಹಾಗೂ ಅವನ ಪತ್ನಿ ಸುಶೀಲಾ ಮತ್ತು ಅವರ ಇಬ್ಬರು ಮಕ್ಕಳನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಕೃಷ್ಣನ್ ಈ ಪರಿಸರದಲ್ಲಿ ಮಾಟ-ಮಂತ್ರ, ವಶೀಕರಣ ಇತ್ಯಾದಿಗಳನ್ನು ಮಾಡುವವನೆಂದು ಪ್ರಸಿದ್ಧನಾಗಿದ್ದನು. ಈ ಎಲ್ಲ ಮಾರ್ಗದಿಂದ ಅವನು ಸಾಕಷ್ಟು ಹಣವನ್ನೂ ಸಂಗ್ರಹಿಸಿದ್ದನು. ಕೃಷ್ಣನ್‌ನ ಬಳಿ ಅನಿಷ ಎಂಬ ಹೆಸರಿನ ಓರ್ವ ವ್ಯಕ್ತಿ ಕೆಲಸಕ್ಕಿದ್ದನು. ಕೃಷ್ಣನ್‌ನ ಅಂಧಶ್ರದ್ಧೆಯ ಮಾಟ-ಮಂತ್ರದಲ್ಲಿ ಏನು ಕೆಲಸವಿದ್ದರೂ ಅವನು ಮಾಡುತ್ತಿದ್ದನು. ಅನಿಷನ ಮನಸ್ಸಿನಲ್ಲಿ ಕೃಷ್ಣನ್‌ನನ್ನು ಸಾಯಿಸಿದರೆ ಅವನ ಶಕ್ತಿ ತನಗೆ ಸಿಗುವುದು ಮತ್ತು ತಾನು ಕೂಡ ಕೃಷ್ಣನ್‌ನ ಹಾಗೆ ಮಾಟ-ಮಂತ್ರದಲ್ಲಿ ಶಕ್ತಿಶಾಲಿ ಮತ್ತು ಶ್ರೀಮಂತನಾಗಬಹುದು ಎಂಬ ವಿಚಾರ ಬಂದು ಅವನು ಕೃಷ್ಣನ್‌ನನ್ನು ಹತ್ಯೆಮಾಡಿದನು. ಹತ್ಯೆ ಮಾಡುವಾಗ ನೋಡಿದರೆಂದು ಅವನು ಕೃಷ್ಣನ್‌ನ ಪತ್ನಿ, ಮಗಳು ಮತ್ತು ಬುದ್ಧಿಮಾಂದ್ಯ ಮಗನನ್ನೂ ಸಾಯಿಸಿದನು. ಏನು ಹೇಳಬೇಕು ಈ ಅಂಧಶ್ರದ್ಧೆಗೆ ? ಏನು ಹೇಳಬೇಕು ಈ ತಪ್ಪು ತಿಳುವಳಿಕೆಗೆ ? ಶೇ. ೧೦೦ ರಷ್ಟು ಸಾಕ್ಷರ ಮತ್ತು ಪ್ರಗತಿಪರರೆಂದು ಹೇಳಿಕೊಳ್ಳುವ ಕೇರಳದಲ್ಲಿ ಹೀಗೆ ನಡೆದರೆ ಏನು ಹೇಳುವುದು. ಕೇರಳದಲ್ಲಿ ಇಂತಹ ಘಟನೆಗಳು ಘಟಿಸುವುದು, ದುರದೃಷ್ಠಕರವಾಗಿದೆ.

೧೦. ಜಗತ್ತಿನಾದ್ಯಂತ ಅಂಧಶ್ರದ್ಧೆಯ ಭಯಂಕರ ವರ್ಚಸ್ಸು !

ಅಂಧಶ್ರದ್ಧೆಯು ಕೇವಲ ಕೇರಳದಲ್ಲಿಯೇ ಇದೆಯೇ ? ದೇಶದಾದ್ಯಂತ ಇಂತಹ ಮಾಟ-ಮಂತ್ರ, ವಶೀಕರಣ ಮುಂತಾದವುಗಳಿಂದ ವರ್ಷದಲ್ಲಿ ಸುಮಾರು ನೂರರಷ್ಟು ಜನರು ಸಾಯುತ್ತಾರೆ. ಜಗತ್ತಿನಾದ್ಯಂತ ಅಂಧಶ್ರದ್ಧೆಯ ವರ್ಚಸ್ಸು ಭಯಂಕರ ಬಹಳವಿದೆ. ಈ ಹಿಂದೆ ಒಂದು ವಾರ್ತೆಯನ್ನು ಓದಿದ್ದೆ, ಅದರಲ್ಲಿ ಕೆಥೋಲಿಕ್ ಜನರ ಬೇಡಿಕೆಗನುಸಾರ ವ್ಹಾಟಿಕನ್ ಚರ್ಚ್‌ವು ಒಂದು ಪಠ್ಯಕ್ರಮವನ್ನು ಆರಂಭಿಸಿತ್ತು. ೫೦ ದೇಶಗಳಲ್ಲಿನ ೨೫೦ ಪಾದ್ರಿಗಳು ೨೪ ಸಾವಿರ ರೂಪಾಯಿಗಳ ಶುಲ್ಕವನ್ನು ತುಂಬಿಸಿ ಮಾಟ-ಮಂತ್ರ, ವಶೀಕರಣ ಇತ್ಯಾದಿಗಳನ್ನು ಕಲಿಯಲು ರೋಮ್‌ಗೆ ಹೋಗಿದ್ದರು. ಈ ಪಠ್ಯಕ್ರಮದ ಹೆಸರು ‘ಎಂಟಾಯಿಟಲ್ಡ್ ಎಕ್ಸಾರ್ಸಿಜಮ್ ಎಂಡ್ ದ ಪ್ರೇಯರ್ ಆಫ್ ಲಿಬರೇಶನ್’ ಎಂದಾಗಿತ್ತು. ಈ ಕೋರ್ಸ್ ೨೦೦೫ ರಲ್ಲಿ ಆರಂಭವಾಯಿತು. ಈ ಪಠ್ಯಕ್ರಮದಲ್ಲಿ ಮಾಟ-ಮಂತ್ರ, ವಶೀಕರಣ ಇತ್ಯಾದಿ ಧಾರ್ಮಿಕ, ಮನೋವೈಜ್ಞಾನಿಕ ಮತ್ತು ಮಾನವ ಶಾಸ್ತ್ರೀಯ ಆಯಾಮವನ್ನು ಕಲಿಸಲಾಗುತ್ತದೆ. ಸತ್ಯ ಸುಳ್ಳು ಏನೆಂದು ದೇವರೆ ಬಲ್ಲ ! ಇದೇ ಮಾಟ-ಮಂತ್ರ, ವಶೀಕರಣದ ಇತ್ಯಾದಿಗಳ ವಿಷಯದಲ್ಲಿ ಸಂಯುಕ್ತ ರಾಷ್ಟ್ರ ಒಂದು ಹೇಳಿಕೆಯನ್ನು ನೀಡಿತ್ತು. ಸಂಯುಕ್ತ ರಾಷ್ಟ್ರವು, ‘ನೈಜೇರಿಯಾದಲ್ಲಿನ ಬಡ ಮಹಿಳೆಯರನ್ನು ದೇಹಮಾರಾಟಕ್ಕಾಗಿ (ವೇಶ್ಯಾವ್ಯವಸಾಯಕ್ಕಾಗಿ) ಪಾಶ್ಚಾತ್ಯ ದೇಶಗಳಿಗೆ ಒಯ್ಯಲಾಗುತ್ತದೆ. ಈ ಮಹಿಳೆಯರು ಸ್ವೇಚ್ಛೆಯಿಂದ ದೇಹಮಾರಾಟವನ್ನು ಮಾಡಬೇಕೆಂದು ಅವರ ಮೇಲೆ ಮಾಟ-ಮಂತ್ರ ಮಾಡಲಾಗಿದೆ ಎಂದು ಸುಮ್ಮನೆ ಹೇಳಲಾಗುತ್ತದೆ.’ ಇನ್ನೊಂದು ಕಡೆ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್‌ಖಾನ್ ಇವರ ಮೂರನೆ ಪತ್ನಿ ಬುಶರಾ ಬೀಬಿ ಮತ್ತು ಅವಳು ಸಾಕಿದ ಜಿನ್‌ನಿಂದ ಇಮ್ರಾನ್‌ಗೆ ನಿರಂತರ ಯಶಸ್ಸು ಸಿಗುತ್ತಿತ್ತು, ಎಂಬುದನ್ನು ಪಾಕಿಸ್ತಾನದ ಬಹಳಷ್ಟು ಜನರು ಆಣೆಮಾಡಿ ಹೇಳುತ್ತಾರೆ.’

– ಯೋಗಿತಾ ಸಾಳವೀ (ಕೃಪೆ : ದೈನಿಕ ‘ಮುಂಬಯಿ ತರುಣ ಭಾರತ’, ೧೫.೧೦.೨೦೨೨)