ಕೇರಳದಲ್ಲಿ ಮುಸಲ್ಮಾನರ ಉರುಸ್ ನಲ್ಲಿ ಹಮಾಸ ನಾಯಕನ ಫಲಕ !

(ಉರುಸ್ ಎಂದರೆ ಕೆಲವು ಮುಸಲ್ಮಾನ ಧರ್ಮ ಗುರುಗಳ ಪುಣ್ಯತಿಥಿಯ ಪ್ರಯುಕ್ತ ಆಯೋಜಿಸಿರುವ ಉತ್ಸವ)

ಪಲಕ್ಕಡ್ (ಕೇರಳ) – ಇಲ್ಲಿ ಫೆಬ್ರುವರಿ ೧೬ ರಂದು ಮುಸಲ್ಮಾನ ಧರ್ಮಗುರು ತ್ರಿಥಲ ಇವರ ಗೋರಿಯ ಹತ್ತಿರ ಉರುಸ್ ಆಯೋಜನೆ ಮಾಡಲಾಗಿತ್ತು. ಅದರಲ್ಲಿ ಸಾವಿರಾರು ಜನರು ಸಹಭಾಗಿದ್ದರು. ಅದರ ನಂತರ ಆನೆಯ ಮೇಲೆ ಕುಳಿತಿರುವ ಮುಸಲ್ಮಾನರು ಹಮಾಸ್‌ನ ಹತನಾಗಿರುವ ಮುಖ್ಯನಾಯಕ ಇಸ್ಮಾಯಿಲ್ ಹನಿಯಾ, ಯಾಹ್ಯಾ ಸಿನವಾರ ಮತ್ತು ಹಿಜಬುಲ್ಲಾದ್ ಮುಖ್ಯಸ್ಥ ಹಸನ ನಸರಲ್ಲಾಹ್ ಇವರ ಛಾಯಾಚಿತ್ರಗಳ ಇರುವ ಫಲಕಗಳು ಕೈಯಲ್ಲಿ ಹಿಡಿದಿದ್ದರು. ಈ ಘಟನೆಯ ಸಮಯದಲ್ಲಿ ಕೇರಳ ಸರಕಾರದ ಓರ್ವ ಸಚಿವ ಹಾಗೂ ಕಾಂಗ್ರೆಸ್ಸಿನ ಓರ್ವ ಮಾಜಿ ಶಾಸಕ ಉಪಸ್ಥಿತರಿದ್ದರು. ಈ ಘಟನೆಯ ವಿಡಿಯೋ ಪ್ರಸಾರವಾದ ನಂತರ ಭಾಜಪದಿಂದ ವಾಗ್ದಾಳಿ ನಡೆದಿದೆ. ಪೊಲೀಸರ ಹೇಳಿಕೆಯ ಪ್ರಕಾರ ಇಲ್ಲಿಯವರೆಗೆ ಯಾವುದೇ ದೂರು ಬರದೇ ಇರುವುದರಿಂದ ದೂರು ದಾಖಲಿಸಲಾಗಿಲ್ಲ. (ಪೊಲೀಸರು ತಾವಾಗಿ ದೂರು ದಾಖಲಿಸಿ ಕ್ರಮ ಕೈಗೊಳ್ಳುವ ಅಧಿಕಾರ ಇರುವಾಗ ಅದನ್ನು ಉಪಯೋಗಿಸಿ ಏಕೆ ಕ್ರಮ ಕೈಗೊಳ್ಳಲಿಲ್ಲ ? – ಸಂಪಾದಕರು)

ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಸರಕಾರದ ಬೆಂಬಲದಿಂದ ಮತಕ್ಕಾಗಿ ಈ ರೀತಿಯ ಘಟನೆ ಘಟಿಸುತ್ತವೆ ! – ಭಾಜಪದಿಂದ ಟೀಕೆ

ಭಾಜಪದ ಪ್ರದೇಶಾಧ್ಯಕ್ಷ ಕೆ. ಸುರೇಂದ್ರನ್ ಇವರು, ಪ್ರಸ್ತುತ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಸರಕಾರದ ಬೆಂಬಲದಿಂದ ಈ ಉಪಕ್ರಮಗಳು ಮತಪೆಟ್ಟಿಗೆಯ ರಾಜಕಾರಣಕ್ಕಾಗಿ ನಡೆಯುತ್ತಿವೆ. ದೇಶ ವಿರೋಧಿ ಸಂಘಟನೆ ಮತ್ತು ಕಟ್ಟರವಾದಿ ಸಂಸ್ಥೆಗಳು ಇಲ್ಲಿ ಕೆಲಸ ಮಾಡುತ್ತಿವೆ. ಕೇರಳದಲ್ಲಿ ಕೇವಲ ಭಾಜಪ ದೇಶವಿರೋಧಿ ಮತ್ತು ಭಯೋತ್ಪಾದಕ ಚಟುವಟಿಕೆಯ ವಿರುದ್ಧವಾಗಿದೆ. ಒಂದು ವರ್ಷದ ಹಿಂದೆ ಕೇರಳದಲ್ಲಿ ನಡೆದಿರುವ ಒಂದು ಸಭೆಯಲ್ಲಿ ಹಮಾಸ್ ನ ನಾಯಕ ಆನ್ಲೈನ್ ನಲ್ಲಿ ಉಪಸ್ಥಿತನಾಗಿ ಭಾಜಪವನ್ನು ಟೀಕಿಸಿದ್ದನು. ಆಗ ಕೇರಳ ಸರಕಾರದಿಂದ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. (ಇದರಿಂದ ಕೇರಳ ಸರಕಾರದ ಮನಸ್ಥಿತಿ ತಿಳಿಯುತ್ತದೆ ! – ಸಂಪಾದಕರು)

ದೇಶದಲ್ಲಿ ಅನೇಕ ಜನರು ಪ್ಯಾಲೆಸ್ಟೈನ ಗೆ ಬೆಂಬಲ ನೀಡುತ್ತಾರೆ ! – ‘ಕಾಂಗ್ರೆಸ್ಸಿನ ಮಾಜಿ ಶಾಸಕ ವಿ.ಟಿ. ಬಲರಾಮ್

ಉರುಸ್ ಸಮಯದಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ಸಿನ ಮಾಜಿ ಶಾಸಕ ವಿ.ಟಿ. ಬಲರಾಮ ಇವರು ಫೇಸ್ಬುಕ್ ನಲ್ಲಿ ಒಂದು ಪೋಸ್ಟ್ ಮಾಡುತ್ತಾ, ಎಲ್ಲಾ ಭಾರತೀಯ, ಸಂಘ ಪರಿವಾರಕ್ಕೆ ಸಂಬಂಧಿಸಿದೆ ಇರುವ ಜನರು ಕೂಡ ಪ್ಯಾಲೆಸ್ತೀನಿ ಜನರಿಗೆ ಮತ್ತು ಅವರ ಸ್ವಾತಂತ್ರ್ಯದ ಆಕಾಂಕ್ಷೆಯ ಬೆಂಬಲ ನೀಡುತ್ತಾರೆ. (ಪ್ಯಾಲೆಸ್ತೀನ ಅನ್ನು ಭಾರತ ಸರಕಾರ ಕೂಡ ಬೆಂಬಲ ನಿಡಿದೆ; ಆದರೆ ಹಮಾಸ್ ದ ಭಯೋತ್ಪಾದಕರ ಬೆಂಬಲಿಸುತ್ತಿರುವಾಗ ಕಾಂಗ್ರೆಸ್ಸಿನ ಮೂಕ ಬೆಂಬಲ ಏಕೆ ? – ಸಂಪಾದಕರು) ಹಮಾಸ್ ನಾಯಕರನ್ನು ಗೌರವಿಸಬೇಕೇ ಅಥವಾ ಬೇಡ, ಇದು ಬೇರೆ ಅಂಶವಾಗಿದೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

ಕೇರಳದಲ್ಲಿನ ಮುಸಲ್ಮಾನರಿಗು ಜಿಹಾದಿ ಭಯೋತ್ಪಾದಕ ಸಂಘಟನೆಯ ನಾಯಕರಿಗು ಏನು ಸಂಬಂಧ ? ಇಂತಹ ಮುಸಲ್ಮಾನರನ್ನು ಬಂಧಿಸಿ ಅವರನ್ನು ಜೈಲಿಗಟ್ಟಿ ಕಠಿಣ ಶಿಕ್ಷೆ ವಿಧಿಸಬೇಕು; ಆದರೆ ಕೇರಳದಲ್ಲಿ ಜಿಹಾದಿಗಳ ಬೆಂಬಲ ಇರುವ ಕಮ್ಯುನಿಸ್ಟ್ ಸರಕಾರ ಇರುವುದರಿಂದ ಹೇಗೆ ನಡೆಯಲು ಸಾಧ್ಯ ಇಲ್ಲದಿರುವುದರಿಂದ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುವುದು ಆವಶ್ಯಕವಿದೆ !