೧. ಸಾಧಕರಿಗೆ ರಾಷ್ಟ್ರ ಮತ್ತು ಧರ್ಮದ ಕುರಿತು ಮಾರ್ಗದರ್ಶನವನ್ನು ಮಾಡುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
‘೯.೧೧.೨೦೧೯ ರ ಶುಭದಿನದಂದು ಭಗವಾನ ಶ್ರೀರಾಮನ ಕೃಪೆಯಿಂದಲೇ ಶ್ರೀರಾಮಜನ್ಮಭೂಮಿಯ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ‘ಅಯೋಧ್ಯೆಯಲ್ಲಿನ ವಾದಗ್ರಸ್ತ ರಾಮಜನ್ಮಭೂಮಿಯು ಭಗವಾನ ಶ್ರೀರಾಮನದ್ದೇ ಆಗಿದೆ’, ಎಂಬ ತೀರ್ಪು ನೀಡಿತು ಮತ್ತು ರಾಮಮಂದಿರವನ್ನು ಕಟ್ಟುವ ಸಮಸ್ತ ಹಿಂದೂಗಳ ಕನಸು ನನಸಾಯಿತು. ಆ ಸಮಯದಲ್ಲಿ ತುಂಬಾ ಆನಂದವಾಯಿತು ಮತ್ತು ಪ್ರಭು ಶ್ರೀರಾಮನ ಚರಣಗಳಲ್ಲಿ ನನ್ನಿಂದ ಕೃತಜ್ಞತೆ ವ್ಯಕ್ತವಾಯಿತು. ಆಗ ಕಳೆದ ೩೦ ವರ್ಷಗಳವರೆಗೆ ಅಧ್ಯಾತ್ಮಪ್ರಸಾರವನ್ನು ಮಾಡಲು ಮತ್ತು ರಾಮರಾಜ್ಯ ಬರಲು ಪ್ರಯತ್ನಿಸುತ್ತಿರುವ ಪರಾತ್ಪರ ಗುರು ಡಾ. ಆಠವಲೆಯವರ ನೆನಪಾಗಿ ನನಗೆ ಅವರಿಂದ ಕಲಿಯಲು ಸಿಕ್ಕಿದ ಮುಂದಿನ ಅಂಶಗಳು ನೆನಪಾದವು.
೨. ಪರಾತ್ಪರ ಗುರು ಡಾ. ಆಠವಲೆಯವರು ‘ಭಕ್ತರು ದೇವಸ್ಥಾನದ ರಕ್ಷಣೆಯನ್ನು ಮಾಡುವುದು ಮತ್ತು ವ್ಯವಸ್ಥಾಪನೆಯನ್ನು ನೋಡುವುದು ಅಗತ್ಯವಾಗಿದೆ ಮತ್ತು ಇಂತಹ ಭಕ್ತರು ಸಿದ್ಧರಾಗಲು ಹಿಂದೂಗಳು ಸಾಧನೆ ಮಾಡುವುದು ಅನಿವಾರ್ಯವಾಗಿದೆ’, ಎಂದು ಹೇಳುವುದು
ನಾನು ಪರಾತ್ಪರ ಗುರು ಡಾಕ್ಟರರ ಬಳಿ ‘ತಾವು ದೇವಸ್ಥಾನವನ್ನು ಕಟ್ಟಲು ಏಕೆ ಪ್ರಾಧಾನ್ಯವನ್ನು ನೀಡುವುದಿಲ್ಲ ?’, ಎಂದು ಕೇಳಿದೆನು. ಆಗ ಅವರು, “ಸದ್ಯ ದೇಶದಲ್ಲಿ ಅನೇಕ ದೇವಸ್ಥಾನಗಳಿವೆ. ದೇವಸ್ಥಾನಗಳನ್ನು ಕಟ್ಟುವ ಮೊದಲು ‘ದೇವಸ್ಥಾನಗಳ ರಕ್ಷಣೆ, ವ್ಯವಸ್ಥಾಪನೆ ಮತ್ತು ದೇವಸ್ಥಾನವನ್ನು ಕಟ್ಟುವ ಉದ್ದೇಶವನ್ನು ಹೇಗೆ ಸಾರ್ಥಕಗೊಳಿಸಬಹುದು ?’, ಎಂಬುದನ್ನು ನೋಡಬೇಕು. ಭಕ್ತರು ದೇವಸ್ಥಾನದಲ್ಲಿನ ದೇವರ ಪೂಜೆ ಮತ್ತು ವ್ಯವಸ್ಥಾಪನೆಯನ್ನು ನೋಡಿಕೊಳ್ಳಬೇಕು. ದೇವಸ್ಥಾನದಿಂದ ಜನರಿಗೆ ಧರ್ಮಶಿಕ್ಷಣವನ್ನು ನೀಡಿ ಅವರಿಗೆ ಧರ್ಮಾಚರಣೆ ಮತ್ತು ಸಾಧನಾಮಾರ್ಗದತ್ತ ಹೊರಳಿಸಬೇಕು; ಆದರೆ ಈಗ ಈ ರೀತಿ ಆಗುತ್ತಿರುವುದು ಕಂಡುಬರುವುದಿಲ್ಲ. ಮುಂದೆ ಆಪತ್ಕಾಲದಲ್ಲಿ ದೇವಸ್ಥಾನದ ವ್ಯವಸ್ಥಾಪನೆ ಮತ್ತು ಅದರ ರಕ್ಷಣೆಯನ್ನು ಮಾಡುವವರೂ ಕಾಣಿಸುವುದಿಲ್ಲ. ಆಗ ಎಲ್ಲವನ್ನು ನಾವೇ ನೋಡಿಕೊಳ್ಳಬೇಕಾಗಲಿದೆ. ಅದನ್ನು ಮಾಡಲು, ಅಂದರೇ ಭಕ್ತರಾಗಲು ಸಾಧನೆಯನ್ನು ಮಾಡಬೇಕಾಗಿದೆ” ಎಂದು ಹೇಳಿದರು.
– (ಪೂ.) ಶಿವಾಜಿ ವಟಕರ, ಸನಾತನ ಆಶ್ರಮ, ದೇವದ, ಪನವೇಲ. (೧೩.೧೧.೨೦೧೯)
ಪ್ರೀತಿಯ ಸ್ಪಂದನಗಳ ಪರಿಣಾಮವಾಗುತ್ತಿದೆ, ಎಂಬುದನ್ನು ತೋರಿಸುವ ಉದಾಹರಣೆ !‘ಅಮೇರಿಕದಲ್ಲಿ ಓರ್ವ ಖ್ಯಾತ ಡಾಕ್ಟರರಿದ್ದರು. ಅವರು ತಂದೆ-ತಾಯಿಯವರ ಏಕೈಕ ಸಂತಾನರಾಗಿದ್ದರು. ಅಲ್ಲಿ ಅವರು ಖ್ಯಾತಿ, ಹಣ ಮತ್ತು ಪ್ರಸಿದ್ಧಿಗಳನ್ನು ಪಡೆದಿದ್ದರು; ಆದರೆ ದುರ್ದೈವದಿಂದ ಅವರ ಪತ್ನಿಯೊಂದಿಗೆ ಭಿನ್ನಾಭಿಪ್ರಾಯವಾಯಿತು. ಜೀವನದಲ್ಲಿ ಬೇಸರಗೊಂಡು ಅವರು ತಮಗೇ ಗುಂಡುಹಾರಿಸಿಕೊಂಡು ಮೃತಪಟ್ಟರು. ಅದೇ ದಿನ ಭಾರತದಲ್ಲಿರುವ ಅವರ ತಾಯಿಗೆ ಕನಸು ಬಿದ್ದಿತು. ಆ ಕನಸಿನಲ್ಲಿ ಅವರಿಗೆ ಅವರ ಡಾಕ್ಟರನಾಗಿರುವ ಮಗನು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಾಣಿಸಿತು. ಎಚ್ಚರವಾದಾಗ ತುಂಬಾ ಚಿಂತಾಕ್ರಾಂತರಾಗಿದ್ದರು. ಮರುದಿನ ಅವರಿಗೆ ಅವರ ಮಗನ ಮೃತ್ಯುವಿನ ದುರ್ದೈವಿ ಘಟನೆಯು ದೂರವಾಣಿಯಿಂದ ತಿಳಿಯಿತು. ಮಾತೃಹೃದಯವು ಶೋಕದಿಂದ ಕಳವಳಗೊಂಡಿತು. ದೂರದಲ್ಲಿರುವ ತಾಯಿಗೆ ಮಗನ ದುರ್ದೈವದ ನೋವು ತಲುಪುತ್ತಿರುತ್ತವೆ. ಇದೊಂದೇ ಉದಾಹರಣೆಯಾಗಿರದೇ ಇಂತಹ ಅನೇಕ ಉದಾಹರಣೆಗಳಿವೆ. ಈ ಕುರಿತು ರಶಿಯಾದಲ್ಲಿ ಅನೇಕ ಪ್ರಯೋಗಗಳಾಗಿವೆ. ತನ್ನ ಪ್ರೀತಿಯ ವ್ಯಕ್ತಿಗೆ ನಮ್ಮ ಹೃದಯದ ಸ್ಪಂದನಗಳು ಪ್ರಾಪ್ತವಾಗುತ್ತಿರುತ್ತವೆ ಮತ್ತು ಆ ಪ್ರೀತಿಯ ಸ್ಪಂದನಗಳ ಪರಿಣಾಮವು ಆತ್ಮೀಯರ ಮೇಲಾಗುತ್ತಿರುತ್ತದೆ. – ಸ್ವಾಮಿ ಜಗದಾತ್ಮಾನಂದ |