ಬಾಂಗ್ಲಾದೇಶದಲ್ಲಿ ಭಯೋತ್ಪಾದಕರಿಂದ ಶಿವಲಿಂಗ ಧ್ವಂಸ

ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳು ಅಸುರಕ್ಷಿತ !

ಲಾಲಮೊನಿರಹಾಟ – ಇಲ್ಲಿನ ಲಾಲಮೊನಿರಹಾಟ ಸದರ ಉಪಜಿಲ್ಲೆಯಲ್ಲಿನ ತಿಸ್ತಾ ಬಜಾರ್ ಪ್ರದೇಶದಲ್ಲಿನ ಶಿವ ದೇವಾಲಯದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಈ ವೇಳೆ ಭಯೋತ್ಪಾದಕರು ಶಿವಲಿಂಗವನ್ನು ಧ್ವಂಸಗೊಳಿಸಿದ್ದು, ಕಾಣಿಕೆ ಪೆಟ್ಟಿಗೆಯಲ್ಲಿದ್ದ ಹಣವನ್ನು ದೋಚಿದ್ದಾರೆ. ಈ ಮಾಹಿತಿಯನ್ನು ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಜ್’ ಎಂಬ ಟ್ವಿಟರ್ ಖಾತೆಯಿಂದ ನೀಡಲಾಗಿದೆ.