ಅವಳು ಪ್ರೀತಿಸಿದಳು, ಇವನು ಕತ್ತು ಕೊಯ್ದನು !

ಶ್ರದ್ಧಾ ವಾಲಕರ್ ಹತ್ಯೆಯ ಪ್ರಕರಣದಿಂದ ದೇಶದ ವಾತಾವರಣ ಕಾವೇರಿದೆ. ನಿರ್ಭಯಾ ದೌರ್ಜನ್ಯದ ನಂತರ ಮಾಧ್ಯಮಗಳು ಮತ್ತು ಪ್ರಗತಿಪರರು, ಸ್ತ್ರೀ-ಸ್ವಾತಂತ್ರ್ಯವಾದಿಗಳು ಎಷ್ಟು ಮುಕ್ತವಾಗಿ ಪ್ರಸಾರ ಮಾಡಿದರೋ, ಅವರು ಈಗ ಅಷ್ಟೇ ಅತ್ಯಂತ ಎಚ್ಚರಿಕೆಯಿಂದ ಮಾತನಾಡುತ್ತಿದ್ದಾರೆ. ವಾಸ್ತವದಲ್ಲಿ ಶ್ರದ್ಧಾ ವಾಲಕರ್ ಇವಳ ಹತ್ಯೆಯ ಭೀಕರತೆ ನಿರ್ಭಯಾಳ ತುಲನೆಯಲ್ಲಿ ಜಾಸ್ತಿಯಿದೆ. ಪ್ರಗತಿಪರರ ಹೇಳಿಕೆಗನುಸಾರ ‘ಪ್ರೇಮಕ್ಕೆ ಧರ್ಮವಿರುವುದಿಲ್ಲ’ ಎಂಬ ವಾಕ್ಯಕ್ಕನುಸಾರ ಅವಳು ಅಕ್ಷರಶಃ ಬದುಕಿದಳು. ಆಫ್ತಾಬ್‌ನೊಂದಿಗಿನ ಪ್ರೇಮ ಪ್ರಕರಣಕ್ಕೆ ಕುಟುಂಬದವರ ವಿರೋಧವಿದ್ದುದರಿಂದ ಅವಳು ಕುಟುಂಬದವರೊಂದಿಗೆ ಸಂಬಂಧವನ್ನು ಕಡಿದುಕೊಂಡಿದ್ದಳು. ಮದುವೆಯ ಮುಂಚೆಯೇ ಅವಳು ಅವನೊಂದಿಗೆ ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿದ್ದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದಳು. ಹೀಗಿದ್ದರೂ ಪ್ರಿಯಕರನಾಗಿರುವ ಆಫ್ತಾಬ್‌ನಿಗೆ ‘ಮದುವೆ ಮಾಡಿ ಕೋ ಎಂದು ದುಂಬಾಲು ಬಿದ್ದುದರಿಂದ ಶ್ರದ್ಧಾಳು ಜೀವವನ್ನು ಕಳೆದುಕೊಳ್ಳಬೇಕಾಯಿತು. ಅವಳ ಮೃತದೇಹದ ವಿಲೇವಾರಿ ಮಾಡಲು ಆಫ್ತಾಬ್‌ನು ಮೃತದೇಹವನ್ನು ೩೫ ತುಂಡುಗಳಾಗಿ ಕತ್ತರಿಸಿ ಶೀತಕಪಾಟಿನಲ್ಲಿ (ಫ್ರಿಜ್‌ನಲ್ಲಿ) ತುಂಬಿಡುವುದು, ಇದು ಕ್ರೂರತನದ ಪರಮಾವಧಿಯೇ ಆಗಿದೆ. ಸಾಮಾನ್ಯ ಪಾಪಭೀರು ಮನುಷ್ಯನು ಇತರರಿಗೆ ಸಾಮಾನ್ಯ ಕಾಲು ತಗಲಿದರೂ ಆತ ಕ್ಷಮೆ ಕೇಳುತ್ತಾನೆ. ತನ್ನ ಪ್ರೇಯಸಿಯ ಕತ್ತನ್ನು ಹಿಸುಕಿ ಅವಳನ್ನು ಕೊಲ್ಲುವ, ಅವಳ ಮೃತದೇಹವನ್ನು ಪ್ರಾಣಿಗಳಂತೆ ತುಂಡು ಮಾಡುವ ಮತ್ತು ಅದಕ್ಕೂ ಮುಂದೆ ಹೋಗಿ ಆ ತುಂಡುಗಳನ್ನು ಮನೆಯಲ್ಲಿ ಫ್ರಿಜ್‌ನಲ್ಲಿ ತುಂಬಿಡುವಷ್ಟು ಹುಂಬತನವನ್ನು ಅವನು ತೋರಿಸಿದ್ದಾನೆ. ರಾತ್ರಿ ಮೃತದೇಹದ ೧-೧ ತುಂಡನ್ನು ಕೊಂಡೊಯ್ದು ಕಾಡಿನಲ್ಲಿ ಎಸೆದು ಬರುವಾಗ ಆಫ್ತಾಬ್‌ನಿಗೆ ಏನೂ ಅನಿಸಲಿಲ್ಲವೇ ? ಇತ್ತೀಚೆಗೆ ಮಹಿಳಾ ಪತ್ರಕರ್ತೆಗೆ ಹಣೆಯಲ್ಲಿ ಕುಂಕುಮವನ್ನಿಟ್ಟುಕೊಳ್ಳಲು ಸಲಹೆ ನೀಡಿದರೆಂದು ಪೂ. ಭಿಡೇಗುರುಜಿಯವರಂತಹ ರಾಷ್ಟ್ರಭಕ್ತ ಮಹಾಪುರುಷರನ್ನು ಟೀಕೆಗೆ ಗುರಿಮಾಡುವವರು ‘ಆಫ್ತಾಬ್‌ನಿಗೆ ಹಿಂದೂ ಹುಡುಗಿಯ ದೇಹವನ್ನು ೩೫ ತುಂಡುಗಳನ್ನಾಗಿ ಮಾಡಿ ಕಾಡಿನ ಪ್ರಾಣಿಗಳಿಗೆ ತಿನ್ನಲು ಹಾಕುವ ಅಧಿಕಾರವಿದೆ’ ಎಂದು ತಿಳಿದಿದ್ದಾರೆಯೇ ? ಲವ್ ಜಿಹಾದ್‌ನಲ್ಲಿ ಸಿಲುಕಿರುವ ಹುಡುಗಿಯರ ಕರಾಳ ಭವಿಷ್ಯದ ಬಗ್ಗೆ ಧಾರ್ಮಿಕ ಸಂಸ್ಥೆಗಳು ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿರುವಾಗ ಅವರನ್ನು ಅಪಹಾಸ್ಯ ಮಾಡಿ ‘ಮೂಲಭೂತವಾದಿ’ ಎಂದು ಹೀಯಾಳಿಸುವವರಿಗೆ ಶ್ರದ್ಧಾಳಿಗೆ ಅವಳ ಮುಸ್ಲಿಂ ಪ್ರಿಯಕರನು ಮಾಡಿದ್ದು ಪ್ರಗತಿಪರ ವಿಚಾರದ ಲಕ್ಷಣವಾಗಿದೆ ಎಂದು ಅನಿಸು ತ್ತದೆಯೇ ? ಲೀವ್ ಇನ್ ರಿಲೇಶನ್‌ಶಿಪ್ ಇದು ಅನೈತಿಕವಾಗಿದೆಯೆಂದು ಇತರರನ್ನು ಜಾಗೃತ ಮಾಡುವವರನ್ನು ಹಿಂದುಳಿದವರು ಎಂದು ಕರೆಯುವವರಿಗೆ ಅದರಲ್ಲಿನ ಅಪಾಯ ಇನ್ನಷ್ಟು ಯುವತಿಯರು ಬಲಿಯಾದಾಗ ಗಮನಕ್ಕೆ ಬರಲಿದೆಯೇ ?

ಆಫ್ತಾಬ್‌ನಿಗೆ ವಿರೋಧವಿಲ್ಲ ಏಕೆ ?

ಭಿನ್ನಾಭಿಪ್ರಾಯಗಳಿರಬಹುದು. ಮೊದಲು ಪ್ರೀತಿಸಿ ನಂತರ ಮುಂದುವರಿಯಲು ಬೇಡವಾಗಿದ್ದರೆ ಬೇರ್ಪಡಲೂ ಬರುತ್ತದೆ. ಮದುವೆಗಾಗಿ ದುಂಬಾಲು ಬೀಳುತ್ತಾಳೆ ಎಂದು ಶಾಂತ ಬುದ್ಧಿ ಯಿಂದ ನಿಯೋಜನಾಪೂರ್ವಕ ಕತ್ತನ್ನು ಹಿಸುಕಿ ಮೃತದೇಹದ ೩೫ ತುಂಡುಗಳನ್ನು ಮಾಡುವುದಕ್ಕೆ ಜಿಹಾದ್ ಎಂದು ಏಕೆ ಹೇಳಬಾರದು ? ಕುಂಕುಮವನ್ನು ಇಟ್ಟುಕೊಳ್ಳುವ ಹೇಳಿಕೆಗಾಗಿ ಪೂ. ಭಿಡೇಗುರುಜಿ ಇವರಿಗೆ ನೋಟಿಸ್ ಕಳುಹಿಸುವ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಣಕರ ಇವರು ಈಗ ವಸಯಿಯ ಹುಡುಗಿಯ ದೇಹದ ವಿಡಂಬನೆಯ ಪ್ರಕರಣದಲ್ಲಿ ಏಕೆ ಬಾಯಿ ಮುಚ್ಚಿಕೊಂಡಿದ್ದಾರೆ ? ದೇಶದಲ್ಲಿ ಲವ್ ಜಿಹಾದ್‌ನ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಅದರಲ್ಲಿ ಸಿಲುಕಿರುವ ಮಹಿಳೆಯರ ರಕ್ಷಣೆ ಎಷ್ಟು ಅಪಾಯಕಾರಿ ಹಂತದಲ್ಲಿದೆ ಎಂಬುದು ಇದರಿಂದ ಕಂಡು ಬರುತ್ತದೆ. ಮಧ್ಯಪ್ರದೇಶ, ಉತ್ತರಪ್ರದೇಶ ರಾಜ್ಯಗಳಲ್ಲಿ ‘ಲವ್ ಜಿಹಾದ್’ವಿರೋಧಿ ಕಾನೂನನ್ನು ಜಾರಿಗೆ ತರಲಾಗಿದೆ. ಅದೇ ಮಾದರಿಯಲ್ಲಿ ಮಹಾರಾಷ್ಟ್ರದಲ್ಲಿಯೂ ಕಾನೂನನ್ನು ಜಾರಿಗೆ ತಂದಿದ್ದರೆ ಬಹುಶಃ ಶ್ರದ್ಧಾ ವಾಲಕರಳ ಜೀವವು ಉಳಿಯಬಹುದಿತ್ತು; ಆದರೆ ಈ ಬಗ್ಗೆ ಯಾರೂ ಬಹಿರಂಗವಾಗಿ ಚರ್ಚಿಸುವುದಿಲ್ಲ; ಏಕೆಂದರೆ ಅವನು ಆಫ್ತಾಬ್‌ನಿದ್ದಾನೆ ಮತ್ತು ಸತ್ತವಳು ಶ್ರದ್ಧಾ ಆಗಿದ್ದಾಳೆ. ಸಾಮಾನ್ಯ ಹಿಂದೂ ಹುಡುಗಿಯ ಜೀವದ ಬೆಲೆ ಪತ್ರಕರ್ತೆ ಮಹಿಳೆಯ ಹಣೆಯ ಕುಂಕುಮಕ್ಕಿಂತ ಕಡಿಮೆ ಮೌಲ್ಯದ್ದಾಗಿದೆ. ವಾಸ್ತವದಲ್ಲಿ ಮಹಿಳೆಯರ ರಕ್ಷಣೆಗಾಗಿ ನಮ್ಮ ದೇಶದಲ್ಲಿ ಒಂದಕ್ಕಿಂತ ಒಂದು ಸಮರ್ಥ ಕಾನೂನುಗಳಿವೆ. ಸಾಮಾಜಿಕ ಸ್ತರದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಜಾಗೃತಿಯಾಗಿದೆ. ಇಲ್ಲಿಯ ವರೆಗೆ ಸಾವಿರಾರು ಮುಸಲ್ಮಾನರು ಸಾವಿರಾರು ಯುವತಿ ಯರನ್ನು ಅನುಭವಿಸಿ ನಂತರ ಗಾಳಿಗೆ ತೂರಿರುವ ಅನೇಕ ಘಟನೆಗಳು ಅಕ್ಕಪಕ್ಕದಲ್ಲಿ ಸಂಭವಿಸುತ್ತಿರುವಾಗ ಮನೆಯವರಿಗೆ, ನಿಮ್ಮ ಮಗಳು ಸತ್ತಿದ್ದಾಳೆಂದು ತಿಳಿಯಿರಿ ಎಂದು ಹೇಳುವ ಶ್ರದ್ಧಾ ವಾಲಕರ್ ಓರ್ವ ಮತಾಂಧ ವ್ಯಕ್ತಿಯ ಮೇಲೆ ಅತಿ ವಿಶ್ವಾಸವನ್ನಿಟ್ಟಳು. ಅವನೊಂದಿಗೆ ‘ಲಿವ್ ಇನ್ ರಿಲೇಶನ್ ಶಿಪ್’ನಲ್ಲಿರುವ ಅತ್ಯಂತ ಅಪಾಯಕಾರಿ ಮಾರ್ಗವನ್ನು ಆಯ್ದು ಕೊಂಡಳು. ಅವಳ ಹತ್ಯೆಯಿಂದ ಆಫ್ತಾಬ್‌ನಿಗೆ ಅವನ ಸ್ವರ್ಗದ ಬಾಗಿಲು ತೆರೆದಿರಬಹುದು; ಆದರೆ ಶ್ರದ್ಧಾ ಮತ್ತು ಅವಳ ಕುಟುಂಬ ದವರಿಗೆ ನರಕಯಾತನೆಯನ್ನು ಭೋಗಿಸಬೇಕಾಗುತ್ತಿದೆ, ಎಂಬುದರ ವೈಷಮ್ಯವನ್ನು ಉಳಿದ ಸಮಾಜದವರು ಹಂಚಿ ಕೊಳ್ಳಬೇಕು. ಈಗ ಶ್ರದ್ಧಾಳ ಛಾಯಾಚಿತ್ರದೆದುರು ಮೇಣ ಬತ್ತಿಯನ್ನು ಏಕೆ ಉರಿಸುವುದಿಲ್ಲ ? ‘ಲವ್ ಜಿಹಾದಿ’ ಆಫ್ತಾಬ್ ನಿಗೆ ಶಿಕ್ಷೆಯಾಗುವವರೆಗೆ ಆಂದೋಲನಗಳನ್ನು ಏಕೆ ಮಾಡ ಲಾಗುತ್ತಿಲ್ಲ ? ಲವ್ ಜಿಹಾದ್ ಅಸ್ತಿತ್ವದಲ್ಲಿದೆ ಮತ್ತು ಅದು ಹಿಂದೂ ಹುಡುಗಿಯರ ಜೀವಕ್ಕೆ ಕುತ್ತು ತಂದಿದೆ ಎಂದು ಒಪ್ಪಿ ಕೊಳ್ಳುವುದು ಮತ್ತು ಅದನ್ನು ತಡೆಗಟ್ಟಲು ಎಲ್ಲ ಹಂತಗಳಲ್ಲಿ ಕ್ರಮ ಕೈಗೊಳ್ಳುವುದೇ ಸದ್ಯದ ಆದ್ಯತೆಯಾಗಿದೆ.
ಸರಕಾರವು ಭರವಸೆ ನೀಡಬೇಕು !
ಪ್ರಗತಿಪರರ ಗುಂಪು ಈ ಪ್ರಕರಣದಲ್ಲಿ ಬಾಯಿ ಮುಚ್ಚಿಕೊಂಡಿ ದ್ದರೂ ಹಿಂದೂಗಳು ಈಗ ಸರಕಾರ ಮತ್ತು ನ್ಯಾಯವ್ಯವಸ್ಥೆಯಿಂದ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಬಲವಂತದ ಮತಾಂತರವು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಅಪಾಯಕಾರಿಯಾಗಿದೆ’ ಎಂದು ಹೇಳಿ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ. ಕೇಂದ್ರ ಸರಕಾರವು ನಿಜವಾಗಿಯೂ ಈ ಪ್ರಶ್ನೆಯ ಗಂಭೀರ ಚಿಂತನೆ ಮಾಡಬೇಕು. ಕ್ರೈಸ್ತರಿಂದ ಮೋಸದಿಂದ ಹಿಂದೂಗಳ ಮತಾಂತರ, ಮುಸ್ಲಿಂರಿಂದಾಗುವ ಹಿಂಸಾತ್ಮಕ ಮತಾಂತರದ ಜೊತೆಗೆ ಮತಾಂತರದ ‘ಲವ್ ಜಿಹಾದ್’ನಂತಹ ಷಡ್ಯಂತ್ರಗಳನ್ನು ಸರಕಾರವು ಬಯಲಿಗೆಳೆಯಬೇಕು. ಇಂತಹ ಅಪರಾಧಗಳನ್ನು ಕಾನೂನಿನ ಚೌಕಟ್ಟಿನಲ್ಲಿ ತರಲು ಪ್ರಯತ್ನಿಸಬೇಕು. ಕೇವಲ ಕಾನೂನುಗಳಷ್ಟೇ ಸಾಕಾಗುವುದಿಲ್ಲ ಎಂದು ಇಲ್ಲಿಯವರೆಗಿನ ಅನೇಕ ಪ್ರಕರಣಗಳಿಂದ ಬೆಳಕಿಗೆ ಬಂದಿದೆ. ಆದುದರಿಂದಲೇ ಜನಜಾಗೃತಿ ಮಾಡುವುದು, ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥ ಅಪರಾಧಿಗಳಿಗೆ ಅಂಜಿಕೆಯುಂಟಾಗುವ ರೀತಿಯಲ್ಲಿ ಶಿಕ್ಷೆಯನ್ನು ವಿಧಿಸುವುದು, ಈ ಪ್ರಯತ್ನವು ಸಹ ಈಗ ಆಗಬೇಕು. ಹಿಂದೂಗಳು ಧಾರ್ಮಿಕ ಚೌಕಟ್ಟಿನಲ್ಲಿ ಸಿಲುಕಿರದಿದ್ದರೂ ಮುಸಲ್ಮಾನರು ತಮ್ಮ ಹಿಂದೂದ್ವೇಷವನ್ನು ಬಿಡಲು ಸಿದ್ಧರಿಲ್ಲದ ಕಾರಣ ಈಗ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುವುದು ಆವಶ್ಯಕವಾಗಿದೆ. ಇದಕ್ಕಾಗಿ ಸರಕಾರ ಮತ್ತು ಆಡಳಿತ ಜನತೆಗೆ ಭರವಸೆ ನೀಡಬೇಕೆಂದು ಅಪೇಕ್ಷೆ ಇದೆ !