‘ಇತ್ತೀಚೆಗೆ ಅನೇಕ ಜನರು ನಡೆಯುವ ವ್ಯಾಯಾಮನ್ನು ಮಾಡುತ್ತಾರೆ; ಆದರೆ ಕೆಲವರು ಮೋಜು ಮಜಾ ಮಾಡುತ್ತ ನಡೆಯುತ್ತಾರೆ. ಅನೇಕರು ನಡೆಯುವಾಗ ಪರಸ್ಪರ ಮಾತನಾಡುತ್ತಾರೆ. ಇದರಿಂದ ವ್ಯಾಯಾಮದ ಲಾಭವಾಗುವುದಿಲ್ಲ. ‘ಶರೀರ-ಆಯಾಸ-ಜನಕಂ ಕರ್ಮ ವ್ಯಾಯಾಮಃ |’ ಅಂದರೆ ‘ಶರೀರಕ್ಕೆ ಶ್ರಮವಾಗುವ, ಹಾಗೆ ಕರ್ಮವನ್ನು ಮಾಡುವುದೆಂದರೆ ವ್ಯಾಯಾಮ’, ಹೀಗೆ ವ್ಯಾಯಾಮದ ಅರ್ಥವಾಗಿದೆ. ಶ್ರಮಪಡುವುದರಿಂದಲೇ ಶರೀರದ ಒತ್ತಡವನ್ನು ಸಹಿಸಿಕೊಳ್ಳುವ ಕ್ಷಮತೆ ಹೆಚ್ಚಾಗುತ್ತದೆ. ಆದುದರಿಂದ ಪ್ರತಿಯೊಬ್ಬರು ತಮ್ಮ ಕ್ಷಮತೆಗನುಸಾರ ಸ್ಪಲ್ಪವಾದರೂ ಶ್ರಮವಾಗುವ ವ್ಯಾಯಾಮವನ್ನು ಮಾಡಬೇಕು. ಹೀಗೆ ಮಾಡುವಾಗ ಒಮ್ಮೆಲೆ ಹೆಚ್ಚು ವ್ಯಾಯಾಮ ಮಾಡಬಾರದು. ಹೃದಯಕ್ಕೆ ಸಂಬಂಧಿಸಿದ ರೋಗಗಳಿರುವವರು ತಮ್ಮ ವೈದ್ಯರ ಸಲಹೆಯಂತೆ ವ್ಯಾಯಾಮ ಮಾಡಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೫.೮.೨೦೨೨)