ಬ್ರಿಟನ್‌ನಲ್ಲಿ ಆರ್ಥಿಕ ಹಿಂಜರಿಕೆಯನ್ನು ಘೋಷಣೆ !

ಲಂಡನ (ಬ್ರಿಟನ) – ಬ್ರಿಟನ್ ಆರ್ಥಿಕ ಹಿಂಜರಿಕೆಯನ್ನು ಘೋಷಿಸಿದೆ. ಪ್ರಧಾನ ಮಂತ್ರಿ ಋಷಿ ಸುನಕ ಇವರು ಆರ್ಥಿಕ ಹಿಂಜರಿಕೆಯನ್ನು ನಿಯಂತ್ರಿಸಲು ಕ್ರಮ ಕೈಕೊಳ್ಳುವುದಾಗಿ ಘೋಷಿಸಿದೆ. ಸುನಕ ಸರಕಾರವು ೫ ಸಾವಿರ ೫೦೦ ಕೋಟಿ ಪೌಂಡಗಳ (೫ ಸಾವಿರ ೫೮ ಕೋಟಿ ರೂಪಾಯಿ) ಆರ್ಥಿಕ ಯೋಜನೆಯನ್ನು ಮಂಡಿಸಿದೆ.

ನವೆಂಬರ ೧೭ ರಂದೇ ಹಣಕಾಸು ಸಚಿವ ಜೆರೆಮಿ ಹಂಟ ಇವರು ಸರಕಾರದ ತುರ್ತುಪರಿಸ್ಥಿತಿಯ ಆಯ-ವ್ಯಯ ಬಜೆಟ ಮಂಡಿಸಿತ್ತು. ಇದರಲ್ಲಿ ತೆರಿಗೆಯಲ್ಲಿ ಹೆಚ್ಚಳವನ್ನು ಮಾಡಲಾಗಿದೆ. ಬ್ರಿಟನ್ನಿನ ಬೆಲೆಯೇರಿಕೆ ಹಿಡಿತಕ್ಕೆ ಬಾರದೇ ಇರುವುದರಿಂದ ಸರಕಾರವು ತೆರಿಗೆ ದರವನ್ನು ಹೆಚ್ಚಿಸಿದೆ. ಬ್ರಿಟನನಲ್ಲಿ ಹೆಚ್ಚುತ್ತಿರುವ ಬೆಲೆಯೇರಿಕೆಯಿಂದಾಗಿ ಸರಕಾರದೊಂದಿಗೆ ಸಾಮಾನ್ಯ ಜನರ ತೊಂದರೆಯೂ ಹೆಚ್ಚಿದೆ. ಬ್ರಿಟನ್ ನಲ್ಲಿರುವ ಬೆಲೆಯೇರಿಕೆಯ ದರ ಅಕ್ಟೋಬರನಲ್ಲಿ ಶೇ. ೧೧.೧ ರಷ್ಟು ತಲುಪಿದ್ದು, ಈ ಬೆಲೆಯೇರಿಕೆಯಿಂದ ೪೧ ವರ್ಷಗಳ ದಾಖಲೆಯನ್ನು ಮುರಿದಿದೆ. ೧೯೮೧ರ ಬಳಿಕ ಇದು ಅತ್ಯಧಿಕ ಬೆಲೆಯೇರಿಕೆಯ ದರವಾಗಿದೆ. ಸಪ್ಟೆಂಬರನಲ್ಲಿ ಬೆಲೆಯೇರಿಕೆಯ ದರ ಶೇ. ೧೦.೧ ರಷ್ಟು ಇತ್ತು.

ಸಂಪಾದಕೀಯ ನಿಲುವು

ಒಂದು ಸಮಯದಲ್ಲಿ ಜಗತ್ತಿನ ಅನೇಕ ದೇಶಗಳ ಮೇಲೆ ರಾಜ್ಯವಾಳಿ ಅದರ ವಿಪರೀತ ಲೂಟಿಗೈದ ಬ್ರಿಕಟ್ ಮೇಲೆ ಬಂದಿರುವ ಈ ಸ್ಥಿತಿಯನ್ನು ನೋಡಿದರೆ ‘ಪ್ರತಿಯೊಬ್ಬರಿಗೆ ಅವರ ಕರ್ಮದ ಫಲ ಭೋಗಿಸಲೇ ಬೇಕು’, ಎಂಬುದು ಗಮನಕ್ಕೆ ಬರುತ್ತದೆ !