ಅಣುಯುದ್ಧದ ಸಾಧ್ಯತೆಗಳು ಮತ್ತು ಅದರ ಪರಿಣಾಮಗಳು !

ನಿವೃತ್ತ ಬ್ರಿಗೇಡಿಯರ್ ಹೇಮಂತ ಮಹಾಜನ

ರಶಿಯಾ ಮತ್ತು ಯುಕ್ರೇನ್ ಇವುಗಳ ನಡುವಿನ ಯುದ್ಧ ಇನ್ನೂ ಮುಗಿದಿಲ್ಲ. ಇದರಿಂದ ಜಗತ್ತಿನಲ್ಲಿ ಅಣುಯುದ್ಧದ ಆಪಾಯ ಸತತವಾಗಿ ಹೆಚ್ಚಾಗುತ್ತಿದೆ. ಒಂದು ಅಧ್ಯಯನಕಾರರ ಸಮೂಹವು ಜಗತ್ತಿಗೆ ಭಯದ ಎಚ್ಚರಿಕೆಯನ್ನು ನೀಡಿದೆ; ‘ರಶಿಯಾ ಮತ್ತು ಯುಕ್ರೇನ್ ಇವುಗಳ ನಡುವೆ ಪೂರ್ಣ ಪ್ರಮಾಣದಲ್ಲಿ ಅಣುಯುದ್ಧವಾದರೆ ಜಗತ್ತಿನ ೫೦ ಲಕ್ಷ ಜನರು ಸಾಯುವರು. ಆದರೆ ಅವರು ಬಾಂಬ್‌ಸ್ಫೋಟದ ನೇರ ಪರಿಣಾಮದಿಂದ ಸಾಯುವುದಿಲ್ಲ, ಅವರು ಜಗತ್ತಿನಾದ್ಯಂತದ ಆಹಾರದ ಕೊರತೆಯಿಂದ ಉಪವಾಸದಿಂದ ಸಾಯುವರು’, ಎಂದು ಒಂದು ಹೊಸ ಅಧ್ಯಯನದಿಂದ ತಿಳಿದುಬಂದಿದೆ.

೧. ‘ಅಣುಯುದ್ಧವಾದರೆ, ಜಗತ್ತಿನಲ್ಲಿ ಕೋಟಿಗಟ್ಟಲೆ ಜನರು ಸಾಯುವರು’, ಎಂಬ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ

‘ಇತ್ತೀಚೆಗೆ ಒಂದು ವಾರ್ತೆ ಪ್ರಕಟವಾಗಿತ್ತು. ಅದಕ್ಕನುಸಾರ ಅಮೇರಿಕಾದ ಒಂದು ‘ಜರ್ನಲ್’ ಒಂದು ಸಂಶೋಧನೆಯನ್ನು ಮಾಡಿದೆ. ಅದರಲ್ಲಿ ‘ಅಮೇರಿಕಾ ಮತ್ತು ರಶಿಯಾ ಇವುಗಳ ನಡುವೆ ಅಣುಯುದ್ಧವಾದರೆ ಜಗತ್ತಿನಲ್ಲಿನ ಕೋಟಿಗಟ್ಟಲೆ ಜನರು ಸಾಯುವರು’, ಎಂದು ಹೇಳಲಾಗಿದೆ. ಸದ್ಯ ಯುಕ್ರೇನ್ ಯುದ್ಧ ಹಾಗೆಯೇ ಮುಂದುವರಿದಿದೆ ಮತ್ತು ಅದು ನಿಲ್ಲುವ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ‘ಈ ಯುದ್ಧವನ್ನು ಗೆಲ್ಲಬೇಕಾದರೆ, ನಮಗೆ ಅಣುಬಾಂಬ್ ಅಥವಾ ಹೈಡ್ರೋಜನ್ ಬಾಂಬ್‌ನ್ನು ಉಪ ಯೋಗಿಸಬೇಕಾಗುವುದು’, ಎಂದು ರಶಿಯಾ ಅನೇಕ ಬಾರಿ ಬೆದರಿಕೆಯೊಡ್ಡಿದೆ. ಹಾಗೆಯೇ ಅಮೇರಿಕಾ ಮತ್ತು ರಶಿಯಾದ ನಡುವೆ ಅನೇಕ ವಾದವಿವಾದಗಳು ನಡೆಯುತ್ತಿರುತ್ತವೆ. ಇತ್ತೀಚೆಗೆ ತೈವಾನದ ಬಗ್ಗೆ ಅಮೇರಿಕಾ ಮತ್ತು ಚೀನಾದ ನಡುವೆ ಒತ್ತಡ ನಿರ್ಮಾಣವಾಗಿತ್ತು. ಅಲ್ಲಿಯೂ ಅಣುಯುದ್ಧದ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಅಮೇರಿಕಾದ ‘ರಟಗರ್ಸ್ ವಿದ್ಯಾಪೀಠ’ದ ವಿಜ್ಞಾನಿಗಳು ಜಗತ್ತಿನಾದ್ಯಂತ ಸಂಭವಿಸಬಹುದಾದ ೬ ಅಣ್ವಸ್ತ್ರ ಸಂಘರ್ಷಗಳ ಪರಿಣಾಮಗಳನ್ನು ಹೇಳಿದ್ದಾರೆ. ಅವರ ಅಭ್ಯಾಸವು ‘ನೇಚರ್ ಫುಡ್’ ಎಂಬ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಈ ಅಭ್ಯಾಸದಲ್ಲಿ ಅವರು ಮೇಲಿನ ಅಂದಾಜನ್ನು ವ್ಯಕ್ತಪಡಿಸಿದ್ದಾರೆ. ಈ ಅಂದಾಜನ್ನು ಅಣುಸ್ಫೋಟದಿಂದ ವಾತಾವರಣದಲ್ಲಿ ಹೊಗೆ ಬಿಡುವ ಆಧಾರದಲ್ಲಿ ತೆಗೆಯಲಾಗಿದೆ.

2. ಅಣುಬಾಂಬ್‌ನಿಂದ ಎಲ್ಲವೂ ನಾಶವಾಗುವುದು

ಸಂಕ್ಷಿಪ್ತದಲ್ಲಿ, ಅಣುಯುದ್ಧದ ಪರಿಣಾಮ ಮಹಾಭೀಕರವಾಗಿ ರುತ್ತದೆ. ಅಣುಬಾಂಬ್‌ನ್ನು ಹಾಕಿದರೆ ಅದನ್ನು ಕಿಲೋಟನ್‌ಗಳಿಗನು ಸಾರ ಅಳೆಯಲಾಗುತ್ತದೆ. ಒಂದು ಸಾಧಾರಣ ಅಣುಬಾಂಬ್ ೪೦ ಕಿಲೋಟನ್ ಇರುತ್ತದೆ. ಅದನ್ನು ಅಮೇರಿಕಾ ಎರಡನೇ ಮಹಾ ಯುದ್ಧದಲ್ಲಿ ಹಿರೋಶಿಮಾ ಮತ್ತು ನಾಗಾಸಾಕಿಯ ಮೇಲೆ ಹಾಕಿತ್ತು. ಅಣುಬಾಂಬ್‌ನಿಂದ ಕೇವಲ ಬಾಂಬ್ ಅಷ್ಟೇ ಸ್ಫೋಟ ವಾಗುವುದಿಲ್ಲ, ಇತರ ಪ್ರಚಂಡ ಹಾನಿಯೂ ಆಗುತ್ತದೆ. ಎಲ್ಲಿ ಅಣುಬಾಂಬ್‌ನ್ನು ಎಸೆಯಲಾಗುತ್ತದೆಯೋ, ಅಲ್ಲಿನ ವಾತಾವರಣವು ಒಮ್ಮೆಲೆ ಬಿಸಿಯಾಗಿ (ಉಷ್ಣವಾಗಿ) ಸೂರ್ಯನಿಗಿಂತಲೂ ಹೆಚ್ಚು ತಾಪಮಾನ ನಿರ್ಮಾಣವಾಗುತ್ತದೆ. ಅದರಿಂದ ಅಲ್ಲಿರುವುದೆಲ್ಲವೂ ಸುಟ್ಟು ಬೂದಿಯಾಗುತ್ತದೆ. ಹಾಗೆಯೇ ಅಲ್ಲಿ ಪೆಟ್ರೋಲ್ ಪಂಪ್, ಗ್ಯಾಸ್ ಸ್ಟೇಶನ್, ‘ಇಲೆಕ್ಟ್ರಿಕ್ ಗ್ರಿಡ್’ ಇದ್ದರೆ ಪುನಃ ಬೇರೆ ಬೇರೆ ಬೆಂಕಿ ಗಳು ನಿರ್ಮಾಣವಾಗಬಹುದು. ಅದರಿಂದಲೂ ದೊಡ್ಡ ಪ್ರಮಾಣ ದಲ್ಲಿ ಹಾನಿಯಾಗುತ್ತದೆ. ‘ಗ್ರೌಂಡ್ ಝಿರೋ’ದ ಸಮೀಪ, ಅಂದರೆ ಎಲ್ಲಿ ಅಣುಬಾಂಬ್‌ನ್ನು ಎಸೆಯಲಾಗುತ್ತದೆಯೋ, ಅಲ್ಲಿಂದ ಪ್ರಚಂಡ ವೇಗದಲ್ಲಿ ಗಾಳಿಯು ಹೊರಗಿನ ದಿಕ್ಕಿನಲ್ಲಿ ಬರುತ್ತದೆ. ಅದರಲ್ಲಿ ಬರುವ ಕಟ್ಟಡಗಳು, ವಾಹನಗಳು ಇತ್ಯಾದಿ ಎಲೆಗಳಂತೆ ಹಾರಿಹೋಗುತ್ತವೆ. ಎಲ್ಲಿ ಅಣುಬಾಂಬ್‌ನ್ನು ಎಸೆಯಲಾಗುತ್ತದೆಯೋ, ಅಲ್ಲಿ ಅಂದರೆ ‘ಗ್ರೌಂಡ್ ಝಿರೋ’ದ ಸ್ಥಳದಲ್ಲಿ ಒಂದು ದೊಡ್ಡ ಟೊಳ್ಳು ನಿರ್ಮಾಣ ವಾಗುತ್ತದೆ ಮತ್ತು ೨ ನಿಮಿಷಗಳಲ್ಲಿ ಆ ಭಾಗದ ಕಡೆಗೆ ಪುನಃ ಎಲ್ಲ ಕಡೆಯ ಗಾಳಿ ಅತ್ಯಂತ ವೇಗದಿಂದ ಬರುತ್ತದೆ. ಈ ಬಿರುಗಾಳಿ ಯಲ್ಲಿ ಬರುವ ಎಲ್ಲವೂ ನಾಶವಾಗುತ್ತದೆ. ಈ ರೀತಿ ಎರಡು ಸಲ ಬಿರುಗಾಳಿ ನಿರ್ಮಾಣವಾಗುತ್ತದೆ.

೩. ಅಣುಸ್ಫೋಟದಿಂದ ಆಗುವ ಕಿರಣೋತ್ಸರ್ಗದಿಂದ (ರೇಡಿಯೇಶನ್) ಮನುಕುಲಕ್ಕೆ ಆಗುವ ಅಪಾರ ಹಾನಿ

ಮೂರನೇ ಹಾನಿಯು ಕಿರಣೋತ್ಸರ್ಗದಿಂದ ಆಗುತ್ತದೆ. ಮೊದಲು ಎಲ್ಲಿ ಅಣುಬಾಂಬ್ ಎಸೆಯಲಾಗುತ್ತದೆಯೋ, ಅಲ್ಲಿ ಬಹಳಷ್ಟು ವಿಕಿರಣಗಳು ನಿರ್ಮಾಣವಾಗುತ್ತವೆ. ಯಾರಿಗಾದರೂ ಸಾವಿರಾರು ಪಟ್ಟು ‘ಎಕ್ಸ್-ರೇ’ಯ ಡೋಜನ್ನು ಕೊಟ್ಟರೆ ಅವನ ಶರೀರ ಹೇಗೆ ಸುಟ್ಟುಹೋಗಬಹುದೋ, ಅದೇ ರೀತಿಯ ಪರಿಣಾಮ ಇಲ್ಲಿ ಆಗುತ್ತದೆ. ಆದ್ದರಿಂದ ಆ ಪರಿಸರದಲ್ಲಿನ ಎಲ್ಲ ಸಜೀವ ಪ್ರಾಣಿ ಗಳು ಸಾಯುತ್ತವೆ ಮತ್ತು ಗಾಯಗೊಳ್ಳುತ್ತವೆ. ಅನಂತರ ಅನೇಕ ವರ್ಷಗಳ ವರೆಗೆ ಆ ಪರಿಸರದಲ್ಲಿನ ಭೂಮಿ, ಗಾಳಿ, ನೀರು ಮತ್ತು ಬೆಳೆಗಳು ಕಿರಣೋತ್ಸರ್ಗದ ಪ್ರಭಾವಕ್ಕೊಳಗಾಗುತ್ತವೆ. ಅಲ್ಲಿನ ಜನರಿಗೆ ಅನೇಕ ವರ್ಷಗಳವರೆಗೆ ಈ ಕಿರಣೋತ್ಸರ್ಗವನ್ನು ಎದುರಿಸಬೇಕಾಗುತ್ತದೆ. ಈ ಹಾನಿಯನ್ನು ಆ ಪರಿಸರದಲ್ಲಿನ ಮನುಕುಲವು ಸಹಿಸಬೇಕಾಗುತ್ತದೆ. ಇಷ್ಟು ಮಾತ್ರವಲ್ಲದೇ, ಈ ಪರಿಣಾಮವು ಮುಂದು ಮುಂದಿನ ಪರಿಸರದಲ್ಲಿ ಹರಡುತ್ತಾ ಹೋಗುತ್ತದೆ. ಯಾವಾಗ ಈ ಬಾಂಬ್‌ಸ್ಫೋಟವಾಗುತ್ತದೆಯೋ, ಆಗ ಗಾಳಿಯಲ್ಲಿ ಪ್ರಚಂಡ ಪ್ರಮಾಣದಲ್ಲಿ ಹೊಗೆ ನಿರ್ಮಾಣವಾಗುತ್ತದೆ. ಬಾಂಬ್‌ಸ್ಫೋಟ ಶಕ್ತಿಶಾಲಿಯಾಗಿದ್ದರೆ, ಅದರ ಹೊಗೆ ಮೋಡ ಗಳಂತೆ ಎಷ್ಟು ದೊಡ್ಡ ಪ್ರಮಾಣದಲ್ಲಿ ಹರಡುತ್ತದೆ ಎಂದರೆ, ಅದರಿಂದ ಭೂಮಿಯ ಮೇಲೆ ಸುರ್ಯಪ್ರಕಾಶ ಬೀಳುವುದಿಲ್ಲ. ಸೂರ್ಯಪ್ರಕಾಶವಿಲ್ಲದೇ ಮಾನವ ಜೀವಂತ ಇರಲಾರನು. ಯುಕ್ರೇನ್, ರಶಿಯಾ ಅಥವಾ ಅಮೇರಿಕಾದ ಕೆಲವು ಭಾಗಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಗಳನ್ನು ಬೆಳೆಸಲಾಗುತ್ತದೆ ಮತ್ತು ಅಲ್ಲಿಂದ ಜಗತ್ತಿಗೆ ಆಹಾರಧಾನ್ಯವನ್ನು ಪೂರೈಸಲಾಗುತ್ತದೆ. ಇಂತಹ ಸ್ಥಳಗಳಲ್ಲಿ ಬಾಂಬ್‌ಸ್ಫೋಟವಾದರೆ ಬೆಳೆಗಳಿಗೆ ಅತೀವ ಹಾನಿಯಾಗುತ್ತದೆ. ಅದರಿಂದ ಜಗತ್ತಿಗೆ ದೊಡ್ಡ ಪ್ರಮಾಣದಲ್ಲಿ ಬರಗಾಲವನ್ನು ಎದುರಿಸಬೇಕಾಗಬಹುದು.

೪. ಅಣುಬಾಂಬ್ ಸ್ಫೋಟಿಸುವ ಸಂಭವವಿದ್ದಲ್ಲಿ ಇತರ ದೇಶಗಳು ಆ ದೇಶದ ಮೇಲೆ ಒತ್ತಡವನ್ನು ಹೇರುತ್ತವೆ

ಭಾರತಕ್ಕಿಂತ ಪಾಕಿಸ್ತಾನದಲ್ಲಿ ಹೆಚ್ಚು ಪ್ರಮಾಣದಲ್ಲಿ ಅಣ್ವಸ್ತ್ರ ಗಳಿವೆ ಎಂದು ಹೇಳಲಾಗುತ್ತದೆ. ಯಾವುದೇ ಕಾರಣಕ್ಕಾಗಿ ಅದು ಭಾರತದ ಮೇಲೆ ಬಾಂಬ್ ಎಸೆದರೆ, ಅದು ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿಯನ್ನು ಮಾಡಬಹುದು. ಆದರೆ ತುಂಬಾ ಭಯಪಡುವ ಅವಶ್ಯಕತೆಯಿಲ್ಲ; ಏಕೆಂದರೆ ಭಾರತಕ್ಕೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಕ್ಷಮತೆಯಿದೆ. ಅದಕ್ಕೆ ‘ಸೆಕೆಂಡ್ ಕ್ಯಾಪ್ಯಾಬಲಿಟಿ’ ಎಂದು ಹೇಳಲಾಗುತ್ತದೆ. ಇತಿಹಾಸದಲ್ಲಿ ೧೯೪೪ ರಲ್ಲಿ ಮೊತ್ತ ಮೊದಲು ಎರಡನೆಯ ಮಹಾಯುದ್ಧದಲ್ಲಿ ಅಣುಬಾಂಬನ್ನು ಶಸ್ತ್ರವೆಂದು ಉಪಯೋಗಿಸಲಾಗಿತ್ತು. ಅನಂತರ ಅಂತಹ ಆಕ್ರಮಣವನ್ನು ಪುನಃ ಯಾವತ್ತೂ ಮಾಡಲಾಗಿಲಿಲ್ಲ. ಪಾಕಿಸ್ತಾನ ಭಾರತಕ್ಕೆ ಪದೇ ಪದೇ ಭಾರತದ ವಿರುದ್ಧ ಅಣುಬಾಂಬ್ ಉಪ ಯೋಗಿಸ ಬಹುದು ಎಂದು ಬೆದರಿಸುತ್ತಿರುತ್ತದೆ. ಯಾವ ದೇಶದಲ್ಲಿ ಅಣುಬಾಂಬ್‌ಗಳು ಇವೆಯೋ, ಆ ದೇಶ ಗಳ ಮೇಲೆ ಉಪಗ್ರಹದ ಮೂಲಕ ಯಾವಾಗಲೂ ಜಗತ್ತಿನ ಗಮನವಿರುತ್ತದೆ. ಅವು ಯಾವುದಾದರು ದೇಶ ಏನಾದರು ಅಸಂಬದ್ಧ ಕಾರ್ಯವನ್ನು ಮಾಡಲು ಪ್ರಯತ್ನಿಸಿದರೆ, ತಕ್ಷಣ ಇಡೀ ಜಗತ್ತು ಜಾಗೃತವಾಗಿ ಆ ದೇಶದ ಮೇಲೆ ಒತ್ತಡವನ್ನು ನಿರ್ಮಾಣ ಮಾಡುತ್ತವೆ. ‘ಅಣುಯುದ್ಧದ ಅಪಾಯ ಮಾತ್ರ ಇದೆ’, ಇಷ್ಟು ಮಾತ್ರ ಖಚಿತ. ಯಾವನಾದರೂ ತಲೆತಿರುಕ ಉಗ್ರವಾದಿ ಅಥವಾ ಉದ್ಧಟ ಆಡಳಿತಗಾರನಿಂದಾಗಿ ಈ ಅಪಾಯ ಉದ್ಭವಿಸಬಹುದು.

೫. ಅಣುಯುದ್ಧದ ಸಂಕಟದಿಂದ ಆಗುವ ಹಾನಿಯನ್ನು ತಡೆಯಲು ನಾಗರಿಕರಿಗೆ ತರಬೇತಿ ನೀಡುವುದು ಆವಶ್ಯಕ !

ಅಣುಯುದ್ಧದ ಸಂಕಟದಿಂದ ನಮ್ಮ ನಾಗರಿಕರ ರಕ್ಷಣೆಯಾಗಲು ಅವರಿಗೆ ಪದೇ ಪದೇ ತರಬೇತಿ ಕೊಡಬೇಕು. ಒಂದು ರಾಷ್ಟ್ರವೆಂದು ಭಾರತೀಯ ಸೈನ್ಯ ಅದಕ್ಕೆ ಖಂಡಿತ ತಕ್ಕ ಪ್ರತ್ಯುತ್ತರ ನೀಡುವುದು; ಆದರೆ ಹಾನಿಯನ್ನು ಹೇಗೆ ಕಡಿಮೆ ಮಾಡಬೇಕು ? ಎಂಬುದರ ತರಬೇತಿಯನ್ನು ಜನಸಾಮಾನ್ಯರಿಗೆ ಕೊಡುವುದು ಆವಶ್ಯಕವಾಗಿದೆ. ಈ ವಿಷಯದ ಬಗ್ಗೆ ತುಂಬಾ ಮಾಹಿತಿ ಉಪಲಬ್ಧವಿದೆ. ಇಂತಹ ದಾಳಿಯಾದರೆ, ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕು ? ಎಂಬುದರ ತರಬೇತಿಯನ್ನು ವಿಪತ್ತು ನಿರ್ವಹಣೆಯ (ಡಿಝಾಸ್ಟರ ಮ್ಯಾನೇಜಮೆಂಟ) ಮೂಲಕ ಕೊಡುವುದು ಆವಶ್ಯಕವಾಗಿದೆ.’
– (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ