ನವೆಂಬರ್ ೧೮ ರಂದು ಸನಾತನ ಸಂಸ್ಥೆಯ ಶ್ರದ್ಧಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜರ ಮಹಾನಿರ್ವಾಣೋತ್ಸವವಿದೆ ಅದರ ನಿಮಿತ್ತ …

ಪ.ಪೂ. ಭಕ್ತರಾಜ ಮಹಾರಾಜರಿಗೆ ಅವರ ಗುರುಗಳಾದ ಶ್ರೀ ಅನಂತಾನಂದ ಸಾಯೀಶರ ಬಗ್ಗೆ ಇದ್ದ ದೃಢ ಶ್ರದ್ಧೆ

೧. ಶ್ರೀ ಅನಂತಾನಂದ ಸಾಯೀಶರ ಅನ್ನ ಸಂತರ್ಪಣೆ ಕಾರ್ಯಕ್ರಮ ಇರುವುದರಿಂದ ನನಗೆ ಮರಣ ಬಂದರೂ ನಾನು ಅನ್ನ ಸಂತರ್ಪಣೆಯನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂದು ಪ.ಪೂ. ಬಾಬಾರವರು ಹೇಳುತ್ತಿದ್ದರು

ನನಗೆ ನೆನಪಿದೆ, ೧೯೮೮ ರಲ್ಲಿ ಮೊರಟಕ್ಕಾದಲ್ಲಿ ಪ.ಪೂ. ಅನಂತಾನಂದ ಸಾಯೀಶರ ಅನ್ನಸಂತರ್ಪಣೆ ಇತ್ತು. ಆ ಸಮಯದಲ್ಲಿ ಪ.ಪೂ. ಬಾಬಾ ತುಂಬಾ ಅನಾರೋಗ್ಯದಲ್ಲಿದ್ದರು. ಆಧುನಿಕ ವೈದ್ಯರು ಪ.ಪೂ. ಬಾಬಾರಿಗೆ ಆಸ್ಪತ್ರೆಯಲ್ಲಿ ಭರ್ತಿಯಾಗಲು ಹೇಳುತ್ತಿದ್ದರು. ಆಗ ಅವರು, ನನ್ನ ಗುರು ಗಳ ಅನ್ನಸಂತರ್ಪಣೆ ಇದೆ. ನನಗೆ ಮರಣ ಬಂದರೂ ನಾನು ಎಲ್ಲಿಯೂ ಹೋಗುವುದಿಲ್ಲ ಎಂದು ಹೇಳಿದರು. ಆ ಸಮಯದಲ್ಲಿ ಪ.ಪೂ. ಬಾಬಾ ಪ.ಪೂ. ರಾಮಜಿದಾದಾ ಮತ್ತು ಪ.ಪೂ. ಬಿಡವಯಿಯವರಿಗೆ (ರಾಮಾನಂದ ಮತ್ತು ಅಚ್ಯುತಾನಂದ) ಎಂದು ನಾಮಕರಣ ಮಾಡಿದರು.

೨. ಗುರುಬಂಧುಗಳ ಅಲೌಕಿಕ ಪ್ರೀತಿಯಿಂದಾಗಿ ರಾತ್ರಿ ಪ.ಪೂ. ಭುರಾನಂದ ಬಾಬಾ ಪ.ಪೂ. ಬಾಬಾರವರ ಕೋಣೆಗೆ ಬಂದರು. ಆ ಸಮಯದಲ್ಲಿ ಅಲ್ಲಿ ನಾವು ಮೂರೇ ಜನರಿದ್ದೆವು. ಆಗ ಅವರಲ್ಲಿ ಮುಂದಿನ ಸಂಭಾಷಣೆ ನಡೆಯಿತು.

ಪ.ಪೂ. ಭುರಾನಂದ ಬಾಬಾ : ಏನಾಯಿತು ?

ಪ.ಪೂ. ಬಾಬಾ : ಬಹಳ ಕೆಮ್ಮು ಬರುತ್ತಿದೆ.

ಪ.ಪೂ. ಭುರಾನಂದ ಬಾಬಾ : ನಿನಗೆ ಏನೂ ಆಗಿಲ್ಲ; ನಿನ್ನ ಕಿರುನಾಲಿಗೆ ಬಿದ್ದಿದೆ. ನಾನು ಅದನ್ನು ಈಗ ಸರಿ ಮಾಡುತ್ತೇನೆ. ಪ.ಪೂ. ಭುರಾನಂದ ಬಾಬಾರವರು ನನಗೆ, ರವಿ ಹೋಗು, ಮೂರು-ನಾಲ್ಕು ಲವಂಗಗಳನ್ನು ಬಿಸಿ ಮಾಡಿ, ಪುಡಿ ಮಾಡಿ, ಜೇನುತುಪ್ಪದಲ್ಲಿ ಸೇರಿಸಿ ತೆಗೆದುಕೊಂಡು ಬಾ ಎಂದರು.

ನಾನು ಅವರು ಹೇಳಿದ ಹಾಗೆ ಮಿಶ್ರಣವನ್ನು ತಯಾರಿಸಿಕೊಂಡು ಬಂದೆನು. ಪ.ಪೂ. ಭುರಾನಂದ ಬಾಬಾರವರು ಪ.ಪೂ. ಬಾಬಾರವರ ಸೊಂಟದಲ್ಲಿ ಕೈ ಹಾಕಿ ಅವರನ್ನು ಎಬ್ಬಿಸಿದರು ಮತ್ತು ಜೇನು ಮತ್ತು ಲವಂಗದ ಮಿಶ್ರಣವನ್ನು ಮಧ್ಯದ ಬೆರಳಿನಿಂದ ಪ.ಪೂ. ಬಾಬಾರವರ ಗಂಟಲಿನಲ್ಲಿ ಹಾಕಿದರು ಮತ್ತು ‘ಆಯಿತು ಈಗ ನಿನ್ನ ಕಿರು ನಾಲಿಗೆ ಸರಿ ಆಯಿತು; ಈಗ ನೀನು ಮಲಗು ಎಂದು ಹೇಳಿದ ನಂತರ ಪ.ಪೂ. ಬಾಬಾರವರು ಮಲಗಿದರು.

ನನಗೆ ಆ ದಿನ ಗುರುಬಂಧುಗಳಲ್ಲಿನ ಪ್ರೀತಿ ನೋಡಲು ಸಿಕ್ಕಿತು. ನಿಜ ಹೇಳಬೇಕೆಂದರೆ ಪ.ಪೂ. ಬಾಬಾರಿಗೆ ಆ ದಿನ ತುಂಬಾ ಹೃದಯದ ತೊಂದರೆಯಾಗುತ್ತಿತ್ತು; ಆದರೆ ಅವರು ಆ ಬಗ್ಗೆ ಯಾರಿಗೂ ತಿಳಿಯಲು ಕೊಡಲಿಲ್ಲ. ಅವರಲ್ಲಿ ನನ್ನ ಗುರುಗಳು ನನಗೆ ಏನೂ ಆಗಲು ಬಿಡುವುದಿಲ್ಲ, ಎಂಬ ದೃಢ ಶ್ರದ್ಧೆಯಿತ್ತು. ಪ.ಪೂ. ಬಾಬಾರವರು ಸಂಸಾರ ಮಾಡಿ ಭಕ್ತರಿಗೆ ಯೋಗ್ಯ ಮಾರ್ಗವನ್ನು ತೋರಿಸಿದರು.

ಹರಿ ಓಂ ತತ್ಸತ್ | ನರ್ಮದೆ ಹರ ಹರ ಹರ |
– ಶ್ರೀ. ರವೀಂದ್ರ ಕಸರೆಕರ (ಪ.ಪೂ. ಭಕ್ತರಾಜ ಮಹಾರಾಜರ ಮಗ), ನಾಶಿಕ (೬.೧.೨೦೧೯, ಸಮಯ : ೭ ಗಂಟೆ ೨ ನಿಮಿಷಗಳು)