ಅಲೋಪಥಿ ಪಿತ್ತದ ಮಾತ್ರೆಯ ಹಿಂದಿನ ಕ್ರೂರ ಸತ್ಯ ಮತ್ತು ಆಯುರ್ವೇದದ ಶ್ರೇಷ್ಠತೆ !


೧. ಅರ್ಬುದರೋಗಕ್ಕೆ ಕಾರಣವಾದ ‘ನೈಟ್ರೋ ಸೊಮಿನ್’ಯುಕ್ತ ‘ರ‍್ಯಾನಿಟಿಡಿನ್’ ಔಷಧಿಯು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಾಟವಾಗುವುದು

‘ಪಿತ್ತದ ಮಾತ್ರೆ ಎಂದು ಪ್ರಸಿದ್ಧವಾಗಿರುವ ಮತ್ತು ಎಷ್ಟೊ ಜನರು ಅವುಗಳನ್ನು ಶೇಂಗಾ-ಪುಟಾಣಿಗಳಂತೆ ತಿನ್ನುವ ಅಲೋಪಥಿಯ ‘ರ‍್ಯಾನಿಟಿಡಿನ್’ ಈ ಔಷಧಿಯಿಂದ ಅರ್ಬುದರೋಗ(ಕ್ಯಾನ್ಸರ)ವಾಗುವ ಸಾಧ್ಯತೆ ಇದೆ’, ಎಂಬುದು ಗಮನಕ್ಕೆ ಬಂದ ನಂತರ ವಿವಿಧ ದೇಶಗಳಲ್ಲಿನ ಔಷಧಿಗಳ ಮೇಲೆ ನಿಯಂತ್ರಣವನ್ನಿಡುವ ಸಂಸ್ಥೆಗಳು (ಡ್ರಗ್ ಕಂಟ್ರೋಲರ್) ‘ಈ ಔಷಧಿಯನ್ನು ಉಪಯೋಗಿಸುವ ಬಗ್ಗೆ ಆಧುನಿಕ ವೈದ್ಯರು, ಹಾಗೆಯೇ ರೋಗಿಗಳು ಕಾಳಜಿ ವಹಿಸಬೇಕು’, ಎಂದು ಹೇಳಿವೆ. ಕೆಲವು ಔಷಧಿ ಕಂಪನಿಗಳು ಈ ಔಷಧಿ ಯನ್ನು ಪೇಟೆಯಿಂದ ಹಿಂಪಡೆದಿವೆ. ಇದರಲ್ಲಿ ಅಮೇರಿಕಾ, ಕೆನಡಾ, ಸಿಂಗಾಪುರ ಇತ್ಯಾದಿ ದೇಶಗಳಿವೆ. ಇದರ ಬಗ್ಗೆ ಸರಕಾರ ಭಾರತ ದಲ್ಲಿನ ರಾಜ್ಯಗಳಿಗೆ ಮಾರ್ಗದರ್ಶಕ ಅಂಶಗಳನ್ನು ಕಳುಹಿಸಿದ್ದು ಯೋಗ್ಯ ಕಾಳಜಿಯನ್ನು ತೆಗೆದುಕೊಳ್ಳಲು ಹೇಳಿದೆ. (ಇತ್ತೀಚೆಗೆ ಭಾರತ ಸರಕಾರವು ಈ ಮಾತ್ರೆಯ ಹೆಸರನ್ನು ಅತ್ಯಾವಶ್ಯಕ ಔಷಧಿಗಳ ಪಟ್ಟಿಯಿಂದ ತೆಗೆದಿದೆ – ಸಂಪಾದಕರು) ಈ ಸುದ್ದಿ ಪ್ರಕಟವಾದ ಕೂಡಲೇ ಜಗತ್ತಿನಲ್ಲಿ ಒಂದು ರೀತಿಯ ಭಯವುಂಟಾಯಿತು; ಏಕೆಂದರೆ ಅರ್ಬುದರೋಗದಂತಹ ತೀವ್ರ ಕಾಯಿಲೆಗೆ ತುತ್ತಾಗುವ ಸಾಧ್ಯತೆಯಿರುವ ‘ನೈಟ್ರೊಸೊಮಿನ್’ ಎಂಬ ಘಟಕವಿರುವ ಈ ಔಷಧಿಯು ಆಧುನಿಕ ವೈದ್ಯರ ಅತ್ಯಂತ ಪ್ರೀತಿಯ ಔಷಧಿಯಾಗಿದೆ. (ರೋಗಿಗಳಿಗೆ ಇತರ ಔಷಧಿಗಳಿಂದ ಪಿತ್ತ ಹೆಚ್ಚಾಗಬಾರದೆಂದು ಅವುಗಳ ಜೊತೆಗೆ ಸಹಜವಾಗಿ ಕೊಡಲಾಗುವ ಔಷಧಿ) !

ಭಾರತದ ವಿಚಾರ ಮಾಡಿದರೆ ದೇಶದಲ್ಲಿ ಎಲ್ಲಕ್ಕಿಂತ ಹೆಚ್ಚು ಸೇವಿಸುವ ಮೊದಲನೇಯ ೩ ಔಷಧಿಗಳಲ್ಲಿ ಇದೊಂದಾಗಿದೆ. ಭಾರತದಲ್ಲಿ ಈ ಒಂದೇ ಔಷಧಿಯ (ಮಾತ್ರೆಗಳ) ವಹಿವಾಟು ಸುಮಾರು ೭೦೦ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿದೆ. ಅನೇಕ ಆಧುನಿಕ ವೈದ್ಯರು ನಮಗೆ ಯಾವ ‘ಆಂಟಾಸಿಡ್’ ಗಳನ್ನು ಬರೆದು ಕೊಡುತ್ತಾರೆಯೋ, ಅದರಲ್ಲಿ ‘ರ‍್ಯಾನಿಟಿಡಿನ್’ ಇದು ವೈದ್ಯರ ಅತ್ಯಂತ ಪ್ರೀತಿಯ (ಹೆಚ್ಚಿನ ಪ್ರಮಾಣದಲ್ಲಿ ಬರೆದುಕೊಡುವ) ಔಷಧಿಯಾಗಿದೆ. ನಿಜ ಹೇಳಬೇಕೆಂದರೆ ಈ ಔಷಧಿಯು ‘ಶೆಡ್ಯುಲ್ ಎಚ್ ಡ್ರಗ್’ ಈ ಗುಂಪಿನಲ್ಲಿ ಬರುತ್ತದೆ, ಅಂದರೆ ಆಧುನಿಕ ವೈದ್ಯರ ‘ಪ್ರಿಸ್ಕ್ರಿಪ್ಶನ್’ ಇಲ್ಲದೇ ಈ ಔಷಧಿಯನ್ನು ರೋಗಿಗಳಿಗೆ ಕೊಡಲು ಬರುವುದಿಲ್ಲ. ೧೩೬ ಕೋಟಿ ಜನಸಂಖ್ಯೆಯ ನಮ್ಮ ದೇಶದಲ್ಲಿ ಈ ನಿಯಮವನ್ನು ಎಷ್ಟರಮಟ್ಟಿಗೆ ಕಟ್ಟುನಿಟ್ಟಾಗಿ ಪಾಲಿಸುತ್ತಿರಬಹುದು, ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಹೀಗಿರುವಾಗ ಇಷ್ಟೊಂದು ವರ್ಷಗಳ ವರೆಗೆ ಈ ಔಷಧಿಯ ಬಗೆಗಿನ ಈ ಮಾಹಿತಿಯು ಏಕೆ ಬಹಿರಂಗವಾಗಲಿಲ್ಲ ?

೨. ಭಾರತದಲ್ಲಿ ‘ಕ್ಲಿನಿಕಲ್ ಟ್ರಯಲ್’ (ಔಷಧಿಗಳ ಬಗ್ಗೆ ಮಾಡಲಾಗುವ ವೈದ್ಯಕೀಯ ಪ್ರಯೋಗಗಳು)ಗಳ ಬಗ್ಗೆ ಜನಜಾಗೃತಿ ಆಗುವುದು ಆವಶ್ಯಕ !

ನಿಜ ಹೇಳಬೇಕೆಂದರೆ ಈ ರೀತಿ ನಡೆಯುವುದೇನು ಆಶ್ಚರ್ಯದ ಸಂಗತಿಯಾಗಿಲ್ಲ. ‘ಕ್ಲಿನಿಕಲ್ ಟ್ರಯಲ್’ (ಔಷಧಗಳ ಮಾಡಲಾಗುವ ವೈದ್ಯಕೀಯ ಪ್ರಯೋಗ)ಗಳು ಯಾವ ರೀತಿ ನಡೆಯುತ್ತವೆ, ಎಂಬುದು ಯಾರಿಗೆ ಗೊತ್ತಿದೆಯೋ, ಅವರಿಗೆ ಈ ವಾರ್ತೆಯ ಬಗ್ಗೆ ಆಶ್ಚರ್ಯವೆನಿಸಲಿಕ್ಕಿಲ್ಲ; ಆದರೆ ದುರ್ದೈವದಿಂದ ಭಾರತದಲ್ಲಿ ಇವೆಲ್ಲ ವಿಷಯಗಳ ಬಗ್ಗೆ ಜನಜಾಗೃತಿಯಾಗವುದಿಲ್ಲ. ‘ಕ್ಲಿನಿಕಲ್ ಟ್ರಯಲ್’ ಎಂದರೆ ಔಷಧಿಗಳಿಗಾಗಿ ಮಾಡಲಾಗುವ ವೈದ್ಯಕೀಯ ಪ್ರಯೋಗ, ಇದನ್ನು ೪ ಹಂತಗಳಲ್ಲಿ (ವಾಸ್ತವದಲ್ಲಿ ೫) ಮಾಡಲಾಗುತ್ತದೆ. ಸಂಶೋಧನೆ, ಪ್ರಯೋಗಾಲಯದಲ್ಲಿ ಪರೀಕ್ಷಣೆ,
ಪ್ರಾಣಿ ಮತ್ತು ಸ್ವಯಂಸೇವಿ ಮನುಷ್ಯರ ಮೇಲೆ ಪ್ರಯೋಗ, ಹಾಗೆಯೇ ರೋಗಿಗಳ ಮೇಲೆ ಪ್ರಯೋಗ, ಹೀಗೆ ೦ ರಿಂದ ೩ ಹಂತಗಳಲ್ಲಿ ಈ ಟ್ರಯಲ್‌ನ್ನು ಮಾಡಲಾಗುತ್ತದೆ. ಹೀಗಿದ್ದರೂ ಅನೇಕ ಔಷಧಿಗಳ ದುಷ್ಪರಿಣಾಮಗಳು ಮೇಲಿನ ೩ ಹಂತಗಳಲ್ಲಿ ಗಮನಕ್ಕೆ ಬರುವುದಿಲ್ಲ, ಅವುಗಳನ್ನು ಕ್ರಮಾಂಕ ೪ ರಲ್ಲಿ ಮಾಡಲಾಗುತ್ತದೆ.

ನಾಲ್ಕನೇ ಹಂತದಲ್ಲಿ ನಿಖರವಾಗಿ ಏನು ಮಾಡುತ್ತಾರೆ ?

ನಾಲ್ಕನೇ ಹಂತದಲ್ಲಿ ಯಾವುದಾದರೊಂದು ಔಷಧಿಯು ಮಾರುಕಟ್ಟೆ ಯಲ್ಲಿ ಲಭ್ಯವಾದ ನಂತರ ಮುಂದಿನ ಅನೇಕ ಕಾಲದ ವರೆಗೆ ರೋಗಿಗಳ (ಇದರಲ್ಲಿ ಗರ್ಭಿಣಿಯರನ್ನು ಹೊರತು ಪಡಿಸಿ) ಮೇಲಾಗುವ ಅದರ ದುಷ್ಪರಿಣಾಮಗಳನ್ನು ಪರಿಶೀಲಿಸಲಾಗುತ್ತದೆ. ಈ ಔಷಧಿಗಳಿಂದ ರೋಗಿಗಳ ಮೇಲಾಗುವ ದುಷ್ಪರಿಣಾಮ (siಜe eಜಿಜಿeಛಿಣs)ಗಳನ್ನು ನಾಲ್ಕನೇ ಹಂತದಲ್ಲಿಯೇ ಪರಿಶೀಲಿಸಬಹುದು. ಹೀಗೆ ದುಷ್ಪರಿಣಾಮಗಳು ಕಂಡು ಬಂದರೆ ಮತ್ತು ಅವುಗಳು ಖಚಿತ ವಾದ ನಂತರ ಈ ಔಷಧಿಗಳನ್ನು ಮಾರುಕಟ್ಟೆಯಿಂದ ಹಿಂಪಡೆದು ಉತ್ಪಾದನೆಯನ್ನು ನಿಲ್ಲಿಸಲಾಗುತ್ತದೆ.

೩. ರೋಗಿಗಳಿಗೆ ಆರೋಗ್ಯದ ಲಾಭವನ್ನಲ್ಲ, ಹೆಚ್ಚಿಗೆ ಲಾಭ ಪಡೆಯುವುದೇ ಔಷಧಿ ಕಂಪನಿಗಳ ಧ್ಯೇಯವಾಗಿರುತ್ತದೆ

ಭಾರತದ ಅಂತರದೇಶಿಯ ಔಷಧೀಯ ಮಾರುಕಟ್ಟೆಯು ೨೦೧೮ ರಲ್ಲಿ ೧ ಲಕ್ಷ ೨೯ ಸಾವಿರ ೧೫ ಕೋಟಿಗಳಷ್ಟಿತ್ತು. ಈಗ ಅದು ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಾಗಿರಬಹುದು. ವಿವಿಧ ಸಮೀಕ್ಷೆಗಳ ಪ್ರಕಾರ, ಮಾರುಕಟ್ಟೆಯಲ್ಲಿ ನಿಷೇಧಿಸಿದ ಔಷಧಿಗಳನ್ನು ಡಾಕ್ಟರರು ‘ಪ್ರಿಸ್ಕ್ರೈಬ್’ ಮಾಡುತ್ತಾರೆ (ಬರೆದುಕೊಡುತ್ತಾರೆ) ಮತ್ತು ಅವುಗಳನ್ನು ಬಹಿರಂಗವಾಗಿ ಮಾರಾಟ ಮಾಡಲಾಗುತ್ತದೆ. ಅದರಲ್ಲೂ ನಮ್ಮ ದೇಶದಲ್ಲಿನ ಔಷಧ ನಿಯಮಕ ಮಂಡಳಿಗಳ (ಆಡಿug ಛಿoಟಿಣಡಿoಟeಡಿs) ಕಾರ್ಯದಲ್ಲಿನ ತಪ್ಪುಗಳು, ಭ್ರಷ್ಟಾಚಾರ ಮತ್ತು ಮಾರುಕಟ್ಟೆಯ ಬಹುದೊಡ್ಡ ವಿಸ್ತಾರ ಇವುಗಳಿಂದಾಗಿ ಗುಣಮಟ್ಟದ ವಿಷಯದಲ್ಲಿ ವಹಿಸುವ ಕಾಳಜಿಯ ಬಗ್ಗೆ ಸಂದೇಹವಿದ್ದೇ ಇದೆ. ‘ಆ ಕಾಳಜಿಯನ್ನು ವಹಿಸಿದರೂ ಈ ಪ್ರಶ್ನೆ ಮುಗಿಯಿತು’, ಎಂದು ತಿಳಿದುಕೊಳ್ಳಲಾಗದು. ‘ವೈಲೆಂಟ್ ಫಾರ್ಮಾಸ್ಯುಟಿಕಲ್ಸ್’ನ ಮುಖ್ಯ ಕಾರ್ಯಕಾರಿ ಅಧಿಕಾರಿಗಳಾದ ಜೆ. ಮೈಕಲ್ ಪೀಯರ್ಸನ್ ಇವರು ೨೦೧೫ ನೇ ಇಸ್ವಿಯಲ್ಲಿ ಒಂದು ಸಂದರ್ಶನದಲ್ಲಿ, ‘ಫಾರ್ಮಾಸುಟಿಕಲ್ ಕಂಪನಿಗಳ ಕೆಲಸವು ತನ್ನ ಪಾಲುದಾರರಿಗೆ (shಚಿಡಿe hoಟಜeಡಿs) ಲಾಭವನ್ನು ಮಾಡಿ ಕೊಡುವುದಾಗಿದ್ದು ರೋಗಿಗಳ ಆರೋಗ್ಯಕ್ಕೆ ಅವರು ಹೊಣೆಗಾರರಲ್ಲ” ಎಂದಿದ್ದರು. ಆಧುನಿಕ ಔಷಧಗಳು ಲಾಭದಾಯಕ ವ್ಯವಸಾಯ ಎಂಬುದಕ್ಕೆ ಇದೊಂದು ಸ್ಪಷ್ಟ ಪುರಾವೆಯಾಗಿದೆ. ಅನಂತರ ಪೀಯರ್ಸನ್ ಇವರು ತೀವ್ರ ಟೀಕೆ ಗೊಳಗಾಗದರು. ಪ್ರತ್ಯಕ್ಷದಲ್ಲಿ ಅವರು ಸತ್ಯವನ್ನೇ ಬಹಿರಂಗಗೊಳಿಸಿದ್ದರು.

೪. ಔಷಧಿಗಳ ಸಂಶೋಧನೆಗಾಗಿ ಪ್ರಾಣಿಗಳನ್ನು ಬಲಿಕೊಡುವ ಆಧುನಿಕ ವೈದ್ಯಕೀಯಶಾಸ್ತ್ರಕ್ಕಿಂತ ಭಾರತೀಯ ಆಯುರ್ವೇದ ಶ್ರೇಷ್ಠವಾಗಿದೆ !

‘ಯಾವ ಕ್ಲಿನಿಕಲ್ ಟ್ರಯಲ್‌ಗಳ ಬಗ್ಗೆ ಆಧುನಿಕ ವೈದ್ಯರು ತಮ್ಮ ದೊಡ್ಡಸ್ತಿಕೆಯನ್ನು ಹೊಗಳಿ ತಾವು ಎಷ್ಟು ವಿಜ್ಞಾನನಿಷ್ಠರಾಗಿದ್ದೇವೆ’ ಎಂಬುದನ್ನು ಹೇಳುತ್ತಾರೆ, ಆದರೆ ಅದರ ಬಗ್ಗೆ ಇರುವ ಈ ಕರಾಳ ಮುಖವನ್ನು ಏಕೆ ಹೇಳುವುದಿಲ್ಲ? ಈ ಟ್ರಯಲ್ಸಗಳಲ್ಲಿ (ಪರೀಕ್ಷಣೆಗಳಲ್ಲಿ) ಕೊಲ್ಲಲ್ಪಟ್ಟ ಪ್ರಾಣಿಗಳಿಗೆ ‘ಹುತಾತ್ಮ’ ಎಂಬ ಪದವನ್ನು ನೀಡಲಾಗುತ್ತದೆ. ತಮ್ಮ ಲಾಭಕ್ಕಾಗಿ ಪ್ರಾಣಿಗಳನ್ನು ಬಲಿ ಕೊಡುವುದು, ಸ್ವಾರ್ಥದ ಪರಿಸೀಮೆಯೇ ಆಗಿದೆ ? ಅದರ ಬದಲು ಯಾವ ಆಯುರ್ವೇದದಲ್ಲಿ ಸಾವಿರಾರು ವರ್ಷಗಳ ಹಿಂದೆ ಆಗಿನ ವಿಜ್ಞಾನಿಗಳ ಮತ್ತು ಎಲ್ಲ ಪ್ರಾಣಿಮಾತ್ರರ ಕಾಳಜಿಯನ್ನು ವಹಿಸುವ ಋಷಿಗಳು ಯಾವ ಔಷಧಿಗಳನ್ನು ತಯಾರಿಸಿದ್ದಾರೆಯೋ, ಅವುಗಳನ್ನು ವೈಜ್ಞಾನಿಕ ‘ಪ್ರಯೋಗದಿಂದ ಸಿದ್ಧಮಾಡಿರಿ’, ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ. ಇಂತಹ ಪ್ರಯೋಗಗಳಿಗಾಗಿ ಕೋಟಿಗಟ್ಟಲೆ ಡಾಲರ್ಸಗಳ ದುಂದುವೆಚ್ಚ ಮಾಡುವುದು ಮತ್ತು ಬಹಳಷ್ಟು ಅಮಾಯಕ ಪ್ರಾಣಿಗಳನ್ನು ಬಲಿ ಕೊಡುವ ಕ್ರೌರ್ಯವನ್ನು ಆಯುರ್ವೇದ ಮಾಡುವುದಿಲ್ಲ. ಇದಕ್ಕಾಗಿ ಆಯುರ್ವೇದಕ್ಕೆ ಧನ್ಯವಾದವನ್ನೇ ಹೇಳಬೇಕು !

೫. ಔಷಧಿಗಳ ದುಷ್ಪರಿಣಾಮಗಳಿಂದ ರೋಗಿಗಳಿಗಾಗುವ ಹಾನಿಯ ಕಡೆಗೆ ಆಧುನಿಕ ವೈದ್ಯರು ಮತ್ತು ಔಷಧಿ ಕಂಪನಿಗಳು ದುರ್ಲಕ್ಷ್ಯಿಸುವುದು

ನಮ್ಮ ಮನಸ್ಸಿನಲ್ಲಿ ಸಹಜವಾಗಿ ಮುಂದಿನ ಪ್ರಶ್ನೆ ಬರಬಹುದು, ಯಾವಾಗ ಯಾವುದಾದರೊಂದು ಔಷಧದ ದುಷ್ಪರಿಣಾಮಗಳು ಮೇಲೆ ಹೇಳಿದ ಕ್ರಮಾಂಕ ೪ ರಲ್ಲಿ ಕಾಣಿಸು ತ್ತವೆಯೋ, ಅಲ್ಲಿಯವರೆಗೆ ಆ ಔಷಧವನ್ನು ಸೇವಿಸಿದ ರೋಗಿಗಳ ಪಾಡೇನು. ಅವರ ಆರೋಗ್ಯದ ಹಾನಿಗೆ ಯಾರು ಹೊಣೆ ?; ಆದರೆ ಇಂತಹ ಪ್ರಶ್ನೆಗಳನ್ನು ಕೇಳುವುದಿರುವುದಿಲ್ಲ ; ಏಕೆಂದರೆ ಆಧುನಿಕ ವೈದ್ಯರಿಂದ (ಡಾಕ್ಟರರಿಂದ) ಹಿಡಿದು ಔಷಧಗಳನ್ನು ತಯಾರಿಸುವ ಕಂಪನಿಗಳ ವರೆಗಿನ ಎಲ್ಲರೂ ಅದರ ಬಗ್ಗೆ ಮೌನವಾಗಿರುತ್ತಾರೆ.

ರ‍್ಯಾನಿಟಿಡಿನ್ ಸಂದರ್ಭದಲ್ಲಿ ಇದೇ ಘಟಿಸಿದೆ. ಅದರಲ್ಲಿನ ಯಾವುದಾದರೊಂದು ಘಟಕದಿಂದ ಅರ್ಬುದ ರೋಗ ಆಗುತ್ತದೆಯೋ, ಇಲ್ಲವೋ ಎಂಬುದರ ಕುರಿತು ಹೆಚ್ಚಿನ ಸಂಶೋಧನೆ ಆಗಬಹುದು; ಆದರೆ ‘ಈಗಿನ ಪರಿಸ್ಥಿತಿಯಲ್ಲಿ ಅದು ಹಾಗಿದೆ’ ಎಂದು ಹೇಳಲು ಸಾಧ್ಯವಿದೆ. ನಾವು ಈ ದುಷ್ಪರಿಣಾಮಗಳು ಅಂಕಿಗಳ ಭಾಷೆಯಲ್ಲಿ ದುರ್ಲಕ್ಷ ಮಾಡುವಂತಹವುಗಳು ಆಗಿರ ಬಹುದು. ಆ ಔಷಧದ ಒಳ್ಳೆಯ ಪರಿಣಾಮವನ್ನು ನೋಡಿದರೆ ಅದರ ದುಷ್ಪರಿಣಾಮಗಳು ತುಂಬಾ ಕಡಿಮೆ ಇವೆ ಎಂಬ ಯುಕ್ತಿವಾದವನ್ನು ಮಾಡಬಹುದು ಅಥವಾ ಈ ಪ್ರಕಾರದ ಔಷಧಗಳಲ್ಲಿ ಹಾನಿ ಅಥವಾ ಕೊಲೆಟರಲ್ ‘ಡ್ಯಾಮೇಜ್’ ಆಗುತ್ತಲೇ ಇರುತ್ತದೆ, ಎಂದೂ ಹೇಳಬಹುದು. ಯಾವಾಗ ಜೀವದ ಪ್ರಶ್ನೆ ಬರುತ್ತದೆಯೋ, ಆಗ ೧ ಅಂಕಿಯೂ ಮಹತ್ವದ್ದಾಗಿರುತ್ತದೆ. ಇದಕ್ಕೆ ಪ್ರಾಮಾಣಿಕವಾಗಿ ಯುಕ್ತಿವಾದ ಮಾಡುವವರು ಉತ್ತರಿಸಬೇಕು. ‘ಆಯುರ್ವೇದ’ವಾಗಿರಲಿ ಅಥವಾ ‘ಅಲೋಪತಿ’ಯಾಗಿರಲಿ, ಪ್ರತಿ ಯೊಂದು ವೈದಕೀಯಶಾಸ್ತ್ರದ ಮಹತ್ವವು ವಾದಾತೀತವಾಗಿದೆ. ಆದ್ದರಿಂದ ಈ ಪತಿಯುದ್ಧದಲ್ಲಿ ಪ್ರವೇಶಿಸುವ ಯಾವುದೇ ಉದ್ದೇಶ ನಮಗಿಲ್ಲ; ಆದರೆ ಕೆಲವು ಆಧುನಿಕ ವೈದ್ಯಕೀಯ ಪದವೀಧರರು ಉದ್ದೇಶಪೂರ್ವಕವಾಗಿ ಆಯುರ್ವೇದದ ವಿರುದ್ಧ ಆಧಾರರಹಿತ ಮತ್ತು ತಪ್ಪುದಾರಿಗೆಳೆಯುವ ಲೇಖನಗಳನ್ನು ಬರೆಯುವ ಮೂಲಕ ತಮ್ಮನ್ನು ತಾವು ಹೊಗಳಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ, ಅದೇ ಸಮಯದಲ್ಲಿ, ‘ಕ್ಲಿನಿಕಲ್ ಟ್ರಯಲ್ ಫೇಸ್ ೪’ನ ಬಗ್ಗೆ ಮಾತ್ರ ಅವರ ನಿರಂತರ ಮೌನವು ಅವರ ಉದ್ದೇಶದ ಬಗ್ಗೆ ಎಲ್ಲವನ್ನು ಹೇಳುತ್ತದೆ. ನಮ್ಮ ಮೇಲೆ ಬರುವ ಪ್ರಕಾಶವನ್ನು ತಪ್ಪಿಸಬೇಕಾಗಿದ್ದರೆ, ನಮಗೆ ಅದನ್ನು ಬೇರೆ ಯಾರಾದರು ಅಮಾಯಕರ ಮೇಲೆ ತಳ್ಳಬೇಕಾಗುತ್ತದೆ, ಇದೊಂದು ಕ್ರೂರ ಸತ್ಯವಾಗಿದೆ !’ – ವೈದ್ಯ ಪರೀಕ್ಷಿತ ಶೆವಡೆ, ಆಯುರ್ವೇದ ವಾಚಸ್ಪತಿ, ಡೊಂಬಿವಲಿ.
(ಆಧಾರ : ದೈನಿಕ ‘ತರುಣ ಭಾರತ’, ೬.೧೦.೨೦೧೯)