ಹೆಚ್ಚುವರಿ ‘ಪ್ರೋಟಿನ್’ ಪಡೆಯಲು ಪ್ರಯತ್ನಿಸುತ್ತಿದ್ದೀರಾ, ಎಚ್ಚರ !

ದಿನದ ‘ಪ್ರೋಟಿನ್‌’ಅನ್ನು ಪೂರ್ಣಗೊಳಿಸುವ ಸೆಳೆತವು ‘ಜಿಮ್‌’ಗೆ (ಆಧುನಿಕ ವ್ಯಾಯಾಮಶಾಲೆಯಲ್ಲಿ) ಹೋಗುವ ಅನೇಕ ಜನರಲ್ಲಿ ಕಂಡುಬರುತ್ತದೆ. ಇದರಲ್ಲಿ ಅಲ್ಲಿರುವ ತರಬೇತಿ ಶಿಕ್ಷಕರು ಹೇಳಿದ ವಿವಿಧ ಆಹಾರಗಳು ಅವರ ಜ್ಞಾನವನ್ನು ಹೆಚ್ಚಿಸುವುದಕ್ಕಿಂತ ‘ಸ್ಟ್ರೆಂಥ್‌ ಟ್ರೇನಿಂಗ್‌’ನಲ್ಲಿ (ಸ್ನಾಯುಗಳನ್ನು ಬಲಪಡಿಸುವ ತರಬೇತಿ) ಕಳೆದು ಕೊಂಡ ಸ್ನಾಯುಗಳನ್ನು ಪುನಃ ಪಡೆಯಲು ಮತ್ತು ಇನ್ನೂ ಹೆಚ್ಚಿಸಲು ಪ್ರಾರಂಭಿಸಲಾಗುತ್ತದೆ. ‘ಥೈರಾಯ್ಡ್‌’ನ ಸ್ಥಿತಿ ಹದಗೆಟ್ಟ ರೋಗಿಗಳಿಗೆ ಕಾಲುಕಿಲೋ ಪನೀರ್‌ ಮತ್ತು ೮ ಮೊಟ್ಟೆಗಳನ್ನು ಪ್ರತಿದಿನ ಸೇವಿಸಲು ಹೇಳಲಾಗುತ್ತದೆ. ಇದರಿಂದಾಗಿ ಆ ಬಗೆಗಿನ ಪರೀಕ್ಷಣೆಯ ವರದಿಯು ಕೆಲವು ಸಮಯ ಯೋಗ್ಯವಾಗಿದ್ದರೂ ಆ ಆಹಾರದ ಸೇವನೆಯ ಸಾತತ್ಯ, ಅವರ ಅವಯವಗಳ ಮೇಲಾಗುವ ಪರಿಣಾಮ, ಶರೀರದಲ್ಲಿ ಕಂಡುಬರುವ ಆಮ್ಲಪ್ರಧಾನ ಬದಲಾವಣೆ ಮತ್ತು ಅವನ ಮೂಳೆಗಳ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ವಿಚಾರ ಮಾಡಬೇಕು. ಯಾವುದೇ ಆಹಾರವನ್ನು ಪ್ರಾರಂಭಿಸುವಾಗ ಅದರಲ್ಲಿನ ಸ್ಥಿರತೆಯೂ ಮಹತ್ವದ್ದಾಗಿದೆ. ಆಯುರ್ವೇದದಲ್ಲಿ ಇದರ ಬಗ್ಗೆ ತುಂಬಾ ಆಳವಾಗಿ ವಿಚಾರ ಮಾಡಲಾಗುತ್ತದೆ. ಆದ್ದರಿಂದ ಆ ನಿರ್ದಿಷ್ಟ ಆಹಾರವನ್ನು ನಿಯಮಿತ ವಾಗಿಡಲು ದೀರ್ಘಕಾಲದ ವರೆಗೆ ಸಮಾವೇಶ ಮಾಡಬಹುದು.

(ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ

೧. ಹೆಚ್ಚುವರಿ ‘ಪ್ರೋಟಿನ್‌’ನಿಂದ ದುಷ್ಪರಿಣಾಮವಾಗುವ  ಸಾಧ್ಯತೆ

ಭಾರತದಂತಹ ಉಷ್ಣ ಕಟಿಪ್ರದೇಶ ದೇಶದಲ್ಲಿ ‘ಪ್ರೋಟೀನ್’ ಜೀರ್ಣಿಸಿಕೊಳ್ಳಲು ಹವಾನಿಯಂತ್ರಿತ ಕೋಣೆಯಲ್ಲಿ ವ್ಯಾಯಾಮ ಮಾಡುವುದು ಮತ್ತು ನಂತರ ಆ ವ್ಯಾಯಾಮದಿಂದ ಚೇತರಿಸಿಕೊಳ್ಳಲು ಪುನಃ ‘ಪ್ರೋಟೀನ್’ ಸೇವಿಸುತ್ತಿರುವುದು, ಇದರಲ್ಲಿ ನಮ್ಮ ಋತು ಮತ್ತು ಉಷ್ಣ ಹವಾಮಾನದಿಂದಾಗುವ ಅಗ್ನಿಯ ಮೇಲಿನ ಪರಿಣಾಮಗಳ ವಿಚಾರವನ್ನೇ ಮಾಡುವುದಿಲ್ಲ. ಇಂತಿಷ್ಟು ಗ್ರಾಮ್‌ ಚಿಕನ್, ಇಂತಿಷ್ಟು ಮೊಟ್ಟೆ, ಇಂತಿಷ್ಟು ಚಮಚ ‘ಪ್ರೋಟೀನ್‌ ಪೌಡರ್’ ಇದರಿಂದ ಪಡೆದ ಹೆಚ್ಚಿನ ಸ್ನಾಯುಗಳ ಬಲಪಡಿಸುವಿಕೆಯಿಂದ ಆರೋಗ್ಯ ಲಭಿಸುತ್ತದೆಯೇ ? ಎಂಬುದು ಸಂದೇಹವೇ ಇದೆ.

ಮಾಸಿಕ ಸರದಿಯ ಸಮಸ್ಯೆ ಇರುವ ಹೆಣ್ಣುಮಕ್ಕಳಿಗೆ ಈ ರೀತಿಯಲ್ಲಿ ನೀಡಿದ ಆಹಾರವನ್ನು ನಿಲ್ಲಿಸಿ ಆಯುರ್ವೇದದ ಔಷಧೋಪಚಾರವನ್ನು ಮಾಡಿದರೆ ಅವರಲ್ಲಿ ಈ ವಿಷಯದ ಸಮಸ್ಯೆಗಳು ಬೇಗ ಕಡಿಮೆಯಾಗುತ್ತವೆ. ಮೂಲದಲ್ಲಿ ಅತೀ ಹೆಚ್ಚಾಗಿರುವ ‘ಮಸಲ್’ (ಸ್ನಾಯು) ಇದು ‘ಅಂಡ್ರೋಜೆನ್’ (ಒಂದು ರೀತಿಯ ಹಾರ್ಮೋನ್) ಹೆಚ್ಚಿಸುತ್ತದೆ, ಆ ಕಾಯಿಲೆಯಲ್ಲಿ ಮೊದಲೇ ಹೆಚ್ಚಾಗಿರುವ ಸಾಧ್ಯತೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ‘ಹಾರ್ಮೋನ್’ ಮತ್ತು ಪ್ರತಿಜೈವಿಕಗಳಿಂದ ಕಲುಷಿತಗೊಂಡಿರುವ ಮಾಂಸ, ಮೊಟ್ಟೆ ಮತ್ತು ಕಲಬೆರಕೆ ಪನೀರ್‌ ಈ ಎಲ್ಲ ತೊಂದರೆಗಳು ವಿವಿಧ ಮಾರ್ಗಗಳಿಂದ ಹೆಚ್ಚಿಸುತ್ತಿರುತ್ತವೆ ಮತ್ತು ಹೆಚ್ಚಿಸುತ್ತವೆ.

೨. ಪ್ರತಿದಿನದ ಆಹಾರದಿಂದ ‘ಪ್ರೋಟೀನ್’ ಸಿಗುವುದು ಮಹತ್ವದ್ದಾಗಿದೆ !

ಯಾರು ಕುಳಿತುಕೊಂಡು ಕೆಲಸ ಮಾಡುತ್ತಾರೆ, ಯಾರು ವ್ಯಾಯಾಮವನ್ನು ಕಡಿಮೆ ಮಾಡುತ್ತಾರೆ, ತಿಂದಿರುವುದು ಜೀರ್ಣವಾಗ ದಿರುವುದರಿಂದ ನಿಶಕ್ತಿ ಎನಿಸುವುದರಿಂದ ಶಕ್ತಿ ಅಥವಾ ಉತ್ಸಾಹ ಸಿಗಬೇಕೆಂದು ‘ಪ್ರೋಟೀನ್‌ ಪೌಡರ್’ ತಿನ್ನುತ್ತಾರೆ. ನಂತರ ಶನಿವಾರ-ರವಿವಾರದಂದು ಹೊರಗೆ ‘ಜಂಕ್‌ ಫುಡ್’ (ಪಿಜ್ಜಾ, ಬರ್ಗರ್‌ ಮುಂತಾದವುಗಳನ್ನು) ಸೇವಿಸುತ್ತಾರೆ. ಪ್ರೋಟೀನ್‌ ಸೇವನೆಯಿಂದ ಶರೀರಕ್ಕೆ ಲಾಭವಾಗುವುದಿಲ್ಲ. ಅದರ ರೂಪಾಂತರ ಕೊನೆಗೆ ಕೊಬ್ಬಿನಲ್ಲಾಗುವುದು ಇದು ಖಂಡಿತ. ‘ಹಾಗಾದರೆ ನಾವು ಪ್ರೋಟೀನ್‌ ಎಲ್ಲಿಂದ ಪಡೆಯುವುದು ? ಎಂಬ ಪ್ರಶ್ನೆಗೆ ಪ್ರತಿದಿನದ ಆಹಾರದಲ್ಲಿ ಹಾಲು, ಹಾಲಿನ ಪದಾರ್ಥಗಳು, ಮಜ್ಜಿಗೆ, ಧಾನ್ಯ, ಬೇಳೆಕಾಳು ಇವುಗಳಿಂದ ಕುಳಿತು ಕೆಲಸ ಮಾಡುವವರಿಗೆ ಸ್ವಲ್ಪ ವ್ಯಾಯಾಮ ಮಾಡಲಿಕ್ಕೆ ಸಾಕಾಗುವಷ್ಟು ‘ಪ್ರೋಟೀನ್. ಸಿಗುತ್ತದೆ. ಎರಡು ಸಮಯದ ಆಹಾರವು ನಾಲ್ಕು ರಸಗಳಿಂದ ಯುಕ್ತವಾಗಿರಬೇಕು, ಇದು ಅದರ ಮೂಲವಾಗಿದೆ !

ಕೇವಲ ‘ಪ್ರೋಟೀನ್’ ಹೆಚ್ಚಿಸುವಾಗ ಪೌಡರನಲ್ಲಿ ಸಿಹಿಯನ್ನು ತರಲು ಬಳಸಲಾಗುವ ಘಟಕಗಳು (ಸ್ವೀಟ್ನರ) ಅಥವಾ ‘ಸ್ಟಿರೈಡಸ್’ ಬಳಸುವುದರಿಂದ ಉದ್ಭವಿಸುವ ಪುರುಷ ಬಂಜೆತನ, ಮೂತ್ರಪಿಂಡ ಮತ್ತು ಮೂಳೆಗಳ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ವಿಚಾರ ಮಾಡುವುದು ಮಹತ್ವದ್ದಾಗಿದೆ !

– ವೈದ್ಯೆ (ಸೌ.) ಸ್ವರಾಲಿ ಶ್ಯೆಂಡೆ, ಯಶಪ್ರಭಾ ಆಯುರ್ವೇದ, ಪುಣೆ. (೩೦.೧೧.೨೦೨೪)