‘ಎಚ್.ಎಮ್.ಪಿ.ವಿ.’ (‘ಹ್ಯುಮನ್ ಮೆಟಾ ಪನ್ಯೂಮೋ ವೈರಸ್’) ಈ ರೋಗದ ಬಗ್ಗೆ ಒಂದು ಸುದ್ದಿ ಪ್ರಸ್ತುತ ವಾಟ್ಸ್ ಆಪ್‌ನಲ್ಲಿ ಓಡಾಡುತ್ತಿದೆ. ಕಳೆದ ತಿಂಗಳಲ್ಲಿ ತೊಂದರೆದಾಯಕ, ತಕ್ಷಣ ಕಡಿಮೆಯಾಗದ ಕೆಮ್ಮು-ಶೀತದ ರೋಗಿಗಳ ಸಂಖ್ಯೆ ಹೆಚ್ಚಾಗಿದೆ, ಎಂಬುದು ಪ್ರಸ್ತುತ ಕಂಡುಬರುತ್ತಿದೆ. ಪ್ರತಿಯೊಬ್ಬರ ಈ ರೀತಿ ‘ಸ್ಕ್ರಿನಿಂಗ್’ (ತಪಾಸಣೆ ಆಗದೇ ಇದ್ದಿರಬಹುದು ಮತ್ತು ‘ವೈರಸ್ ಸ್ಟ್ರೇನ್’ (ವಿಷಾಣುಗಳ ವಿಧ) ಗೊತ್ತಾಗದಿದ್ದರೂ ಸಾಧ್ಯವಿದ್ದಷ್ಟು ನಾವು ಕಾಳಜಿ ವಹಿಸುವುದು ಆವಶ್ಯಕವಾಗಿದೆ. ‘ಮಾರಣಾಂತಿಕ’ವಲ್ಲದಿದ್ದರೂ ಅದನ್ನು ದುರ್ಲಕ್ಷಿಸಿ ಮುಂದೆ ಶಾಶ್ವತವಾಗಿ ರಚನಾತ್ಮಕ / ಕ್ರಿಯಾತ್ಮಕ / ಮಾರಣಾಂತಿಕ ಬದಲಾವಣೆ ಯಾಗಬಾರದು, ಎಂಬ ದೃಷ್ಟಿಯಿಂದ ‘ತೊಂದರೆದಾಯಕ’ ಈ ಸಂದರ್ಭದಲ್ಲಿಯೂ ಆರೋಗ್ಯದ ದೃಷ್ಟಿಯಿಂದ ಗಮನ ಹರಿಸುವುದು ಆವಶ್ಯಕವಾಗಿದೆ. ಇಲ್ಲಿ ನೀಡಲಾಗಿರುವ ಸೂಚನೆಯು ಸಾಮಾನ್ಯ ನೆಗಡಿ, ಕೆಮ್ಮು ಮತ್ತು ‘ಕೋವಿಡ್’ ಮಹಾಮಾರಿಯ ಸಂದರ್ಭದಂತೆಯೇ ಇವೆ. ಕೆಲವು ರೋಗಿಗಳು ಕೇಳಿದ ಕಾರಣ ಅದೇ ಸೂಚನೆಗಳನ್ನು ಪುನಃ ಕೊಡುತ್ತಿದ್ದೇವೆ.
೧. ಲಕ್ಷಣಗಳು ಕಾಣಿಸಿದ ಕೂಡಲೇ ನಾವು ಮನೆಯ ಕುಟುಂಬ ದವರಿಂದ ಪ್ರತ್ಯೇಕವಿರಬೇಕು.
೨. ಕೆಮ್ಮುವಾಗ, ಸೀನುವಾಗ ಬಾಯಿಗೆ ಕೈಯನ್ನು ಅಡ್ಡವಿಡಬೇಕು. ನೀವು ಒಟ್ಟಿಗೆ ಭೇಟಿಯಾಗಲು ಹೋಗುತ್ತಿದ್ದರೆ ಮತ್ತು ತಮ್ಮಲ್ಲಿ ಇಂತಹ ಲಕ್ಷಣಗಳು ಕಂಡುಬಂದಿದ್ದರೆ ಜನರ ನಡುವೆ ಹೋಗು ವುದನ್ನು ತಪ್ಪಿಸಬೇಕು. ಒಂದು ವೇಳೆ ಹೋಗಲೇ ಬೇಕಾದರೆ, ಇತರರಿಂದ ಸ್ವಲ್ಪ ದೂರವಿದ್ದು ಮಾತನಾಡುವುದು, ಮುಖಪಟ್ಟಿ (‘ಮಾಸ್ಕ’)ಯನ್ನು ಬಳಸುವುದು, ತಾವು ಬಳಸಿದ ಕರವಸ್ತ್ರವನ್ನು ಅಲ್ಲಲ್ಲಿ ಎಸೆಯದಿರುವುದು ಮುಂತಾದ ಕಾಳಜಿ ವಹಿಸಬೇಕು.
೩. ಬೆಚ್ಚಗಿನ ನೀರಿನಲ್ಲಿ ಅರಿಶಿನವನ್ನು ಹಾಕಿ ಬಾಯಿ ಮುಕ್ಕಳಿಸಬೇಕು. ಗಂಟಲು ನೋಯುತ್ತಿದ್ದರೆ ಕಫ ಗಂಟಲಿನಲ್ಲಿ ಸಂಗ್ರಹವಾಗದಂತೆ ಉಗುರುಬೆಚ್ಚಗಿನ ನೀರನ್ನು ಕುಡಿಯಬೇಕು.
೪. ಗಂಟಲು ಮತ್ತು ಬಾಯಿಯಲ್ಲಿನ ಶುಷ್ಕತೆಯನ್ನು ನಿವಾರಿಸಲು ಒಣದ್ರಾಕ್ಷಿಗಳನ್ನು ತಿನ್ನಬೇಕು. ಗಂಟಲಿನಲ್ಲಿ ಉರಿ ಮತ್ತು ಕೆರೆತ ಹೆಚ್ಚಿದ್ದರೆ, ಬಿಸಿನೀರನ್ನು ಸತತ ಕುಡಿಯಬಾರದು.
೫. ಚಿಟಿಕೆಯಷ್ಟು ಶುಂಠಿ ಮತ್ತು ಅರಿಶಿನವನ್ನು ಬೆಚ್ಚಗಿನ ನೀರಿನಲ್ಲಿ ಹಾಕಿ ಬೆಳಗ್ಗೆ-ಸಾಯಂಕಾಲ ಕುಡಿಯಬೇಕು.

೬. ರಾತ್ರಿ ವೇಳೆ ಅರಿಶಿಣ ಮಿಶ್ರಿತ ಹಾಲು ಕುಡಿಯಬಾರದು. ಸಾಮಾನ್ಯವಾಗಿ ಕಫವನ್ನು ಹೆಚ್ಚಿಸುವ ಆಹಾರಗಳಾದ ಹಾಲು, ಹಣ್ಣುಗಳು, ಮೊಸರು, ಎಳನೀರು ಇವುಗಳನ್ನು ಸಾಯಂಕಾಲದ ನಂತರ ಸೇವಿಸಬಾರದು. ಅನಾರೋಗ್ಯದಿಂದ ಬಳಲುತ್ತಿದ್ದರೆ ಸೇವಿಸಲೇಬಾರದು. ಜಿಗುಟು, ಹಾಗೆಯೇ ದಾಹ ಹೆಚ್ಚಿಸುವ ಚೀಜ್, ಮೆಯೋ, ಉಪ್ಪಿನಕಾಯಿ, ಹುದುಗಿಸಿದ (ಉದ್ದಿನ ಇಡ್ಲಿ, ದೋಸೆ) ಮತ್ತು ಮೈದಾ ಮೊದಲಾದವುಗಳನ್ನು ಸ್ವಲ್ಪವೂ ತಿನ್ನಬೇಡಿ.
೭. ನೀರಿನಿಂದ ನಿರಂತರವಾಗಿ ಹಬೆಯನ್ನು ತೆಗೆದುಕೊಂಡಾಗ, ನೀರು ಗಂಟಲಿನಲ್ಲಿ ಸಿಲುಕಿಕೊಂಡು ಕಿರಿಕಿರಿ ಉಂಟುಮಾಡುತ್ತದೆ. ಮೂಗು ಕಡಿತಕ್ಕೆ, ತಲೆನೋವಿಗೆ ಮುಲಾಮು ಹಚ್ಚುವುದು ಮತ್ತು ಒಣ ಶಾಖ ನೀಡುವುದು ಹೆಚ್ಚು ಉಪಯುಕ್ತವಾಗಿದೆ.
೮. ಇಂತಹ ಸಮಯದಲ್ಲಿ ಮಕ್ಕಳಿಗೆ ಹಣ್ಣುಗಳನ್ನು ಕೊಡಬಾರದು. ಕಫ ಕಡಿಮೆ ಮಾಡುವ ‘ಮ್ಯುಕೋಲೈಟ್ ಕಫ್ ಸಿರಪ್’ (ಒಂದು ದ್ರವ ಔಷಧ) ಅಥವಾ ಸಿರಪ್ಪ ಅನ್ನು ತಪಾಸಣೆ ಮಾಡದೇ ಅಥವಾ ಕೇಳದೇ ಸೇವಿಸಬಾರದು ಒಂದು ಬದಿಯಲ್ಲಿ ಶುಷ್ಕತೆ ಹೆಚ್ಚಾಗಿ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಲೇಹಪದ್ಧತಿಯಿಂದ ನೀಡಿದ ಔಷಧಿಗಳ ಮತ್ತು ವೈದ್ಯಕೀಯ ಸಲಹೆಗನುಸಾರ ತೆಗೆದುಕೊಂಡ ಕೆಲವು ಕಷಾಯಗಳ ಒಳ್ಳೆಯ ಉಪಯೋಗವಾಗುತ್ತದೆ.
೯. ಜ್ವರ ಕಡಿಮೆಯಾದ ನಂತರ ಬರುವ ಆಯಾಸವನ್ನು ಕಡಿಮೆ ಮಾಡಲು ಅರಳಿನ ನೀರು, ಖರ್ಜುರದ ನೀರನ್ನು ಕುಡಿಯಬೇಕು. ಕೇವಲ ಜ್ವರ ಬಂದು ಹೋಗಿದ್ದರೆ ಮತ್ತು ನೆಗಡಿ, ಕೆಮ್ಮು ಇಲ್ಲದಿದ್ದರೆ, ಶಕ್ತಿ ಬರಲು ಹಣ್ಣಿನ ರಸ, ದಾಳಿಂಬೆ ಹಣ್ಣಿನ ರಸ, ಒಣದ್ರಾಕ್ಷಿಗಳನ್ನು ನೀರಲ್ಲಿ ಹಾಕಿ ಕುಡಿಯಬಹುದು.
೧೦. ಚಳಿಯ ದಿನಗಳಲ್ಲಿ ಮಕ್ಕಳಿಗೆ ಬೆಳಗ್ಗೆ ಶಾಲೆ ಇರುವಾಗ ಬೆಳಿಗ್ಗೆ ಸ್ನಾನ ಮಾಡುವಂತೆ ಒತ್ತಾಯಿಸಬಾರದು.
ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ತಮ್ಮ ವೈದ್ಯರ ಸಲಹೆಯಿಂದ ತಕ್ಷಣ ಔಷಧಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಬೇಕು. ಪ್ರಸ್ತುತ ದೀರ್ಘಕಾಲದ ಜ್ವರದ ನಂತರ ಕಾಡುವ ಒಣಕೆಮ್ಮು, ಇದರ ಲಕ್ಷಣವಾಗಿದೆ. ಜ್ವರ ಕಡಿಮೆಯಾದ ತಕ್ಷಣ ಔಷಧಿಗಳನ್ನು ನಿಲ್ಲಿಸದೇ ಸಂಪೂರ್ಣ ರೋಗ ಲಕ್ಷಣಗಳನ್ನು ನಿಯಂತ್ರಿಸಲು ಕಾಳಜಿ ವಹಿಸಬೇಕು.
– ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ. (೭.೧.೨೦೨೫)