‘ವಿವೇಕ’ ಯೋಜನೆಯ ಅಡಿಯಲ್ಲಿ ಕಟ್ಟಿರುವ ೭ ಸಾವಿರ ೫೦೦ ತರಗತಿಯ ಕೊಠಡಿಗಳಿಗೆ ಕೇಸರಿ ಬಣ್ಣ ಹಚ್ಚುವರು ! – ಕರ್ನಾಟಕದ ಶಿಕ್ಷಣ ಸಚಿವ ಬಿ.ಸಿ. ನಾಗೇಶ

ಬೆಂಗಳೂರು – ಕರ್ನಾಟಕದ ಸರಕಾರಿ ಶಾಲೆಗಳಲ್ಲಿ ‘ವಿವೇಕ’ ಯೋಜನೆಯ ಅಡಿಯಲ್ಲಿ ೭ ಸಾವಿರ ೫೦೦ ಹೊಸ ತರಗತಿ ಕೊಠಡಿಯ ಕಾಮಗಾರಿ ನಡೆಯುತ್ತಿದೆ. ಈ ಕೋಠಡಿಗಳಿಗೆ ಕೇಸರಿ ಬಣ್ಣ ಹಚ್ಚಲಾಗುವುದು ಕೇಸರಿ ಬಣ್ಣದ ಆಯ್ಕೆ ವಾಸ್ತು ವಿಷಾರದರ ಸಲಹೆ ಮೇರೆಗೆ ಮಾಡಲಾಗುತ್ತಿದೆ, ಎಂದು ಕರ್ನಾಟಕದ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ ಇವರು ಮಾಹಿತಿ ನೀಡಿದರು. ಉತ್ತರ ಕರ್ನಾಟಕದ ಗದಗ ಜಿಲ್ಲೆಯ ಒಂದು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಕಾಂಗ್ರೆಸ್ ಪಕ್ಷವು ನಾಗೇಶ ಅವರ ಹೇಳಿಕೆಯ ಬಗ್ಗೆ ಭಾಜಪವನ್ನು ಟೀಕಿಸಿದೆ. ಈ ವಿಷಯವಾಗಿ ಪ್ರತಿಕ್ರಿಯೆ ನೀಡುವಾಗ ಶಿಕ್ಷಣ ತಜ್ಞರಾದ ನಿರಂಜನರಾಧ್ಯ ವಿ.ಪಿ. ಯವರು ಶಿಕ್ಷಣದ ಕೇಸರಿಕರಣ ಆಗುತ್ತಿರುವುದು ಇದು ಒಂದು ಹೊಸ ಪ್ರಕಾರ ಎಂದು ಹೇಳಿದ್ದಾರೆ.

ಕೇಸರಿ ಬಣ್ಣ ನೋಡಿ ಕಾಂಗ್ರೆಸ್ ಎಷ್ಟೊಂದು ಏಕೆ ದುಃಖಿತವಾಗುತ್ತದೆ ? ! – ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರು, “ಇಂತಹ ವಿಷಯದಲ್ಲಿ ರಾಜಕೀಯ ಮಾಡುವುದು ಯೋಗ್ಯವಲ್ಲ. ನಮ್ಮ ರಾಷ್ಟ್ರ ಧ್ವಜದ ಬಣ್ಣ ಕೆಸರಿಯಾಗಿದೆ. ಕೇಸರಿ ಬಣ್ಣ ನೋಡಿ ಕಾಂಗ್ರೆಸ್ ಏಕೆ ಇಷ್ಟೊಂದು ದುಃಖ ಪಡುತ್ತದೆ ? ‘ನಾವು ತರಗತಿ ಕೊಠಡಿಗಳನ್ನು ಕಟ್ಟಿಸಿ ಅವುಗಳನ್ನು ಸ್ವಾಮಿ ವಿವೇಕಾನಂದರಿಗೆ ಸಮರ್ಪಿಸುತ್ತಿದ್ದೇವೆ. ಅವರು ಕಾವಿ ತೊಟ್ಟಿರುವ ಸಂತರಾಗಿದ್ದರು.” ಎಂದು ಹೇಳಿದರು.

ಸಂಪಾದಕೀಯ ನಿಲುವು

ಮೈಸೂರಿನಲ್ಲಿನ ಮಸೀದಿಯ ಆಕಾರದಲ್ಲಿರುವ ಬಸ್ಸು ನಿಲ್ದಾಣದ ಬಗ್ಗೆ ಒಂದೇ ಒಂದು ಶಬ್ದವು ಮಾತನಾಡದೇ ಇರುವರು ಈಗ ಎಲ್ಲರಿಗೂ ಮಾತು ಬಂದರೆ ಇದರಲ್ಲಿ ಆಶ್ಚರ್ಯವೇನು ಇಲ್ಲ !