ಟರ್ಕಿಯಲ್ಲಿ ನಡೆದ ಸ್ಫೋಟದಲ್ಲಿ ೬ ಜನರು ಸಾವನ್ನಪ್ಪಿದರೇ ೮೧ ಜನರಿಗೆ ಗಾಯ

ಇಸ್ತಾಂಬೂಲ್ (ಟರ್ಕಿ) – ಇಲ್ಲಿಯ ತಕಸಿಮ ಪ್ರದೇಶದಲ್ಲಿ ನವಂಬರ್ ೧೩ ರಂದು ಸಂಜೆ ನಡೆದ ಸ್ಫೋಟದಲ್ಲಿ ೬ ಜನರು ಸಾವನ್ನಪ್ಪಿದರೇ ೮೧ ಜನರು ಗಾಯಗೊಂಡರು. ಟರ್ಕಿಯ ರಾಷ್ಟ್ರಧ್ಯಕ್ಷ ರೆಸೆಪ್ ತಯ್ಯಿಪ್ ಏರ್ದೋಗಾನ್ ಇವರು ಈ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿ ‘ಅಪರಾಧಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು’, ಎಂಬ ಆಶ್ವಾಸನೆ ನೀಡಿದ್ದಾರೆ. ಭಾರತವು ಕೂಡ ಈ ಘಟನೆಯ ಬಗ್ಗೆ ಸಂತಾಪ ಸೂಚಿಸುತ್ತಾ ‘ಈ ಘಟನೆಯಲ್ಲಿ ಸಾವನ್ನಪ್ಪಿರುವ ಜನರ ಬಗ್ಗೆ ನಮಗೆ ಶೋಕವಿದೆ ಹಾಗೂ ಗಾಯಗೊಂಡಿರುವ ಜನರ ಬಗ್ಗೆ ನಾವು ಸಹಾನುಭೂತಿ ವ್ಯಕ್ತಪಡಿಸುತ್ತೇವೆ. ಗಾಯಗೊಂಡಿರುವ ಜನರು ಆದಷ್ಟು ಬೇಗನೆ ಗುಣಮುಖರಾಗಲಿ, ಎಂದು ಪ್ರಾರ್ಥನೆ ಮಾಡುತ್ತೇವೆ,’ ಎಂದು ಭಾರತದ ವಿದೇಶಾಂಗ ಖಾತೆಯ ವಕ್ತಾರರಾದ ಅರಿಂದಮ್ ಬಾಗಚಿ ಇವರು ಟ್ವಿಟ್ ಮಾಡಿದ್ದಾರೆ.