ಟಿಪ್ಪು ಸುಲ್ತಾನನ ಪುತ್ತಳಿಯನ್ನು ಸ್ಥಾಪಿಸಿದರೆ ಅದನ್ನು ಕಿತ್ತೆಸೆಯುತ್ತೇವೆ ! – ಪ್ರಮೋದ ಮುತಾಲಿಕರ ಎಚ್ಚರಿಕೆ

ಕಾಂಗ್ರೆಸ್‌ನ ಶಾಸಕ ತನ್ವೀರ ಸೇಠರ ಬೇಡಿಕೆಗೆ ವಿರೋಧ

ಹುಬ್ಬಳ್ಳಿ – ಕಾಂಗ್ರೆಸ್ ಶಾಸಕ ತನ್ವೀರ ಸೇಠ ಇವರು ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಕ್ರೂರಕರ್ಮಿ ಟಿಪ್ಪು ಸುಲ್ತಾನನ ೧೦೦ ಅಡಿ ಎತ್ತರದ ಪುತ್ತಳಿಯನ್ನು ಸ್ಥಾಪಿಸುವಂತೆ ಬೇಡಿಕೆ ಮಾಡಿದ್ದಾರೆ. ಇದಕ್ಕೆ ಶ್ರೀರಾಮ ಸೇನೆಯ ಮುಖಂಡ ಶ್ರೀ. ಪ್ರಮೋದ ಮುತಾಲಿಕ ಇವರು ‘ಟಿಪ್ಪು ಸುಲ್ತಾನನ ಪುತ್ತಳಿಯನ್ನು ಸ್ಥಾಪಿಸಿದರೆ ನಾವು ಅದನ್ನು ಕಿತ್ತು ಎಸೆಯುತ್ತೇವೆ. ಅಯೋಧ್ಯೆಯಲ್ಲಿ ಬಾಬರಿಯನ್ನು ಯಾವ ರೀತಿ ಕೆಡವಲಾಯಿತೋ, ಅದೇ ರೀತಿ ಆ ಪ್ರತಿಮೆಯನ್ನು ಕೂಡ ಕೆಡವಲಾಗುವುದು’, ಎಂದು ಎಚ್ಚರಿಕೆಯನ್ನು ನೀಡಿದರು. ಅವರು ಅಲ್ಲಿಯ ಈದ್ಗಾ ಮೈದಾನದಲ್ಲಿ ಕನಕದಾಸ ಜಯಂತಿಯ ನಿಮಿತ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಶ್ರೀ ಮುತಾಲಿಕರು ತಮ್ಮ ಮಾತನ್ನು ಮುಂದುವರಿಸುತ್ತಾ, ಟಿಪ್ಪು ಒಬ್ಬ ಮತಾಂಧ ರಾಜನಾಗಿದ್ದನು. ಆತ ಹಿಂದೂಗಳ ಸಾವಿರಾರು ಮಂದಿರಗಳನ್ನು ಧ್ವಂಸಗೊಳಿಸಿದನು. ಕರ್ನಾಟಕಕ್ಕಾಗಿ ಆತ ಕಪ್ಪು ಚುಕ್ಕೆಯಾಗಿದ್ದನು. ಮೈಸೂರಿನ ರಾಜರುಗಳ ಅಪಮಾನವಾಗುವಂತೆ ಆ ಪುತ್ತಳಿಯನ್ನು ಆ ನಗರದಲ್ಲಿ ನಿರ್ಮಿಸಬಾರದು. ಸರಕಾರವು ಟಿಪ್ಪುವಿನ ಪುತ್ತಳಿಯ ವಿಚಾರ ಮಾಡಬಾರದು. ಅದಕ್ಕಿಂತ ಭಾರತೀಯ ತತ್ವಜ್ಞ ಶಿಶುನಾಳ ಶರೀಫ ಮತ್ತು ಮಾಜಿ ರಾಷ್ಟ್ರಪತಿ ಅಬ್ದುಲ ಕಲಾಮ ಇವರ ಪುತ್ತಳಿಯನ್ನು ನಿರ್ಮಿಸಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ಕಾಂಗ್ರೆಸ್‌ನ ಒಬ್ಬ ಮುಸಲ್ಮಾನ ಮುಖಂಡನಾದರೂ ಎಂದಾದರೂ ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ ಪ್ರತಾಪ ಮುಂತಾದ ರಾಷ್ಟ್ರಪುರುಷರ ಪುತ್ತಳಿಯನ್ನು ಸ್ಥಾಪಿಸುವ ಬೇಡಿಕೆಯನ್ನು ಮಾಡಿದ್ದಾರೆಯೇ ?