‘ಯೂ ಟ್ಯೂಬ್’ನಲ್ಲಿ ನ್ಯಾಯಾಲಯಕ್ಕೆ ಅವಮಾನಿಸಿದ ಆರೋಪಿಗೆ ಶಿಕ್ಷೆ ವಿಧಿಸಿ ಮದ್ರಾಸ್ ಉಚ್ಚ ನ್ಯಾಯಾಲಯ ಸಿದ್ಧಪಡಿಸಿದ ವಿಭಿನ್ನತೆ !

ಇತ್ತೀಚೆಗೆ ಮದ್ರಾಸ್ ಉಚ್ಚ ನ್ಯಾಯಾಲಯದ ಮದುರೈ ವಿಭಾಗೀಯ ಪೀಠದ ದ್ವಿಸದಸ್ಯ ಪೀಠವು ನ್ಯಾಯಾಲಯ ಮತ್ತು ನ್ಯಾಯಾಧೀಶರನ್ನು ‘ಯೂ ಟ್ಯೂಬ್’ನಲ್ಲಿ ಅವಮಾನಿಸಿದ ಬಗ್ಗೆ ಸವುಕ್ಕೂ ಶಂಕರ ಎಂಬ ವ್ಯಕ್ತಿಗೆ ೬ ತಿಂಗಳ ಸೆರೆಮನೆ ಶಿಕ್ಷೆಯನ್ನು ವಿಧಿಸಿತು. ಈ ವಿಷಯದ ಹಿನ್ನೆಲೆ ಮತ್ತು ಸವುಕ್ಕೂ ಶಂಕರ ಇವರು ವಿವಿಧ ರೀತಿಯಲ್ಲಿ ಮಾಡಿದ ನ್ಯಾಯಾಲಯದ ಅವಮಾನ, ತೇಜೋವಧೆ ಮತ್ತು ಅದಕ್ಕನುಸಾರ ನ್ಯಾಯಾಲಯದ ನಿಲುವನ್ನು ಈ ಲೇಖನದ ಮೂಲಕ ಮಂಡಿಸಲಾಗಿದೆ.

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೧. ಮಾಹಿತಿಯ ಅಧಿಕಾರದ ಲಾಭ ಪಡೆದು ಅಧಿಕಾರಿಗಳು, ಉನ್ನತ ಹುದ್ದೆಯಲ್ಲಿನ ವ್ಯಕ್ತಿಗಳ ಮೇಲೆ ಆರೋಪಗಳನ್ನು ಮಾಡುವುದು ಮತ್ತು ಅವರ ಅಪಕೀರ್ತಿಯನ್ನು ಮಾಡುವ ಲೇಖನಗಳನ್ನು ‘ಯೂ ಟ್ಯೂಬ್’ ಹಾಗೂ ‘ವೆಬ್‌ಪೋರ್ಟಲ್’ಗಳಲ್ಲಿ ಪ್ರಸಿದ್ಧಪಡಿಸುವುದು

ಸವುಕ್ಕೂ ಶಂಕರ ಇವರು ತಂದೆಯ ನಿಧನದ ನಂತರ  ಅನುಕಂಪದ ಆಧಾರದಲ್ಲಿ ತಂದೆಯವರಿದ್ದ ಸರಕಾರಿ ಸಂಸ್ಥೆಯಲ್ಲಿ ನೌಕರಿ ಮಾಡತೊಡಗಿದರು. ಅವರು ಮಾಹಿತಿಯ ಅಧಿಕಾರವನ್ನು ಉಪಯೋಗಿಸಿಕೊಂಡು ಅಲ್ಲಿಯ ಕೆಲವು ಮಾಹಿತಿಗಳನ್ನು ಪಡೆದರು. ಅವುಗಳ ಮೂಲಕ ಅವರು ಕೆಲವರ ಮೇಲೆ ಭ್ರಷ್ಟಾಚಾರದ ಆರೋಪವನ್ನು ಮಾಡಲಾರಂಭಿಸಿದರು. ೨೦೦೮ ರಲ್ಲಿ ತ್ರಿಪಾಠಿ ಮತ್ತು ಉಪಾಧ್ಯಾಯ ಈ ‘ಐ.ಎ.ಎಸ್.’ ಅಧಿಕಾರಿಗಳೊಂದಿಗಿನ ಅಂದಿನ ಮುಖ್ಯಮಂತ್ರಿ ಜಯಲಲಿತಾ ಇವರ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಸಂಭಾಷಣೆಯನ್ನು ಸವುಕ್ಕೂ ಇವರು ಧ್ವನಿಮುದ್ರಣ ಮಾಡಿದ್ದರು. ಅದನ್ನು ಅವರು ‘ಯೂ ಟ್ಯೂಬ್’ನಲ್ಲಿ ಪ್ರಸಾರ ಮಾಡಿದರು. ಈ ಪ್ರಕರಣದಲ್ಲಿ ಅವರನ್ನು ಬಂಧಿಸಲಾಯಿತು; ಆದರೆ ೨೦೧೭ ರಲ್ಲಿ ಅವರು  ನಿರಪರಾಧಿ ಎಂದು ಈ ಖಟ್ಲೆಯಲ್ಲಿ ಮುಕ್ತರಾದರು. ೨೦೦೯ ರಲ್ಲಿ ‘ಸವುಕ್ಕೂ.ನೆಟ್’ ಎಂಬ ಹೆಸರಿನಿಂದ ಆರಂಭಿಸಿದ ‘ವೆಬ್‌ಪೋರ್ಟಲ್’ನಲ್ಲಿಯೂ ಅವರು ವಿವಿಧ ವಾರ್ತೆಗಳನ್ನು ಕೊಡುತ್ತಿದ್ದರು. ಅವರು ಸುಳ್ಳು ಭ್ರಷ್ಟಾಚಾರದ ಪ್ರಕರಣಗಳನ್ನು ಹರಡಿ ಜನರ ಘನತೆಗೆ ಕಳಂಕ ತರುವುದು ಮತ್ತು ಅವರ ತೇಜೋವಧೆ ಮಾಡುವುದು ಹೀಗೆ ಅವರ ಕಾರ್ಯ ನಡೆದಿತ್ತು.

೨. ಮದ್ರಾಸ್ ಉಚ್ಚ ನ್ಯಾಯಾಲಯವು ಸವುಕ್ಕೂ ಶಂಕರ ಇವರ ‘ಯೂ ಟ್ಯೂಬ್’ ವಾಹಿನಿ ಮತ್ತು ‘ಟ್ವಿಟರ್’ ಖಾತೆಗೆ ನಿರ್ಬಂಧ ಹೇರಿದ್ದರೂ ನ್ಯಾಯವ್ಯವಸ್ಥೆ ಮತ್ತು ನ್ಯಾಯಾಧೀಶರ ತೇಜೋವಧೆ ಮಾಡುವ ಲೇಖನಗಳನ್ನು ಬರೆಯುವುದನ್ನು ಮುಂದುವರಿಸಿದ್ದರು

೨೦೧೪ ರಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯವು ಸವುಕ್ಕೂರವರ ‘ಯೂ ಟ್ಯೂಬ್’ ವಾಹಿನಿಯ ಮೇಲೆ ನಿರ್ಬಂಧವನ್ನು ಹೇರಿತ್ತು. ಕಾಲಾಂತರದಲ್ಲಿ ಅವರ ‘ಟ್ವಿಟರ್’ ಖಾತೆಯನ್ನೂ ಉದ್ರೇಕಕಾರಿ ಮತ್ತು ಪುರಾವೆಗಳಿಲ್ಲದ ವಿಷಯಗಳನ್ನು ಪ್ರಸಾರ ಮಾಡುತ್ತದೆಂದು ಮುಚ್ಚಲಾಯಿತು. ನಂತರ ಈ ಗೃಹಸ್ಥರು ನ್ಯಾಯವ್ಯವಸ್ಥೆಯ ವಿಷಯದಲ್ಲಿ ಲೇಖನಗಳನ್ನು ಬರೆಯಲಾರಂಭಿಸಿದರು. ‘ಉಚ್ಚ ನ್ಯಾಯವ್ಯವಸ್ಥೆ, ಅಂದರೆ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯ ಇವು ಸಂಪೂರ್ಣ ಭ್ರಷ್ಟಾಚಾರಿಯಾಗಿವೆ’, ಎಂದು ಅವರು ಬರೆದರು. ಸರ್ವೋಚ್ಚ ನ್ಯಾಯಾಲಯಕ್ಕೆ ಬಡ್ತಿಯಾಗಿ ಹೋಗಿದ್ದ ಮದ್ರಾಸ್ ಅಥವಾ ತಮಿಳುನಾಡು ರಾಜ್ಯದ ನ್ಯಾಯಾಧೀಶರ ಬಗ್ಗೆಯೂ ಅವರು ತಪ್ಪು ಲೇಖನಗಳನ್ನು ಬರೆದರು. ಜಿಲ್ಲೆ ಮತ್ತು ಸತ್ರನ್ಯಾಯಾಧೀಶರ ವಿಷಯದಲ್ಲಿ ಯಾವುದೇ ಪುರಾವೆಗಳಿಲ್ಲದೆ ತೇಜೋವಧೆ ಮಾಡುವಂತಹ ಲೇಖನಗಳನ್ನು ಬರೆದರು. ಅದರಲ್ಲಿ ಅವರು ‘ಕೆಲವು ಜಿಲ್ಲಾ ನ್ಯಾಯಾಧೀಶರು ಸುಂದರ ಸ್ತ್ರೀಯರಿಂದ ತಮ್ಮ ಸೇವೆಯನ್ನು ಮಾಡಿಸಿಕೊಳ್ಳುತ್ತಾರೆ. ಸ್ತ್ರೀಯರು ಅವರ ದೌರ್ಬಲ್ಯ (ವೀಕ್‌ಪಾಯಿಂಟ್) ಆಗಿದೆ’ ಎಂದು ಬರೆದರು. ನ್ಯಾಯಾಧೀಶರು ಸುಂದರ ಸ್ತ್ರೀಯರನ್ನು ‘Ladies are used for sexual gratification‘ (ಹೆಣ್ಣು ಮಕ್ಕಳನ್ನು ಲೈಂಗಿಕತೃಪ್ತಿಗಾಗಿ ಉಪಯೋಗಿಸುವುದು) ಲೈಂಗಿಕತೃಪ್ತಿಗಾಗಿ ಬಳಸಿಕೊಳ್ಳುತ್ತಾರೆ ಎಂದು ಬರೆದಿದ್ದರು. ಈ ರೀತಿಯಲ್ಲಿ ಟೀಕಿಸಿದ್ದರಿಂದ ಅಥವಾ ವಾರ್ತೆಗಳನ್ನು ನೀಡಿದ್ದರಿಂದ ತಮಿಳುನಾಡಿನ ಓರ್ವ ನಾಯಾಧೀಶರು ನೌಕರಿಯನ್ನು ಕಳೆದುಕೊಳ್ಳಬೇಕಾಯಿತು. ಇದನ್ನು ಈ ವಿಷಯದಲ್ಲಿ ೬ ತಿಂಗಳ ಶಿಕ್ಷೆಯನ್ನು ನೀಡುವಾಗ ಮದುರೈ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ವಿಶೇಷವಾಗಿ ಉಲ್ಲೇಖಿಸಿದರು.

೩. ನ್ಯಾಯವ್ಯವಸ್ಥೆಯ ತೇಜೋವಧೆ ಮಾಡಿಯೂ ಖೇದವೆನಿಸದಿರುವುದು ಅಥವಾ ಪಶ್ಚಾತ್ತಾಪವಾಗದಿರುವುದು

ಸುಮಾರು ೨೦೧೫-೧೬ ರಲ್ಲಿ ಅವಮಾನ ಮಾಡಿದ ಬಗ್ಗೆ ಸವುಕ್ಕೂ ಶಂಕರ ಇವರಿಗೆ ನೋಟೀಸನ್ನು ಕಳುಹಿಸಲಾಗಿತ್ತು; ಆದರೆ ಯಾವುದೇ ಅಂತಿಮ ನಿರ್ಣಯವನ್ನು ತೆಗೆದುಕೊಂಡಿರಲಿಲ್ಲ. ಅದರ ಪರಿಣಾಮದಿಂದ ಅವರು ಪುನಃ ದಿನಪತ್ರಿಕೆ ಮತ್ತು ವಾಹಿನಿಗಳ ಮೂಲಕ ನಿರ್ಭಯರಾಗಿ ಪುನಃ ಹೇಳಿಕೆಗಳನ್ನು ನೀಡಲಾರಂಭಿಸಿದರು. ನ್ಯಾಯವ್ಯವಸ್ಥೆಯ ತೇಜೋವಧೆ ಮಾಡುವಂತಹ ಹೇಳಿಕೆಯನ್ನು ನೀಡಿದುದರ ಬಗ್ಗೆ ಅವರಿಗೆ ಖೇದವೂ ಅನಿಸಲಿಲ್ಲ ಅಥವಾ ಪಶ್ಚಾತ್ತಾಪವೂ ಆಗಲಿಲ್ಲ.

೪. ಪುರಾವೆಗಳಿಲ್ಲದೇ ಅವಮಾನಕರ ಟೀಕೆಗಳನ್ನು ಮಾಡಿದುದರಿಂದ ಸವುಕ್ಕೂ ಶಂಕರ ಇವರ ಮೇಲೆ ಕ್ರಮ ತೆಗೆದುಕೊಳ್ಳುವುದು ಆವಶ್ಯಕವಾಗಿದೆ ಎಂದು ನ್ಯಾಯಾಧೀಶರು ಹೇಳುವುದು

ನ್ಯಾಯಾಧೀಶರು, “ಸವುಕ್ಕೂ ಶಂಕರ ಇವರು ಎಲ್ಲ ಮಿತಿಗಳನ್ನು ಮೀರಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪತ್ರಿಕಾರಂಗದ ಲಕ್ಷ್ಮಣರೇಖೆಯನ್ನು ದಾಟಿದ್ದರಿಂದ ಅವರನ್ನು ಶಿಕ್ಷಿಸುವುದು ಆವಶ್ಯಕವಾಗಿದೆ. ಪ್ರತಿಯೊಬ್ಬ ವ್ಯಕ್ತಿಗೆ ಭಾಷಾಸ್ವಾತಂತ್ರ್ಯ, ವ್ಯಕ್ತಿಸ್ವಾತಂತ್ರ್ಯ ಮತ್ತು ಅಭಿಪ್ರಾಯಗಳ ಸ್ವಾತಂತ್ರ್ಯವಿದೆ. ಅವುಗಳನ್ನು ಪುರಾವೆಸಹಿತ ಉಪಯೋಗಿಸಿ ಯಾವುದೇ ವಿಶಿಷ್ಟ ಘಟನೆಯ ಬಗ್ಗೆ ಉಲ್ಲೇಖ ಅಥವಾ ಟೀಕೆಯನ್ನು ಮಾಡಿದರೆ ಅಥವಾ ಪ್ರಸಿದ್ಧಿಯನ್ನು ನೀಡಿದರೆ, ಅದರ ಬಗ್ಗೆ ವಿಚಾರ ಮಾಡಬಹುದು. ‘ಇದು ಸಂವಿಧಾನಿಕ ಅಧಿಕಾರವೂ ಆಗಿದೆ’, ಎಂದು ಹೇಳಬಹುದು; ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಯಾರಿಗೆ ಲಕ್ಷಗಟ್ಟಲೆ ಅನುಯಾಯಿಗಳು ಅಥವಾ ಬೆಂಬಲಿಗರಿದ್ದಾರೆಯೋ, ನ್ಯಾಯಾಧೀಶರ ವಿಷಯದಲ್ಲಿ ಅವಮಾನಕಾರಿ ಅಥವಾ ತೇಜೋವಧೆ ಮಾಡುವಂತಹ ಮತ್ತು ಯಾವುದೇ ಪುರಾವೆಗಳಿಲ್ಲದೆ ಎಲ್ಲರ ಮೇಲೆ ಆರೋಪ ಮಾಡುವುದು ತಪ್ಪು ಮತ್ತು ಕಾನೂನುಬಾಹಿರವಾಗಿದೆ. ಇದಕ್ಕಾಗಿ ಅವರಿಗೆ ಶಿಕ್ಷೆಯನ್ನು ನೀಡಲೇಬೇಕು”, ಎಂದರು. ಇಲ್ಲಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ವಿ.ಆರ್. ಕೃಷ್ಣ ಅಯ್ಯರ್ ಇವರ ಒಂದು ವಾಕ್ಯದ ಸಂದರ್ಭವನ್ನು ನೀಡಲಾಯಿತು. ಆ ವಾಕ್ಯವೆಂದರೆ ‘Justice fails when judge quail’. ಇದರ ಅರ್ಥ ಎಲ್ಲಿ ನ್ಯಾಯಾಧೀಶರು ಹೆದರುತ್ತಾರೆಯೋ, ಅಲ್ಲಿ ನ್ಯಾಯ ಸೋಲುತ್ತದೆ !

೫. ಮದುರೈ ವಿಭಾಗೀಯ ಪೀಠವು ತೆಗೆದುಕೊಂಡಿರುವ ಅಗತ್ಯ ನಿರ್ಣಯ !

‘ನ್ಯಾಯಾಧೀಶ ಜಿ.ಆರ್. ಸ್ವಾಮೀನಾಥನ್ ಇವರು ದೇವಸ್ಥಾನದ ವಿಶ್ವಸ್ಥರನ್ನು ಭೇಟಿಯಾದರು ಮತ್ತು ಅವರು ಹಿಂದೂ ವಿಚಾರ ಶೈಲಿಯ ಅಥವಾ ಬಲಪಂಥೀಯ ವಿಚಾರಶೈಲಿಯ ವ್ಯಕ್ತಿಗೆ ಜಾಮೀನು ನೀಡಿದರು’, ಎಂಬ ವಾರ್ತೆಯನ್ನೂ ಸವುಕ್ಕೂ ಶಂಕರ ಇವರು ‘ಯೂ ಟ್ಯೂಬ್‌’ನಲ್ಲಿ ಪ್ರಸಾರ ಮಾಡಿದರು; ಆದರೆ ಅದಕ್ಕೆ ಯಾವುದೇ ಆಧಾರವಿರಲಿಲ್ಲ. ಕಳೆದ ೮ ವರ್ಷಗಳಿಂದ ಯಾವಾಗಿನಿಂದ ಹಿಂದುತ್ವನಿಷ್ಠ ಪಕ್ಷದ ಸರಕಾರ ಬಂದಿತೋ, ಆವಾಗಿನಿಂದ ಉಚ್ಚ ಅಥವಾ ಸರ್ವೋಚ್ಚ ನ್ಯಾಯಾಲಯಗಳು ನೀಡಿರುವ ಬೆರಳೆಣಿಕೆಯಷ್ಟು ನಿರ್ಣಯಗಳ ಬಗ್ಗೆ ಪ್ರಗತಿಪರರು, ಸರ್ವಧರ್ಮಸಮಭಾವದವರು, ಇತಿಹಾಸದ ಸಂಶೋಧಕರು, ಸಂವಿಧಾನದ ತಥಾಕಥಿತ ರಕ್ಷಕರು ಇವರೆಲ್ಲರೂ ಸಂಬಂಧಪಟ್ಟ ನ್ಯಾಯಾಧೀಶರ ಹೆಸರನ್ನು ಉಲ್ಲೇಖಿಸಿ ಅವರನ್ನು ಟೀಕಿಸುತ್ತಾರೆ ಮತ್ತು ಅದರ ಮೂಲಕ ನ್ಯಾಯಸಂಸ್ಥೆಯ ತೇಜೋವಧೆ ಮಾಡುತ್ತಾರೆ. ನಾವು ರಾಮಜನ್ಮ ಭೂಮಿಯ ಖಟ್ಲೆ, ಹಿಜಾಬ್ ಖಟ್ಲೆ, ತ್ರಿವಳಿ ತಲಾಖ್ ಖಟ್ಲೆ, ಪ್ರಧಾನಮಂತ್ರಿ ಮೋದಿಯವರಿಗೆ ಗುಜರಾತ ಗಲಭೆಯಲ್ಲಿ ‘ಕ್ಲೀನ್‌ಚಿಟ್’ ನೀಡುವುದು ಅಥವಾ ‘ಜ್ಯಾರಿನಿರ್ದೇಶನಾಲಯಕ್ಕೆ ಹೆಚ್ಚೆಚ್ಚು ಅಧಿಕಾರವನ್ನು ನೀಡುವುದು ಇತ್ಯಾದಿ ಇವೆಲ್ಲವೂ ಯೋಗ್ಯವಾಗಿವೆ, ಈ ಖಟ್ಲೆಗಳ ವಿಷಯದಲ್ಲಿ ‘ಹಿಂದೂದ್ವೇಷಿಗಳು ನ್ಯಾಯವ್ಯವಸ್ಥೆಯ ಮೇಲೆ ತುಂಬಾ ಆರೋಪಗಳನ್ನು ಮಾಡಿದ್ದಾರೆ. ನ್ಯಾಯಾಧೀಶರ ಬಗ್ಗೆ ಅವಮಾನಕರ ಹೇಳಿಕೆಗಳನ್ನು ನೀಡಿದ್ದಾರೆ. ಇದು ತಪ್ಪು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಅವಮಾನ ಮಾಡಿದ್ದಕ್ಕಾಗಿ ಮದುರೈ ವಿಭಾಗೀಯ ಪೀಠವು ಸವುಕ್ಕೂ ಶಂಕರ ಇವರಿಗೆ ಶಿಕ್ಷೆಯನ್ನು ನೀಡಿತು, ಇದು ಯೋಗ್ಯವೇ ಆಗಿದೆ. ‘ಇದು ಅಗತ್ಯವಿತ್ತು’, ಎಂದು ಹೇಳಬೇಕಾಗುತ್ತದೆ. ಇದರಿಂದ ನ್ಯಾಯವ್ಯವಸ್ಥೆಯ ಮಹತ್ವ, ವಿಭಿನ್ನತೆ ಮತ್ತು ಅದರ ವಿಷಯದಲ್ಲಿ ೧೩೬ ಕೋಟಿ ಭಾರತೀಯರಿಗೆ ಇರುವ ಗೌರವವು ವೃದ್ಧಿಯಾಗುವುದು !

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೨೬.೯.೨೦೨೨)