ಪರಾತ್ಪರ ಗುರು ಡಾ. ಆಠವಲೆಯವರ ಒಡನಾಟದಲ್ಲಿ ದೇವದನ (ಪನವೇಲ) ಶ್ರೀ. ಪ್ರಮೋದ ಬೇಂದ್ರೆಯವರು ಅನುಭವಿಸಿದ ಭಾವಕ್ಷಣಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಶ್ರೀ. ಪ್ರಮೋದ ಬೆಂದ್ರೆ

೧. ಮನೋಲಯವಾಗಲು ಘಟಿಸಿದ ಕೆಲವು ಪ್ರಸಂಗಗಳು

೧ ಅ. ಒಂದು ಮದುವೆಯ ಸಮಾರಂಭಕ್ಕೆ ಹೋಗಲು ಹೊಸ ಬಟ್ಟೆಗಳನ್ನು ಧರಿಸುವುದು, ಆ ಬಟ್ಟೆಗಳನ್ನು ಹಾಕಿಯೇ ಸೇವಾಕೇಂದ್ರದ ಮಹಡಿಯ ಸ್ವಚ್ಛತೆಯ ಸೇವೆಯನ್ನು ಮಾಡುವುದು ಮತ್ತು ಹೊಲಸಾದ ಬಟ್ಟೆಗಳನ್ನು ನೋಡಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತಮ್ಮ ಅಂಗಿಯನ್ನು ಕೊಟ್ಟು ವಿವಾಹ ಸಮಾರಂಭಕ್ಕೆ ಹೋಗಲು ಹೇಳುವುದು : ಒಮ್ಮೆ ನನಗೆ ನಮ್ಮ ಸಂಬಂಧಿಕರ ಮದುವೆಯ ಸಮಾರಂಭಕ್ಕೆ ಹೋಗುವುದಿತ್ತು, ಆದುದರಿಂದ ನಾನು ಹೊಸ ಬಟ್ಟೆಗಳನ್ನು ಧರಿಸಿದ್ದೆನು. ಆಗ ನಾನು, ‘ಮೊದಲು ಸೇವಾಕೇಂದ್ರಕ್ಕೆ ಹೋಗಿ ಪರಾತ್ಪರ ಗುರು ಡಾಕ್ಟರರಿಗೆ ಹೊಸ ಬಟ್ಟೆಗಳನ್ನು ತೋರಿಸೋಣ ಮತ್ತು ನಂತರ ಮದುವೆಗೆ ಹೋಗೋಣ’ ಎಂದು ವಿಚಾರ ಮಾಡಿ ಮೊದಲು ಸೇವಾಕೇಂದ್ರಕ್ಕೆ ಹೋದೆನು. ಅಲ್ಲಿ ಹೋದ ನಂತರ ನಾನು ಪುನಃ ಪುನಃ ಪರಾತ್ಪರ ಗುರು ಡಾಕ್ಟರರ ಎದುರಿಗೆ ಹೋಗುತ್ತಿದ್ದೆನು; ಆದರೆ ಅವರು ನನ್ನ ಕಡೆ ನೋಡುತ್ತಿರಲಿಲ್ಲ ಮತ್ತು ನನ್ನೊಂದಿಗೆ ಮಾತನಾಡುತ್ತಿರಲಿಲ್ಲ. ನಾವು ಮಧ್ಯಾಹ್ನ ಮಹಾಪ್ರಸಾದವನ್ನು ಸೇವಿಸಲು ಕುಳಿತೆವು. ನಂತರ ಒಬ್ಬ ಸಾಧಕನು ನನಗೆ, ‘ನಿನಗೆ ಮಹಡಿಯನ್ನು ಸ್ವಚ್ಛ ಮಾಡಲು ಹೇಳಿದ್ದಾರೆ’ ಎಂದು ಹೇಳಿದನು. ನಾನು ೧ ಗಂಟೆ ೩೦ ನಿಮಿಷಗಳ ವರೆಗೆ ಮಹಡಿಯ ಸ್ವಚ್ಛತೆಯನ್ನು ಮಾಡುತ್ತಿದ್ದೆ. ಮಹಡಿಯ ಸ್ವಚ್ಛತೆಯನ್ನು ಮಾಡಿ ನಾನು ಕೆಳಗೆ ಇಳಿಯುವಷ್ಟರಲ್ಲಿ ಪರಾತ್ಪರ ಗುರು ಡಾಕ್ಟರರು ನನಗೆ ಏನು ‘ಹೊಸಬಟ್ಟೆ’ ಎಂದು ಕೇಳಿದರು, ಆಗ ನಾನು ಮನಸ್ಸಿನಲ್ಲಿಯೇ ‘ಈಗ ಎಂತಹ ಹೊಸ ಬಟ್ಟೆ ? ಬಟ್ಟೆಗಳೆಲ್ಲ ಹೊಲಸಾಗಿವೆ’ ಎಂದೆನು. ತದನಂತರ ನಾನು ಅವರಿಗೆ, ‘ನನಗೆ ಮದುವೆಗೆ ಹೋಗಬೇಕಾಗಿತ್ತು, ಆದರೆ ಈಗ ನನ್ನ ಬಟ್ಟೆಗಳು ಹೊಲಸಾಗಿವೆ, ಆದುದರಿಂದ ನಾನು ಈಗ ಮದುವೆಗೆ ಹೋಗುವುದಿಲ್ಲ’ ಎಂದು ಹೇಳಿದೆನು. ಆಗ ಪರಾತ್ಪರ ಗುರು ಡಾಕ್ಟರರು ನನಗೆ, ‘ನನ್ನ ಬಟ್ಟೆಗಳನ್ನು ತೊಟ್ಟುಕೊಂಡು ಹೋಗು’ ಎಂದರು. ಅವರು ನನಗೆ ಅವರ ಅಂಗಿಯನ್ನು ಹಾಕಿಕೊಳ್ಳಲು ಕೊಟ್ಟರು. ಅದು ತುಂಬಾ ಉದ್ದವಾಗಿದ್ದರಿಂದ ನನಗೆ ತುಂಬಾ ದೊಡ್ಡದಾಯಿತು, ಆದರೂ ನಾನು ಹಾಗೆಯೇ ಧರಿಸಿ ಆನಂದದಿಂದ ಮದುವೆಗೆ ಹೋದೆನು. ನನಗೆ ನನ್ನ ಗುರುಗಳ ಬಟ್ಟೆ ಹಾಕಿಕೊಳ್ಳಲು ಸಿಕ್ಕಿರುವುದರಿಂದ ನನ್ನ ಕಣ್ಣಲ್ಲಿ ಭಾವಾಶ್ರುಗಳು ಬಂದವು. ಎಲ್ಲ ಸಂಬಂಧಿಕರು ಮಾತ್ರ ನನ್ನನ್ನು ಅಣಕಿಸಿದರು.

೧ ಆ. ಪರಾತ್ಪರ ಗುರು ಡಾ. ಆಠವಲೆಯವರಿಗಾಗಿ ಒಂದು ಪ್ಯಾಂಟ್ ಹೊಲಿಸುವುದು; ಆದರೆ ಅವರಿಗೆ ಆ ಪ್ಯಾಂಟು ಸರಿಯಾಗದಿರುವುದು : ಆ ಸಮಯದಲ್ಲಿ ಪರಾತ್ಪರ ಗುರು ಡಾಕ್ಟರರ ಬಳಿ ಕೇವಲ ಎರೆಡೇ ಪ್ಯಾಂಟುಗಳಿದ್ದವು. ಅದರಲ್ಲಿನ ಒಂದು ಪ್ಯಾಂಟಿನ ಹೊಲಿಗೆಯು ಸತತವಾಗಿ ಬಿಚ್ಚುತ್ತಿತ್ತು. ಪರಾತ್ಪರ ಗುರು ಡಾಕ್ಟರರು ಪ್ರತಿದಿನ ಆ ಪ್ಯಾಂಟನ್ನು ಹೊಲಿದು ಹಾಕಿಕೊಳ್ಳುತ್ತಿದ್ದರು. ಆಗ ನಾನು ಮತ್ತು ಶ್ರೀ. ವಿಜಯ ಕದಮ, ‘ನಾವು ಪರಾತ್ಪರ ಗುರು ಡಾಕ್ಟರರಿಗೆ ಒಂದು ಹೊಸ ಪ್ಯಾಂಟು ಹೊಲಿದು ಕೊಡೋಣ’ ಎಂದು ಮಾತನಾಡಿಕೊಂಡೆವು. ಪರಾತ್ಪರ ಗುರು ಡಾಕ್ಟರರು ಸ್ನಾನಕ್ಕೆ ಹೋದಾಗ ನಾವು ಅವರು ತೆಗೆದಿಟ್ಟ ಪ್ಯಾಂಟಿನ ಅಳತೆಗಳನ್ನು ತೆಗೆದುಕೊಂಡೆವು ಮತ್ತು ಪ್ಯಾಂಟನ್ನು ಹೊಲಿಯಲು ಕೊಟ್ಟೆವು. ನಾವು ಪರಾತ್ಪರ ಗುರು ಡಾಕ್ಟರರಿಗೆ ಹೊಸ ಪ್ಯಾಂಟು ಕೊಟ್ಟ ನಂತರ ಅವರು, ‘ನಿಮಗೆ ಹೊಸ ಪ್ಯಾಂಟು ಹೊಲಿದು ಕೊಡಲು ಯಾರು ಹೇಳಿದರು ?’ ಎಂದರು. ಅವರು ಆ ಪ್ಯಾಂಟನ್ನು ಹಾಕಿಕೊಂಡರು; ಆದರೆ ಅವರಿಗೆ ಅದು ಸರಿಯಾಗಿ ಕುಳಿತುಕೊಳ್ಳಲಿಲ್ಲ.

೧ ಈ. ರಾತ್ರಿ ಗೋವಾದಿಂದ ಬಂದಿರುವ ಅಂಗಫಲಕವನ್ನು ಹಾಕಿಕೊಂಡು ನೋಡಲು ಹೇಳುವುದು ಮತ್ತು ಗೋವಾದ ಸಾಧಕರಿಗೆ ‘ಅದನ್ನು ಚೆನ್ನಾಗಿ ತಯಾರಿಸಿದ್ದಾರೆ’, ಎಂಬ ಸಂದೇಶವನ್ನು ಕೊಡಲು ಹೇಳುವುದು : ಒಮ್ಮೆ ನಾನು ಸೇವಾಕೇಂದ್ರದಲ್ಲಿ ಮಲಗಿದ್ದೆ. ರಾತ್ರಿ ೨.೩೦ ರಿಂದ ೩ ಗಂಟೆಯ ಸುಮಾರು ನನಗೆ, “ಪರಾತ್ಪರ ಗುರು ಡಾಕ್ಟರರು ಕರೆದಿದ್ದಾರೆ,” ಎಂಬ ಸಂದೇಶವು ಬಂದಿತು. ನಾನು ಎದ್ದು ಅವರ ಬಳಿ ಹೋದೆನು. ಆಗ ಅವರು ನನಗೆ, “ಗೋವಾದಿಂದ ಅಂಗಫಲಕಗಳು ಬಂದಿವೆ, ನೀನು ಅದರಲ್ಲಿನ ಒಂದನ್ನು ಹಾಕಿಕೊಂಡು ನೋಡು”, ಎಂದು ಹೇಳಿದರು. ನಾನು ಅಂಗಫಲಕವನ್ನು ಹಾಕುತ್ತಿರುವಾಗ ಪರಾತ್ಪರ ಗುರು ಡಾಕ್ಟರರು ಅಂಗಫಲಕವನ್ನು ಕಟ್ಟುತ್ತಿದ್ದರು. ಅವರು ನನಗೆ ‘ಎಲ್ಲ ಬದಿಗಳಿಂದ ಅಂಗಫಲಕ ಸರಿಯಾಗಿ ಕುಳಿತಿದೆಯೋ ಇಲ್ಲವೋ ?’ ನೋಡಿದರು ಮತ್ತು ನನಗೆ, ‘ಅಂಗಫಲಕಗಳನ್ನು ಚೆನ್ನಾಗಿ ತಯಾರಿಸಿದ್ದಾರೆ. ಇಷ್ಟವಾದವು’ ಎಂದು ಗೋವಾದ ಸಾಧಕರಿಗೆ ತಿಳಿಸಿ’ ಎಂದರು.

೨. ಪರಾತ್ಪರ ಗುರು ಡಾ. ಆಠವಲೆಯವರ ಸಾಧಕರ ಮೇಲಿನ ಪ್ರೀತಿ  

೨ ಅ. ಧರ್ಮರಥದಲ್ಲಿ ಸೇವೆಯನ್ನು ಮಾಡುವ ಸಾಧಕರೊಂದಿಗೆ ಆಡುವುದು : ೧೯೯೭ ರಲ್ಲಿ ರಾಯಗಡ ಜಿಲ್ಲೆಯ ರಾಮನಾಥದಲ್ಲಿ ಪರಾತ್ಪರ ಗುರು ಡಾಕ್ಟರರ ಬಹಿರಂಗ ಸಭೆಯಿತ್ತು. ಆ ಸಮಯದಲ್ಲಿ ಧರ್ಮರಥದಲ್ಲಿ ಸೇವೆಯನ್ನು ಮಾಡುವ ನಾವೆಲ್ಲ ಸಾಧಕರು ಸಾಯಂಕಾಲ ಸಮುದ್ರದಲ್ಲಿ ಈಜಾಡಲು ಹೋಗಿದ್ದೆವು. ಅಲ್ಲಿ ಪರಾತ್ಪರ ಗುರು ಡಾಕ್ಟರರು ಬಂದರು ಮತ್ತು ಅವರು ನನಗೆ, ‘ಚೆಂಡು ತರಲಿಲ್ಲವೇ ?’ ಎಂದು ಕೇಳಿದರು. ನಾನು, ಇಲ್ಲ ಎಂದು ಹೇಳಿದೆನು. ನಂತರ ನಾವೆಲ್ಲರೂ ನಮ್ಮ ‘ಬನಿಯನ್’ ತೆಗೆದು ಚೆಂಡು ತಯಾರಿಸಿದೆವು. ಆ ಚೆಂಡಿನಿಂದ ನಾವು ೩೦ ನಿಮಿಷಗಳವರೆಗೆ ಸಮುದ್ರದಲ್ಲಿ ಆಡುತ್ತಿದ್ದೆವು. ಪರಾತ್ಪರ ಗುರು ಡಾಕ್ಟರರು ಸಹ ನಮ್ಮ ಜೊತೆಗೆ ಆಡುತ್ತಿದ್ದರು.

೨ ಆ. ಸೊಲ್ಲಾಪುರದಲ್ಲಿನ ಪರಾತ್ಪರ ಗುರು ಡಾ. ಆಠವಲೆಯವರ ಸಾರ್ವಜನಿಕ ಸಭೆ

೨ ಆ ೧. ಪರಾತ್ಪರ ಗುರು ಡಾ. ಆಠವಲೆಯವರು ದ್ವಿಚಕ್ರವಾಹನದಲ್ಲಿ ಕುಳಿತಾಗ ದ್ವಿಚಕ್ರವಾಹನವನ್ನು ನಡೆಸುವಾಗ ಸಾಧಕನ ಕಾಲುಗಳು ನಡುಗುವುದು, ಆಗ ಪರಾತ್ಪರ ಗುರು ಡಾ. ಆಠವಲೆಯವರು ಭುಜದ ಮೇಲೆ ಕೈಗಳನಿಟ್ಟು ಆಧಾರ ನೀಡುವುದು : ಒಮ್ಮೆ ಸೊಲ್ಲಾಪುರದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಸಾರ್ವಜನಿಕ ಸಭೆ ಇತ್ತು. ಆ ನಿಮಿತ್ತದಿಂದ ಪರಾತ್ಪರ ಗುರು ಡಾಕ್ಟರರು ಸೊಲ್ಲಾಪುರಕ್ಕೆ ಬರುವರಿದ್ದರು. ಅವರು ಸೊಲ್ಲಾಪುರಕ್ಕೆ ಬಂದ ನಂತರ ನಾನು ಅವರನ್ನು ದ್ವಿಚಕ್ರವಾಹನದಿಂದ ನಿವಾಸಸ್ಥಳಕ್ಕೆ ಕರೆದುಕೊಂಡು ಹೋಗುವುದು ಆಕಸ್ಮಿಕವಾಗಿ ನಿಶ್ಚಯವಾಯಿತು. ಪರಾತ್ಪರ ಗುರು ಡಾಕ್ಟರರು ದ್ವಿಚಕ್ರವಾಹನದ ಮೇಲೆ ನನ್ನ ಹಿಂದೆ ಕುಳಿತುಕೊಂಡ ನಂತರ ನನ್ನ ಕಾಲುಗಳು ನಡುಗತೊಡಗಿದವು. ಆಗ ಅವರು ನನ್ನ ಭುಜದ ಮೇಲೆ ಕೈಗಳನ್ನಿಟ್ಟು ನನಗೆ, ‘ನಾನು ನಿನ್ನ ಜೊತೆಯಲ್ಲಿರುವಾಗ ಏಕೆ ಭಯಪಡುತ್ತಿ ?’ ಎಂದು ಕೇಳಿದರು.

೨ ಆ ೨. ಪರಾತ್ಪರ ಗುರು ಡಾ. ಆಠವಲೆಯವರ ದಾರಿಯನ್ನು ನೋಡುತ್ತಾ ಸಾಧಕರು ಹೊರಗೆ ನಿಲ್ಲುವುದು ಮತ್ತು ಪರಾತ್ಪರ ಗುರು ಡಾಕ್ಟರರು ದ್ವಿಚಕ್ರವಾಹನದಲ್ಲಿ ಬಂದಿರುವುದರಿಂದ ಸಾಧಕರು ಅವರನ್ನು ಗುರುತಿಸದಿರುವುದು : ನಾವು ಸೊಲ್ಲಾಪುರದ ನಿವಾಸಸ್ಥಾನವನ್ನು ತಲುಪಿದೆವು. ಆಗ ಎಲ್ಲ ಸಾಧಕರು ಆರತಿಯ ತಟ್ಟೆಯನ್ನು ಹಿಡಿದುಕೊಂಡು ಪರಾತ್ಪರ ಗುರು ಡಾಕ್ಟರರ ದಾರಿಯನ್ನು ಕಾಯುತ್ತ ಹೊರಗೆ ನಿಂತಿದ್ದರು. ನಾವು ದ್ವಿಚಕ್ರವಾಹನದಿಂದ ಇಳಿದು ಕೋಣೆಯೊಳಗೆ ಹೋಗಿ ಕುಳಿತೆವು. ನಂತರ ಪರಾತ್ಪರ ಗುರು ಡಾಕ್ಟರರು ನನಗೆ, ‘ಹೋಗು’, ‘ನಾನು ಬಂದಿದ್ದೇನೆ’ ಎಂದು ಆ ಸಾಧಕರಿಗೆ ಹೇಳು’ ಎಂದು ಹೇಳಿದರು. ನಾನು ತಕ್ಷಣ ಹೊರಗೆ ಹೋಗಿ ಎಲ್ಲರಿಗೂ, ‘ಪರಾತ್ಪರ ಗುರು ಡಾಕ್ಟರರು ಒಳಗೆ ಬಂದು ಕುಳಿತಿದ್ದಾರೆ’ ಎಂದು ಹೇಳಿದೆನು. ಆಗ ಸಾಧಕರು ನನಗೆ, ‘ಹಳದಿ ಚತುಶ್ಚಕ್ರವಾಹನ ಎಲ್ಲಿ ಬಂದಿದೆ ? ಪರಾತ್ಪರ ಗುರು ಡಾಕ್ಟರರು ಹೇಗೆ ಬಂದರು ?’ ಎಂದು ಕೇಳಿದರು. ಸಾಧಕರು ಕೋಣೆಯಲ್ಲಿ ಬಂದು ನೋಡಿದ ನಂತರ ಅವರಿಗೆ ಪರಾತ್ಪರ ಗುರು ಡಾಕ್ಟರರು ಒಳಗೆ ಕುಳಿತಿರುವುದು ಕಾಣಿಸಿತು. ನಂತರ ಎಲ್ಲ ಸಾಧಕರು ಒಳಗೆ ಬಂದರು. ಆಗ ಪರಾತ್ಪರ ಗುರು ಡಾಕ್ಟರರು, ‘ದೇವ ಆಲಾ ಘರಾ, ನಾಹಿ ಒಳಖಿಲಾ’ ಎಂದರು. (ಅರ್ಥ : ದೇವರು ಮನೆಗೆ ಬಂದರು, ಗುರುತಿಸಲಿಲ್ಲ. ಇದು ಭಕ್ತರಾಜ ಬಾಬಾರವರ ಭಜನೆಯಲ್ಲಿದೆ.)

೩. ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯ ಅನುಭವ

೩ ಅ. ಸಾಧಕನು ಸೊಲ್ಲಾಪುರದಲ್ಲಿ ಸೇವೆಯನ್ನು ಮಾಡುತ್ತಿರುವಾಗ ಒಬ್ಬ ವ್ಯಕ್ತಿಯು ಅವನ ಮೇಲೆ ಮಾಟ ಮಾಡುವುದು, ಪರಾತ್ಪರ ಗುರು ಡಾ. ಆಠವಲೆಯವರಿಗೆ ಈ ಸೂಕ್ಷ್ಮ ವಿಷಯ ಗಮನಕ್ಕೆ ಬರುವುದು, ಅವರು ಸಾಧಕನಿಗೆ ಶ್ರೀ ಗಣಪತಿಯ ನಾಮಜಪವನ್ನು ಮಾಡಲು ಹೇಳುವುದು, ಸಾಧಕನು ಅವರು ಹೇಳಿದಂತೆ ಮಾಡದಿರುವುದರಿಂದ ಅವನಿಗೆ ತೊಂದರೆಯಾಗಿ ಆಸ್ಪತ್ರೆಯಲ್ಲಿ ಸೇರಿಸಬೇಕಾಗುವುದು : ನಾನು ಸೊಲ್ಲಾಪುರದಲ್ಲಿ ಪ್ರಸಾರದ ಸೇವೆಯನ್ನು ಮಾಡುತ್ತಿದ್ದೆನು. ಒಮ್ಮೆ ಪರಾತ್ಪರ ಗುರು ಡಾಕ್ಟರರು ನನಗೆ, ‘ಒಬ್ಬ ವ್ಯಕ್ತಿಯು ನಿನ್ನ ಮೇಲೆ ಮಾಟವನ್ನು ಮಾಡಿದ್ದಾನೆ, ಆದರೆ ಭಗವಂತನು ನಿನಗೆ ಶಕ್ತಿಯನ್ನು ಕೊಡುವನು’ ಎಂದು ಹೇಳಿದರು. ಆಗ ನನ್ನ ಮನಸ್ಸಿನಲ್ಲಿ ವಿಕಲ್ಪ ಬಂದಿತು, ‘ಆ ವ್ಯಕ್ತಿ ನನ್ನ ಮೇಲೆ ಏಕೆ ಮಾಟ ಮಾಡುವನು ? ನಾನು ಚೆನ್ನಾಗಿದ್ದೇನೆ ಜೀವಂತವಾಗಿದ್ದೇನೆ. ನನಗೆ ಯಾವುದೇ ತೊಂದರೆಯಾಗುತ್ತಿಲ್ಲ. ಪರಾತ್ಪರ ಗುರು ಡಾಕ್ಟರರು ನಿಜ ಹೇಳುತ್ತಿರಬಹುದೇ ?’ ತದನಂತರ ನಾನು ಮನೆಗೆ ಹೋದೆನು. ನಾನು ಮರುದಿನ ಸೇವಾಕೇಂದ್ರಕ್ಕೆ ಹೋದ ನಂತರ ಎಲ್ಲ ಸಾಧಕರು ನನ್ನ ಕಡೆಗೆ ನೋಡತೊಡಗಿದರು. ನಾನು ಅವರಿಗೆ, ‘ಏನಾಯಿತು ?’ ಎಂದು ಕೇಳಿದೆನು. ಆಗ ಅವರು ನನಗೆ, “ನಿನ್ನನ್ನು ಪರಾತ್ಪರ ಗುರು ಡಾಕ್ಟರರು ಕರೆದಿದ್ದಾರೆ,” ಎಂದು ಹೇಳಿದರು. ನಾನು ಅವರ ಬಳಿ ಹೋದೆನು. ಆಗ ಅವರು ನನಗೆ, ‘ನೀನು ಶ್ರೀ ಗಣಪತಿಯ ೬ ಮಾಲೆ ನಾಮಜಪವನ್ನು ಮಾಡು. ನಿನ್ನ ಪ್ರಾಣಶಕ್ತಿ ಕಡಿಮೆಯಾಗಿದೆ’ ಎಂದು ಹೇಳಿದರು. ನಾನು, ‘ಆಗಲಿ’ ಎಂದು ಹೇಳಿದೆ. ಸ್ವಲ್ಪ ಸಮಯದ ನಂತರ ನಾನು ಪುನಃ ಪರಾತ್ಪರ ಗುರು ಡಾಕ್ಟರರ ಬಳಿ ಹೋದೆ ಮತ್ತು ಅವರಿಗೆ, ‘ನೀವು ನನಗೆ ೬ ಮಾಲೆ ನಾಮಜಪವನ್ನು ಮಾಡಲು ಹೇಳಿರುವಿರಿ. ನಾನು ೧೦ ಮಾಲೆ ನಾಮಜಪವನ್ನು ಮಾಡಲೇ ? ಅಂದರೆ ನನಗೆ ಬೇಗನೇ ಆರಾಮವಾಗುವುದು’ ಎಂದು ಕೇಳಿದೆನು. ಆ ಸಮಯದಲ್ಲಿ ಪರಾತ್ಪರ ಗುರು ಡಾಕ್ಟರರ ಮುಖವು ತುಂಬಾ ಕೆಂಪಾಯಿತು. ಅವರು ನನಗೆ, ‘ನಿನಗೇನು ಅನಿಸುತ್ತದೆ ? ನೀನು ನಾಮಜಪ ಮಾಡುವುದ್ದರಿಂದ ನಿನಗೆ ಗುಣವಾಗುವುದೇ ? ನಿನಗಾಗಿ ಈಶ್ವರನ ಸಂಕಲ್ಪವಿತ್ತು, ಆದುದರಿಂದ ನಿನಗೆ ಗುಣವಾಗುವುದಿತ್ತು. ಈಗ ಭೋಗಿಸು’, ಎಂದು ಹೇಳಿದರು.

ನಾನು ಹಾಗೆಯೇ ಕೋಣೆಯ ಹೊರಗೆ ಬಂದೆನು. ಓರ್ವ ಸಾಧಕನು ನನಗೆ, ‘ಏನಾಯಿತು ?’ ಎಂದು ಕೇಳಿದನು. ಆಗ ನಾನು, ಪರಾತ್ಪರ ಗುರು ಡಾಕ್ಟರರು, ‘ಈಗ ಭೋಗಿಸು’ ಎಂದು ಹೇಳಿದರು ಎಂದು ಹೇಳಿದೆ. ಆ ಸಮಯದಲ್ಲಿ ನನಗೆ ‘ಸಂತರರೊಂದಿಗೆ ಹೇಗೆ ವರ್ತಿಸಬೇಕು ?’, ಎಂಬುದು ಗೊತ್ತಿರಲಿಲ್ಲ. ಆದುದರಿಂದ ನನಗೆ ಏನೂ ಅನಿಸಲಿಲ್ಲ.

ನಾನು ಮನೆಗೆ ಹೋಗಿ ರಾತ್ರಿ ಮಲಗಿದೆನು. ನಾನು ಮುಂಜಾನೆ ಎದ್ದ ನಂತರ ಹಲ್ಲು ಉಜ್ಜುತ್ತಿರುವಾಗ ಬಾಯಿ ತೊಳೆದುಕೊಂಡು ಉಗುಳಿದಾಗ ನನ್ನ ಮೂಗು ಮತ್ತು ಬಾಯಿಯಿಂದ ರಕ್ತ ಬರತೊಡಗಿತು ಮತ್ತು ನಾನು ಕೆಳಗೆ ಕುಸಿದು ಬಿದ್ದೆ. ಇದರಿಂದಾಗಿ ನನ್ನನ್ನು ಆಸ್ಪತ್ರೆಗೆ ಸೇರಿಸಲಾಯಿತು. ನಾನು ಎಂಟು ದಿನ ಆಸ್ಪತ್ರೆಯಲ್ಲಿದ್ದೆ. ಪರಾತ್ಪರ ಗುರು ಡಾಕ್ಟರರು ಪ್ರತಿದಿನ ನನಗಾಗಿ ಆಸ್ಪತ್ರೆಗೆ ಒಂದು ಹಣ್ಣು ಕಳುಹಿಸುತ್ತಿದ್ದರು. ನಾನು ೯ ದಿನಗಳ ನಂತರ ಸೇವಾಕೇಂದ್ರಕ್ಕೆ ಹೋದೆನು. ಆ ಸಮಯದಲ್ಲಿ ಎಲ್ಲ ಸಾಧಕರು ಮಹಾಪ್ರಸಾದವನ್ನು ಸೇವಿಸಲು ಕುಳಿತ್ತಿದ್ದರು. ನಾನೂ ಮಹಾಪ್ರಸಾದವನ್ನು ಸೇವಿಸಲು ಕುಳಿತುಕೊಂಡೆನು. ಅಷ್ಟರಲ್ಲಿ ಪರಾತ್ಪರ ಗುರು ಡಾಕ್ಟರರು ಅಲ್ಲಿ ಬಂದರು ಮತ್ತು ‘ಇಂದು ಪ್ರಮೋದ ಬಂದಿದ್ದಾನೆಯೇ’ ಎಂದು ಕೇಳಿದರು. ಆಗ ನಾನು ಸಣ್ಣ ಮುಖ ಮಾಡಿಕೊಂಡು, ‘ಬಂದಿದ್ದೇನೆ’, ಎಂದು ಹೇಳಿದೆ. ಆಗ ಪರಾತ್ಪರ ಗುರು ಡಾಕ್ಟರರು, ‘ಏತಕ್ಕೆ ಕಾಯಿಲೆ ಬೀಳುತ್ತೀ ? ನಮಗೆ ತುಂಬಾ ಕಾರ್ಯವನ್ನು ಮಾಡುವುದಿದೆ. ಏಳು, ನಾಳೆ ಬೆಳಗ್ಗೆ ದೆಹಲಿಗೆ ಹೋಗಲು ತಯಾರಾಗು’ ಎಂದು ಹೇಳಿದರು. ಅವರು ಹೇಳಿದಂತೆ ನಾನು ತಕ್ಷಣ ದೆಹಲಿಗೆ ಹೋಗುವ ಸಿದ್ಧತೆಯನ್ನು ಮಾಡಿದೆನು.

೩ ಇ. ಆರೋಗ್ಯ ಸರಿಯಿಲ್ಲದಿರುವಾಗಲೂ ದೆಹಲಿಯಲ್ಲಿ ಪ್ರಸಾರ ಸೇವೆಯನ್ನು ಮಾಡುವಾಗ ಅಲ್ಲಿನ ಬಿಸಿಲಿನ ತೊಂದರೆ ಆಗದಿರುವುದು :

ದೆಹಲಿಯಲ್ಲಿ ಪ್ರಸಾರದ ಸೇವೆಯನ್ನು ಮಾಡುವಾಗ ನಾನು ಮತ್ತು ಅಮರಜಿತ ಸಿಂಹ ಇಬ್ಬರು ಮಧ್ಯಾಹ್ನ ಸಂಸ್ಥೆಯ ಮಾಹಿತಿಯನ್ನು ಗೋಡೆಯ ಮೇಲೆ ಬರೆಯುವ ಸೇವೆಯನ್ನು ಮಾಡಲು ಹೊರಗೆ ಹೋಗುತ್ತಿದ್ದೆವು. ಅಲ್ಲಿ ತುಂಬಾ ಬಿಸಿಲಿತ್ತು; ಆದರೆ ನನ್ನ ಆರೋಗ್ಯ ಸರಿಯಿಲ್ಲದಿರುವಾಗಲೂ ನನಗೆ ಆ ಬಿಸಿಲಿನ ತೊಂದರೆಯಾಗಲಿಲ್ಲ.

೩ ಈ. ಪರಾತ್ಪರ ಗುರು ಡಾ. ಆಠವಲೆಯವರ ಕೃಪಾಶೀರ್ವಾದದಿಂದ ಒಂದು ಕಠಿಣ ಪ್ರಸಂಗದಿಂದ ಪಾರಾಗುವುದು : ನಾನು ಸುಮಾರು ೨೦೦೦-೨೦೦೧ ರಲ್ಲಿ ಗುಜರಾತಕ್ಕೆ ಪ್ರಸಾರ ಸೇವೆಗಾಗಿ ಹೋಗಿದ್ದೆನು. ಅಲ್ಲಿ ಹೋದ ಕೆಲವು ತಿಂಗಳುಗಳ ನಂತರ ಸೇವೆಯ ವರದಿಯನ್ನು ಕೊಡಲು ನಾನು ಪರಾತ್ಪರ ಗುರು ಡಾಕ್ಟರರಿಗೆ ಸಂಚಾರವಾಣಿ ಕರೆಯನ್ನು ಮಾಡಿದೆನು. ಅವರು ನನಗೆ ತಕ್ಷಣ ಮುಂಬಯಿಗೆ ಬರಲು ಹೇಳಿದರು. ನಾನು ಗುಜರಾತದಲ್ಲಿ ಯಾವ ವ್ಯಕ್ತಿಯ ಬಳಿ ಇರುತ್ತಿದ್ದೆನೋ, ಆ ವ್ಯಕ್ತಿಗೆ ನಾನು, ‘ನನಗೆ ಮುಂಬಯಿಗೆ ತಕ್ಷಣ ಬರಲು ಹೇಳಿದ್ದಾರೆ’ ಎಂದು ಹೇಳಿದೆನು. ಆಗ ಆ ವ್ಯಕ್ತಿಯು ಸಿಟ್ಟಿನಿಂದ ನನಗೆ, ‘ನೀನು ಮುಂಬಯಿಗೆ ಹೋಗಬಾರದು’ ಎಂದು ಹೇಳಿದನು. ಸ್ವಲ್ಪ ಸಮಯದ ನಂತರ ಆ ವ್ಯಕ್ತಿಯು ನನಗೆ, ‘ಆಯಿತು ಮೊದಲು ಊಟ ಮಾಡು ನಂತರ ನಾನು ನಿನ್ನನ್ನು ವಾಹನದಲ್ಲಿ ಕುಳ್ಳಿರಿಸುತ್ತೇನೆ’, ಎಂದು ಹೇಳಿದನು. ನಾನು ಆ ವ್ಯಕ್ತಿಗೆ, ‘ನನಗೆ ಹಸಿವಿಲ್ಲ’ ಎಂದು ಹೇಳಿದೆನು. ಆಗ ಆ ವ್ಯಕ್ತಿಯು ತುಂಬಾ ಒತ್ತಾಯ ಮಾಡಿದ್ದರಿಂದ ನಾನು ಆ ವ್ಯಕ್ತಿಯೊಂದಿಗೆ ಉಪಹಾರವನ್ನು ಮಾಡಲು ಉಪಹಾರಗೃಹಕ್ಕೆ ಹೋದೆನು.

ನಾನು ಮುಂಬಯಿಗೆ ತಲುಪಿದ ನಂತರ ಸೇವಾಕೇಂದ್ರಕ್ಕೆ ಹೋದೆನು. ಪರಾತ್ಪರ ಗುರು ಡಾಕ್ಟರರು ಬಾಗಿಲಿನಲ್ಲಿಯೇ ನಿಂತಿದ್ದರು. ಪರಾತ್ಪರ ಗುರು ಡಾಕ್ಟರರು ನನಗೆ, ‘ಏನು, ಸೊಲ್ಲಾಪುರದಲ್ಲಿ ಜಗಳವಾಡಿ ಬಂದಿದ್ದೀಯಾ ?’ ಎಂದು ಕೇಳಿದರು. ನಾನು ಅವರಿಗೆ ನಡೆದ ಘಟನೆಯನ್ನು ಹೇಳಿದೆನು. ಅದಕ್ಕೆ ಅವರು, ‘ಎಲ್ಲವನ್ನು ಬರೆದು ಕೊಡು’ ಎಂದು ಹೇಳಿದರು. ನಾನು ಆ ಎಲ್ಲ ಪ್ರಸಂಗವನ್ನು ಬರೆದುಕೊಟ್ಟೆನು. ನಾನು ಬರೆದಿರುವ ಪ್ರಸಂಗದ ಕೆಳಗೆ ಅವರು ‘ಶ್ರೀ. ಬೆಂದ್ರೆಯವರ ನಾಮಜಪವು ನಡೆಯುತ್ತಿತ್ತು, ಆದುದರಿಂದ ಆ ವ್ಯಕ್ತಿಯು ಯಾವ ಮಂತ್ರವನ್ನು (ಅನ್ನದ ಮೇಲೆ ಬರೆದು) ತಿನ್ನಲು ಕೊಟ್ಟಿದ್ದನೋ, ಅದು ಅವನ ಹೊಟ್ಟೆಯಲ್ಲಿ ಹೋಗಲಿಲ್ಲ. ಈ ಮಂತ್ರವು ಅವನ ಹೊಟ್ಟೆಯಲ್ಲಿ ಹೋಗಿದ್ದರೆ, ಅವನಿಗೆ ಮುಂದೆ ಅನೇಕ ಜನ್ಮಗಳಲ್ಲಿ ತೀವ್ರ ತೊಂದರೆಯಾಗುತ್ತಿತ್ತು ಮತ್ತು ತೀವ್ರ ಸಾಧನೆಯನ್ನು ಮಾಡಬೇಕಾಗುತ್ತಿತ್ತು’, ಎಂದು ಬರೆದರು.

– ಶ್ರೀ. ಪ್ರಮೋದ ಬೆಂದ್ರೆ, ಸನಾತನ ಸಂಕುಲ, ದೇವದ, ಪನವೇಲ. (೯.೩.೨೦೧೭)