ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವೀ ವಿಚಾರ

ಧರ್ಮದಲ್ಲಿ ಆಶ್ರಮ ವ್ಯವಸ್ಥೆಯ ಅರ್ಥ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಹಿಂದೂ ಧರ್ಮದಲ್ಲಿ ‘ವರ್ಣಾಶ್ರಮ’ ವೆಂದರೆ ವರ್ಣ ಮತ್ತು ಆಶ್ರಮ ಎಂಬ ಜೀವನಪದ್ಧತಿಯನ್ನು ಹೇಳಲಾಗಿದೆ. ಅದರಲ್ಲಿನ ವರ್ಣ ಎಂದರೆ ಜಾತಿಯಲ್ಲ, ಆದರೆ ಸಾಧನೆಯ ಮಾರ್ಗ. ನಾಲ್ಕು ವಿಧಗಳ ಆಶ್ರಮಗಳಿವೆ – ೧. ಬ್ರಹ್ಮಚರ್ಯಾಶ್ರಮ, ೨. ಗ್ರಹಸ್ಥಾಶ್ರಮ, ೩. ವಾನಪ್ರಸ್ಥಾಶ್ರಮ ಮತ್ತು ೪. ಸನ್ಯಾಸಾಶ್ರಮ. ಅವುಗಳು ಅನುಕ್ರಮವಾಗಿ ಅರ್ಥ – ೧. ಬ್ರಹ್ಮಚರ್ಯಪಾಲನೆ, ೨. ಗೃಹಸ್ಥಜೀವನದ ಪಾಲನೆ, ೩. ಗ್ರಹಸ್ಥಾಶ್ರಮವನ್ನು ತ್ಯಜಿಸಿ ಋಷಿಗಳಂತೆ ಕಾಡಿನಲ್ಲಿ ವಾಸಿಸುವುದು ಮತ್ತು ೪. ಸನ್ಯಾಸ ಜೀವನದ ಪಾಲನೆ ಎಂದಾಗಿದೆ. ಈ ನಾಲ್ಕೂ ಶಬ್ದಗಳನ್ನು ‘ಆಶ್ರಮ’ ಈ ಶಬ್ದಕ್ಕೆ ಜೋಡಿಸುವ ಮಹತ್ವ ಏನಿದೆಯೆಂದರೆ ‘ಜೀವನದ ನಾಲ್ಕೂ ಹಂತಗಳಲ್ಲಿ ಆಶ್ರಮವಾಸಿಗಳಂತೆ ಜೀವನವನ್ನು ನಡೆಸಬೇಕು ಎಂಬುದರ ನೆನಪು ಮಾಡಿಕೊಡುವುದಾಗಿದೆ.

– ಸಚ್ಚಿದಾನಂದ ಪರ ಬ್ರಹ್ಮ ಡಾ. ಆಠವಲೆ