‘ಭಾರತದಲ್ಲಿ ೨೦ ಕೋಟಿ ಮುಸಲ್ಮಾನರ ನರಸಂಹಾರದ ಷಡ್ಯಂತ್ರ ಹಿಂದೂಗಳು ಹೂಡುತ್ತಿದ್ದಾರೆ !’(ಅಂತೆ)

ಅಮೇರಿಕಾದಲ್ಲಿನ ಇಸ್ಲಾಮಿ ಸಂಘಟನೆಯಿಂದ ಹಿಂದೂಗಳ ವಿರುದ್ಧ ವಿಷ ಕಕ್ಕಿದ

ಮಿನೇಪೊಲೀಸ (ಅಮೇರಿಕಾ) – ಅಮೇರಿಕಾದಲ್ಲಿನ ಇಸ್ಲಾಮಿ ಸಂಘಟನೆ ಹಿಂದೂಗಳ ಬಗ್ಗೆ ದ್ವೇಷಪೂರಿತ ಮತ್ತು ಅವರನ್ನು ಗುರಿಯಾಗಿಸುವ ಕಾರ್ಯಕ್ರಮದ ಆಯೋಜನೆ ಮಾಡುತ್ತಿದ್ದಾರೆ. ಅಲೈನ್ಸ್ ಟು ಸೇವ್ ಅಂಡ್ ಪ್ರೋಟೆಕ್ಟ್ ಅಮೇರಿಕಾ ಫ್ರಮ್ ಇನ್ಫುಲಿಟ್ರೆಶನ್ ಬಾಯಿ ರಿಲಿಜಸ್ ಎಕ್ಸ್ಟ್ರೀಮಿಟ್ಸ್ – ಎ.ಎಸ್.ಪಿ.ಎ.ಐ.ಆರ್.ಇ. ಈ ಇಸ್ಲಾಮಿ ಸಂಘಟನೆ ‘ವೆಕಿಂಗ್ ಅಪ ಅಮೇರಿಕಾ ಟೂರ್’ ಈ ಉಪಕ್ರಮದ ಮೂಲಕ ಹಿಂದೂ ವಿರೋಧಿ ವಿಷಕಾರುತ್ತಿದೆ. ಇಂತಹ ಒಂದು ಕಾರ್ಯಕ್ರಮ ನವೆಂಬರ್ ೬ ರಂದು ‘ಇಸ್ಲಾಮಿಕ್ ಸೆಂಟರ್ ಆಫ್ ಮಿನಿಸೋಟಾ’ ಇಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಆನ್‌ಲೈನ್ ಪೋಸ್ಟ್ ಬಗ್ಗೆ ‘ಅಮೇರಿಕಾದಲ್ಲಿ ಎಲ್ಲಾಕ್ಕಿಂತ ವೇಗವಾಗಿ ಬೆಳೆಯುತ್ತಿರುವ ಇಸ್ಲಾಂ ದ್ವೇಷದ ಅಪಾಯ ಮತ್ತು ಭಾರತದಲ್ಲಿನ ೨೦ ಕೋಟಿ ಮುಸಲ್ಮಾನರ ನರಸಂಹಾರದ ಷಡ್ಯಂತ್ರ ರಚಿಸುವ ಹಿಂದುತ್ವ’ ಎಂಬ ಹಿಂದೂ ವಿರೋಧಿ ವಿಷಯ ಬರೆಯಲಾಗಿದೆ.

‘ಎ.ಎಸ್.ಪಿ.ಎ.ಐ.ಆರ್.ಇ.’ ಈ ಇಸ್ಲಾಮಿ ಸಂಘಟನೆ ಹಿಂದೂಗಳ ಮತ್ತು ಜ್ಯೂಗಳ ವಿರುದ್ಧ ದ್ವೇಷ ಪಸರಿಸುವುದಕ್ಕಾಗಿ ಕುಪ್ರಸಿದ್ಧವಾಗಿದೆ. ಈ ಸಂಘಟನೆಯ ಕಾರ್ಯಕ್ರಮದ ಆನ್‌ಲೈನ್ ಪೋಸ್ಟನಲ್ಲಿ ಮುಖ್ಯವಕ್ತಾರರೆಂದು ಸಿರಾಜ್ ವಹಾಜ, ಡಾ. ಶೇಕ್ ಉಬೇದ್ ಮತ್ತು ಶೇಕ್ ಅಹಮದ್ ಮ್ಬರೆಕ್ ಇವರ ಹೆಸರುಗಳು ಇವೆ. ಈ ಕಾರ್ಯಕ್ರಮಕ್ಕೆ ಒಪ್ಪಿಗೆ ಸೂಚುಸುವ ಶೇಕ್ ಉಬೇದ್ ಇವರು, ಮುಸಲ್ಮಾನ, ಕ್ರೈಸ್ತರು, ದಲಿತ ಮತ್ತು ಸಿಖ್ಖ್ ಮುಂತಾದವರ ಮೇಲೆ ಮೊಕದ್ದಮೆ ನಡೆಸುವ ಹಿಟಲರ ಪ್ರೇಮಿ ದೌರ್ಜನ್ಯ ನಡೆಸುವ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ದಂತಹ ಧಾರ್ಮಿಕ ಭಯೋತ್ಪಾದನೆ ನುಸುಳುಕೋರರ ಅಪಾಯದಿಂದ ಅಮೇರಿಕಾಗೆ ಜಾಗೃತಗೊಳಿಸಿರಿ. ಅವರು ಭಾರತದಲ್ಲಿನ ೨೦ ಕೋಟಿ ಮುಸಲ್ಮಾನರ ನರಸಂಹಾರದ ಷಡ್ಯಂತ್ರ ಹೂಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಈ ಕಾರ್ಯಕ್ರಮದ ಇನ್ನೊಬ್ಬ ವಕ್ತಾರ ಸಿರಾಜ್ ವಹಾಜ್ ಈ ಜಾಗತೀಕ ಸಂಬಂಧವಿರುವ ಕುಖ್ಯಾತ ಇಸ್ಲಾಮಿ ಮುಖಂಡನಾಗಿದ್ದಾನೆ.

ಆಯೋಜಕರ ಮೇಲೆ ಕ್ರಮ ಕೈಗೊಳ್ಳಿ ! – ಅಮೇರಿಕಾದಲ್ಲಿನ ಹಿಂದೂ

ದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ವಿರುದ್ಧದ ವಿಷಕಾರುವ ಇಸ್ಲಾಮಿ ಪ್ರಚಾರವನ್ನು ತಡೆಯುವುದಕ್ಕಾಗಿ ಮತ್ತು ಆಯೋಜಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅಮೇರಿಕಾದಲ್ಲಿನ ಹಿಂದೂ ಸಮುದಾಯವು ಒತ್ತಾಯಿಸಿದೆ.

 

ಸಂಪಾದಕೀಯ ನಿಲುವು

  • ಭಾರತದಲ್ಲಿ ಭಯೋತ್ಪಾದನೆ, ದಂಗೆಗಳು, ಲವ್ ಜಿಹಾದ್ ಮುಂತಾದ ಹಿಂಸಾಚಾರದ ಘಟನೆ ನಡೆಸಿ ಹಿಂದೂಗಳ ನರಸಂಹಾರ ಯಾರು ಮಾಡುತ್ತಿದ್ದಾರೆ, ಇದು ಜಗತ್ತಿಗೇ ತಿಳಿದಿದೆ ! ಇದರ ಕಡೆಗೆ ಇಂತಹ ಸಂಘಟನೆಗಳು ಉದ್ದೇಶಪೂರ್ವಕವಾಗಿ ವದಂತಿ ಹಬ್ಬಿಸುತ್ತಿದೆ ಮತ್ತು ‘ಸುಳ್ಳು ಹೇಳು; ಆದರೆ ನಂಬುವಂತೆ ಹೇಳು’ ಈ ರೀತಿಯಲ್ಲಿ ಹಿಂದೂ ವಿರೋಧಿ ಪ್ರಚಾರ ನಡೆಸಿ ಹಿಂದೂಗಳ ಬಗ್ಗೆ ಅಪಪ್ರಚಾರ ಮಾಡುತ್ತಾರೆ !
  • ಈ ಅಪಪ್ರಚಾರದ ಬಗ್ಗೆ ಭಾರತದಲ್ಲಿನ ಮುಸಲ್ಮಾನರು ಉತ್ತರ ನೀಡುವರೇ ?