ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಗಾಗಿ ಕಟಿಬದ್ಧ ನಿಯತಕಾಲಿಕೆ ‘ಸನಾತನ ಪ್ರಭಾತ’ದ ಕುರಿತು ಮುಂದಿನ ಸೇವೆಗಳಲ್ಲಿ ಪಾಲ್ಗೊಳ್ಳಿರಿ !

ಸಾಧಕರು ಹಾಗೆಯೇ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

ಸನಾತನದ ಆಶ್ರಮದಲ್ಲಿನ ಮುಂದಿನ ಸೇವೆಗಳಲ್ಲಿಯೂ ಪಾಲ್ಗೊಳ್ಳಬಹುದು !

ಸನಾತನದ ಆಶ್ರಮದಲ್ಲಿ ಮುಂದಿನ ಸೇವೆಗಾಗಿ ಸಾಧಕರ ಅಗತ್ಯವಿದೆ – ಗ್ರಂಥ, ಕಲೆ, ಜಾಲತಾಣ, ಧ್ವನಿ-ಚಿತ್ರೀಕರಣ, ಗಣಕಯಂತ್ರದ ದುರಸ್ತಿ, ವೈದ್ಯಕೀಯ, ಕಟ್ಟಡ, ಧಾನ್ಯ, ಅಡುಗೆಮನೆ ಮತ್ತು ಬೇಕರಿ. ಈ ಸೇವೆಯ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಆಗಾಗ ‘ಸನಾತನ ಪ್ರಭಾತ’ದಲ್ಲಿ ಪ್ರಕಟಿಸಲಾಗುತ್ತದೆ. ಮೇಲಿನ ಸೇವೆಗಳಲ್ಲಿ ಪಾಲ್ಗೊಳ್ಳುವ ಇಚ್ಛೆ ಇರುವವರು sanatan.sanstha೨೦೨೫@gmail.com ಈ ವಿಅಂಚೆ ವಿಳಾಸಕ್ಕೆ ಮಾಹಿತಿಯನ್ನು ಕಳುಹಿಸಬೇಕು. ಇದರಲ್ಲಿ ಏನಾದರೂ ಸಂದೇಹವಿದ್ದರೆ ಸೌ. ಭಾಗ್ಯಶ್ರೀ ಸಾವಂತ ಇವರನ್ನು ೭೦೫೮೮೮೫೬೧೦ ಈ ಕ್ರಮಾಂಕಕ್ಕೆ ಸಂಪರ್ಕಿಸಬೇಕು.

ಹಿಂದೂವಿರೋಧಿಗಳು, ಕಮ್ಯುನಿಸ್ಟ್, ಪ್ರಗತಿಪರರು, ಜಾತ್ಯತೀತರು ಮುಂತಾದವರಿಂದ ಹಿಂದೂ ಧರ್ಮದ ಮೇಲೆ ನಾಲ್ಕು ದಿಕ್ಕಿನಿಂದ ಆಕ್ರಮಣವಾಗುತ್ತಿರುವಾಗ ಆ ಕುರಿತು ದಿಟ್ಟತನದಿಂದ ಉತ್ತರವನ್ನು ನೀಡಿ ಹಿಂದೂಗಳಿಗೆ ಮಾರ್ಗದರ್ಶನವನ್ನು ಮಾಡುವ ನಿಯತಕಾಲಿಕೆ ಎಂದರೆ ‘ಸನಾತನ ಪ್ರಭಾತ’ ! ‘ಸನಾತನ ಪ್ರಭಾತ’ವು ಹಿಂದೂ ರಾಷ್ಟ್ರದ ದಿಶೆಯಲ್ಲಿ ಮಾರ್ಗಕ್ರಮಣ ಮಾಡುವಾಗ ಹಿಂದುತ್ವನಿಷ್ಠರಿಗೆ ಮಾರ್ಗದರ್ಶನ ಮಾಡುತ್ತದೆ. ವಾರ್ತೆಗಳ, ವಿವಿಧ ಹಿಂದುತ್ವನಿಷ್ಠರ ವಿಚಾರವಂತರ ಬರವಣಿಗೆಗಳು, ಚೌಕಟ್ಟುಗಳು ಮುಂತಾದ ಮಾಧ್ಯಮದಿಂದ ಹಿಂದೂಗಳನ್ನು ಜಾಗೃತಗೊಳಿಸುತ್ತಿದೆ.

ಕಳೆದ ೨ ದಶಕಗಳಿಂದ ಕಾರ್ಯನಿರತವಾಗಿರುವ ಈ ನಿಯತಕಾಲಿಕೆಯ ಪ್ರಸಾರವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ ಇವುಗಳ ವಿಚಾರವು ಹೆಚ್ಚೆಚ್ಚು ಜನರ ವರೆಗೆ ತಲುಪಲು ಜನಶಕ್ತಿಯ ತುರ್ತು ಅಗತ್ಯವಿದೆ. ಈ ಕುರಿತು ‘ಸನಾತನ ಪ್ರಭಾತ’ದಲ್ಲಿನ ಸೇವೆಗಳಲ್ಲಿ ಸಹಾಯವಾಗಿ ನೀವೂ ಅಳಿಲು ಸೇವೆಯನ್ನು ಸಲ್ಲಿಸಬಹುದು. ಮುಂದಿನ ಸೇವೆಗಳಲ್ಲಿ ಕೆಲವು ಸೇವೆಗಳನ್ನು ಆಶ್ರಮದಲ್ಲಿದ್ದು ಕಲಿತುಕೊಂಡ ನಂತರ ಮನೆಯಲ್ಲಿದ್ದು ಮಾಡಬಹುದು. ಇದಕ್ಕೆ ಒಳಗೊಂಡಿರುವ ಸೇವೆಗಳು ಮುಂದಿನಂತಿವೆ.

೧. ಮನೆಯಲ್ಲಿದ್ದು ಮಾಡುವಂತಹ ಸೇವೆಗಳು

೧ ಅ. ಆಂಗ್ಲ ಮತ್ತು ಹಿಂದಿ ಈ ಭಾಷೆಗಳಲ್ಲಿನ ಲೇಖನಗಳ ಮರಾಠಿ ಅನುವಾದವನ್ನು ಮಾಡುವುದು

೧ ಆ. ರಾಷ್ಟ್ರ ಮತ್ತು ಧರ್ಮ ಇವುಗಳ ಸಂದರ್ಭದಲ್ಲಿನ ಲೇಖನಗಳ ಸಂಕಲನ ಮಾಡುವುದು

೧ ಆ ೧. ಸೇವೆಯ ಸ್ವರೂಪ

ಅ. ಕಡತಗಳ ಪ್ರಾಥಮಿಕ ಸಂಕಲನ (ಬರವಣಿಗೆಯಲ್ಲಿನ ಅನಾವಶ್ಯಕ ಭಾಗವನ್ನು ತೆಗೆಯುವುದು, ವ್ಯಾಕರಣದ ಸುಧಾರಣೆ ಮುಂತಾದವುಗಳನ್ನು) ಮಾಡುವುದು

ಆ. ಕಡತಗಳ ಅಂತಿಮ ಸಂಕಲನ (ಪ್ಯಾರಾಗಳು ಮತ್ತು ಶಿರೋನಾಮೆಗಳು ಅಗತ್ಯವಿದ್ದಲ್ಲಿ ಶೀರ್ಷಿಕೆಗಳನ್ನು ಬರೆಯುವುದು, ವಾಕ್ಯರಚನೆ ಸುಸ್ಪಷ್ಟಪಡಿಸುವುದು, ಅನುವಾದಗೊಂಡ ಕಡತಗಳಿದ್ದರೆ ಯೋಗ್ಯ ರೀತಿಯಿಂದ ಅನುವಾದ ಆಗಿದೆಯೇ ಎಂಬುದನ್ನು ಖಚಿತಪಡಿಸುವುದು ಇತ್ಯಾದಿಗಳನ್ನು) ಮಾಡುವುದು

ಇ. ಸುಮಾರು ೨ ಸಾವಿರ ಕೆ.ಬಿ. ಬರವಣಿಗೆಗಳಿರುವ ವಾರ್ತೆಗಳ ಸಂಕಲನವನ್ನು ಮಾಡಿ ಅವುಗಳಲ್ಲಿನ ಆಯ್ದ ಬರವಣಿಗೆಯ ಚೌಕಟ್ಟುಗಳನ್ನು ತಯಾರಿಸುವುದು (ವಾರ್ತೆಗಳಲ್ಲಿನ ಅನಾವಶ್ಯಕ ಭಾಗಗಳನ್ನು ತೆಗೆಯುವುದು, ಸುದ್ದಿಗಳ ಸಂಕಲನವನ್ನು ಮಾಡಿ ಅದಕ್ಕೆ ಯೋಗ್ಯವಾದ ಶೀರ್ಷಿಕೆಯನ್ನು ನೀಡುವುದು)

ಈ ಸೇವೆಗಳಿಗಾಗಿ ರಾಷ್ಟ್ರ ಮತ್ತು ಧರ್ಮಗಳ ಕುರಿತು ಘಟಿಸುತ್ತಿರುವ ಪ್ರಾಥಮಿಕ ಮಾಹಿತಿಗಳಿರಬೇಕು. ಆಶ್ರಮದಲ್ಲಿದ್ದು ಅಥವಾ ಮನೆಯಲ್ಲಿದ್ದು ಈ ಸೇವೆಯನ್ನು ಮಾಡಬಹುದು. ಕೆಲವು ದಿನ ಆಶ್ರಮಕ್ಕೆ ಬಂದು ಸೇವೆಯಲ್ಲಿನ ಸಣ್ಣಸಣ್ಣ ವಿಷಯಗಳನ್ನು ತಿಳಿದುಕೊಂಡರೆ ಮನೆಯಲ್ಲಿದ್ದು ಸೇವೆ ಮಾಡಲು ಸುಲಭವಾಗುವುದು.

೨. ಆಶ್ರಮದಲ್ಲಿದ್ದು ಮಾಡುವ ಸೇವೆಗಳು

೨ ಅ. ಛಾಯಾಚಿತ್ರಗಳ ವರ್ಗೀಕರಣ, ಹಾಗೆಯೇ ‘ಫೊಟೊಶಾಪ್’ ಪದ್ಧತಿಯಲ್ಲಿ ಮಾಡುವ ಇತರ ಸೇವೆಗಳು

೨ ಅ ೧. ಛಾಯಾಚಿತ್ರಗಳಿಗೆ ಪ್ರಾಥಮಿಕ ಪ್ರಕ್ರಿಯೆಯನ್ನು ಮಾಡುವುದು : ಛಾಯಾಚಿತ್ರಗಳ ಮುದ್ರಣವು ಸರಿಯಾಗುವ ದೃಷ್ಟಿಯಿಂದ ಮತ್ತು ವ್ಯಕ್ತಿಯು ಸ್ಪಷ್ಟವಾಗಿ ಕಾಣಿಸಬೇಕಾಗುತ್ತದೆ. ‘ಬೆಳಕಿನ ವ್ಯವಸ್ಥೆಯು ಸರಿ ಇಲ್ಲದಿರುವುದು ಅಥವಾ ಕಡಿಮೆ ಬೀಳುವುದು, ಹಿನ್ನೆಲೆ (ಬ್ಯಾಕ್ ಗ್ರೌಂಡ್) ಯನ್ನು ಬದಲಾಯಿಸುವುದು’, ಇಂತಹ ವಿವಿಧ ಕಾರಣಗಳಿಂದ ಛಾಯಾಚಿತ್ರಗಳ ಮೇಲೆ ಪ್ರಕ್ರಿಯೆಯನ್ನು ಮಾಡುವುದು ಆವಶ್ಯಕವಾಗಿರುತ್ತದೆ. ಇಂತಹ ೪೦೦ ಛಾಯಾಚಿತ್ರಗಳ ಪ್ರಕ್ರಿಯೆಗಳನ್ನು ಮಾಡಲಿಕ್ಕಿದೆ.

೨ ಅ ೨. ಛಾಯಾಚಿತ್ರಗಳ ವರ್ಗೀಕರಣವನ್ನು ಮಾಡಿ ಮತ್ತು ೧೦ ಸಾವಿರ ೫೦ ಛಾಯಾಚಿತ್ರಗಳನ್ನು ಆಯಾ ವಿಷಯಗಳ ಸಂಚಿಕೆಯಲ್ಲಿ ಸುರಕ್ಷಿತವಾಗಿಡುವುದು (ಸೇವ್ ಮಾಡಿಡುವುದು)

೨ ಅ ೩. ಛಾಯಾಚಿತ್ರಗಳ ಮಾಹಿತಿಯ ಕಡತಗಳನ್ನು ತಯಾರಿಸುವುದು ಮತ್ತು ೫೦೦ ಛಾಯಾಚಿತ್ರಗಳ ಮಾಹಿತಿಗಳನ್ನು ‘ಎಕ್ಸಲ್ ಶೀಟ್’ನಲ್ಲಿ ತುಂಬಿ ಅವುಗಳನ್ನು ಪರಿಶೀಲಿಸುವುದು

೨ ಆ ೧. ಸೇವೆಯ ಸ್ವರೂಪ : ಸನಾತನ ಸಂಸ್ಥೆಯ ವಿವಿಧ ಉಪಕ್ರಮಗಳ ಛಾಯಾಚಿತ್ರಗಳನ್ನು ನೋಡಿ ಆ ಕುರಿತು ಮಾಹಿತಿಗಳನ್ನು (ಉಪಕ್ರಮದ ದಿನಾಂಕ, ಸಂಪೂರ್ಣ ವಿಷಯ ಇತ್ಯಾದಿ) ‘ಎಕ್ಸಲ್ ಶೀಟ್’ನಲ್ಲಿ ತುಂಬುವುದು, ಛಾಯಾಚಿತ್ರಗಳಿಗೆ ಛಾಯಾಚಿತ್ರದ ಸಾಲು (‘ಕ್ಯಾಪ್ಶನ್’) ಹಾಕುವುದು, ಆ ಸಂದರ್ಭದಲ್ಲಿನ ಅಪೂರ್ಣ ಮಾಹಿತಿಗಳನ್ನು ಸಂಬಂಧಿತರಿಗೆ ಕೇಳುವುದು

೨ ಇ. ವಿವಿಧ ವಾರ್ತಾವಾಹಿನಿಗಳಲ್ಲಿ ನಡೆದ  ಕಾರ್ಯಕ್ರಮಗಳ ಸಂಕ್ಷಿಪ್ತ ಮಾಹಿತಿಯನ್ನು ತುಂಬುವುದು

೨ ಇ ೧. ಸೇವೆಯ ಸ್ವರೂಪ : ವಿವಿಧ ವಾರ್ತಾವಾಹಿನಿಗಳಲ್ಲಿ ಪ್ರಸಾರವಾಗುವ ಸನಾತನ ಸಂಸ್ಥೆಯ ಸಂದರ್ಭದಲ್ಲಿನ ವಾರ್ತೆಗಳು, ಸಂಸ್ಥೆಯ ವಕ್ತಾರರು ಪಾಲ್ಗೊಂಡಿರುವ ಚರ್ಚಾಸತ್ರಗಳು, ಮಾಹಿತಿಗಳನ್ನು ನೀಡುವ ಕಾರ್ಯಕ್ರಮಗಳ ಚಲನಚಿತ್ರ (ವಿಡಿಯೋ)ಗಳನ್ನು ನೋಡಿ ಆ ಬಗೆಗಿನ ಎಲ್ಲ ಮಾಹಿತಿಗಳನ್ನು (ವಿವರಣೆ, ಭಾಷೆ ಮುಂತಾದವುಗಳನ್ನು) ‘ಎಕ್ಸಲ್ ಶೀಟಿ’ನಲ್ಲಿ ತುಂಬುವುದು (೮೩೦ ವಿಡಿಯೋಗಳನ್ನು ನೋಡಿ ಅವುಗಳ ಸಂಕ್ಷಿಪ್ತ ಮಾಹಿತಿಗಳನ್ನು ಆಂಗ್ಲ ಭಾಷೆಯಲ್ಲಿ ತುಂಬಬೇಕು.)

೨ ಈ. ಸಂರಚನೆ (ಫಾರಮೆಟ್) ಮಾಡುವುದು : ಈ ಸೇವೆಗಾಗಿ ಅಲ್ಪ ಕಾಲ ಅಥವಾ ದೀರ್ಘಕಾಲ ಆಶ್ರಮದಲ್ಲಿದ್ದು ದೈನಿಕ, ಸಾಪ್ತಾಹಿಕ ಮತ್ತು ಪಾಕ್ಷಿಕಗಳ ಪುಟಗಳನ್ನು ಹಾಗೆಯೇ ಜಾಹೀರಾತುಗಳ ರಚನೆಗಳನ್ನು (ಫಾರಮೆಟ್) ಮಾಡುವುದು

ಮೇಲಿನ ಎಲ್ಲ ಸೇವೆಗಳಿಗಾಗಿ ಅಗತ್ಯವಾಗಿರುವ ಕೌಶಲ್ಯಗಳು

ಅ. ಮರಾಠಿ ವ್ಯಾಕರಣ ಮತ್ತು ಶಬ್ದರಚನೆಗಳ ಜ್ಞಾನ, ಹಾಗೆಯೇ ಸಂಕಲನಕೌಶಲ್ಯ

ಆ. ಹಿಂದಿ ಮತ್ತು ಆಂಗ್ಲ ಈ ಭಾಷೆಗಳ ಜ್ಞಾನ

ಇ. ಮರಾಠಿ ಬೆರಳಚ್ಚು ಮಾಡುವುದು, ಎಕ್ಸಲ್ ಶೀಟನ್ನು ನಿರ್ವಹಿಸುವುದು, ‘ಇನ್‌ಡಿಸೈನ್’, ‘ಕೊರಲ್’, ‘ಫೋಟೊಶಾಪ್’ ಈ ಪದ್ಧತಿಗಳ ಜ್ಞಾನ

ಈ ಸೇವೆಗಳನ್ನು ಮಾಡಲು ಇಚ್ಛಿಸುವವರು; ಆದರೆ ಸೇವೆಯ ಕೌಶಲ್ಯ ಇಲ್ಲದಿರುವವರಿಗೆ ಆ ಸಂದರ್ಭದಲ್ಲಿನ ತರಬೇತಿಯನ್ನು ನೀಡಲಾಗುವುದು. ಇಚ್ಛೆಯುಳ್ಳವರು ಜಿಲ್ಲಾಸೇವಕರ ಮಾಧ್ಯಮದಿಂದ ಮುಂದಿನ ಕೋಷ್ಟಕ್ಕನುಸಾರ ತಮ್ಮ ಮಾಹಿತಿಗಳನ್ನು ಶ್ರೀ. ನಾಗೇಶ ಗಾಡೆ ಇವರ ಹೆಸರಿನಲ್ಲಿ dspgoa೧@gmail.com ಈ ಗಣಕೀಯ ವಿಳಾಸದ ಮೇಲೆ ಅಥವಾ ಮುಂದಿನ ಅಂಚೆ ವಿಳಾಸದ ಮೇಲೆ ಕಳುಹಿಸಬೇಕು.

ಅಂಚೆ ವಿಳಾಸ – ಶ್ರೀ. ನಾಗೇಶ ಗಾಡೆ, c/o ‘ಸನಾತನ ಆಶ್ರಮ, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – ೪೦೩೪೦೧

ಹಿಂದೂ ರಾಷ್ಟ್ರದ ದಿಶೆಯಿಂದ ಮಾರ್ಗಕ್ರಮಣ ಮಾಡುವ ಧರ್ಮಪ್ರೇಮಿಗಳ ಆಧಾರಸ್ತಂಭವಾಗಿರುವ ‘ಸನಾತನ ಪ್ರಭಾತ’ದ ಸಂದರ್ಭದಲ್ಲಿ ಮೇಲಿನ ಸೇವೆಗಳಲ್ಲಿ ಪಾಲ್ಗೊಂಡು ಧರ್ಮಕಾರ್ಯದಲ್ಲಿ ಅಳಿಲು ಸೇವೆಯನ್ನು ಸಲ್ಲಿಸಿರಿ !