ವಾಶಿಂಗ್ಟನ (ಅಮೇರಿಕಾ) – ಅಮೇರಿಕಾದಲ್ಲಿ ‘ಎಂಟಿ ಡೀಫೇಮೆಶನ ಲೀಗ್’ ನಡೆಸಿ ಅಧ್ಯಯನದ ಅನುಸಾರ ಕಳೆದ ೧ ದಶಕದಲ್ಲಿ ೪೫೦ ರಾಜಕೀಯ ಹತ್ಯೆಗಳು ನಡೆದಿವೆ. ಇವುಗಳಲ್ಲಿ ಶೇ. ೭೫ರಷ್ಟು ಅಂದರೆ ೩೩೭ ಹತ್ಯೆಗಳನ್ನು ಬಲಪಂಥೀಯ ವಿಚಾರ ಸರಣಿಯ ಕಟ್ಟರತಾವಾದಿಗಳು, ಹಾಗೂ ಶೇ. ೪ರಷ್ಟು ಹತ್ಯೆಗಳನ್ನು ಎಡ ಪಂಥೀಯ ವಿಚಾರಸರಣಿಯ ಕಟ್ಟರತಾವಾದಿಗಳು ಮಾಡಿದ್ದಾರೆ. ಇತ್ತೀಚೆಗೆ ಅಮೇರಿಕಾದ ಸಂಸತ್ತಿನ ಸಭಾಪತಿಗಳಾದ ನ್ಯಾನ್ಸಿ ಪೆಲೋಸೀಯವರ ಸ್ಯಾನ ಫ್ರಾನ್ಸಿಸ್ಕೋದಲ್ಲಿನ ಮನೆಯ ಮೇಲೂ ಆಕ್ರಮಣ ಮಾಡಲಾಯಿತು. ಇದರಲ್ಲಿ ನ್ಯಾನ್ಸಿರವರ ಪತಿ ಪಾಲ ಪೆಲೋಸೀಯವರ ತಲೆಗೆ ಸುತ್ತಿಗೆಯಿಂದ ಆಕ್ರಮಣ ಮಾಡಲಾಗಿದೆ. ಆಕ್ರಮಣಕಾರರು ನ್ಯಾನ್ಸಿಯವರ ಮೇಲೆ ಆಕ್ರಮಣ ಮಾಡಲು ಬಂದಿದ್ದರು; ಅದರೆ ಅದರ ಮೊದಲೇ ಪಾಲರವರೊಂದಿಗೆ ಅವರ ಸೆಣಸಾಟ ನಡೆಯಿತು. ಈ ಘಟನೆಯ ಸಮಯದಲ್ಲಿ ನ್ಯಾನ್ಸಿಯವರು ಮನೆಯಲ್ಲಿರಲಿಲ್ಲ.
Attack on Pelosi’s husband heightens fears of increasing US political violence https://t.co/ckGNEZR4JD
— The Guardian (@guardian) October 29, 2022
೧. ಪೊಲೀಸರ ಅಂಕಿಅಂಶದ ಅನುಸಾರ ೨೦೧೭ರಲ್ಲಿ ಸಂಸತ್ತಿನ ಸಂಸದರ ಮೇಲಿನ ಬೆದರಿಕೆಯ ಸುಮಾರು ೩ ಸಾವಿರದ ೯೩೯ ಪ್ರಕರಣಗಳು ಬೆಳಕಿಗೆ ಬಂದಿದ್ದವು. ೨೦೨೧ರಲ್ಲಿ ಈ ಆಕ್ರಮಣಗಳ ಸಂಖ್ಯೆಯು ಮೂರು ಪಟ್ಟು ಹೆಚ್ಚಾಗಿದ್ದು ಅದು ೯ ಸಾವಿರದ ೬೨೫ರಷ್ಟಾಗಿವೆ.
೨. ಪೊಲೀಸರು ಸಂಸದರ ಮೇಲಿನ ಹೆಚ್ಚುತ್ತಿರುವ ಆಕ್ರಮಣಗಳನ್ನು ಗಮನದಲ್ಲಿಟ್ಟು ಸಂರಕ್ಷಣೆಗಾಗಿ ಖರ್ಚಾಗುವ ಮೊತ್ತದಲ್ಲಿಯೂ ಹೆಚ್ಚಳ ಮಾಡಿದ್ದರು. ಈ ಮೊತ್ತವು ಪ್ರತಿಯೊಬ್ಬ ಸಂಸದನಿಗಾಗಿ ೮ ಲಕ್ಷದ ೨೩ ಸಾವಿರ ರೂಪಾಯಿಗಳಷ್ಟು ಹೆಚ್ಚಾಗಿದೆ. ಸಂಸತ್ತಿನಲ್ಲಿ ೪೩೫ ಸದಸ್ಯರಿದ್ದಾರೆ. ಅವರು ಮನೆಯಿಂದ ರಾಜಧಾನಿ ವಾಶಿಂಗ್ಟನಗೆ ಹೋಗುತ್ತಿರುತ್ತಾರೆ. ಅವರೊಂದಿಗೆ ೨೪ ಗಂಟೆ ಸುರಕ್ಷಾರಕ್ಷಕರು ಇರುತ್ತಾರೆ.
೩. ಈ ವರ್ಷವೂ ಬೆದರಿಕೆಗಳ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಜನವರಿ, ಪೆಭ್ರುವರಿ ಮತ್ತು ಮಾರ್ಚ ಈ ೩ ತಿಂಗಳಲ್ಲಿಯೇ ಪೊಲೀಸರು ಇಂತಹ ೧ ಸಾವಿರದ ೮೦೦ಕ್ಕೂ ಹೆಚ್ಚಿನ ಅಪರಾಧಗಳ ನೋಂದಣಿ ಮಾಡಿಕೊಂಡಿದ್ದಾರೆ. ತಜ್ಞರ ಅಭಿಪ್ರಾಯದಂತೆ ಇವುಗಳ ಹಿಂದೆ ನೇತಾರರ ಕೆರಳಿಸುವ ಭಾಷಣಗಳೇ ದೊಡ್ಡ ಕಾರಣಗಳಾಗಿವೆ.
ಸಂಪಾದಕೀಯ ನಿಲುವುಭಾರತಕ್ಕೆ ಹಾಗೂ ಇತರ ವಿಕಾಸಗೊಳ್ಳುತ್ತಿರುವ ದೇಶಗಳಿಗೆ ಉಪದೇಶಗಳ ಮಳೆಗರೆಯುವ ಅಮೇರಿಕಾದಲ್ಲಿ ಕಾನೂನು ಹಾಗೂ ಸುವ್ಯವಸ್ಥೆಯ ಸ್ಥಿತಿ ಹೇಗಿದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ ! |