ಮೇರಠದಲ್ಲಿ ಕ್ರೈಸ್ತರಿಂದ ೪೦೦ ಕ್ಕೂ ಹೆಚ್ಚಿನ ಹಿಂದೂಗಳ ಮತಾಂತರ !

೨ ವರ್ಷಗಳಿಂದ ಮತಾಂತರದ ಗುಪ್ತ ಚಟುವಟಿಕೆ ನಡೆಯುತ್ತಿತ್ತು !

ಮೆರಠ (ಉತ್ತರಪ್ರದೇಶ) – ಉತ್ತರ ಪ್ರದೇಶದಲ್ಲಿನ ಮೆರಠ ಜಿಲ್ಲೆಯ ಮಂಗತಾಪುರಂ ಇಲ್ಲಿ ಸಹಾಯ ಮಾಡುವ ನೆಪದಲ್ಲಿ ೪೦೦ ಕ್ಕೂ ಹೆಚ್ಚಿನ ಬಡ ಹಿಂದೂಗಳನ್ನು ಬಲವಂತವಾಗಿ ಕ್ರೈಸ್ತ ಪಂಥಕ್ಕೆ ಮತಾಂತರಗೊಳಿಸಿರುವುದು ಬೆಳಕಿಗೆ ಬಂದಿದೆ. ಕಳೆದ ೨ ವರ್ಷಗಳಿಂದ ಮತಾಂತರದ ಚಟುವಟಿಕೆ ನಡೆಯುತ್ತಿದ್ದವು. ಈ ಮತಾಂತರಕ್ಕೆ ಪೊಲೀಸರ ಉದಾಸೀನತೆಯೇ ಕಾರಣ ಎಂದು ತಿಳಿದು ಬಂದಿದೆ.

ಈ ಪ್ರಕರಣದಲ್ಲಿ ಪೊಲೀಸರು,

೧. ಬಾರಂಬಂಕಿ ಇಲ್ಲಿಯ ೧೦ ಜನರು ಸರಿಸುಮಾರು ೨೦ ವರ್ಷಗಳ ಹಿಂದೆ ಮಂಗತಾಪುರಂಗೆ ಬಂದಿದ್ದರು ಮತ್ತು ಖಾಲಿ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದರು. ಈಗ ಅವರ ಸಂಖ್ಯೆ ೪೦೦ ಕ್ಕೂ ಮೀರಿದೆ.

೨. ಕೊರೊನಾ ಮಹಾಮಾರಿಯ ಕಾಲದಲ್ಲಿ ಆಹಾರ ನೀರು ಸಿಗದೆ ಇರುವ ಸಮಯದಲ್ಲಿ, ದೆಹಲಿಯ ಪಾದ್ರಿ ಮಹೇಶ ಇವನು ಸಹಾಯ ಮಾಡುವ ನೆಪದಲ್ಲಿ ಅಲ್ಲಿಗೆ ಬಂದನು. ಅವನು ಇತರ ಕ್ರೈಸ್ತರ ಸಹಾಯದಿಂದ ಇಲ್ಲಿಯ ಜನರಿಗೆ ಆಹಾರ ನೀರಿನ ವ್ಯವಸ್ಥೆ ಮಾಡಿ ಅವರಿಗೆ ಸಹಾಯ ಮಾಡಿದನು.

೩. ಪಾದ್ರಿ ಮಹೇಶ ಇವನು ಕೆಲವು ಜನರಿಗೆ ವಿಶ್ವಾಸಕ್ಕೆ ತೆಗೆದುಕೊಂಡು ಗುಡಿಸಲುಗಳಲ್ಲಿ ವಾಸವಿರುವ ಜನರನ್ನು ಕ್ರೈಸ್ತ ಪಂಥ ಸ್ವೀಕರಿಸುವುದಕ್ಕೆ ಪ್ರೇರೇಪಿಸಿದನು. ಆದ್ದರಿಂದ ಅವನು ಸುಮಾರು ೪೦೦ ಜನರನ್ನು ಮತಾಂತರಗೊಳಿಸಿದನು ಮತ್ತು ಅವರು ಚರ್ಚ್‌ಗೆ ಹೋಗಲು ಆರಂಭಿಸಿದರು. ಪಾದ್ರಿ ಇಲ್ಲಿಯ ಮತಾಂತರಗೊಂಡಿರುವ ಜನರ ಹೆಣ್ಣು ಮಕ್ಕಳ ವಿವಾಹ ಕೂಡ ಕ್ರೈಸ್ತ ಸಮುದಾಯದ ಯುವಕರ ಜೊತೆ ಮಾಡಿಸಿದನು.

೪. ಇದರ ನಂತರ ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದವರು ಈ ಜನರಿಗೆ ಹಿಂದೂ ಧರ್ಮದ ಪ್ರಕಾರ ಪೂಜೆ ಮಾಡದಂತೆ ಒತ್ತಡ ತಂದರು. ‘ನೀವು ಕ್ರೈಸ್ತರಿರುವಿರಿ ಈಗ ನೀವು ಹಿಂದೂ ದೇವತೆಗಳ ಪೂಜೆ ಮಾಡಲು ಸಾಧ್ಯವಿಲ್ಲ’, ಎಂದು ಹೇಳುತ್ತಾ ದೇವರ ಮೂರ್ತಿಗಳನ್ನು ತೆರವುಗೊಳಿಸುವುದಕ್ಕೆ ಅವರ ಮೇಲೆ ಒತ್ತಡ ಹೇರಿದರು.

೫. ಪಾದ್ರಿ ಮಹೇಶ ಇವನ ಆಳು ಅನಿಲನು ಅವರ ಕೆಲವು ಸಹಚರರ ಸಹಾಯದಿಂದ ದೀಪಾವಳಿಯ ಸಮಯದಲ್ಲಿ ಜನರ ಮನೆಯಿಂದ ದೇವರ ಛಾಯಾಚಿತ್ರಗಳನ್ನು ತೆಗೆದು ಹಾಕಿದ ಮತ್ತು ಅವುಗಳನ್ನು ಹರಿದು ಹಾಕಿದ. ಆ ಸಮಯದಲ್ಲಿ ಚಾಂಪಿಯನ ಎಂಬ ಯುವಕನು ಮತಾಂತರಕ್ಕೆ ವಿರೋಧಿಸಿದನು. ಕ್ರೈಸ್ತರ ಕಿರುಕುಳಕ್ಕೆ ಬೇಸರಗೊಂಡು ಜನರು ಪೋಲಿಸರಲ್ಲಿ ದೂರು ದಾಖಲಿಸಿದರು.

೬. ಈ ಮಾತಾಂತರದ ಪ್ರಕರಣದ ವಾರ್ತೆ ತಿಳಿಯುತ್ತಲೇ ಭಜರಂಗ ದಳದ ದಿಲೀಪ ಸಿಂಹ ಮತ್ತು ಸಚಿನ ಸಿರೋಹಿ ಅಲ್ಲಿಗೆ ತಲುಪಿದರು. ಅವರು ಅಲ್ಲಿಯ ಕ್ರೈಸ್ತರ ಪಂಥಕ್ಕೆ ಸಂಬಂಧ ಪಟ್ಟ ಪುಸ್ತಕಗಳು ಮತ್ತು ಆರ್ಥಿಕ ಸಹಾಯ ಪಡೆದಿರುವ ಜನರ ಪಟ್ಟಿಯನ್ನು ಪೊಲೀಸರಿಗೆ ಒಪ್ಪಿಸಿದರು.
೭. ಈ ದೂರಿನ ಆಧಾರದಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ೫ ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಸಂಪಾದಕೀಯ ನಿಲುವು

  • ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಹಿಂದೂಗಳ ಮತಾಂತರ ಆಗುವುದು ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಹೆಚ್ಚುತ್ತಿರುವ ಮತಾಂತರದ ಚಟುವಟಿಕೆ ನೋಡುತ್ತಿದ್ದರೆ ಕೇಂದ್ರ ಸರಕಾರ ಮತಾಂತರ ವಿರೋಧಿ ಕಾನೂನು ತಕ್ಷಣ ಜಾರಿ ಮಾಡುವುದು ಅವಶ್ಯಕವಾಗಿದೆ !
  • ೨ ವರ್ಷಗಳಿಂದ ಮತಾಂತರದ ಗುಪ್ತ ಚಟುವಟಿಕೆ ನಡೆಯುತ್ತಿದ್ದರು ತನಿಖಾ ದಳಕ್ಕೆ ಇದರ ಸುಳಿವು ಹೇಗೆ ದೊರೆಯಲಿಲ್ಲ ?