ಚೀನಾದ ಆಕ್ರಮಣಕಾರಿಯನ್ನು ತಡೆಯಲು ಭಾರತದ ಜೊತೆಗೆ ಸಂರಕ್ಷಣಾತ್ಮಕ ಪಾಲುದಾರಿಕೆ ಹೆಚ್ಚಳದ ಕುರಿತು ಅಮೇರಿಕಾದಿಂದ ರಣತಂತ್ರ ಯೋಜಿಸಿದೆ !

ವಾಷಿಂಗ್ಟನ (ಅಮೇರಿಕಾ) – ಅಮೇರಿಕಾ ಅಕ್ಟೋಬರ್ ೨೭ ರಂದು ಅದರ ‘ಅಮೇರಿಕೀ ರಾಷ್ಟ್ರೀಯ ಸಂರಕ್ಷಣಾ ರಣತಂತ್ರ ೨೦೨೨’ ಜಾರಿಗೊಳಿಸಿದೆ. ಅದಂತೆ ‘ಪೇಂಟಾಗಾನ್’ ಭಾರತದ ಜೊತೆಗೆ ಅದರ ಪ್ರಮುಖ ಸಂರಕ್ಷಣಾ ಪಾಲುದಾರಿಕೆ ಮುಂದುವರೆಸಲಿದೆ. ಅಮೇರಿಕಾದ ಸೇನೆ ಚೀನಾದ ಸೈನ್ಯದ ಆಕ್ರಮಣಕಾರಿಯನ್ನು ತಡೆಯುವುದು ಮತ್ತು ಹಿಂದ ಮಹಾಸಾಗರದ ಪ್ರದೇಶದಲ್ಲಿ ತನ್ನದೇ ಆದ ಹಾಗೂ ಸಹಜ ಉಪಸ್ಥಿತಿ ನಿರ್ಧರಿಸುವುದು ಇದಕ್ಕಾಗಿ ಭಾರತದ ಕ್ಷಮತೆ ಹೆಚ್ಚಿಸಲು ಮುಂದೆಬರಲಿದೆ, ಎಂದೂ ಸಹ ರಣತಂತ್ರದಲ್ಲಿ ನೊಂದಾಯಿಸಲಾಗಿದೆ.

ಈ ರಕ್ಷಣಾ ನೀತಿಯನುಸಾರ ಅಮೇರಿಕಾ ರಕ್ಷಣಾ ವಿಭಾರ ಹಿಂದ ಮತ್ತು ಪ್ರಶಾಂತ ಮಹಾಸಾಗರದ ಕ್ಷೇತ್ರದಲ್ಲಿ ಒಂದು ಹೊಂದಿಕೊಳ್ಳುವಂತಹ ರಕ್ಷಣಾ ಪ್ರಣಾಳಿಕೆ ನಿರ್ಮಿಸಿ ಅದನ್ನು ಸದೃಢಗೊಳಿಸುವ ವಿಚಾರ ಮಾಡುತ್ತಿದೆ. ಅದಕ್ಕಾಗಿ ಅಮೇರಿಕಾ ಆಸ್ಟ್ರೇಲಿಯಾಜೊತೆಗೂ ಹೆಚ್ಚು ಸಕ್ಷಮ ಪಾಲುದಾರಿಕೆ ಮಾಡಿಕೊಳ್ಳಲಿದೆ.

ಚೀನಾ ಎಂದಿಗೂ ಒಂದು ಸವಾಲಾಗಿ ಇರುವುದು ! – ಅಮೇರಿಕಾದ ಸಂರಕ್ಷಣಾ ಸಚಿವ

ಅಮೇರಿಕಾದ ಸಂರಕ್ಷಣಾ ಸಚಿವ ಲಾಯಡ ಆಸ್ಟಿನ್ ಇವರು, ನಾವು ಚೀನಾದ ಉದ್ದೇಶ ತಿಳಿದಿದ್ದೇವೆ. ಅದು ಎಂದಿಗೂ ಒಂದು ಸವಾಲಾಗಿ ಇರುವುದು. ಅದು ಅಮೆರಿಕಾದ ಏಕಮೇವ ಪ್ರತಿದ್ವಂದ್ವಿಯಾಗಿದೆ. ಅದರಲ್ಲಿ ಅಂತರಾಷ್ಟ್ರೀಯ ವ್ಯವಸ್ಥೆಗೆ ಹೊಸ ರೂಪ ನೀಡುವ ಆಸೆ ಮತ್ತು ಶಕ್ತಿ ಕೂಡ ಇದೆ. ರಷ್ಯಾ ಚೀನಾದ ಹಾಗೆ ಅಮೆರಿಕಕ್ಕೆ ಹೆಚ್ಚು ಸಮಯ ಸವಾಲು ನೀಡಲು ಸಾಧ್ಯವಿಲ್ಲ, ಎಂದು ಸಹ ಆಸ್ಟಿನ್ ಹೇಳಿದರು.

ಇರಾನ್ ಅದರ ಪರಮಾಣು ಕ್ಷಮತೆ ಹೆಚ್ಚು ಸುದೃಢಗೊಳಿಸುತ್ತಿದೆ !

ಆಸ್ಟಿನ್ ಮಾತು ಮುಂದುವರೆಸಿ, ಇರಾನ್ ಅದರ ಪರಮಾಣು ಕ್ಷಮತೆ ಹೆಚ್ಚು ಸುದೃಢಗೊಳಿಸುತ್ತಿದೆ. ಅನೇಕ ದೇಶಗಳು ತೆರೆ ಹಿಂದೆ ಅದಕ್ಕೆ ಸಹಾಯ ಮಾಡುತ್ತಿದೆ. ಅದು ನಿರ್ಮಿಸಿರುವ ಡ್ರೋನ್ ನ ಉಪಯೋಗ ರಷ್ಯಾ ಯುಕ್ರೇನ್ ವಿರುದ್ಧದ ಯುದ್ಧದಲ್ಲಿ ಮಾಡುತ್ತಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಒಂದು ಕಡೆ ಜಿಹಾದಿ ಪಾಕಿಸ್ತಾನಕ್ಕೆ ಅದರ ಸಂರಕ್ಷಣಾ ವ್ಯವಸ್ಥೆ ಉತ್ತಮವಾಗಿ ಕಾಪಾಡಿಕೊಳ್ಳುವುದಕ್ಕಾಗಿ ಸಹಾಯ ಮಾಡಿ ಭಾರತಕ್ಕೆ ಅಪಾಯ ವಾಡುವ ಅಮೆರಿಕ ಚೀನಾದ ಆಕ್ರಮಣಕಾರಿಯನ್ನು ಕಡಿಮೆಗೊಳಿಸಲು ಭಾರತಕ್ಕೆ ಸಹಾಯ ಮಾಡುತ್ತಿದೆ. ಒಂದೇ ಸಮಯಕ್ಕೆ ಎರಡು ದೋಣಿಯಲ್ಲಿ ಕಾಲಿಡುವ ಸ್ವಾರ್ಥಿ ಅಮೆರಿಕಕ್ಕೆ ಅದರದೇ ಭಾಷೆಯಲ್ಲಿ ಉತ್ತರ ನೀಡುವುದಕ್ಕೆ ಭಾರತ ಕೂಡ ಸ್ವತಂತ್ರವಾಗಿದೆ, ಇದನ್ನು ಅಮೆರಿಕ ಗಮನದಲ್ಲಿಟ್ಟುಕೊಳ್ಳಬೇಕು !