‘ಯೂನಿಲಿವರ್’ ಕಂಪನಿಯು ಅಮೇರಿಕಾದಲ್ಲಿನ ಮಾರುಕಟ್ಟೆಯಿಂದ ಉತ್ಪನ್ನಗಳನ್ನು ಹಿಂಪಡೆದಿದೆ !

‘ಡ್ರೈ ಶಾಂಪೂ’ನಿಂದ ರಕ್ತದ ಕ್ಯಾನ್ಸರ್ ಅಪಾಯ !

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾವು ‘ಯೂನಿಲಿವರ್’ ಕಂಪನಿಯು ‘ಡವ್’, ‘ಏರೋಸೋಲ್ ಡ್ರೈ ಶಾಂಪೂ’ ಸೇರಿದಂತೆ ಅನೇಕ ಪ್ರಸಿದ್ಧ ‘ಬ್ರಾಂಡ್’ಗಳ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆದಿದೆ. ಈ ಕಂಪನಿಯ ಅನೇಕ ಶಾಂಪೂಗಳಲ್ಲಿ ಕ್ಯಾನ್ಸರ ರೋಗವನ್ನುಂಟುಮಾಡುವ ‘ಬೆಂಜೀನ್’ ಎಂಬ ಅಪಾಯಕಾರಿ ರಾಸಾಯನಿಕ ಇರುವುದು ಕಂಡುಬಂದಿದೆ. ‘ಯೂನಿಲಿವರ್’ ತನ್ನ ಉತ್ಪನ್ನಗಳಲ್ಲಿ ಬೆಂಜೀನ್‌ನ ಪ್ರಮಾಣವು ಎಷ್ಟು ಇದೆ ಎಂಬುದರ ಬಗ್ಗೆ ಮಾಹಿತಿಯನ್ನು ಒದಗಿಸಿಲ್ಲ; ಆದರೆ ಅದರ ಎಲ್ಲಾ ಉತ್ಪನ್ನಗಳನ್ನು ಹಿಂಪಡೆಯಲಾಗಿದೆ. ‘ಡ್ರೈ ಶ್ಯಾಂಪೂ’ಗಳು ‘ಸ್ಪ್ರೇ’ಗಳಂತೆ ಇರುತ್ತವೆ. ಕೂದಲನ್ನು ಒದ್ದೆಯಾಗದಂತೆ ಸ್ವಚ್ಛಗೊಳಿಸಲು ಈ ರೀತಿಯ ಉತ್ಪನ್ನಗಳನ್ನು ಬಳಸಲಾಗುತ್ತದೆ.

ಸಂಪಾದಕೀಯ ನಿಲುವು

‘ಯೂನಿಲಿವರ್’ ಒಂದು ಅಂತಾರಾಷ್ಟ್ರೀಯ ಕಂಪನಿಯಾಗಿದೆ. ಇದರ ಉತ್ಪನ್ನಗಳನ್ನು ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ವಿತರಿಸಲಾಗುತ್ತದೆ. ಇದನ್ನು ನೋಡಿ, ಅದು ಇತರ ದೇಶಗಳಿಂದಲೂ ಈ ಉತ್ಪನ್ನಗಳನ್ನು ಹಿಂತೆಗೆದುಕೊಳ್ಳಬೇಕು. ಈ ವಿಷಯದಲ್ಲಿ ಭಾರತ ಸರಕಾರವು ತಾನೇ ಮುಂದಾಗಿ ಇಂತಹ ಉತ್ಪನ್ನಗಳನ್ನು ದೇಶದಲ್ಲಿ ನಿಷೇಧಿಸಬೇಕು !