ಭಾರತದೊಂದಿಗಿನ ವ್ಯಾಪಾರವೃದ್ಧಿಯನ್ನು ವಿರೋಧಿಸುವ ಸುಯೆಲಾ ಬ್ರೆವ್ಹರಮನ ಪುನಃ ಬ್ರಿಟನ್ನಿನ ಗೃಹಮಂತ್ರಿಯಾದರು !

ಪ್ರಧಾನಮಂತ್ರಿ ಋಷಿ ಸುನಕ ಮತ್ತು ಗೃಹಮಂತ್ರಿ ಸುಯೆಲಾ ಬ್ರೆವ್ಹರ

ಲಂಡನ (ಬ್ರಿಟನ) – ಬ್ರಿಟನ್ನಿನ ಹೊಸ ಪ್ರಧಾನಮಂತ್ರಿ ಋಷಿ ಸುನಕರವರು ತಮ್ಮ ಮಂತ್ರಿ ಮಂಡಳವನ್ನು ಘೋಷಿಸಿದ್ದಾರೆ. ಪ್ರಧಾನಿ ಸುನಕರವರು ಈ ಹಿಂದಿನ ಲೀಝ ಟ್ರಸ್‌ರವರ ಸರಕಾರದಲ್ಲಿ ಗೃಹಮಂತ್ರಿಯಾಗಿದ್ದ ಸುಯೆಲಾ ಬ್ರೆವ್ಹರಮನರಿಗೆ ಪುನಃ ಮಂತ್ರಿಮಂಡಳದಲ್ಲಿ ಸ್ಥಾನ ನೀಡಿ ಅವರಿಗೆ ಗೃಹಮಂತ್ರಿಪದವನ್ನು ಒಪ್ಪಿಸಿದ್ದಾರೆ. ಋಷಿ ಸುನಕ ಹಾಗೂ ಸುಯೆಲಾ ಬ್ರೆವ್ಹರಮನ ಇಬ್ಬರೂ ಭಾರತೀಯ ವಂಶದವರಾಗಿದ್ದಾರೆ. ಬ್ರೆವ್ಹರಮನರವರು ಕೆಲವು ದಿನಗಳ ಹಿಂದೆ ಭಾರತದೊಂದಿಗಿನ ಮುಕ್ತ ವ್ಯಾಪಾರದ ಒಪ್ಪಂದಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದರು.

ಬೆವ್ಹರಮನರು ‘ಭಾರತದೊಂದಿಗೆ ಮುಕ್ತ ವ್ಯಾಪಾರದ ಒಪ್ಪಂದವಾದರೆ ಬ್ರಿಟನ್ನಿನಲ್ಲಿ ಸ್ಥಳಾಂತರಗೊಂಡವರ ಸಂಖ್ಯೆಯು ಹೆಚ್ಚಾಗುತ್ತದೆ. ವೀಸಾ ಮುಗಿದ ನಂತರವೂ ಅನೇಕ ಪ್ರವಾಸಿಗಳು ದೇಶದ ಹೊರಗೆ ಹೋಗುವುದಿಲ್ಲ. ಇವರಲ್ಲಿ ಹೆಚ್ಚಿನವರು ಭಾರತೀಯರಾಗಿದ್ದಾರೆ’ ಎಂದು ಹೇಳಿದ್ದರು. ಇದನ್ನು ಭಾರತವು ವಿರೋಧಿಸಿತ್ತು. ಈ ಬಗ್ಗೆ ಬ್ರಿಟನ್ನಿನ ಆಗಿನ ವಿದೇಶಮಂತ್ರಿಗಳಾದ ಜೇಮ್ಸ ಕ್ಲೆವರಲೀಯವರು ‘ನಾವು ಭಾರತದೊಂದಿಗೆ ಮುಕ್ತ ವ್ಯಾಪಾರದ ಒಪ್ಪಂದಕ್ಕಾಗಿ ಉತ್ಸುಕರಾಗಿದ್ದೇವೆ’, ಎಂದು ಸ್ಪಷ್ಟಪಡಿಸಿದ್ದರು. ಬ್ರೆವ್ಹರಮನರವರ ಹೇಳಿಕೆಯಿಂದ ಪ್ರಧಾನಮಂತ್ರಿ ಮೋದಿಯವರ ದೀಪಾವಳಿಯ ಸಮಯದ ಒಪ್ಪಂದವನ್ನು ಅಂತಿಮಗೊಳಿಸುವ ಭೇಟಿಯನ್ನು ರದ್ದುಗೊಳಿಸಲಾಯಿತು ಎಂದು ಹೇಳಲಾಗುತ್ತದೆ.

ಸುಯೆಲಾ ಬ್ರೆವ್ಹರಮನ ಯಾರು ?

೪೨ ವರ್ಷದ ಸುಯೆಲಾ ಬ್ರೆವ್ಹರಮನರವರು ಬೋರಿಸ ಜಾನ್ಸನ ಸರಕಾರದಲ್ಲಿ ‘ಅಟಾರ್ನಿ ಜನರಲ್‌’ ಆಗಿದ್ದರು. ಅವರು ಹಿಂದೂ-ತಮಿಳು ಕುಟುಂಬದವರಾಗಿದ್ದಾರೆ. ಅವರ ಪಾಲಕರು ಕೆನಿಯಾ ಹಾಗೂ ಮಾರಿಶಸ್‌ನಿಂದ ಬ್ರಿಟನ್ನಿಗೆ ಬಂದಿದ್ದರು. ಸುಯೆಲಾರವರು ಏಪ್ರಿಲ್‌ ೩, ೧೯೮೦ರಂದು ಲಂಡನ್ನಿನಲ್ಲಿ ಜನಿಸಿದ್ದರು. ಅವರು ವೆಂಬಲಿಯಲ್ಲಿ ಬೆಳೆದಿದ್ದು ಅವರಿಗೆ ಬ್ರಿಟೀಷ ನಾಗರೀಕತೆಯಿದೆ.

ಈ ಮುಕ್ತ ವ್ಯಾಪಾರ ಒಪ್ಪಂದ ಅಂದರೆ ಏನು ?

ಭಾರತ ಹಾಗೂ ಬ್ರಿಟನ್ನಿನ ನಡುವಿನ ವ್ಯಾಪಾರವು ೪ ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ಮುಕ್ತ ವ್ಯಾಪಾರ ಒಪ್ಪಂದದಿಂದ ಹೆಚ್ಚಿನ ಸೌಲಭ್ಯಗಳು ದೊರೆಯುವವು. ೨೦೦೪ರಲ್ಲಿ ಬ್ರಿಟನ್‌ ಭಾರತದೊಂದಿಗೆ ಧೋರಣಾತ್ಮಕ ಪಾಲುದಾರಿಕೆಯನ್ನು ಆರಂಭಿಸಿತು. ಯುನಾಯಟೆಡ ಕಿಂಗಡಮ್‌ನಲ್ಲಿ ೧೫ ಲಕ್ಷ ಭಾರತೀಯ ವಂಶದ ಜನರಿದ್ದಾರೆ. ಅವರು ಅಲ್ಲಿನ ಉತ್ಪನ್ನದಲ್ಲಿ ಶೇ. ೬ರಷ್ಟು ಕೊಡುಗೆ ನೀಡುತ್ತಾರೆ. ಇಲ್ಲಿ ಅಂದಾಜು ೧ ಲಕ್ಷ ಭಾರತೀಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಯುನಾಯಟೆಡ ಕಿಂಗಡಮ್‌ ಹಾಗೂ ಭಾರತದ ನಡುವಿನ ವ್ಯಾಪಾರವು ಕಳೆದ ೨ ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಕಳೆದ ವರ್ಷ ಭಾರತವು ೫೧ ಸಾವಿರದ ೫೪ ಕೋಟಿ ರೂಪಾಯಿಗಳ ಆಮದು ಮಾಡಿಕೊಂಡಿದ್ದರೆ ೭೯ ಸಾವಿರ ಕೋಟಿ ರೂಪಾಯಿಗಳ ರಫ್ತು ಮಾಡಿತ್ತು. ಸೇವಾ ಕ್ಷೇತ್ರದೊಂದಿಗಿನ ಕಾರ್ಯಕಲಾಪವು ೩ ಲಕ್ಷ ೮೧ ಸಾವಿರ ಕೋಟಿ ರೂಪಾಯಿಗಳಷ್ಟಾಗಿದೆ. ಈ ಹಿಂದಿನ ಟ್ರಸ್‌ ಸರಕಾರದಲ್ಲಿನ ಹಣಕಾಸು ಮಂತ್ರಿ ಜೆರೆಮೀ ಹಂಟರವರಿಗೂ ಈ ಬಾರಿ ಸುನಕರವರು ಹಣಕಾಸು ಮಂತ್ರಿಯ ಸ್ಥಾನವನ್ನು ನೀಡಿದ್ದಾರೆ.