ಕಾಂಗ್ರೆಸ್ಸಿನ ಇನ್ನೊಂದು ಪಾಪ ಬಯಲು

೧. ಹಿಂದೂಗಳೇ, ದೇವಸ್ಥಾನಗಳನ್ನು ರಕ್ಷಿಸಿ !

ಪ್ರಸ್ತುತ ಅಯೋಧ್ಯೆಯಲ್ಲಿ ನಿರ್ಮಾಣಕಾರ್ಯ ನಡೆಯುತ್ತಿರುವ ಶ್ರೀರಾಮ ಮಂದಿರವನ್ನು ಕೆಡವಿ ಪುನಃ ಅದೇ ಸ್ಥಳದಲ್ಲಿ ಬಾಬರಿ ಮಸೀದಿ ಕಟ್ಟಲು ಜಿಹಾದಿ ಉಗ್ರ ಸಂಘಟನೆ ಪಿ.ಎಫ್.ಐ. ಸಂಚು ನಡೆಸಿದೆ ಎಂದು ಸರಕಾರಿ ನ್ಯಾಯವಾದಿಗಳು ಮಹಾರಾಷ್ಟ್ರದ ನಾಸಿಕ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಪ್ರತಿಪಾದಿಸಿದ್ದಾರೆ.

೨. ತೆಲಂಗಾಣ ಭಾರತದಲ್ಲಿದೆಯೇ ಪಾಕಿಸ್ತಾನದಲ್ಲಿದೆಯೇ ?

ತೆಲಂಗಾಣದ ಆದಿಲಾಬಾದ್‌ನಲ್ಲಿ, ರಾಜ್ಯ ನಾಗರಿಕ ಸೇವಾ ಪರೀಕ್ಷೆಯ ಸಮಯದಲ್ಲಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಹಿಂದೂ ಮಹಿಳೆಯರಿಗೆ ಮಂಗಳಸೂತ್ರ, ಬಳೆಗಳು, ಕಿವಿಯೋಲೆಗಳು, ಸರಗಳು ಇತ್ಯಾದಿಗಳನ್ನು ತೆಗೆದುಹಾಕಲು ಹೇಳಲಾಯಿತು, ಆದರೆ ಮುಸ್ಲಿಂ ಮಹಿಳೆಯರಿಗೆ ಬುರ್ಖಾ ತೊಟ್ಟುಕೊಂಡೇ ಪ್ರವೇಶಿಸಲು ಅವಕಾಶ ನೀಡಲಾಯಿತು.

೩. ಇದು ಭಾರತವೋ ಪಾಕಿಸ್ತಾನವೋ ?

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿರುವ ವೀಡಿಯೋವೊಂದರಲ್ಲಿ ಮುಸ್ತಫಾ ಇವನು, ‘ಸಮಯ ಬಂದಾಗ, ನಾವು ಎಲ್ಲಾ ಹಿಂದೂಗಳನ್ನು ಹೂತು ಬಿಡುತ್ತೇವೆ !’ ಎಂದು ಬೆದರಿಕೆ ಹಾಕಿದ್ದಾನೆ, ಮತ್ತೊಂದು ವೀಡಿಯೊದಲ್ಲಿ, ಶೋಯೆಬ್ ಎಂಬವನು ಶಿವಲಿಂಗದ ಮೇಲೆ ಮೂತ್ರ ವಿಸರ್ಜಿಸುತ್ತಿರುವುದು ಕಾಣಿಸುತ್ತದೆ.

೪. ‘ಭಾರತದಲ್ಲಿ ಯಾರು ಜಿಹಾದ್ ಮಾಡುತ್ತಿದ್ದಾರೆ ?’, ಎಂದು ಕಾಂಗ್ರೆಸ್ ಯಾವಾಗ ಹೇಳುವುದು?

ಭಗವದ್ಗೀತೆಯ ಒಂದು ಭಾಗದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಜಿಹಾದ್ ಕಲಿಸಿದ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ ಪಾಟೀಲ್ ಇವರು ಆಕ್ರೋಶಕಾರಿ ಹೇಳಿಕೆ ನೀಡಿದ್ದಾರೆ.

೫. ಹಿಂದೂಗಳ ನಾಶಕ್ಕೆ ಹಿಂದೂಗಳದೇ ಹಣ !

ಪಾಕಿಸ್ತಾನದ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ನ್ಯೂಯಾರ್ಕ್‌ನಲ್ಲಿ ದೀಪಾವಳಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರಿಂದ ಬಂದ ಹಣವನ್ನು ಪಾಕಿಸ್ತಾನದಲ್ಲಿರುವ ಜಿಹಾದಿ ಸಂಘಟನೆ ‘ಜಮಾತ್- ಎ- ಇಸ್ಲಾಮಿಯ ಚಾರಿಟಿ ಶಾಖೆ ‘ಅಲ್ ಖಿದ್ಮತ್ ಫೌಂಡೇಶನ್’ಗೆ ನೀಡಲಾಗುವುದು.

೬. ಇಂತಹ ಘಟನೆಯ ಬಗ್ಗೆ ಜಾತ್ಯತೀತರು, ಮುಸಲ್ಮಾನ ಸಂಘಟನೆ ಮತ್ತು ಅದರ ಮುಖಂಡರು ಎಂದು ಏನು ಮಾತನಾಡುವುದಿಲ್ಲ !

ಬಾಂಗ್ಲಾದೇಶದ ಬಾಗೆರಹಾಟ ಜಿಲ್ಲೆಯಲ್ಲಿನ ಚೀತಲಮಾರಿ ಇಲ್ಲಿ ಪ್ರಿಯಾಂಕಾ ಎಂಬವಳು ಮಹಮ್ಮದ ಓಬಾಯದನ ವಿವಾಹ ಪ್ರಸ್ತಾವ ನಿರಾಕರಿಸಿದ್ದಳೆಂದು ಆತನು ಅವಳ ಮೇಲೆ ದಾಳಿ ನಡೆಸಿದ್ದಾನೆ. ಈ ಮಾಹಿತಿ ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್ ಈ ಟ್ವಿಟರ್ ಖಾತೆಯ ಮೂಲಕ ನೀಡಲಾಗಿದೆ.

೭. ಕಾಂಗ್ರೆಸ್ಸಿನ ಇನ್ನೊಂದು ಪಾಪ ಬಯಲು

ಸೋನಿಯಾ ಗಾಂಧಿ ಅಧ್ಯಕ್ಷೆಯಾಗಿರುವ ‘ರಾಜೀವ ಗಾಂಧಿ ಫೌಂಡೇಶನ್’ ಈ ಸ್ವಯಂಸೇವಿ ಸಂಸ್ಥೆಯು ಆರ್ಥಿಕ ಅವ್ಯವಹಾರ ಮಾಡಿರುವುದು ಕಂಡುಬಂದಿದ್ದರಿಂದ ಕೇಂದ್ರ ಗೃಹಸಚಿವಾಲಯವು ಅದರ ವಿದೇಶ ಅನುದಾನ ಪರವಾನಗಿಯನ್ನು ರದ್ದುಪಡಿಸಿದೆ.