ಕಿನ್ಯಾದಲ್ಲಿ ಪಾಕಿಸ್ತಾನಿ ಪತ್ರಕರ್ತನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ

ಪಾಕಿಸ್ತಾನದ ಪತ್ರಕರ್ತನಾದ ಅರ್ಶದ ಶರೀಫ

ಇಸ್ಲಾಮಾಬಾದ (ಪಾಕಿಸ್ತಾನ) – ಕೀನ್ಯಾದಲ್ಲಿ ಪಾಕಿಸ್ತಾನದ ಪತ್ರಕರ್ತನಾದ ಅರ್ಶದ ಶರೀಫ ಎಂಬುವನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಈ ಬಗ್ಗೆ ಸ್ವತಃ ಆತನ ಪತ್ನಿಯಾದ ಜಾವೇರಿಯಾ ಸಿದ್ದೀಕೀಯು ಮಾಹಿತಿ ನೀಡಿದ್ದಾರೆ. ಶರೀಫನ ನಿಧನದ ಬಗ್ಗೆ ಪಾಕಿಸ್ತಾನದ ರಾಷ್ಟ್ರಪತಿ ಆರಿಫ ಅಲ್ವಿಯವರು ಶೋಕ ವ್ಯಕ್ತಪಡಿಸಿದ್ದಾರೆ. ಅವನು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ ಖಾನರ ಸಮರ್ಥಕನಾಗಿದ್ದನು. ಅವನು ಪಾಕಿಸ್ತಾನದ ಸೈನ್ಯದಳದ ಪ್ರಮುಖರಾದ ಜನರಲ್ ಬಾಜವಾರವರ ಮೇಲೆ ಅನೇಕ ಬಾರಿ ಟೀಕಿಸಿದ್ದನು. ಅನಂತರ ಅವನ ಮೇಲೆ ದೇಶದ್ರೋಹದ ಆರೋಪವನ್ನು ದಾಖಲಿಸಲಾಯಿತು, ಇದರ ನಂತರ ಅವನು ದೇಶ ಬಿಟ್ಟು ಹೋಗಬೇಕಾಯಿತು ಎಂದು ಹೇಳಲಾಗುತ್ತದೆ.

ಅರ್ಶದ ಶರೀಫನು ಭಾರತ ವಿರೋಧಿಯಾಗಿದ್ದನು !

ಕೀನ್ಯಾದಲ್ಲಿ ಹತ್ಯೆ ಮಾಡಲಾದ ಪಾಕಿಸ್ತಾನಿ ಪತ್ರಕರ್ತ ಅರ್ಶದ ಶರೀಫನು ಭಾರತ ವಿರೋಧಿಯಾಗಿದ್ದನು. ಒಂದು ವಿಡಿಯೋದಲ್ಲಿ ಅವನು ಪ್ರಧಾನಿ ಮೋದಿಯವರನ್ನು ಬೈಯ್ಯುತ್ತಾ ‘ಖಲಿಸ್ತಾನ ಜಿಂದಾಬಾದ’ ಎಂಬ ಘೋಷಣೆ ನೀಡಿದ್ದನು ಹಾಗೆಯೇ ಅವನು ಹಿಂದೂ ವಿರೋಧಿಯಾಗಿದ್ದನು. ‘ದೆಹಲಿಯಲ್ಲಿನ ದಂಗೆಯಲ್ಲಿ ಮಸೀದಿಯನ್ನು ಸುಡಲಾಗಿತ್ತು ಮತ್ತು ಮುಸಲ್ಮಾನ ಮಹಿಳೆಯರ ಮೇಲೆ ಬಲತ್ಕಾರ ಮಾಡಿಲಾಗಿತ್ತು’ ಎಂದು ಅವನು ಆರೋಪಿಸುತ್ತಿದ್ದನು.