ಕಳೆದ ೭೫ ವರ್ಷಗಳಲ್ಲಿ ವಿದೇಶಾಂಗ ನೀತಿಯ ಕಣ್ತೆರೆಸುವಂತಹ ಭಾರತದ ಕಾರ್ಯ !

ಸ್ವಾತಂತ್ರ್ಯಪ್ರಾಪ್ತಿಯ ನಂತರ ಕಳೆದ ೭೫ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಹೆಚ್ಚುತ್ತಾ ಹೋಗಿದೆ. ಇತರ ದೇಶಗಳೊಂದಿಗಿನ ಸಂಬಂಧದಲ್ಲಿ ಸಮತೋಲವನ್ನು ಸಾಧಿಸುವುದರೊಂದಿಗೆ, ಅದು ಇತರ ದೇಶಗಳ ನೇತೃತ್ವವನ್ನು ಮಾಡುವುದರವರೆಗಿನ, ದಕ್ಷಿಣ ಏಶಿಯಾದಲ್ಲಿನ ಪ್ರಾದೇಶಿಕ ಆಡಳಿತದಿಂದ ಅದು ಏಶಿಯಾ ಖಂಡದಲ್ಲಿನ ಅಗ್ರಗಣ್ಯ ದೇಶವಾಗುವವರೆಗೆ, ಇತರ ಅಂತರರಾಷ್ಟ್ರೀಯ ದೊಡ್ಡ ಸಂಸ್ಥೆಗಳು ಮತ್ತು ಸಂಘಟನೆಗಳು ನೀಡಿರುವ ಆದೇಶವನ್ನು ಅಥವಾ ತೆಗೆದುಕೊಂಡಿರುವ ನಿರ್ಣಯಗಳನ್ನು ಬಾಯಿ ಮುಚ್ಚಿಕೊಂಡು ಪಾಲಿಸುವುದರಿಂದ ಹಿಡಿದು, ಅಂತರರಾಷ್ಟ್ರೀಯ ಸಂಸ್ಥೆ-ಸಂಘಟನೆಗಳ ಅಜೆಂಡಾವನ್ನು ನಿರ್ಧರಿಸುವುದರ ವರೆಗೆ, ನೆರೆಯ ಚೀನಾದಂತಹ ದೇಶದ ದಬ್ಬಾಳಿಕೆಯನ್ನು ಸಹಿಸಿಕೊಳ್ಳುವುದರಿಂದ ಹಿಡಿದು ಅದು ಗಡಿಯಲ್ಲಿ ಚೀನಾದ ಕಣ್ಣುಗಳಲ್ಲಿ ಕಣ್ಣುಗಳನ್ನು ಹಾಕಿ ಎದುರಿಸುವವರೆಗೆ, ಭಾರತದ ಅಂತರಾಷ್ಟ್ರೀಯ ಸ್ತರದ ಪ್ರವಾಸವು ಅತ್ಯಂತ ಮಹತ್ವಪೂರ್ಣ ಸ್ವರೂಪದ್ದಾಗಿದೆ. ನಿಜ ಹೇಳಬೇಕಾದರೆ ಭಾರತದ ವಿದೇಶ ಧೋರಣೆ ಪ್ರಾರಂಭದಿಂದಲೇ ಒಂದು ದುರ್ಲಕ್ಷಿಸಲ್ಪಟ್ಟ ವಿಷಯವಾಗಿತ್ತು. ಸ್ವಾತಂತ್ರ್ಯ ಸಿಕ್ಕಿದ ನಂತರ ನಮ್ಮ ದೇಶದ ಆರ್ಥಿಕ ಮತ್ತು ಇತರ ಸಮಸ್ಯೆಗಳು ಎಷ್ಟಿದ್ದವೆಂದರೆ, ಅದರಿಂದಾಗಿ ಕೇವಲ ಆಂತರಿಕ ವಿಷಯಗಳಿಗೆ ಎಲ್ಲಕ್ಕಿಂತ ಹೆಚ್ಚು ಮಹತ್ವವನ್ನು ಕೊಡಬೇಕಾಯಿತು. ದೇಶವು ಕಳೆದ ೭೫ ವರ್ಷಗಳಲ್ಲಿ ವಿದೇಶನೀತಿಯಲ್ಲಿ ಹೇಗೆ ಕಾರ್ಯವನ್ನು ಮಾಡಿತು, ಎಂಬ ವಿಷಯದ ಚರ್ಚೆಯನ್ನು ಈ ಲೇಖನದಲ್ಲಿ ಮಾಡಲಾಗಿದೆ.

ಡಾ. ಶೈಲೇಂದ್ರ ದೇವಳಾಣಕರ

೧. ಭಾರತ ಅಂತರರಾಷ್ಟ್ರೀಯ ರಾಜಕಾರಣಕ್ಕೆ ಅಲಿಪ್ತವಾದದ ಯೋಗದಾನವನ್ನು ನೀಡುವುದು

೧೯೪೭ ರಿಂದ ೧೯೬೨ ಈ ಮೊದಲ ಹಂತದ ವರ್ಣನೆಯನ್ನು ಮುಖ್ಯವಾಗಿ ‘ಆಶಾವಾದಿ ಅಲಿಪ್ತವಾದ’ ಎಂದು ಮಾಡಬೇಕಾಗುತ್ತದೆ. ಈ ಅಲಿಪ್ತವಾದಿ ವಿಚಾರಶೈಲಿಯ ಅಡಿಪಾಯವು ಪ್ರಾಮುಖ್ಯವಾಗಿ ಪಂಡಿತ ನೆಹರೂರವರಿಂದ ಆಗಿತ್ತು. ಶೀತ ಯುದ್ಧದ ಕಾಲದಲ್ಲಿ ಜಗತ್ತು ಎರಡು ವಿಚಾರಸರಣಿಗಳಲ್ಲಿ ವಿಭಜನೆಯಾಗಿತ್ತು. ಒಂದೆಡೆ ಸಾಮ್ಯವಾದಿಗಳು, ಇನ್ನೊಂದೆಡೆ ಬಂಡವಾಳಶಾಹಿಗಳ ಗುಂಪುಗಳು ಇದ್ದವು. ಒಂದು ಗುಂಪಿನ ನೇತೃತ್ವವು ರಶಿಯಾದ ಕಡೆಗೆ ಮತ್ತು ಇನ್ನೊಂದು ಗುಂಪಿನ ನೇತೃತ್ವವು ಅಮೇರಿಕಾದ ಕಡೆಗಿತ್ತು. ಈ ಕಾಲಾವಧಿಯಲ್ಲಿ ಏಶಿಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೇರಿಕಾ ಇವುಗಳಿಗೆ ಮತ್ತು ಎರಡನೇ ಮಹಾಯುದ್ಧದ ನಂತರ ಯುರೋಪಿಯನ್ ವಸಾಹತುವಾದಿ ರಾಷ್ಟ್ರಗಳ ಹಿಡಿತದಿಂದ ಮುಕ್ತವಾಗಿರುವ ಅನೇಕ ದೇಶಗಳಿಗೆ ಅವುಗಳ ಆರ್ಥಿಕ ವಿಕಾಸವನ್ನು ಸಾಧಿಸಬೇಕಾಗಿತ್ತು. ಅವುಗಳಿಗೆ ಶೀತಯುದ್ಧದ ರಾಜಕಾರಣದಲ್ಲಿ ಸಿಲುಕುವುದು ಬೇಡವಾಗಿತ್ತು. ಆದ್ದರಿಂದ ಅವರು ತಮ್ಮದೇ ಆದ ಒಂದು ವೇದಿಕೆಯನ್ನು ನಿರ್ಮಿಸಲು ಪ್ರಯತ್ನಿಸಿದರು. ಅದಕ್ಕೆ ‘ಅಲಿಪ್ತವಾದ’ ಎನ್ನಲಾಗುತ್ತದೆ. ಇಂದು ಶೀತಯುದ್ಧ ಇಲ್ಲದಿರುವುದರಿಂದ ಅಲಿಪ್ತವಾದದ ಚಳುವಳಿಯು ಕಾಲಬಾಹ್ಯವಾಗಿದೆ; ಆದರೆ ಈ ವಿಚಾರಶೈಲಿಯು ಭಾರತೀಯ ವಿದೇಶನೀತಿಗ ಮಾರ್ಗದರ್ಶಕವಾಗಿದೆ; ಏಕೆಂದರೆ ವಿದೇಶನೀತಿಯ ಕ್ಷೇತ್ರದಲ್ಲಿ ನಿರ್ಣಯದ ಸ್ವಾತಂತ್ರ್ಯವನ್ನು ಸುರಕ್ಷಿತವಾಗಿಡುವುದು, ಬೇರೆಯವರ ಸೆರಗನ್ನು ಹಿಡಿಯದಿರುವುದು ಮತ್ತು ತಮ್ಮ ಮೇಲೆ ಇತರ ರಾಷ್ಟ್ರಗಳ ದಬ್ಬಾಳಿಕೆಯನ್ನು ಸಹಿಸಿಕೊಳ್ಳದಿರುವುದು, ಇದು ಅಲಿಪ್ತವಾದದ ಅಡಿಪಾಯವಾಗಿದೆ ಮತ್ತು ಭಾರತ ಇಂದು ಕೂಡ ಈ ನಿರ್ಣಯಸ್ವಾತಂತ್ರ್ಯವನ್ನು ಸುರಕ್ಷಿತವಾಗಿ ಇಟ್ಟುಕೊಂಡಿದೆ. ಕಳೆದ ೭೫ ವರ್ಷಗಳಲ್ಲಿ ಭಾರತ ಅಂತರರಾಷ್ಟ್ರೀಯ ರಾಜಕಾರಣಕ್ಕೆ ನೀಡಿರುವ ಅಲಿಪ್ತವಾದ ಒಂದು ದೊಡ್ಡ ಯೋಗದಾನವಾಗಿದೆ.

೨. ಭಾರತಕ್ಕೆ ನೆಹರೂರವರ ವಿಫಲ ವಿದೇಶಾಂಗ ನೀತಿಯ ಬಗ್ಗೆ ಪುನರ್ವಿಚಾರ ಮಾಡುವ ಸಮಯ ಬರುವುದು

೧೯೬೨ ರಿಂದ ೧೯೭೧ ಇದು ಭಾರತದ ವಿದೇಶಾಂಗ ನೀತಿಯ ಎರಡನೇಯ ಹಂತವಾಗಿತ್ತು. ಭಾರತದ ವಿದೇಶಾಂಗ ನೀತಿಯ ಸಾಧಾರಣ ೧೦ ವರ್ಷಗಳ ಕಾಲಾವಧಿಯ ಈ ಹಂತವನ್ನು ‘ವಾಸ್ತವವಾದ ದೃಷ್ಟಿಕೋನದ ಹಂತ’ವೆಂದು ಗುರುತಿಸಲಾಗುತ್ತದೆ. ಈ ಹಂತದ ಪ್ರಾರಂಭವೇ ಭಾರತ-ಚೀನಾ ಯುದ್ಧದಿಂದಾಯಿತು. ಚೀನಾದೊಂದಿಗಿನ ಯುದ್ಧದಲ್ಲಿ ಸೋಲೊಪ್ಪಿದ ಕಾರಣ ಭಾರತಕ್ಕೆ ದೊಡ್ಡ ಆಘಾತವಾಯಿತು. ಆದ್ದರಿಂದ ನೆಹರೂರವರ ವಿದೇಶನೀತಿಯಲ್ಲಿನ ಅನೇಕ ಅಂಶಗಳ ಪುನರ್ವಿಚಾರ ಮಾಡುವ ಸಮಯ ಬಂದಿತು. ಇದರ ನಂತರ ಭಾರತವು ಸಂರಕ್ಷಣೆಯ ಹಿತಸಂಬಂಧದ ವಿಷಯದಲ್ಲಿ ವಾಸ್ತವಿಕ ದೃಷ್ಟಿಕೋನದಿಂದ ಹೆಜ್ಜೆಗಳನ್ನಿಡಲು ಪ್ರಾರಂಭಿಸಿತು; ಆದ್ದರಿಂದಲೇ ೧೯೬೩ ರಲ್ಲಿ ನಾವು ಅಮೇರಿಕಾದೊಂದಿಗೆ ಒಂದು ಒಪ್ಪಂದ ಮಾಡಿಕೊಂಡೆವು. ಅನಂತರ ಅಮೇರಿಕಾದ ಸೈನಿಕರೊಂದಿಗೆ ಮೊದಲ ಬಾರಿಗೆ ಕಾರ್ಯ ಆರಂಭವಾಯಿತು. ಇದು ಭಾರತ ತೆಗೆದುಕೊಂಡ ಒಂದು ವಾಸ್ತವವಾದಿ ನಿರ್ಣಯವಾಗಿತ್ತು. ಅನಂತರ ೧೯೭೧ ರಲ್ಲಿ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ರಶಿಯಾದ ಜೊತೆಗೆ ಸಾಮೂಹಿಕ ಸುರಕ್ಷತೆಯ ಒಪ್ಪಂದವನ್ನು ಮಾಡಿಕೊಂಡರು. ಈ ಒಪ್ಪಂದದಿಂದ ಅಮೇರಿಕಾದಿಂದ ಸಂಭವಿಸಬಹುದಾದ ಆಕ್ರಮಣದಿಂದ ಭಾರತ ತನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯವಾಯಿತು.

೩. ಸೋವಿಯತ್ ರಶಿಯಾದ ವಿಭಜನೆಯ ನಂತರ ಶೀತಯುದ್ಧದ ಅಂತವಾಗುವುದು

೧೯೭೧ ರಿಂದ ೧೯೯೧ ಇದನ್ನು ಭಾರತದ ವಿದೇಶಾಂಗ ನೀತಿಯ ಮೂರನೇಯ ಹಂತವೆಂದು ಹೇಳಬಹುದು. ೨೦ ವರ್ಷಗಳ ಈ ಕಾಲಾವಧಿಯನ್ನು ಅಂತರರಾಷ್ಟ್ರೀಯ ರಾಜಕಾರಣದಲ್ಲಿನ ಅತ್ಯಂತ ತೊಡಕಿನ ಕಾಲಾವಧಿಯೆಂದು ಗುರುತಿಸಲಾಗುತ್ತದೆ; ಏಕೆಂದರೆ ಈ ಅವಧಿಯಲ್ಲಿ ಅಮೇರಿಕಾ ಮತ್ತು ಚೀನಾದ ನಡುವೆ ಮತ್ತೊಮ್ಮೆ ಸಂಬಂಧ ಸ್ಥಾಪಿಸುವುದು ಪ್ರಾರಂಭವಾಯಿತು. ಅಮೇರಿಕಾ ಚೀನಾಗೆ ರಾಜನೈತಿಕ ಮನ್ನಣೆಯನ್ನು ಕೊಡಲು ಪ್ರಾರಂಭಿಸಿತು. ಆದ್ದರಿಂದ ಅಮೇರಿಕಾ-ಚೀನಾ-ಪಾಕಿಸ್ತಾನ ಈ ಸ್ವರೂಪದ ಒಂದು ಗುಂಪು ಮುಂದೆ ಬರಲು ಪ್ರಾರಂಭಿಸಿದ ಕಾರಣ ಭಾರತದ ಚಿಂತೆ ಹೆಚ್ಚಾಯಿತು. ಇನ್ನೊಂದೆಡೆ ಸೋವಿಯತ್ ರಶಿಯಾ ಅಫ್ಗಾನಿಸ್ತಾನದಲ್ಲಿ ತನ್ನ ಸೈನ್ಯವನ್ನು ನುಗ್ಗಿಸಿತ್ತು. ಅದೇ ರೀತಿ ಅಂತರರಾಷ್ಟ್ರೀಯ ಸ್ತರದಲ್ಲಿ ಕೆಲವು ರಾಷ್ಟ್ರಗಳು ಒಟ್ಟಿಗೆ ಬಂದು ಅಣ್ವಸ್ತ್ರ ಕ್ಷೇತ್ರದಲ್ಲಿ ತಮ್ಮ ಅಣ್ವಸ್ತ್ರ ಶಕ್ತಿಯನ್ನು ಸಿದ್ಧಪಡಿಸಿದ್ದವು. ಈ ಎಲ್ಲ ಕಠಿಣ ಪರಿಸ್ಥಿತಿಯಲ್ಲಿ ಭಾರತಕ್ಕೆ ತನ್ನ ವಿದೇಶ ನೀತಿಯನ್ನು ಹಮ್ಮಿಕೊಳ್ಳುವುದು ಮತ್ತು ಮುಂದೆ ತೆಗೆದುಕೊಂಡು ಹೋಗುವುದು ಒಂದು ದೊಡ್ಡ ಸವಾಲಾಗಿತ್ತು. ಈ ಅವಧಿಯಲ್ಲಿ ಭಾರತವು ಮಾಡಿದ ಅಣು ಪರೀಕ್ಷಣೆಯು ಒಂದು ದೊಡ್ಡ ಘಟನೆಯಾಗಿತ್ತು. ೧೯೯೧ ರಲ್ಲಿ ಸೋವಿಯತ್ ರಶಿಯಾದ ವಿಭಜನೆ ಆಯಿತು ಮತ್ತು ಶೀತಯುದ್ಧದ ಕೊನೆಯಾಯಿತು.

೪. ಗುಜರಾಲ್ ಇವರು ಪ್ರಧಾನಮಂತ್ರಿಯಾಗಿರುವ ಕಾರ್ಯಕಾಲದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸುಧಾರಿಸುವುದು

೧೯೯೧ ರಿಂದ ೧೯೯೯ ಈ ನಾಲ್ಕನೇ ಹಂತವನ್ನು ಅಂತರರಾಷ್ಟ್ರೀಯ  ರಾಜಕಾರಣದಲ್ಲಿ ಏಕಧ್ರುವೀಯ ವಿಶ್ವರಚನೆಯ ಹಂತವೆಂದು ಗುರುತಿಸಲಾಗುತ್ತದೆ. ಸೋವಿಯತ್ ರಶಿಯಾದ ವಿಭಜನೆಯ ನಂತರ ೧೫ ಹೊಸ ದೇಶಗಳು ನಿರ್ಮಾಣವಾದವು. ಶೀತಯುದ್ಧದ ಕಾಲದಲ್ಲಿ ಅಮೇರಿಕಾ ಮಹಾಶಕ್ತಿ ಎಂದು ಮುಂದೆ ಬಂದಿತು. ಇದೇ ಕಾಲದಲ್ಲಿ ನಮ್ಮ ಪಾರಂಪರಿಕ ಆಧಾರವಾಗಿರುವ ಸೋವಿಯತ್ ರಶಿಯಾದಿಂದ ಭಾರತ ದೂರವಾಯಿತು. ಆದರೆ ಇದೇ ಕಾಲಾವಧಿಯಲ್ಲಿ ೧೯೯೩ ರಲ್ಲಿ ಇಂದ್ರಕುಮಾರ ಗುಜರಾಲ್ ಇವರು ದೇಶದ ವಿದೇಶಾಂಗ ಸಚಿವ ಮತ್ತು ನಂತರ ಸ್ವಲ್ಪ ಸಮಯಕ್ಕಾಗಿ ಪ್ರಧಾನಮಂತ್ರಿಗಳೂ ಆಗಿದ್ದರು. ಅವರು ‘ಭಾರತದ ನೆರೆಯ ರಾಷ್ಟ್ರಗಳೊಂದಿಗೆ ಮತ್ತು ಜಾಗತಿಕ ಮಟ್ಟದಲ್ಲಿ ಇತರ ದೇಶಗಳೊಂದಿಗೆ ಸಂಬಂಧ ಹೇಗಿರಬೇಕು ?’, ಎಂಬುದರ ಬಗ್ಗೆ ಕೆಲವು ಮಹತ್ವದ ವಿಚಾರಗಳನ್ನು ಮಂಡಿಸಿದರು; ಮುಂದೆ ಅದೇ ನಮ್ಮ ದೇಶದ ನಿಲುವಾಯಿತು. ಅದಕ್ಕೆ ‘ಗುಜರಾಲ್ ಡಾಕ್ಟ್ರಿನ್’ ಎಂದು ಹೇಳಲಾಗುತ್ತದೆ. ಇದರಲ್ಲಿ ‘ಪ್ರಿನ್ಸಿಪಲ್ ಆಫ್ ನಾನ್ ರೆಸಿಪ್ರಾಸಿಟಿ’ಯ (ಪರಸ್ಪರರಿಗೆ ಸಹಾಯ ಮಾಡುವ ತತ್ತ್ವ) ಸಮಾವೇಶವಿತ್ತು. ಇದರ ಅರ್ಥ ಹಿಂತಿರುಗಿಸುವ ಯಾವುದೇ ಅಪೇಕ್ಷೆಯನ್ನು ಇಟ್ಟುಕೊಳ್ಳದೇ ನೆರೆಯ ರಾಷ್ಟ್ರಗಳಿಗೆ ಸಹಾಯ ಮಾಡುವುದು. ಈ ತತ್ತ್ವವನ್ನು ಈಗಲೂ ಭಾರತ ಅವಲಂಬಿಸುತ್ತದೆ. ಹಾಗೆಯೇ ಭಾರತ-ಪಾಕಿಸ್ತಾನದ ಸಂಬಂಧದಲ್ಲಿ ಕಾಶ್ಮೀರದ ವಿಷಯದಿಂದ ಯಾವಾಗಲೂ ಒತ್ತಡ ಇರುತ್ತದೆ. ಆದ್ದರಿಂದ ಈ ಮುಖ್ಯ ವಿಷಯವನ್ನು ಬದಿಗಿಟ್ಟು ಗುಜರಾಲ್ ಇವರ ಕಾಲದಲ್ಲಿ ಭಾರತ-ಪಾಕಿಸ್ತಾನದ ನಡುವೆ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸಹಿತ ಇತರ ಸಂಬಂಧಗಳು ಸುಧಾರಿಸಲು ಆರಂಭವಾದವು.

೫. ಭಾರತವು ‘ಅಣ್ವಸ್ತ್ರ ಪೂರೈಕೆಯ ಗುಂಪಿನ’ ಸದಸ್ಯವಾಗಿಲ್ಲದಿದ್ದರೂ ದೇಶಕ್ಕೆ ಅಣು ಇಂಧನ ನಿರ್ಮಾಣಕ್ಕಾಗಿ ಬೇಕಾಗುವ ಯುರೇನಿಯಮ್, ತಂತ್ರಜ್ಞಾನ ಮತ್ತು ಕಚ್ಚಾ ವಸ್ತುಗಳು ಸಿಗಲು ಸುಲಭವಾಗುವುದು

೨೦೦೦ ದಿಂದ ೨೦೧೩ ಈ ಐದನೇ ಹಂತದಲ್ಲಿ ಡಾ. ಮನಮೋಹನ ಸಿಂಹ ಮತ್ತು ಅಟಲಬಿಹಾರಿ ವಾಜಪೇಯಿ ಹೀಗೆ ಇಬ್ಬರು ಪ್ರಧಾನಮಂತ್ರಿಗಳು ಭಾರತಕ್ಕೆ ಲಭಿಸಿದರು. ೨೧ ನೇ ಶತಮಾನದಲ್ಲಿ ಏಶಿಯಾಖಂಡ, ಅದರಲ್ಲಿಯೂ ಪೂರ್ವ ಏಶಿಯಾ-ಸ್ಪೆಸಿಫಿಕ್ ಮಹಾಸಾಗರ ಕ್ಷೇತ್ರದ ಮಹತ್ವ ತುಂಬಾ ಹೆಚ್ಚಾಯಿತು. ಭಾರತವನ್ನು ನೋಡುವ ಅಮೇರಿಕಾದ ದೃಷ್ಟಿಕೋನ ಬದಲಾಯಿತು. ಚೀನಾದ ಕೌಂಟರ್‌ವೇಟ್’ (ಸಮತುಲ್ಯ ವಿರೋಧಿ ರಾಷ್ಟ್ರ) ಎಂದು ಭಾರತವನ್ನು ಮುಂದೆ ಮಾಡುವ ದೃಷ್ಟಿಯಲ್ಲಿ ಅಮೇರಿಕಾ ಪ್ರಯತ್ನವನ್ನು ಆರಂಭಿಸಿತು. ಈ ಕಾಲಾವಧಿಯಲ್ಲಿನ ಎಲ್ಲಕ್ಕಿಂತ ದೊಡ್ಡ ಘಟನೆಯೆಂದರೆ ೨೦೦೬ ರಲ್ಲಿ ಆಗಿರುವ ಭಾರತ-ಅಮೇರಿಕಾದ ನಡುವಿನ ನಾಗರಿಕ ಅಣುಒಪ್ಪಂದ !

ಅಮೇರಿಕಾ ಭಾರತದೊಂದಿಗೆ ಈ ಒಪ್ಪಂದವನ್ನು ಮಾಡಿಕೊಂಡಿರುವ ಜಗತ್ತಿನ ಏಕೈಕ ದೇಶವಾಗಿದೆ. ಭಾರತವು ‘ವ್ಯಾಪಕ ಅಣು ಪರೀಕ್ಷಣೆ ನಿಷೇಧ ಒಪ್ಪಂದ (ಸಿ.ಟಿ.ಬಿ.ಟಿ.)’ ಮತ್ತು ‘ಅಣ್ವಸ್ತ್ರ ಪ್ರಸಾರ ನಿಷೇಧ ಒಪ್ಪಂದ (ಎನ್.ಪಿ.ಟಿ.)’ ಇವೆರಡೂ ಒಪ್ಪಂದಗಳಿಗೆ ಸಹಿ ಹಾಕಲಿಲ್ಲ. ಭಾರತ ‘ಅಣ್ವಸ್ತ್ರ ಪೂರೈಕೆ ಗುಂಪಿನ’ ಸದಸ್ಯ ಇಲ್ಲದಿರುವಾಗಲೂ ಅದಕ್ಕೆ ಅಣು ಇಂಧನದ ನಿರ್ಮಾಣಕ್ಕಾಗಿ ಆವಶ್ಯಕವಿರುವ ಯುರೇನಿಯಮ್, ತಂತ್ರಜ್ಞಾನ ಮತ್ತು ಕಚ್ಚಾ ವಸ್ತುಗಳು ಸಿಗಲು ಈ ಒಪ್ಪಂದದಿಂದ ಸುಲಭವಾಯಿತು. ಈ ಕಾಲಾವಧಿಯಲ್ಲಿ ಭಾರತದ ಚೀನಾದ ಜೊತೆಗಿನ ಒಪ್ಪಂದ  ಮತ್ತು ೨೦೦೩ ರಲ್ಲಿ ಪಾಕಿಸ್ತಾನದ ಜೊತೆಗೆ ಮಾಡಿದ ಯುದ್ಧವಿರಾಮ ಒಪ್ಪಂದಗಳು ಪೂರ್ಣವಾದವು.

೬. ಭಾರತವು ಜಗತ್ತಿನಲ್ಲಿನ ಸರ್ವೋಚ್ಚ ಶಕ್ತಶಾಲಿ ರಾಷ್ಟ್ರವಾಗುವ ದಿಕ್ಕಿನಲ್ಲಿ ಮುಂದೆವರೆಯುವುದು

೨೦೧೪ ರಿಂದ ೨೦೨೧ ಈ ಆರನೇ ಹಂತವು ಭಾರತೀಯ ವಿದೇಶಾಂಗ ನೀತಿಯು ಇತಿಹಾಸದಲ್ಲಿ ಎಲ್ಲಕ್ಕಿಂತ ಮಹತ್ವದ್ದೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ‘ಎನರ್ಜೆಟಿಕ್ ಎಂಗೇಜ್‌ಮೆಂಟ್’ (ಊರ್ಜೆಯುಕ್ತ ಸಹಭಾಗ) ಎಂದು ಹೇಳಲಾಗುತ್ತದೆ; ಏಕೆಂದರೆ ಈ ಕಾಲಾವಧಿಯಲ್ಲಿ ಭಾರತದ ಜಗತ್ತಿನೊಂದಿಗಿನ ಸಂಬಂಧಗಳು ಘನಿಷ್ಠವಾದವು. ಈ ಹಂತದಲ್ಲಿ ಎಂತೆಂತಹ ವಿಷಯಗಳಾದವು ಎಂದರೆ, ಅವುಗಳಿಂದ ಭಾರತದ ಅಂತರರಾಷ್ಟ್ರೀಯ ಪ್ರತಿಷ್ಠೆ ಹೆಚ್ಚಾಗಲು ಸಹಾಯವಾಯಿತು. ಮುಖ್ಯವೆಂದರೆ ಇದು ಭಾರತವನ್ನು ಮತ್ತೊಮ್ಮೆ ವಾಸ್ತವಿಕತೆಯ ಕಡೆಗೆ ಕೊಂಡೊಯ್ಯುವ ಹಂತವಾಗಿತ್ತು. ಭಾರತವು ನೆರೆರಾಷ್ಟ್ರಗಳ ಜೊತೆಗೆ ಪೂರ್ವ ಮತ್ತು ಪಶ್ಚಿಮ ಏಶಿಯಾದಲ್ಲಿನ ದೇಶಗಳ ಜೊತೆಗೂ ಘನಿಷ್ಠ ಸಂಬಂಧವನ್ನು ನಿರ್ಮಿಸಲು ಪ್ರಯತ್ನಿಸಿತು. ಈ ಹಂತದಲ್ಲಿ ಭಾರತದ ವಿದೇಶಾಂಗ ನೀತಿಯು ದೇಶದ ಆರ್ಥಿಕ ಉದ್ದೇಶಕ್ಕೆ ಜೋಡಿಸಲ್ಪಟ್ಟಿತು. ಪ್ರಧಾನಮಮಂತ್ರಿ ಮೋದಿಯವರ ೮ ವರ್ಷಗಳಲ್ಲಿ ೭೦ ಕ್ಕಿಂತಲೂ ಹೆಚ್ಚು ವಿದೇಶ ಪ್ರವಾಸಗಳು, ಚೀನಾದೊಂದಿಗಿನ ಡೋಕಲಾಮ್ ಮತ್ತು ಗಲವಾನದ ವಿವಾದ, ಪಾಕಿಸ್ತಾನದ ವಿರುದ್ಧ ‘ಸರ್ಜಿಕಲ್ ಸ್ಟ್ರೈಕ್’ ಮತ್ತು ‘ಏರ್ ಸ್ಟ್ರೈಕ್’, ಇಸ್ಲಾಮೀ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಸುಧಾರಿಸುವುದರಿಂದ ಹಿಡಿದು ಅದು ಅಂತರಿಕ್ಷದಲ್ಲಿನ ಉಪಗ್ರಹವನ್ನು ಬೀಳಿಸುವ ಕ್ಷಮತೆಯನ್ನು ವಿಕಾಸಗೊಳಿಸುವುದು, ಕೊರೊನಾ ಮಹಾಮಾರಿಯ ಕಾಲದಲ್ಲಿ ೧೨೦ ದೇಶಗಳಿಗೆ ‘ಹಾಯಡ್ರೋಕ್ಸೋಕ್ಲೋರೊಕ್ವಿನ್’ ಮಾತ್ರೆಗಳನ್ನು ಪೂರೈಸುವುದು, ೭೦ ಕ್ಕಿಂತಲೂ ಹೆಚ್ಚು ದೇಶಗಳಿಗೆ ಆರೂವರೆ ಕೊಟಿ ಕೊರೊನಾ ನಿರೋಧಕ ಲಸಿಕೆಗಳ ಪೂರೈಸುವುದು, ಕೊರೊನಾ ಕಾಲದಲ್ಲಿ ‘ವಂದೇ ಮಾತರಮ್ ಮಿಶನ್’ನ ಅಂತರ್ಗತ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ತರುವುದು, ಇಂತಹ ಅನೇಕ ದೊಡ್ಡ ಚಟುವಟಿಕೆಗಳು ಈ ೮ ವರ್ಷಗಳ ಕಾಲಾವಧಿಯಲ್ಲಿ ನಡೆದವು. ೨ ವರ್ಷಗಳ ಹಿಂದೆ ಪುಲವಾಮಾ (ಜಮ್ಮು-ಕಾಶ್ಮೀರ) ದಲ್ಲಿ ‘ಕೇಂದ್ರೀಯ ಮೀಸಲು ಪೊಲೀಸ್ ದಳ’ದ ಸೈನಿಕರ ಮೇಲೆ ಆಗಿರುವ ಆಕ್ರಮಣದ ನಂತರ ಸಂಪೂರ್ಣ ಅಂತರರಾಷ್ಟ್ರೀಯ ಸಮುದಾಯಗಳು ಭಾರತದ ಬೆಂಬಲಕ್ಕೆ ಬಂದವು ಮತ್ತು ಸಂಯುಕ್ತ ರಾಷ್ಟ್ರ ಸುರಕ್ಷಾ ಪರಿಷತ್ತು ತನ್ನ ಇತಿಹಾಸದಲ್ಲಿ ಮೊತ್ತಮೊದಲು ಈ ಆಕ್ರಮಣದ ಮೇಲೆ ಟೀಕಿಸುವ ಪ್ರಸ್ತಾಪವನ್ನು ಸಮ್ಮತಿಸಿತು. ಇದರೊಂದಿಗೆ ಭಾರತವನ್ನು ‘ಸಂಯುಕ್ತ ರಾಷ್ಟ್ರ ಸುರಕ್ಷಾ ಪರಿಷತ್ತಿನಲ್ಲಿ ೨ ವರ್ಷಗಳಿಗೆ ನೇಮಕ, ಜಾಗತಿಕ ಆರೋಗ್ಯ ಸಂಘಟನೆಯ ಕಾರ್ಯಕಾರೀ ಮಂಡಳದ ಅಧ್ಯಕ್ಷರ ಹುದ್ದೆ, ಸಂಯುಕ್ತ ರಾಷ್ಟ್ರದ ಆರ್ಥಿಕ ಮತ್ತು ಸಾಮಾಜಿಕ ಪರಿಷತ್ತಿನ ಮೇಲೆ ನೇಮಕ, ಇಂತಹ ಅನೇಕ ಘಟನೆಗಳಿಂದ ಈ ಕಾಲಾವಧಿಯಲ್ಲಿ ದೇಶದ ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಪ್ರಭಾವದ ಪಾವತಿ ಸಿಗುತ್ತದೆ. ಅದೇ ರೀತಿ ಅನೇಕ ಪ್ರಭಾವಶಾಲಿ ಅಂತರರಾಷ್ಟ್ರೀಯ ಸಂಘಟನೆಗಳ ಸದಸ್ಯತ್ವ ಭಾರತಕ್ಕೆ ಸಿಕ್ಕಿತು. ಅಮೇರಿಕಾದಿಂದ ಪ್ರಾಪ್ತವಾಗಿರುವ ‘ಎಸ್ಟೀ-೧’ ಗುಣಮಟ್ಟದ ಮತ್ತು ರಶಿಯಾದಿಂದ ಸಿಗುವ ‘ಎಸ್-೪೦೦’ ಈ ಕ್ಷೇಪಣಾಸ್ತ್ರವಿರೊಧಿ ವ್ವವಸ್ಥೆಯು ಭಾರತದ ದೊಡ್ಡ ಯಶಸ್ಸೆಂದೆ ಹೇಳಬೇಕು.

ಈಗ ಆರ್ಥಿಕ ವಿಕಾಸವನ್ನು ಸಾಧಿಸುವಾಗ ಸೈನಿಕ ಕ್ಷೇತ್ರದಲ್ಲಿನ ದೊಡ್ಡ ಆಮದುದಾರ ಎಂಬ ಗುರುತನ್ನು ಅಳಿಸಿ, ದೇಶವನ್ನು ‘ರಪ್ತುದಾರ ದೇಶ’ವನ್ನಾಗಿ ಮಾಡಲಿಕ್ಕಿದೆ ಮತ್ತು ಇಂದು ಈ ದಿಕ್ಕಿನಲ್ಲಿ ಬೀಳುವ ಹೆಜ್ಜೆಗಳನ್ನು ನೊಡಿದರೆ ಈ ಗುರಿ ಮುಟ್ಟಲು ತುಂಬಾ ಸಮಯ ತಾಗಲಾರದು ಎಂದು ಅನಿಸುತ್ತದೆ. ಯಾವಾಗ ಭಾರತ ಸ್ವಾತಂತ್ಯದ ಶತಮಾನವನ್ನು ಪುರ್ಣಗೊಳಿಸುವುದೋ, ಆಗ ಜಗತ್ತಿನ ‘ಅತ್ಯಂತ ಬಲಶಾಲಿ’ ದೇಶವಾಗುವ (ಮಹಾ ಸತ್ತಾ ಆಗುವ) ಸಾಧ್ಯತೆಯನ್ನು ನಿರಾಕರಿಸುವಂತಿಲ್ಲ.’

– ಡಾ. ಶೈಲೇಂದ್ರ ದೇವಳಾಣಕರ, ವಿದೇಶ ಧೋರಣೆಯ ವಿಶ್ಲೇಷಕರು

(ಆಧಾರ : ಫೇಸ್‌ಬುಕ್)