ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್ ಇಂದು ದೀಪಾವಳಿ ಆಚರಿಸುವರು !

ಉಪರಾಷ್ಟ್ರಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಮಾಜಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರು ಇಂದು ಗೋವತ್ಸ ದ್ವಾದಶಿ (ವಸುಬಾರಸ) ದಿನದಂದು ದೀಪಾವಳಿ ಆಚರಿಸಿದರು !

ವಾಷಿಂಗ್ಟನ್ (ಅಮೇರಿಕಾ) – ಜಗತ್ತಿನಾದ್ಯಂತ ಈ ಸಾರಿ ದೀಪಾವಳಿಯನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತಿದೆ. ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್ ಲಕ್ಷ್ಮಿ ಪೂಜೆಯ ದಿನ ಎಂದರೆ ಅಕ್ಟೋಬರ್ ೨೪ ರಂದು ವೈಟ್ ಹೌಸ್ ನಲ್ಲಿ ದೀಪಾವಳಿ ಆಚರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಅವರು ಅನೇಕ ಭಾರತೀಯರನ್ನು ಆಮಂತ್ರಿಸಿದ್ದಾರೆ. ವಿದೇಶಾಂಗ ಸಚಿವ ಆಂಟನಿ ಬ್ಲಿಂಕನ್ ಇವರು ಬಲಿಪಾಡ್ಯಮಿಯ ದಿನ ಎಂದರೆ ಅಕ್ಟೋಬರ್ ೨೬ ರಂದು ಸರಕಾರಿ ಅಧಿಕಾರಗಳ ಜೊತೆಗೆ ದೀಪಾವಳಿ ಸಮಾರಂಭದ ಆಯೋಜನೆ ಮಾಡಿದ್ದಾರೆ. ಇದರಲ್ಲಿ ಪ್ರಸಿದ್ಧ ಸಂಸದರು ಸಹಭಾಗಿ ಆಗುವವರು.

ಇನ್ನೊಂದು ಕಡೆ ಅಮೇರಿಕಾದ ಉಪರಾಷ್ಟ್ರಾಧ್ಯಕ್ಷೆ ಕಮಲಾ ಹ್ಯಾರಿಸ್ ಇವರು ಗೋವತ್ಸದ್ವಾದಶಿಯಂದು ಎಂದರೆ ಅಕ್ಟೋಬರ್ ೨೧ ರಂದು ಅವರ ನಿವಾಸದಲ್ಲಿ ದೀಪಾವಳಿಯ ಪ್ರಯುಕ್ತ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸರಕಾರಿ ನಿವಾಸ ‘ದೀ ನೈವಲ್ ಅಬ್ಸರ್ವೇಟರಿ ’ ಇಲ್ಲಿ ಹ್ಯಾರೀಸ್ ಇವರು ೧೦೦ ಕಿಂತಲೂ ಹೆಚ್ಚಿನ ಭಾರತೀಯ ಮೂಲದ ಜನರನ್ನು ಆಮಂತ್ರಿಸಿದ್ದರು. ಆ ಸಮಯದಲ್ಲಿ ಅವರು ದೀಪಾವಳಿ ಇದು ವೈಶ್ವಿಕ(ಜಾಗತಿಕ) ಹಬ್ಬ ಮತ್ತು ವಿಚಾರವಾಗಿದೆ. ಅದು ಸಂಸ್ಕೃತಿಗೆ ಮೀರಿದ್ದಾಗಿದೆ. ಈ ಹಬ್ಬ ಅಂಧಃಕಾರದ ಮೇಲೆ ಪ್ರಕಾಶದ ವಿಜಯದ ಪ್ರತೀಕವಾಗಿದೆ. ಈ ಕಾರ್ಯಕ್ರಮಕ್ಕೆ ಪ್ರಸಿದ್ಧ ಸರ್ಜನ್ ಜನರಲ್ ಡಾಕ್ಟರ್ ವಿವೇಕ ಮೂರ್ತಿ, ರಾಷ್ಟ್ರಾಧ್ಯಕ್ಷರ ವಿಶೇಷ ಸಲಹೆಗಾರರಾದ ನೀರಾ ಟಂಡನ್ ಮತ್ತು ಅವರ ಭಾಷಣ ಬರೆಯುವ ವಿನಯ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

ಮಾಜಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರು ಫ್ಲಾರಿಡದ ಅವರ ಮಾರ್ ಏ ಲಾಗೊ ಈ ನಿವಾಸ ಸ್ಥಳದಲ್ಲಿ ಭಾರತೀಯ ಮೂಲದ ಜನರ ಜೊತೆಗೆ ದೀಪಾವಳಿ ಆಚರಿಸಿದರು.