Donald Trump Assassination Attempt : ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ; ಕೂದಲೆಳೆಯಲ್ಲಿ ಪಾರು !

  • ಬಲಕಿವಿಯಿಂದ ಹಾದು ಹೋದ ಗುಂಡು !

  • ಅಮೇರಿಕಾದ ಗೂಢಚಾರ ಸಂಸ್ಥೆಯ ವಿಫಲತೆ, ಜಗತ್ತಿನಾದ್ಯಂತ ಅಪಖ್ಯಾತಿ !

  • ಭದ್ರತಾಪಡೆಯಿಂದ ೨೦ ವರ್ಷದ ದಾಳಿಕೋರನ ಹತ್ಯೆ

ನ್ಯೂಯಾರ್ಕ್ (ಅಮೇರಿಕಾ) – ಅಮೇರಿಕಾದ ಮಾಜಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ನಡೆದ ಮಾರಣಾಂತಿಕ ಹಲ್ಲೆಯಲ್ಲಿ ಕೂದಲೆಳೆಯಲ್ಲಿ ಪಾರಾದರು. ಪೆನಸಿಹ್ಲ್ವೆನಿಯಾದಲ್ಲಿ ಒಂದು ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಗುಂಡು ಟ್ರಂಪ್ ಇವರ ಕಿವಿಗೆ ತಾಕಿ ಹೋಗಿದೆ. ಈ ದಾಳಿಯಲ್ಲಿ ಟ್ರಂಪ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ೨ ಸಾವನ್ನಪ್ಪಿದ್ದಾರೆ. ಪೆನಸಿಹ್ಲ್ವೆನಿಯಾದ ಬೆಥೆಲ್ ಪಾರ್ಕ್ ಪ್ರದೇಶದ ನಿವಾಸಿಯಾಗಿರುವ ೨೦ ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಇವನು ೧೨೦ ಮೀಟರ್ ದೂರದಿಂದ ಟ್ರಂಪ್ ಇವರ ಮೇಲೆ ಗುರಿ ಇಟ್ಟಿದ್ದನು. ದಾಳಿ ಕೋರನು ಟ್ರಂಪ್ ನತ್ತ ಹಾರಿಸಿರುವ ಗುಂಡು ಕೇವಲ ೨ ಸೆಂಟಿ ಮೀಟರ್ ಅಂತರದಲ್ಲಿ ಗುರಿ ತಪ್ಪಿದೆ, ಇಲ್ಲವಾದರೆ ದೊಡ್ಡ ಅನಾಹುತವೇ ನಡೆಯುತ್ತಿತ್ತು. ಈ ಘಟನೆ ಅಮೆರಿಕಾದ ಕಾಲಮಾನದ ಪ್ರಕಾರ ಜುಲೈ ೧೩ ರಂದು ಸಂಜೆ ನಡೆದಿದೆ. ಈ ಘಟನೆಯಿಂದ ಜಗತ್ತಿನಾದ್ಯಂತ ಅಮೆರಿಕಾ ಪೇಚಿಗೆ ಸಿಲುಕಿದೆ.

೧. ಈ ದಾಳಿಯಿಂದ ಅಮೆರಿಕಾದ ಗೂಢಾಚಾರ ಸಂಸ್ಥೆ ವಿಫಲತೆ ಎಂದು ಹೇಳಲಾಗುತ್ತಿದೆ. ಗುಢಾಚಾರ ಸಂಸ್ಥೆಗೆ ಈ ಘಟನೆಯ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ.

೨. ದಾಳಿ ನಡೆದ ನಂತರ ‘ಸೀಕ್ರೆಟ್ ಸರ್ವಿಸ್’ನ ಕಮಾಂಡೋ ಟ್ರಂಪ್ ಇವರ ಕಡೆಗೆ ಧಾವಿಸಿ ಟ್ರಂಪ್ ಇವರನ್ನು ಸುತ್ತುವರೆದರು. ಒಂದು ನಿಮಿಷದಲ್ಲಿ ಟ್ರಂಪ್ ಎದ್ದು ನಿಂತು ಕೈಯ ಮುಷ್ಟಿಯನ್ನು ಬಿಗಿಗೊಳಿಸುತ್ತಾ ಬೆಂಬಲಿಗರಿಗೆ ‘ಹೋರಾಡಿ ಹೋರಾಡಿ ಹೋರಾಡಿ !’ ಎಂದು ಕರೆ ನೀಡಿದರು.

೩. ‘ಯು.ಎಸ್. ಸೀಕ್ರೆಟ್ ಸರ್ವಿಸ್’ನ ಓರ್ವ ಕಮಾಂಡೋ ದಾಳಿಕೋರನ ತಲೆಗೆ ಗುಂಡು ಹಾರಿಸಿದರು. ಆದ್ದರಿಂದ ಅವನು ಸ್ಥಳದಲ್ಲೇ ಮೃತಪಟ್ಟನು. ಅವನ ಮೇಲೆ ೨೦೦ ಮೀಟರ್ ಅಂತರದಿಂದ ಗುಂಡು ಹಾರಿಸಲಾಗಿತ್ತು.

೪. ಟ್ರಂಪ್ ಯಾವ ಸ್ಥಳದಲ್ಲಿ ಭಾಷಣ ಮಾಡುತ್ತಿದ್ದರು, ಅದರ ೧೨೦ ಮೀಟರ್ ಅಂತರದಲ್ಲಿ ಒಂದು ಕಾರ್ಖಾನೆ ಇದೆ. ಅದರ ಮಾಳಿಗೆಯ ಮೇಲೆ ದಾಳಿಕೋರ ಥಾಮಸ್ ಮ್ಯಾಥ್ಯು ಕ್ರೂಕ್ಸ್ ಅಡಗಿ ಕುಳಿತಿದ್ದನು.

೫. ಯಾವ ಕಟ್ಟಡದ ಮೇಲೆ ದಾಳಿಕೋರನ ಶವ ಸಿಕ್ಕಿತೋ, ಅದು ‘ಎ.ಜಿ.ಆರ್. ಇಂಟರ್ನ್ಯಾಷನಲ್’ ಕಂಪನಿಗೆ ಸೇರಿದ್ದು ಆ ಕಂಪನಿಯಲ್ಲಿ ಗಾಜು ಮತ್ತು ಪ್ಲಾಸ್ಟಿಕ್ ನಿಂದ ತಯಾರಿಸುವ ವಸ್ತುಗಳ ಉತ್ಪಾದನೆ ಮಾಡಲಾತ್ತದೆ.

೬. ಅಮೇರಿಕಾದಲ್ಲಿ ಓರ್ವ ಮಾಜಿ ರಾಷ್ಟ್ರಾಧ್ಯಕ್ಷರ ಮೇಲೆ ಈ ರೀತಿ ಗುಂಡಿನ ದಾಳಿ ೪ ದಶಕಗಳ ನಂತರ ನಡೆದಿದೆ. ಈ ಹಿಂದೆ ೧೯೮೧ ರಲ್ಲಿ ರೊನಾಲ್ಡ್ ರೇಗನ್ ಇವರ ಮೇಲೆ ಇದೇ ರೀತಿಯ ಹತ್ಯೆಯ ಪ್ರಯತ್ನ ನಡೆದಿತ್ತು.

೭. ಅಮೇರಿಕಾ ನಿಯಮದ ಪ್ರಕಾರ ಮಾಜಿ ರಾಷ್ಟ್ರಾಧ್ಯಕ್ಷರಿಗೂ ಜೀವಾವಧಿ ರಕ್ಷಣೆ ಪೂರೈಸಲಾಗುತ್ತದೆ.

ಕೊಲೆಗಾರನಿಗೆ ಟ್ರಂಪ್ ಇವರ ಬಗ್ಗೆ ಇತ್ತು ತಿರಸ್ಕಾರ !

ಕೊಲೆಗಾರ ಕ್ರೂಕ್ಸ್ ಇವನ ಒಂದು ವಿಡಿಯೋ ಬೆಳಕಿಗೆ ಬಂದಿದೆ. ಅದರಲ್ಲಿ ಅವನು ‘ನಾನು ರಿಪಬ್ಲಿಕನ್ಸ್ ಮತ್ತು ಡೊನಾಲ್ಡ್ ಟ್ರಂಪ್ ಇವರನ್ನು ತಿರಸ್ಕರಿಸುತ್ತೇನೆ ಮತ್ತು ದ್ವೇಷಿಸುತ್ತೇನೆ’, ಹೀಗೆ ಹೇಳುವುದು ಕಾಣುತ್ತಿದೆ. ಆದ್ದರಿಂದಲೇ ಅವನು ದಾಳಿ ನಡೆಸಿರಬಹುದು ಎಂದು ಹೇಳಲಾಗುತ್ತಿದೆ. ಈ ದಾಳಿಯ ಹಿಂದೆ ಇನ್ನು ಯಾರಾದರೂ ‘ಮಾಸ್ಟರ್ ಮೈಂಡ್’ ಇದ್ದಾರೆಯೇ ?, ಇದರ ಶೋಧ ನಡೆಯುತ್ತಿದೆ.

‘ಟ್ರಂಪ್ ಇವರನ್ನು ತಡೆಯುವುದು’, ಇದು ಡೆಮೊಕ್ರಟಿಕ್ ಪಕ್ಷದ ಚುನಾವಣೆ ನೀತಿ ಇರುವುದರಿಂದ ಅವರ ಹತ್ಯೆಯ ಪ್ರಯತ್ನ ನಡೆದಿದೆ ! – ರಿಪಬ್ಲಿಕನ್ ಪಕ್ಷದ ನಾಯಕರು

ದಾಳಿಯ ನಂತರ ರಿಪಬ್ಲಿಕನ್ ಪಕ್ಷದ ನಾಯಕರು ನೇರ ರಾಷ್ಟ್ರಾಧ್ಯಕ್ಷ ಜೋ ಬಾಯಡೇನ್ ಇವರನ್ನು ಟೀಕಿಸಿದ್ದಾರೆ. ‘ಟ್ರಂಪ್ ಇವರನ್ನು ಯಾವುದೇ ಪರಿಸ್ಥಿತಿಯಲ್ಲಿ ರಾಷ್ಟ್ರಾಧ್ಯಕ್ಷ ಆಗದಂತೆ ತಡೆಯುವುದೇ’ ಡೆಮೊಕ್ರಟಿಕ್ ಪಕ್ಷದ ಕೇಂದ್ರ ನೀತಿ ಇರುವುದರಿಂದ ಅವರ ಮೇಲೆ ದಾಳಿ ನಡೆದಿದೆ, ಎಂದು ರಿಪಬ್ಲಿಕನ್ ಪಕ್ಷದ ಅನೇಕ ನಾಯಕರು ಆರೋಪಿಸಿದ್ದಾರೆ.

ಭಾರತ ಮತ್ತು ಇಸ್ರೇಲ್ ನಿಂದ ಖಂಡನೆ

೧. ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೇನ್ : ಅಮೇರಿಕಾದಲ್ಲಿ ಈ ರೀತಿಯ ಹಿಂಸಾಚಾರಕ್ಕೆ ಸ್ಥಾನವಿಲ್ಲ. ನಾವು ಒಂದು ದೇಶವೆಂದು ಸಂಘಟಿತರಾಗಿ ಈ ಘಟನೆಯನ್ನು ಖಂಡಿಸಬೇಕು. ಈ ದಾಳಿಯನ್ನು ಸರಕಾರ ಅತ್ಯಂತ ಗಂಭೀರವಾಗಿಯೇ ಪರಿಗಣಿಸಿದೆ.

೨. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ : ನನ್ನ ಮಿತ್ರ ಡೊನಾಲ್ಡ್ ಟ್ರಂಪ್ ಇವರ ಮೇಲೆ ನಡೆದಿರುವ ದಾಳಿಯಿಂದ ನನಗೆ ಬಹಳ ಕಳವಳ ಎನಿಸುತ್ತದೆ. ನಾನು ಈ ದಾಳಿಯನ್ನು ನಿಷೇಧಿಸುತ್ತೇನೆ. ಪ್ರಜಾಪ್ರಭುತ್ವ ಮತ್ತು ರಾಜಕಾರಣದಲ್ಲಿ ಈ ರೀತಿಯ ಹಿಂಸಾಚಾರಕ್ಕೆ ಯಾವುದೇ ಸ್ಥಾನವಿಲ್ಲ.

೩. ಇಸ್ರಾಯಿಲಿನ ಪ್ರಧಾನಮಂತ್ರಿ ಬೆಂಜಮೀನ ನೇತಾನ್ಯಾಹೂ : ನಮಗೆ ಈ ಘಟನೆಯಿಂದ ಆಘಾತವಾಗಿದೆ. ಟ್ರಂಪ್ ಇವರು ಬೇಗನೆ ಆರೋಗ್ಯವಂತರಾಗಲಿ ಎಂದು ನಾವು ಆಶಿಸುತ್ತೇವೆ.