Joe Biden : ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ಅಮೇರಿಕಾದ ಅಧ್ಯಕ್ಷ ಜೋ ಬೈಡೆನ್ !

ಜೋ ಬೈಡೆನ್

ವಾಷಿಂಗ್ಟನ್ (ಅಮೇರಿಕಾ) – ಮುಂಬರುವ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಅಮೇರಿಕಾದ ಅಧ್ಯಕ್ಷರಾದ ಜೋ ಬೈಡೆನ್ ಅವರು ಘೋಷಿಸಿದ್ದಾರೆ. ಪ್ರಸ್ತುತ ಅಮೇರಿಕಾದ ಉಪಾಧ್ಯಕ್ಷೆಯಾದ ಕಮಲಾ ಹ್ಯಾರಿಸ್ ಅವರನ್ನು ರಾಷ್ಟ್ರಾಧ್ಯಕ್ಷ ಅಭ್ಯರ್ಥಿಯಾಗಿ ಬೆಂಬಲಿದುವುದಾಗಿ ಬೈಡೆನ್ ಹೇಳಿದ್ದಾರೆ. ಕುತೂಹಲದ ಸಂಗತಿ ಎಂದರೆ ನಾಲ್ಕು ತಿಂಗಳ ಬಳಿಕ ಈ ಚುನಾವಣೆ ನಡೆಯಲಿದೆ. ಪ್ರತಿಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಬೈಡೆನ್ ಅವರ ಈ ನಿರ್ಧಾರವನ್ನು ಟೀಕಿಸಿದ್ದಾರೆ. ಬೈಡೆನ್ ಅವರ ನಂತರ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಯಾರು ಎಂಬುದು ಇದುವರೆಗೂ ಅಧಿಕೃತವಾಗಿ ಘೋಷಿಸಲಾಗಿಲ್ಲ.

1. ಜೋ ಬೈಡೆನ್ ಚುನಾವಣೆಯಿಂದ ಹಿಂದೆ ಸರಿದಿದ್ದು ಒಳ್ಳೆಯದಾಯಿತು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ವಾಸ್ತವವಾಗಿ ಅವರು ಅಮೇರಿಕಾ ಇತಿಹಾಸದಲ್ಲಿನ ಅತ್ಯಂತ ಕೆಟ್ಟ ಅಧ್ಯಕ್ಷರಾಗಿದ್ದರು. ಅವರು ರಾಷ್ಟ್ರಾಧ್ಯಕ್ಷ ಚುನಾವಣೆಗೆ ಅರ್ಹರಲ್ಲ. ಕಳೆದ ಚುನಾವಣೆಯಲ್ಲಿ ಸುಳ್ಳು ಹೇಳಿ ಮತ್ತು ಸುಳ್ಳು ಪ್ರಚಾರ ಮಾಡಿ ಅಧ್ಯಕ್ಷರಾಗಿದ್ದರು ಎಂದು ಟ್ರಂಪ್ ಆರೋಪಿಸಿದ್ದಾರೆ.

2. ಕಮಲಾ ಹ್ಯಾರಿಸ್ ಅವರನ್ನು ಟೀಕೆ ಮಾಡುತ್ತಾ ಟ್ರಂಪ್ ಮಾತನಾಡಿ, ಡೆಮೋಕ್ರಾಟ್‌ ಪಕ್ಷದವರು ಕಮಲಾ ಹ್ಯಾರಿಸ್ ಅವರಿಗೆ ಉಮೇದುವಾರಿಕೆ ನೀಡಿದರೆ ಬೈಡೆನ್‌ಗಿಂತ ಕಮಲಾ ಹ್ಯಾರಿಸ್ ಅವರನ್ನು ಸೋಲಿಸುವುದು ಇನ್ನಷ್ಟು ಸುಲಭವಾಗಲಿದೆ ಎಂದು ವ್ಯಂಗ್ಯವಾಡಿದ್ದಾರೆ.