‘ಕೆನಡಾ ಮಾಡಿರುವ ಆರೋಪ ಗಂಭೀರವಾಗಿದ್ದರಿಂದ ಭಾರತವು ಅದನ್ನು ಗಾಂಭೀರ್ಯತೆಯಿಂದ ತೆಗೆದುಕೊಳ್ಳಬೇಕು ಮತ್ತು ತನಿಖೆಯಲ್ಲಿ ಸಹಕಾರ ನೀಡಬೇಕಂತೆ !

ಕೆನಡಾ ಮತ್ತು ಭಾರತ ಇವರಲ್ಲಿನ ವಿವಾದದಲ್ಲಿ ಅಮೇರಿಕಾದ ಅಧಿಕ ಪ್ರಸಂಗಿತನ

ವಾಷಿಂಗ್ಟನ್ (ಅಮೇರಿಕಾ) – ಕೆನಡಾದಲ್ಲಿ ಹತ್ಯೆಗೀಡಾದ ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯ ತನಿಖೆ ಮಾಡುವುದಕ್ಕಾಗಿ ಭಾರತವು ಕೆನಡಾಗೆ ಸಹಕಾರ ನೀಡಬೇಕೆಂದು ಅಮೆರಿಕ ಮತ್ತೊಮ್ಮೆ ಹೇಳಿದೆ.

ಅಮೇರಿಕಾ ಸರಕಾರದ ವಕ್ತಾರ ಮ್ಯಾಥ್ಯು ಮಿಲರ್ ಇವರು ಪತ್ರಕರ್ತರ ಸಭೆಯಲ್ಲಿ, ಭಾರತವು ಕೆನಡಾಗೆ ಸಹಕಾರ ನೀಡಬೇಕು, ಹೀಗೆ ನಮ್ಮ ಅಪೇಕ್ಷೆ ಆಗಿತ್ತು; ಆದರೆ ಕೆನಡಾದಲ್ಲಿನ ಸ್ವತಃ ರಾಯಭಾರಿ ಕಚೇರಿಯಲ್ಲಿನ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡು ಭಾರತವು ಬೇರೆ ಮಾರ್ಗವನ್ನು ಹಿಡಿದಿದೆ ಎಂದು ಕಂಡು ಬರುತ್ತದೆ. ಕೆನಡಾ ಮಾಡಿರುವ ಆರೋಪ ಗಂಭೀರವಾಗಿದೆ ಮತ್ತು ಅದನ್ನು ಗಂಭೀರವಾಗಿದೆ ಪರಿಗಣಿಸಬೇಕು. ಭಾರತ ಮತ್ತು ಕೆನಡಾ ಪರಸ್ಪರ ಸಹಕಾರ ಮಾಡಬೇಕಿತ್ತು; ಆದರೆ ಈ ಮಾರ್ಗ ಅನುಸರಿಸಿರುವುದು ಕಂಡು ಬರುತ್ತಿಲ್ಲ. ಕೆನಡಾದ ಪ್ರಧಾನ ಮಂತ್ರಿ ಹಾಗೂ ಪೊಲೀಸರು ನಿಜ್ಜರ ಇವನ ಹತ್ಯೆಯ ಪ್ರಕರಣದಲ್ಲಿ ಭಾರತವು ಕೆನಡಾದಲ್ಲಿನ ಭಾರತದ ರಾಯಭಾರಿ ಕಚೇರಿಯ ೬ ಅಧಿಕಾರಿಗಳಿಗೆ ದೇಶ ತೊರೆಯುವಂತೆ ಆದೇಶ ನೀಡಿದೆ. ಅದರಿಂದ ಅಮೆರಿಕವು ಮೇಲಿನ ಹೇಳಿಕೆ ನೀಡಿದೆ.

ಸಂಪಾದಕೀಯ ನಿಲುವು

ಭಾರತವು ಏನು ಮಾಡಬೇಕು ಮತ್ತು ಏನು ಮಾಡಬಾರದು ಇದನ್ನು ಹೇಳುವ ಅಧಿಕಾರ ಅಮೆರಿಕಾಗೆ ಯಾರು ನೀಡಿದ್ದಾರೆ ? ‘ಭಾರತ ಎಂದರೆ ಮಧ್ಯಪೂರ್ವದಲ್ಲಿನ ಇಸ್ಲಾಮಿ ರಾಷ್ಟ್ರ’, ಎಂದು ಅಮೇರಿಕಾಗೆ ಅನಿಸುತ್ತಿದೆಯೇ ? ಅಮೇರಿಕ ಜಗತ್ತಿನಾದ್ಯಂತ ಏನೆಲ್ಲಾ ಕೃತ್ಯ ಮಾಡುತ್ತಿರುತ್ತದೆ, ಅದರ ಬಗ್ಗೆ ಭಾರತವು ಮಾತನಾಡಲು ಆರಂಭಿಸಿದರೆ ಅಮೆರಿಕಾ ಒಪ್ಪುವುದೇ ?