ನವ ದೆಹಲಿ – ಪ್ರಧಾನಿ ನರೇಂದ್ರ ಮೋದಿ ಇವರು ಆಗಸ್ಟ್ ೨೬ ರಂದು ರಾತ್ರಿ ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೇನ್ ಇವರ ಜೊತೆಗೆ ದೂರವಾಣಿಯಲ್ಲಿ ಚರ್ಚೆ ನಡೆಸಿದರು. ಇಬ್ಬರೂ ನಾಯಕರು ಉಕ್ರೇನ್ ಮತ್ತು ಬಾಂಗ್ಲಾದೇಶದಲ್ಲಿನ ಪರಿಸ್ಥಿತಿಯ ಕುರಿತು ಚರ್ಚಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಉಕ್ರೇನ್‌ನಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಭಾರತದ ಬೆಂಬಲವನ್ನು ಪುನರುಚ್ಚರಿಸಿದೆ. ಹಾಗೂ ಬಾಂಗ್ಲಾದೇಶದಲ್ಲಿನ ಪರಿಸ್ಥಿತಿ ಆದಷ್ಟು ಬೇಗನೆ ತಿಳಿಗೊಳಿಸಲು ಇಬ್ಬರು ಒತ್ತು ನೀಡಿದ್ದಾರೆ. ಬಾಂಗ್ಲಾದೇಶದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಆದಷ್ಟು ಬೇಗನೆ ಹಿಂದಿನಂತೆ ಮಾಡಲು ಮತ್ತು ಅಲ್ಪಸಂಖ್ಯಾತರ ವಿಶೇಷವಾಗಿ ಹಿಂದುಗಳ ಸುರಕ್ಷೆಯನ್ನು ನಿರ್ಧರಿಸಲು ಒತ್ತು ನೀಡಿದ್ದಾರೆ.
ಸಂಪಾದಕೀಯ ನಿಲುವು
|