ಶೀ ಜಿನಪಿಂಗ್ ಚೀನಾದ ಮೂರನೇ ಬಾರಿಗೆ ರಾಷ್ಟ್ರಾಧ್ಯಕ್ಷರಾದರು!

ಮಾವೋ ಬಳಿಕ ಇಂತಹ ಕೃತ್ಯ ಮಾಡಿರುವ ಮೊದಲ ಚೀನಿ ನಾಯಕ!

ಚೀನಾದ ರಾಷ್ಟ್ರಾಧ್ಯಕ್ಷರಾದ ಶೀ ಜಿನಪಿಂಗ್

ಬೀಜಿಂಗ– ಶೀ ಜಿನಪಿಂಗ್ ಇವರು ಜಗತ್ತಿನ ಅತ್ಯಧಿಕ ಜನಸಂಖ್ಯೆಯಿರುವ ಚೀನಾದಲ್ಲಿ ಮೂರನೇ ಬಾರಿಗೆ ರಾಷ್ಟ್ರಾಧ್ಯಕ್ಷರಾಗಿದ್ದಾರೆ. ಇದರಿಂದ ‘ಪೀಪಲ್ಸ್ ಲಿಬರೇಶನ ಆರ್ಮಿ’ಯ ಅಂದರೆ ಚೀನಾ ಸೈನ್ಯದ ಮುಖಂಡರಾಗಿದ್ದಾರೆ. ಚೀನಾದ ಸಾಮ್ಯವಾದಿ ಪಕ್ಷದ ಸಂಸ್ಥಾಪಕ ಮಾವೋ- ತ್ಸೆ- ತುಂಗ ಇವರ ಬಳಿಕ ಜಿನಪಿಂಗ ಇವರು ಮೂರನೇ ಬಾರಿಗೆ ಕಾರ್ಯನಿರ್ವಹಿಸಲಿರುವ ಮೊದಲ ನಾಯಕರಾಗಿದ್ದಾರೆ. ಅವರು ಮೂರನೇ ಬಾರಿಗೆ ಕಾರ್ಯನಿರ್ವಹಿಸಲಿದ್ದಾರೆ. ಮಾವೋ ಸಾಧಾರಣವಾಗಿ ೩ ದಶಕಗಳ ಕಾಲ ಚೀನಾದ ಪ್ರಮುಖ ಹುದ್ದೆಯಲ್ಲಿ ವಿರಾಜಮಾನರಾಗಿದ್ದರು. ಈ ಸಂದರ್ಭದಲ್ಲಿ ಜಿನಪಿಂಗ್ ತಮ್ಮ ಮಾತನ್ನು ಮುಂದುವರಿಸುತ್ತಾ, ಜಗತ್ತಿಗೆ ಚೀನಾದ ಮತ್ತು ಚೀನಾಕ್ಕೆ ಜಗತ್ತಿನ ಆವಶ್ಯಕತೆಯಿದೆಯೆಂದು ಹೇಳಿದರು.

ಜಿನಪಿಂಗ್ ಮೂರನೇ ಬಾರಿಗೆ ರಾಷ್ಟ್ರಾಧ್ಯಕ್ಷ ಆಗಿದ್ದರಿಂದ ಚೀನಾದ ಸಾಮ್ಯವಾದಿ ಪಕ್ಷದ ೩೦ ವರ್ಷಗಳ ಹಳೆಯ ನಿಯಮಗಳನ್ನು ಮುರಿಯಲಾಗಿದೆ. ತನ್ಮೂಲಕ ಒಬ್ಬ ವ್ಯಕ್ತಿಯು ಅತ್ಯಧಿಕ ಕಾಲಾವಧಿಯ ವರೆಗೆ ಅಂದರೆ ೧೦ ವರ್ಷಗಳ ಕಾಲ ರಾಷ್ಟ್ರಾಧ್ಯಕ್ಷರಾಗಿ ಇರಬಹುದಾಗಿದೆ.