ಮುಂದಿನ ವರ್ಷದಿಂದ ದೀಪಾವಳಿಯ ಪ್ರಯುಕ್ತ ನ್ಯೂಯಾರ್ಕ ಶಾಲೆಗಳಿಗೆ ರಜೆ !

ನ್ಯೂಯಾರ್ಕ (ಅಮೇರಿಕಾ) – ಮುಂದಿನ ವರ್ಷದಿಂದ ದೀಪಾವಳಿಗೆ ಸರಕಾರಿ ಶಾಲೆಗಳಲ್ಲಿ ರಜೆ ಕೊಡಲಾಗುವುದು ಎಂದು ನ್ಯೂಯಾರ್ಕನ ಮೇಯರ್ ಎರಿಕ್ ಆಡಮ್ಸ್ ಇವರು ಘೋಷಿಸಿದ್ದಾರೆ. ನ್ಯೂಯಾರ್ಕ ವಿಧಾನಸಭೆಯ ಸದಸ್ಯೆ ಜೆನ್ನಿಫರ ರಾಜಕುಮಾರ ಅವರು ದೀಪಾವಳಿಯನ್ನು ಹಬ್ಬದಂತೆ ಗುರುತಿಸುವ ಮಸೂದೆಯನ್ನು ಮಂಡಿಸಿದ್ದರು. ಇದನ್ನು ಮೇಯರ್ ಆಡಮ್ಸ್ ಮತ್ತು ನ್ಯೂಯಾರ್ಕ ನಗರದಲ್ಲಿನ ಶಾಲೆಗಳ ಅಧ್ಯಕ್ಷ ಡೇವಿಡ್ ಬ್ಯಾಂಕ್ಸ್ ಇವರು ಬೆಂಬಲಿಸಿದರು. ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ಕೊಡಲಾಗುತ್ತಿದ್ದ ವಾರ್ಷಿಕ ರಜೆಯನ್ನು ರದ್ದುಗೊಳಿಸಿ ದೀಪಾವಳಿಗೆ ರಜೆ ನೀಡಲಾಗುವುದು.

೧. ಮೇಯರ್ ಆಡಮ್ಸ್ ಮಾತನಾಡುತ್ತಾ, ದೀಪಾವಳಿ ಸಂದರ್ಭದಲ್ಲಿ ನಾವು ಮಕ್ಕಳಿಗೆ ಪ್ರೋತ್ಸಾಹ ನೀಡಲಿದ್ದೇವೆ. ಈ ಬಗ್ಗೆ ಚರ್ಚಿಸಿ ದೀಪಾವಳಿಯಲ್ಲಿ ದೀಪಗಳನ್ನು ಹಚ್ಚುವುದರಿಂದ ಹೇಗೆ ಬೆಳಕನ್ನು ಹರಡಲಾಗುತ್ತದೆಯೋ ಹಾಗೆಯೇ ನಮ್ಮ ಆಂತರ್ಯದಲ್ಲಿಯೂ ಬೆಳಕನ್ನು ಸೃಷ್ಟಿಸಿ ಕತ್ತಲನ್ನು ಹೋಗಲಾಡಿಸಬೇಕು ಎಂದು ಮಕ್ಕಳಿಗೆ ತಿಳಿಸುವೆವು ಎಂದು ಹೇಳಿದರು.

೨. ಈ ಹಿನ್ನೆಲೆಯಲ್ಲಿ ನ್ಯೂಯಾರ್ಕನ ಪ್ರಸಿದ್ಧ ಟೈಮ್ಸ್ ಸ್ಕ್ವೇರ್ ನಲ್ಲಿ ದೀಪಾವಳಿ ಹಬ್ಬದ ಆಚರಣೆ ಈಗಾಗಲೇ ಪ್ರಾರಂಭವಾಗಿದೆ. ಮತ್ತೊಂದೆಡೆ, ಅಮೆರಿಕದ ಉಪರಾಷ್ಟ್ರಪತಿ ಕಮಲಾ ಹ್ಯಾರಿಸ್ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರು ಅಕ್ಟೋಬರ್ ೨೧ ರಂದು ತಮ್ಮ ನಿವಾಸದಲ್ಲಿ ದೀಪಾವಳಿಯನ್ನು ಆಚರಿಸಿದರು.