ಬ್ರಿಟನ್ ನಲ್ಲಿ ಋಷಿ ಸುನಕರವರು ಪ್ರಧಾನಮಂತ್ರಿ ಲೀಜ ಟ್ರಸ್‌ರವರನ್ನು ಸೋಲಿಸುವರು ! – ಸಮೀಕ್ಷೆ

ಋಷಿ ಸುನಕರವರ (ಎಡಬದಿಗೆ) ಮತ್ತು ಪ್ರಧಾನಮಂತ್ರಿ ಲೀಜ ಟ್ರಸ್‌

ಲಂಡನ – ಈಗ ಬಬ್ರಿಟನ್ ನ ‘ಹುಜೂರ ಪಕ್ಷ’ದ (‘ಕನ್ಝರ್ವೇಟಿವ್ಹ ಪಾರ್ಟಿ’ಯ) ನೇತೃತ್ವಕ್ಕಾಗಿ ಚುನಾವಣೆ ನಡೆದರೆ ಭಾರತೀಯ ವಂಶದ ನೇತಾರ ಋಷಿ ಸುನಕರವರು ಪ್ರಧಾನಮಂತ್ರಿ ಲೀಜ ಟ್ರಸ್‌ರವರನ್ನು ಸೋಲಿಸುವರು, ಎಂಬುದು ‘ಯೂ ಗೋವ್‌’ ಎಂಬ ಪ್ರಸಿದ್ಧ ಜಾಗತಿಕ ಸಂಸ್ಥೆಯು ನಡೆಸಿರುವ ಒಂದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ಈ ಸಮೀಕ್ಷೆಯ ಅನುಸಾರ ಪಕ್ಷದ ಶೇ. ೫೫ರಷ್ಟು ಸದಸ್ಯರು ೪೨ ವರ್ಷದ ಸುನಕರವರ ಪಕ್ಷದಲ್ಲಿ ಮತದಾನ ಮಾಡಿದರೆ ಕೇವಲ ಶೇ. ೨೫ರಷ್ಟು ಸದಸ್ಯರು ಟ್ರಸ್‌ರವರನ್ನು ಆಯ್ಕೆ ಮಾಡುವರು. ಟ್ರಸ್‌ರವರು ಅನೇಕ ಅಂಶಗಳಲ್ಲಿ ಬಣ್ಣ ಬದಲಾಯಿಸಿದುದರಿಂದ ಪಕ್ಷದ ಸದಸ್ಯರು ಸಿಟ್ಟಾಗಿದ್ದು ಶೇ. ೫೫ರಷ್ಟು ಸದಸ್ಯರಿಗೆ ಸಪ್ಟೆಂಬರ್‌ ತಿಂಗಳಿನಲ್ಲಿ ಟ್ರಸ್‌ರವರ ಹೆಸರಿನಿಂದ ಮತದಾನ ಮಾಡಿರುವ ಬಗ್ಗೆ ದುಃಖವಾಗುತ್ತಿರುವುದಾಗಿ ಈ ಸಮೀಕ್ಷೆಯು ಹೇಳುತ್ತಿದೆ.

೧. ಮಾಜಿ ಪ್ರಧಾನಿ ಬೋರಿಸ ಜಾನ್ಸನ್‌ರವರ ಹೆಸರಿನಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಒಲವು ಇದ್ದು ಶೇ. ೩೨ರಷ್ಟು ಸದಸ್ಯರು ಅವರ ಹೆಸರನ್ನು ಅನುಮೋದಿಸುತ್ತಿದ್ದಾರೆ. ಶೇ. ೨೩ರಷ್ಟು ಸದಸ್ಯರಲ್ಲಿ ಸುನಕರವರ ವಿಷಯದಲ್ಲಿ ಸಕಾರಾತ್ಮಕ ಅಭಿಪ್ರಾಯವಿದೆ.

೨. ಶೇ. ೮೩ರಷ್ಟು ಸದಸ್ಯರು ಟ್ರಸ್‌ರವರ ಕಾರ್ಯಕಲಾಪದಿಂದ ಸಿಟ್ಟಾಗಿದ್ದಾರೆ. ಇವರಲ್ಲಿನ ಶೇ. ೭೨ ಸದಸ್ಯರು ಕಳೆದ ತಿಂಗಳು ಟ್ರಸ್‌ರವರಿಗೆ ಮತ ನೀಡಿದ್ದರು.

೩. ‘೧೯೨೨ ಕಮಿಟಿ ನಿಯಮ’ಗಳ ಅನುಸಾರ ಇವರು ಕಡಿಮೆ ಅಂದರೆ ೧೨ ತಿಂಗಳ ವರೆಗೆ ಪ್ರಧಾನಿಯಾಗಿರಲಿದ್ದಾರೆ, ಎಂದು ಹೇಳಲಾಗುತ್ತಿದೆ; ಆದರೆ ಅಧಿಕಾರವನ್ನು ಕೈಗೆತ್ತಿಕೊಂಡ ಕೆಲವೇ ವಾರಗಳಲ್ಲಿ ಅರ್ಥವ್ಯವಸ್ಥೆಯ ಸಂದರ್ಭದಲ್ಲಿ ಅವರು ತೆಗೆದುಕೊಂಡ ವಿವಾದಾತ್ಮಕ ನಿರ್ಣಯಗಳಿಂದ ಅವರಿಗೆ ಪಕ್ಷದಲ್ಲಿಯೇ ವಿರೋಧವನ್ನು ಎದುರಿಸಬೇಕಾಗುತ್ತಿದೆ.