ಇಸ್ಲಾಂಅನ್ನು ಟೀಕಿಸಿದುದರಿಂದ ೧೮ ವರ್ಷಗಳ ಹಿಂದೆ ನನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೇಕಾಯಿತು ! ಗೀರ್ಟ್ ವಿಲ್ಡರ್ಸ್

ನಾಸ್ಟರಡಾಮ್ (ನೆದರ್‌ಲ್ಯಾಂಡ್) – ೧೮ ವರ್ಷಗಳ ಹಿಂದೆ ನಾನು ನನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೇಕಾಯಿತು. ನಾನು ಇಸ್ಲಾಮ್ ಮತ್ತು ಮಹಮ್ಮದ ಪೈಗಂಬರರಿಗೆ ಟೀಕೆ ಮಾಡಿದ್ದರಿಂದ ನನ್ನ ವಿರುದ್ಧ ಫತವಾ ಹೊರಡಿಸಲಾಯಿತು ಹಾಗೂ ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆಗಳು ಬರಲು ಆರಂಭವಾದುವು. ಇಂದು ೧೮ ವರ್ಷಗಳು ಪೂರ್ಣವಾಗಿರುವುದರ ನಿಮಿತ್ತದಲ್ಲಿ ಅಮೇರಿಕಾದ ಚಿತ್ರಕಾರ ಬಾಶ ಫಾಸ್ಟಿನ್ ಇವರು ಈ ಪ್ರಸಂಗದ ಮೇಲೆ ಒಂದು ವ್ಯಂಗ್ಯಚಿತ್ರವನ್ನು ಮಾಡಿದ್ದು ಅದನ್ನು ಮಾರಾಟಕ್ಕಾಗಿ ಇಟ್ಟಿದ್ದಾರೆ, ಎಂದು ನೆದರ್‌ಲ್ಯಾಂಡ್‌ನ ‘ಪಾರ್ಟಿಫಾರ್ ಫ್ರೀಡಮ್’ ಈ ರಾಜಕೀಯ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಂಸದ ಗೀರ್ಟ್ ವಿಲ್ಡರ್ಸ್ ಇವರು ಟ್ವೀಟ್ ಮಾಡಿದ್ದಾರೆ. ೨೦೦೪ ರಲ್ಲಿ ವಿಲ್ಡರ್ಸ್ ಇವರು ಇಸ್ಲಾಮ್ ವಿರೋಧಿ ಹೇಳಿಕೆ ನೀಡಿದ್ದರು. ೧೪ ಅಕ್ಟೋಬರ ೨೦೨೨ ರಂದು ಈ ಘಟನೆಗೆ ೧೮ ವರ್ಷಗಳು ಪೂರ್ಣವಾದುವು. ಆ ನಿಮಿತ್ತದಲ್ಲಿ ವಿಲ್ಡರ್ಸ್ ಇವರು ಟ್ವೀಟ್ ಮಾಡಿದ್ದಾರೆ. ಚಿತ್ರಕಾರ ಬಾಶ ಫಾಸ್ಟಿನ್ ಇವರು ಅವರ ‘theboschfawstinstore’ ಈ ಹೆಸರಿನ ಬ್ಲಾಗನಲ್ಲಿ ಈ ಚಿತ್ರವನ್ನು ಪ್ರಸಾರ ಮಾಡಿದ್ದು ಅದರ ೧೮ ಪ್ರತಿಗಳನ್ನು ಮಾಡಿದ್ದಾರೆ, ಎಂದು ಹೇಳಿದ್ದಾರೆ. ಈ ಚಿತ್ರದ ಬೆಲೆ ಸುಮಾರು ೪ ಸಾವಿರದ ೫೦೦ ಭಾರತೀಯ ರೂಪಾಯಿ ಇದೆ.