ಪಾಕಿಸ್ತಾನಿ ಉಗ್ರನ್ನು ಅಂತರಾಷ್ಟ್ರೀಯ ಭಯೋತ್ಪಾದಕನೆಂದು ಘೋಷಿಸಲು ನಕಾರ

ವಿಶ್ವ ಸಂಸ್ಥೆಯಲ್ಲಿ ಪುನಃ ಅಡ್ಡಗಾಲಿಟ್ಟ ಚೀನಾ

ನ್ಯೂಯಾರ್ಕ್ (ಅಮೇರಿಕಾ) – ವಿಶ್ವ ಸಂಸ್ಥೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕನನ್ನು ಅಂತರಾಷ್ಟ್ರೀಯ ಭಯೋತ್ಪಾದಕನೆಂದು ಘೋಷಿಸಲು ಚೀನಾ ಮತ್ತೊಮ್ಮೆ ನಿರಾಕರಿಸಿದೆ. ಲಷ್ಕರ್-ಎ-ತೋಯಬಾದ ಭಯೋತ್ಪಾದಕ ಶಾಹೀದ್ ಮಹಮೂದನನ್ನು ಅಂತರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸುವ ಪ್ರಸ್ತಾವನೆಯನ್ನು ಮಂಡಿಸಲಾಗಿತ್ತು. ಚೀನಾ ಇದು ವರೆಗೆ ೪ ಬಾರಿ ಇಂತಹ ಪಾಕಿಸ್ತಾನಿ ಭಯೋತ್ಪಾದಕರನ್ನು ಅಂತರರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಲು ನಿರಾಕರಿಸಿದೆ. ಅಬ್ದುಲ್ ರೆಹಮಾನ್ ಮಕ್ಕಿ, ಅಬ್ದುಲ್ ರೌಫ, ಸಾಜಿದ ಮೀರ ಮತ್ತು ಹಾಫಿಜ ಸಯೀದ್ ಇವರನ್ನು ಅಂತರಾಷ್ಟ್ರೀಯ ಭಯೋತ್ಪಾದಕರೆಂದು ಘೋಷಿಸಲು ಚೀನಾ ವಿರೋಧಿಸಿತ್ತು.

ಅಮೇರಿಕಾ ಶಾಹೀದ್ ಮಹಮೂದನ್ನು ೨೦೧೬ ರಲ್ಲಿ ಅಂತರರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಿದೆ. ಮಹಮೂದ ಬಾಂಗ್ಲಾದೇಶದ ರೋಹಿಂಗ್ಯಾಗಳ ನಿರ್ವಸತಿ ಕೇಂದ್ರ, ಮ್ಯಾನ್ಮಾರ, ಸೌದಿ ಅರೇಬಿಯಾ, ತುರ್ಕಿಯೇ ಮತ್ತು ಸಿರಿಯಾಗಳಂತಹ ದೇಶಗಳಿಗೆ ತೆರಳಿ ಲಷ್ಕರ್-ಎ-ತೋಯಬಾಗಾಗಿ ಮುಸಲ್ಮಾನ ಯುವಕರನ್ನು ಭರ್ತಿ ಮಾಡಲು ಪ್ರಯತ್ನಿಸುತ್ತಿದ್ದನು. ಅಲ್ಲದೆ ಅವನು ಜೂನ್ ೨೦೦೫ ರಿಂದ ೨೦೧೬ ರ ಕಾಲಾವಧಿಯಲ್ಲಿ ತೋಯಬಾಗೆ ಆರ್ಥಿಕ ಸಹಾಯ ಒದಗಿಸುವ ಫಲಾಹ-ಎ-ಇನ್ಸಾನಿಯತ್ ಸಂಘಟನೆಯ ಉಪಾಧ್ಯಕ್ಷನೂ ಆಗಿದ್ದನು.

ಸಂಪಾದಕೀಯ ನಿಲುವು

ಸ್ವತಃ ಚೀನಾ ಮಾತ್ರ ತನ್ನ ದೇಶದಲ್ಲಿ ಉಗ್ರರು ಹುಟ್ಟಬಾರದೆಂದು ಮುಸಲ್ಮಾನರನ್ನು ಇಸ್ಲಾಂನಿಂದ ದೂರ ಒಯ್ಯಲು ಶಿಬಿರದಲ್ಲಿಟ್ಟು ದೌರ್ಜನ್ಯವೆಸಗುತ್ತದೆ.