ರಾಜಸ್ಥಾನದ ಕಾಂಗ್ರೆಸ್‌ನ ಸಚಿವರು ರಾಹುಲ ಗಾಂಧಿಯ ಪಾದಯಾತ್ರೆಯನ್ನು ಪ್ರಭು ಶ್ರೀ ರಾಮನ ಜೊತೆ ಹೋಲಿಸಿದ್ದಾರೆ !

ಜೈಪುರ (ರಾಜಸ್ಥಾನ) – ಕಾಂಗ್ರೆಸ್‌ನ ನಾಯಕ ರಾಹುಲ ಗಾಂಧಿ ಇವರು ‘ಭಾರತ ಜೋಡೋ’ ಈ ಹೆಸರಿನ ಪಾದಯಾತ್ರೆಯ ಬಗ್ಗೆ ರಾಜಸ್ಥಾನದ ಕಾಂಗ್ರೆಸ್‌ನ ಸಚಿವ ಪರದಾಸಿ ಲಾಲ ಮೀನ ಇವರು ಗಾಂಧಿ ಇವರನ್ನು ಪ್ರಭು ಶ್ರೀ ರಾಮಚಂದ್ರನ ಜೊತೆಗೆ ಹೋಲಿಸಿದ್ದಾರೆ. ಅವರು, ರಾಹುಲ್ ಗಾಂಧಿ ಇವರ ಈ ಪಾದಯಾತ್ರೆ ಐತಿಹಾಸಿಕವಾಗಿದೆ. ಪ್ರಭು ಶ್ರೀ ರಾಮನು ಶ್ರೀಲಂಕಾದವರೆಗೆ ನಡೆದುಕೊಂಡು ಹೋಗಿದ್ದನು. ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅದಕ್ಕಿಂತಲೂ ಹೆಚ್ಚಿನ ಅಂತರ ನಡೆಯುವವರು. ಇಲ್ಲಿಯವರೆಗೆ ಈ ರೀತಿಯ ಪ್ರವಾಸ ಯಾರು ಕೂಡ ಮಾಡಲಿಲ್ಲ. ದೇಶವನ್ನು ಬದಲಾಯಿಸುವುದಕ್ಕಾಗಿ ಮತ್ತು ಮತಾಂಧತೆಯನ್ನು ಮುಗಿಸುವುದಕ್ಕಾಗಿ ರಾಹುಲ ಗಾಂಧಿ ಇವರು ಈ ಯಾತ್ರೆ ಮಾಡುತ್ತಿದ್ದಾರೆ, ಎಂದು ಸಹ ಮೀನಾ ಇವರು ಹೇಳಿದರು.

ಮೀನಾ ಇವರ ಈ ಹೇಳಿಕೆಯ ಬಗ್ಗೆ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷ ನಾನಾ ಪಟೋಲೆ ಇವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಅವರು, ಪ್ರಸ್ತುತ ರಾಹುಲ ಗಾಂಧಿ ಪಾದಯಾತ್ರೆ ನಡೆಸುತ್ತಿದ್ದಾರೆ. ಗಾಂಧಿ ಇವರನ್ನು ಪ್ರಭು ಶ್ರೀ ರಾಮನ ಜೊತೆಗೆ ಹೋಲಿಸಲಾಗಿಲ್ಲ. ಪ್ರಭು ಶ್ರೀ ರಾಮ ಮತ್ತು ರಾಹುಲ್ ಗಾಂಧಿ ಇವರ ಹೆಸರಿನ ಆರಂಭ ‘ರಾ’ಅಕ್ಷರ ಇದೆ. ಇದು ಯೋಗಾನು ಯೋಗ ಅನ್ನಬಹುದು; ಆದರೆ ನಾವು ರಾಮಜೀ ಮತ್ತು ರಾಹುಲ ಗಾಂಧಿ ಇವರನ್ನು ಹೋಲಿಸುತ್ತಿಲ್ಲ. ರಾಹುಲ ಗಾಂಧಿ ಮನುಷ್ಯರಾಗಿದ್ದಾರೆ. ಪ್ರಭು ರಾಮ ಇವರು ದೇವರಾಗಿದ್ದರು ಎಂದು ಹೇಳಿದರು.

ಸಂಪಾದಕೀಯ ನಿಲುವು

ಯಾವಾಗಲೂ ಪ್ರಭು ಶ್ರೀ ರಾಮನನ್ನು ಕಾಲ್ಪನಿಕ ಎನ್ನುವ ಹಿಂದೂದ್ರೋಹಿ ಕಾಂಗ್ರೆಸ್‌ನ ಕಪಟಿ ಮತ್ತು ದ್ವಿಮುಖ ಹೇಗೆ ಇದೆ ಇದು ತಿಳಿದುಕೊಳ್ಳಿ ! ಇಂತಹ ಕಾಂಗ್ರೆಸ್‌ಅನ್ನು ಇತಿಹಾಸದ ಪುಟಗಳಲ್ಲಿ ಸೇರಿಸುವುದಕ್ಕೆ ಹಿಂದೂಗಳು ಸಿದ್ದರಾಗಿದ್ದಾರೆ, ಇದನ್ನು ಅವರು ಮರೆಯಬಾರದು !