ಭಾರತದಲ್ಲಿ ಸಮಾನ ನಾಗರಿಕ ಕಾನೂನು ಬರಲಿದೆ ! – ಶ್ರೀ ಹಾಲಸಿದ್ಧನಾಥ ದೇವರ ಭವಿಷ್ಯವಾಣಿ

  • ಶ್ರೀ ಕ್ಷೇತ್ರ ಅಪ್ಪಾಚಿವಾಡಿ ಕುರ್ಲಿಯ ಶ್ರೀ ಹಾಲಸಿದ್ದನಾಥ ದೇವರ ಭಕ್ತರಿಗೆ ಭವಿಷ್ಯವಾಣಿಯಿಂದ ಆಶೀರ್ವಚನ
  • ಬಡಜನರು ಗುಡಿ ಗೋಪುರ ಕಟ್ಟುವರು !
ಶ್ರೀ ಹಾಲಸಿದ್ದನಾಥ ದೇವರು

ಶ್ರೀ ಕ್ಷೇತ್ರ ಅಪ್ಪಾಚಿವಾಡಿ ಕುರ್ಲಿ (ನಿಪ್ಪಾಣಿ ತಾಲುಕು, ಬೆಳಗಾವಿ ಜಿಲ್ಲೆ) – ಕೊರೊನಾ ರೋಗಾಣುವನ್ನು ನಾನೇ ನಾಶ ಮಾಡಿದ್ದೇನೆ, ಹಾಗೂ ಭಾರತದಲ್ಲಿ ಸಮಾನ ನಾಗರೀಕ ಕಾನೂನು ಬರುವುದು ಮತ್ತು ಬಡಜನರು ಗುಡಿ ಗೋಪುರ ಕಟ್ಟುವರು ಎಂದು ಇಲ್ಲಿಯ ಶ್ರೀ ಕ್ಷೇತ್ರ ಅಪ್ಪಾಚಿಮಾಡಿ ಇಲ್ಲಿಯ ಶ್ರೀ ಹಾಲಸಿದ್ಧನಾಥ ದೇವರು ಭಕ್ತರಿಗೆ ಭವಿಷ್ಯವಾಣಿ ನುಡಿದರು. ಇದರ ಜೊತೆಗೆ ‘ಜಗತ್ತಿನ ತಾಪಮಾನದಲ್ಲಿ ಹೆಚ್ಚಳದ ಅಪಾಯ ಕಾಡುವುದು. ಕಾಡಲ್ಲಿ ಕಾಡ್ಗಿಚ್ಚು ಹತ್ತಿ ಪೃಥ್ವಿಯ ಮೇಲಿನ ವನ್ಯಜೀವಿ ವನ್ಯ ಔಷಧಿ ನಾಶವಾಗುವುದು’, ಎಂದು ಹೇಳಿ ಬರುವ ಆಪತ್ಕಾಲದ ಬಗ್ಗೆ ಕೂಡ ಸೂಚನೆ ನೀಡಿದರು.
ಈ ಭವಿಷ್ಯವಾಣಿಯನ್ನು ಅಕ್ಟೋಬರ್ ೧೪ ರಂದು ಬೆಳಿಗ್ಗೆನ ಜಾವ ೪.೧೫ ಗಂಟೆಗೆ ಪೂಜ್ಯ. ಸಿದ್ದಾರ್ಥ (ಪೂ. ಭಗವಾನ ಡೋಣೆ ಮಹಾರಾಜ ಇವರ ಚಿರಂಜೀವಿ) ಡೋಣೆ ಮಹಾರಾಜ (ಮಾಘಾಪುರೆ) ಇವರ ಮೂಲಕ ಹೇಳಲಾಯಿತು. ಈ ಭವಿಷ್ಯವಾಣಿಯಲ್ಲಿ, ‘ಮಹಾರಾಷ್ಟ್ರ ರಾಜ್ಯದಲ್ಲಿ ನದಿ ಜೋಡಣೆ ಪ್ರಕಲ್ಪ ಬರುವುದು. ಬರಗಾಲದ ಪ್ರದೇಶ ನೀರಿನ ಕೆಳಗೆ ಬರುವುದು. ನಂದನವನ ಆಗುವುದು, ಪಾಕಿಸ್ತಾನದ ನಾಲ್ಕನೇ ಒಂದು ಭಾಗ ಭಾರತದ ವಶಕ್ಕೆ ಬರುವುದು, ಕೇಸರಿ ಧ್ವಜ ರಾಜ್ಯ ಆಳುವುದು. ಶತ್ರು ರಾಷ್ಟ್ರ ಚೀನಾ ಭಾರತದ ಮೇಲೆ ದಾಳಿ ಮಾಡುವುದು, ಭಾರತ ಪಾಕಿಸ್ತಾನ ಗಡಿಯಲ್ಲಿ ಯುದ್ಧ ನಡೆಯುವುದು, ಸ್ತ್ರೀಯರು ರಾಜಕಾರಣದಲ್ಲಿ ಗೆಲ್ಲುವರು, ದೇಶದಲ್ಲಿ ಮುಷ್ಕರಗಳು ನಡೆಯುವುದು, ಮುಸಲ್ಮಾನ ರಾಷ್ಟ್ರಗಳು ನಾಶವಾಗುವುದು’, ಇದರ ಜೊತೆ ಅನೇಕ ವಿಷಯಗಳ ಭವಿಷ್ಯವಾಣಿ ಮಾಡಲಾಯಿತು.