ಆಯುರ್ವೇದದ ಪ್ರಾಥಮಿಕ ಚಿಕಿತ್ಸೆ

ವೈದ್ಯ ಮೇಘರಾಜ ಮಾಧವ ಪರಾಡಕರ

ತಲೆನೋವು

‘ಸೂತಶೇಖರ ರಸ’ ಈ ಔಷಧದ ಒಂದು ಗುಳಿಗೆಯನ್ನು ಸಣ್ಣದಾಗಿ ಪುಡಿ ಮಾಡಬೇಕು. (ಒಂದು ತಟ್ಟೆಯಲ್ಲಿ ಗುಳಿಗೆಯನ್ನಿಟ್ಟು ಅದರ ಮೇಲೆ ಲೋಟದಿಂದ ಅಥವಾ ಬಟ್ಟಲಿನಿಂದ ಒತ್ತಿದರೆ ಗುಳಿಗೆಯು ಪುಡಿಯಾಗುತ್ತದೆ.) ಈ ಚೂರ್ಣವನ್ನು ನಶಿಪುಡಿಯನ್ನು ಸೆಳೆಯುವಂತೆ ಮೂಗಿನಲ್ಲಿ ಸೆಳೆಯಬೇಕು. ಹೀಗೆ ಮಾಡಲು ಆಗದಿದ್ದರೆ ಚಮಚದಷ್ಟು ತೆಳುವಾದ ತುಪ್ಪದಲ್ಲಿ ಈ ಗುಳಿಗೆಯ ಪುಡಿಯನ್ನು ಸೇರಿಸಬೇಕು. ಅಂಗಾತ ಮಲಗಿ ಈ ತುಪ್ಪದಲ್ಲಿ ಮಿಶ್ರಣಗೊಂಡ ಔಷಧಿಯ ೨-೨ ಹನಿಗಳನ್ನು ಮೂಗಿನ ಎರಡೂ ಹೊಳ್ಳೆಗಳಲ್ಲಿ ಹಾಕಿ ೨ ನಿಮಿಷ ಮಲಗಬೇಕು. ಅನಂತರ ಎದ್ದು ತುಪ್ಪದಲ್ಲಿ ಮಿಶ್ರಿತ ಉಳಿದ ಔಷಧವನ್ನು ನೆಕ್ಕಿ ತಿನ್ನಬೇಕು.’

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೭.೭.೨೦೨೨)