೧. ದೀಪಾವಳಿಯ ಕಾಲದಲ್ಲಿ ಹಿಂದೂಗಳ ಮೇಲೆ ಆಘಾತ ಆಗುವುದು ಹೊಸದೇನಲ್ಲ. ೨೦೦೪ ರಲ್ಲಿ ದೀಪಾವಳಿಯ ಕಾಲದಲ್ಲಿಯೇ ಕಾಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ಸ್ವಾಮಿ ಜಯೇಂದ್ರ ಸರಸ್ವತಿ ಇವರನ್ನು ಬಂಧಿಸಿರುವುದನ್ನು ಹಿಂದೂಗಳು ಹೇಗೆ ಮರೆಯಲು ಸಾಧ್ಯ ? ಯಾವುದೇ ಬಲವಾದ ಸಾಕ್ಷಿ ಇಲ್ಲದೇ ನೇರ ಬಂಧನವಾಗುವುದು ಇದು ಹಿಂದೂಗಳ ಅಸ್ಮಿತೆ ಮೇಲಾದ ಆಘಾತವೇ ಆಗಿತ್ತು. ತದನಂತರ ಪ್ರಸಾರ ಮಾಧ್ಯಮಗಳು ‘ಬಲೆಯಲ್ಲಿ ಶಂಕರಾಚಾರ್ಯ’ನಂತಹ ಶೀರ್ಷಿಕೆಯನ್ನು ಬಳಸಿ ಹಿಂದೂಗಳ ಧರ್ಮಗುರುಗಳನ್ನು ಅವಮಾನಿಸಿದ್ದರು ಅದು ಎಂದಿಗೂ ತುಂಬಲಾರದ ಹಾನಿಯಾಗಿದೆ.
೨. ಹಿಂದೂಗಳ ಹಬ್ಬಗಳನ್ನು ಭಯದ ಕರಿನೆರಳಿನಲ್ಲಿ ಆಚರಿಸಬೇಕಾಗುತ್ತದೆ. ೨೦೦೫ ರಲ್ಲಿ ದೀಪಾವಳಿಯ ಕಾಲದಲ್ಲಿ ರಾಜಧಾನಿ ನವ ದೆಹಲಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ೬೨ ಜನರು ಸಾವನ್ನಪ್ಪಿದ್ದರು. ಇಂದಿಗೂ ಸಹ ದೀಪಾವಳಿ ಅಥವಾ ಗಣೇಶೋತ್ಸವದ ಕಾಲದಲ್ಲಿ ಭಯೋತ್ಪಾದಕರು ರಕ್ತಪಾತ ನಡೆಸುವ ಪಿತೂರಿಯಲ್ಲಿರುತ್ತಾರೆ.
(ಸಂದರ್ಭ – ದೈನಿಕ ‘ಸನಾತನ ಪ್ರಭಾತ’ (ಮರಾಠಿ), ಇಸವಿ ೨೦೧೮)