ಮುಂಬಯಿ – ಫೆಬ್ರುವರಿ ೨೭. ೨೦೦೨ ರಂದು ಅಯೋಧ್ಯೆಯಿಂದ ಹೊರಟಿದ್ದ ಸಾಬರಮತಿ ಎಕ್ಸ್ಪ್ರೆಸ್ ಗುಜರಾತ್‌ನ ಗೋದ್ರಾ ರೈಲ್ವೆ ನಿಲ್ದಾಣದಲ್ಲಿ ಬಂದಾಗ ಮತಾಂಧರು ರೈಲಿನ ೩ ಭೋಗಿಗಳ ಬಾಗಿಲಗಳನ್ನು ಹೊರಗಿನಿಂದ ಬಂದ್ ಮಾಡಿ ಬೆಂಕಿ ಹಚ್ಚಿದರು. ಆ ಬೆಂಕಿಯಲ್ಲಿ ೫೯ ಕರಸೇವಕರು ಆಸುನೀಗಿದರು. ಈ ಘಟನೆಯ ಆಧಾರಿಸಿದ ‘ದ ಸಾಬರಮತಿ ರಿಪೋರ್ಟ್’ ಈ ಚಲನಚಿತ್ರ ನವೆಂಬರ್ ೧೫ ರಂದು ಬಿಡುಗಡೆಯಾಗಲಿದೆ.
ಈ ಚಲನಚಿತ್ರದ ನಿರ್ದೇಶಕ ಧೀರಜ ಸರನಾ ಇವರು ಹಾಗೂ ಶೋಭಾ ಕಪೂರ್ ಮತ್ತು ಏಕತಾ ಕಪೂರ್ ಇವರು ನಿರ್ಮಾಪಕರಾಗಿದ್ದಾರೆ. ನವೆಂಬರ್ ೬ ರಂದು ಈ ಚಲನಚಿತ್ರದ ‘ಟ್ರೈಲರ್’ ಮುಂಬಯಿಯಲ್ಲಿ ಬಿಡುಗಡೆ ಮಾಡಲಾಯಿತು. ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿ ಆಗಿದ್ದಾಗ ಮತಾಂಧರು ಈ ಹತ್ಯಾಕಾಂಡ ಮಾಡಿದ್ದರು.
ನಾನು ಯಾವುದೇ ಧರ್ಮದ ಕುರಿತು ಟೀಕಿಸುವುದಿಲ್ಲ ! – ಚಲನಚಿತ್ರ ನಿರ್ಮಾಪಕಿ ಏಕತಾ ಕಪೂರ್
ಈ ಚಲನಚಿತ್ರದ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡುವಾಗ ಏಕತಾ ಕಪೂರ್ ಅವರು, “ನಾನು ಯಾವುದೇ ರಾಜಕೀಯ ಗುಂಪಿನ ಜೊತೆಗೆ ಸಂಬಂಧ ಹೊಂದಿಲ್ಲ. ನಾನು ಕೇವಲ ಸತ್ಯದ ಪರವಾಗಿದ್ದೇನೆ. ನಾನು ಹಿಂದೂ ಆಗಿದ್ದೇನೆ, ಇದರ ಅರ್ಥ ನಾನು ಜಾತ್ಯತೀತಳಾಗಿದ್ದೇನೆ. ನಾನು ಯಾವುದೇ ಧರ್ಮದ ಕುರಿತು ಟೀಕಿಸುವುದಿಲ್ಲ. ಚಲನಚಿತ್ರ ಬಿಡುಗಡೆಯ ದಿನಾಂಕ ಮೊದಲೇ ಘೋಸಿಸಲಾಗಿತ್ತು. ಮಹಾರಾಷ್ಟ್ರದಲ್ಲಿ ವಿಧಾನಸಭೆಯ ಚುನಾವಣೆಗೂ ಈ ಚಲನಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ.” ಎಂದು ಹೇಳಿದರು.