ಉಜ್ಜೈನ್ (ಮಧ್ಯಪ್ರದೇಶ) ಇಲ್ಲಿಯ ಮಹಾಕಾಲೇಶ್ವರ ದೇವಸ್ಥಾನದ ಪರಿಸರದಲ್ಲಿ ‘ಮಹಾಕಾಲಕ ಲೋಕ’ ಸಂಕಿರಣದ ಉದ್ಘಾಟನೆ

ಉಜ್ಜೈನ್ (ಮಧ್ಯಪ್ರದೇಶ) – ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ಇಲ್ಲಿಯ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಹಾಕಾಲೇಶ್ವರ ದೇವಸ್ಥಾನದ ಪರಿಸರದಲ್ಲಿ ‘ಮಹಾಕಾಲ ಲೋಕ’ ಹೊಸ ಸಂಕಿರಣದ ಉದ್ಘಾಟನೆ ಮಾಡಲಾಯಿತು. ಈ ಸಮಯದಲ್ಲಿ ೧೫ ಅಡಿ ಎತ್ತರದ ಶಿವಲಿಂಗದ ಪ್ರತಿಕೃತಿಯ ತೆರೆಸರಿಸಿ ಉದ್ಘಾಟನೆ ಮಾಡಲಾಯಿತು. ಈ ಸಂಪೂರ್ಣ ಸಂಕಿರಣ ಆಧ್ಯಾತ್ಮಿಕ ಮಟ್ಟದಲ್ಲಿ ನಿರ್ಮಾಣ ಮಾಡಲಾಗಿದೆ. ಅಧ್ಯಾತ್ಮದ ಈ ಹೊಸ ಪ್ರಾಂಗಣ ಎಲ್ಲರಿಗಾಗಿ ತೆರೆಯಲಾಗಿದೆ. ಈ ಮೊದಲು ಪ್ರಧಾನಿ ಮೋದಿ ಇವರು ಮಹಾಕಾಲೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರು. ಹಾಗೂ ಕೆಲವು ನಿಮಿಷ ಧ್ಯಾನ ಮಾಡಿದರು. ಈ ಸಂಪೂರ್ಣ ಕಾರ್ಯಕ್ರಮದ ಪ್ರಕ್ಷೇಪಣೆ ಕ್ಷಿಪ್ರಾ ನದಿಯ ತೀರದಲ್ಲಿ ದೊಡ್ಡ ಪರದೆಯ ಮೇಲೆ ಮಾಡಲಾಯಿತು. ಸಾವಿರಾರು ಜನರು ಇದರ ಲಾಭ ಪಡೆದರು. ಹಾಗೂ ಕಾರ್ಯಕ್ರಮದ ನೇರ ಪ್ರಸಾರ ಜಗತ್ತಿನಾದ್ಯಂತ ೪೦ ದೇಶಗಳಲ್ಲಿ ಮಾಡಲಾಯಿತು.
ಮಹಾಕಾಲ ಲೋಕ ಸಂಕಿರಣಕ್ಕಾಗಿ ೮೫೬ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಮೊದಲು ೨.೮ ಹೆಕ್ಟರ್ ನಲ್ಲಿ ಆವರಿಸಿರುವ ಮಹಾಕಾಲ ಸಂಕುಲ ಈಗ ೪೭ ಹೆಕ್ಟರ್ ಆಗಿದೆ. ಇದರಲ್ಲಿ ೯೪೬ ಮೀಟರ್ ಉದ್ದದ ಮಾರ್ಗ ಇರಲಿದೆ. ಅದರಿಂದ ಭಕ್ತರು ನೇರ ದೇವಸ್ಥಾನದ ಗರ್ಭಗೃಹಕ್ಕೆ ತಲುಪುವರು.